One Booth Five Youth ಆನ್‌ಲೈನ್ ಮೂಲಕ ಯುವ ಕಾಂಗ್ರೆಸ್ (Youth Congress) ಸದಸ್ಯತ್ವ ನೊಂದಣಿಗೆ ಚಾಲನೆ ನೀಡಲಾಗಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು, ವಿಧಾನ ಪರಿಷತ್ ಸದಸ್ಯರು, ಶಾಸಕರ ಮಕ್ಕಳು ಯುವ ಕಾಂಗ್ರೆಸ್ ನಾಯಕತ್ವ ವಹಿಸಿಕೊಳ್ಳುವರೇ ಎಂಬುದು ಈಗ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ವಲಯದಲ್ಲಿ ನಡೆಯುತ್ತಿರುವ ಚರ್ಚೆ.
ಕಾಂಗ್ರೆಸ್ ಪಕ್ಷ ಉಳ್ಳವರು, ಅಧಿಕಾರ ಅನುಭವಿಸಿದವರ, ಮುಖ್ಯಮಂತ್ರಿಗಳ ಮಕ್ಕಳ, ಸಚಿವರ ಮಕ್ಕಳ ಪಕ್ಷವಾಗಿ ಮಾರ್ಪಾಡಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೊ ಒಂದು ಚಿಕ್ಕ ನಿಗಮ , ಮಂಡಳಿ ಅಥವ ಸಮಿತಿಗಳ ಸದಸ್ಯರನ್ನಾಗಿ ಮಾಡಲು ಮುಖ್ಯಮಂತ್ರಿ ಆದಿಯಾಗಿ ಎಲ್ಲ ಮುಖಂಡರು ಮುಂದಾಗದಿರುವ ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ ಘೋಷಣೆಯಾಗಿದೆ.
Karnataka Congress ಕಾಂಗ್ರೆಸ್ನಲ್ಲಿ ಮಹತ್ವದ ಬೆಳವಣಿಗೆ:ಸಚಿವ ಸಂಪುಟ ಪುನಾರಚನೆ
One Booth Five Youth ಘೋಷಣೆಯೊಂದಿಗೆ ಆನ್‌ಲೈನ್ ಮೂಲಕ ಯುವ ಕಾಂಗ್ರೆಸ್ (Youth Congress) ಸದಸ್ಯತ್ವ ನೊಂದಣಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು ಇತ್ತೀಚೆಗೆ ಚಾಲನೆ ನೀಡಿದ್ದಾರೆ. 1 ಬೂತ್, 5 ಯೂತ್ ಎನ್ನುವ ಮೂಲಕ ಇದು ಬೂತ್ ಮಟ್ಟದ ಕಾರ್ಯಕರ್ತರನ್ನು ನೇಮಕ ಮಾಡುವ ಪ್ರಕ್ರಿಯೆ ಹೊರತು ಹೊಸ ಯುವ ನಾಯಕರನ್ನು ರೂಪಿಸುವ ಭಿಯಾನ ಅಲ್ಲ ಎಂಬುದು ಸ್ಪಷ್ಟವಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿ ಮಾತನಾಡಿದ ಅವರು “ಯುವ ಕಾಂಗ್ರೆಸ್, ಪಕ್ಷದ ಆಧಾರಸ್ತಂಭ. ಸುಭದ್ರ ರಾಷ್ಟ್ರ ಹಾಗೂ ಜಾತ್ಯತೀತ ಸಮಾಜ ಯುವಕರಿಂದ ಮಾತ್ರ ಸಾಧ್ಯ. 60 ವರ್ಷಗಳ ಇತಿಹಾಸವಿರುವ ಯುವ ಕಾಂಗ್ರೆಸ್ ವಿಶ್ವದ ಅತಿದೊಡ್ಡ ಬಲಿಷ್ಠ ಯುವ ಸಂಘಟನೆಯಾಗಿದೆ. ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ,’’ ಎಂದರು.
“ಯುವ ಕಾಂಗ್ರೆಸ್‌ಗೆ ದೊಡ್ಡ ಇತಿಹಾಸವಿದ್ದು, ಹಲವು ರಾಜ್ಯಗಳಲ್ಲಿ ಅನೇಕ ಮುಖ್ಯಮಂತ್ರಿಗಳು, ಕೇಂದ್ರದಲ್ಲಿ ಪ್ರಮುಖ ಖಾತೆಯ ಸಚಿವರು, ಸಂಸದರು, ಶಾಸಕರನ್ನು ನೀಡಿ ದೇಶದ ಅಭಿವೃದ್ಧಿಗೆ ಪೂರಕವಾಗಿ ಯುವ ಕಾಂಗ್ರೆಸ್ ಕೆಲಸ ಮಾಡಿದೆ. 60 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಮುಂಚೂಣಿ ಸಂಘಟನೆಯಾಗಿ ಯುವ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ರಾಷ್ಟ್ರ ಕಟ್ಟುವಲ್ಲಿ ಯುವಕರ ಪಾತ್ರ ಮುಖ್ಯ ಎಂಬುದು ರಾಹುಲ್ ಗಾಂಧಿ ಅವರ ನಂಬಿಕೆ. ಯುವ ಸಮುದಾಯ ರಾಹುಲ್ ಗಾಂಧಿಯವರು ಈ ದೇಶದ ಪ್ರಧಾನಿಯನ್ನಾಗಿ ನೋಡಲು ಕಾತರರಾಗಿದ್ದಾರೆ,’’ ಎಂದು ಹೇಳಿದರು.
ಯುವ ಸಮುದಾಯ ರಾಹುಲ್ ಗಾಂಧಿಯವರು ಈ ದೇಶದ ಪ್ರಧಾನಿಯನ್ನಾಗಿ ನೋಡಲು ಕಾತರರಾಗಿದ್ದಾರೆ ಎಂದು ಸಲೀಂ ಹೇಳಿರುವುದು ಸತ್ಯ ಇರಬಹುದು. ರಾಹುಲ್ ಗಾಂಧಿಯವರು ಈ ದೇಶದ ಪ್ರಧಾನಿಯನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷ ದ ಹಿರಿಯ ಮುಖಂಡರು ಯಾಕೆ ಸೂಕ್ತ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಯಾಕೆ ಬಿಜೆಪಿ ಮುಖಂಡರೊಂದಿಗೆ ಅಡ್ಜಸ್ಟ್ ಮೆಂಟ್ ರಾಜಕೀಯ ಮಾಡಿಕೊಂಡು ಬಿಜೆಪಿಗೆ ಲಾಭ ಮಾಡುತ್ತಿದ್ದಾರೆ ಎಂಬುದನ್ನು ಸಲೀಂ ಅವರು ಯುವಕರಿಗೆ ಮನದಟ್ಟು ಮಾಡಬೇಕಾಗಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದರೂ ಸರಕಾರದ ಪರವಾಗಿ ಸರಕಾರದ ಗ್ಯಾರಂಟಿ ಯೋಜನೆಗಳ ಪರವಾಗಿ ಸಮರ್ಥವಾದ ಸೋಶಿಯಲ್ ಮಿಡಿಯಾ ಕ್ಯಾಂಪೇನ್ ಯಾಕೆ ನಡೆಯಲಿಲ್ಲ. ಸೋಶಿಯಲ್ ಮಿಡಿಯಾ ವಿಚಾರದಲ್ಲಿ ಕೂಡ ಹಣ ಗುಳುಂ ಮಾಡಿರುವುದು ಯಾಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕಾಗಿ ಮಾಸಿಕ ಒಂದೂವರೆ ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿ 500 ರೂ. ಕೆಲಸ ಮಾಡದಿದ್ದರೂ ಕಾಂಗ್ರೆಸ್ ಪಕ್ಷದ ಯಾವೊಬ್ಬ ಶಾಸಕನು, ಮುಖಂಡನು ಯಾಕೆ ಚಕಾರ ಎತ್ತಲಿಲ್ಲ. ಇದು ದೇಶದ ಜನತೆಗೆ ಎಸೆದ ದ್ರೋಹ ಅಲ್ಲವೇ ? ಈ ಬಗ್ಗೆ https://the-file.in/ ದಾಖಲೆ ಸಹಿತ ವಿವರವಾದ ವರದಿಗಳನ್ನು ಪ್ರಕಟಿಸಿದೆ. ಸಲೀಂ ಅವರು ಇಂತಹ ಹಗರಣಗಳ ವಿರುದ್ಧ ಯುವ ಕಾಂಗ್ರೆಸ್ ದನಿ ಎತ್ತುವಂತೆ ತರಬೇತು ನೀಡಬೇಕು.
ಪ್ರತಿಭಟನೆ ನಡೆಸಲು, ಪೋಸ್ಟರ್ ಅಂಟಿಸಲು, ಬೂತ್ ಕೆಲಸ ಮಾಡಲು ಬೂತ್ ಮತ್ತು ಇತರ ಕಾರ್ಯಕರ್ತರು. ಸರಕಾರದ ಏನಾದರು ಕೆಲಸ ಇದ್ದರೆ ಬಿಜೆಪಿಯ ಪವರ್ ಬ್ರೋಕರುಗಳ ಮೂಲಕ ಸರಕಾರಿ ಹಣದ ಪೋಲು ಮಾಡಲಾಗುತ್ತದೆ. ಕಾಂಗ್ರೆಸ್ ಕಾರ್ಯಕರ್ತರ ಕೈಗೆ ಮಾತ್ರ ಚೊಂಬು.
ಈಗ ಮುಖ್ಯವಿಚಾರಕ್ಕೆ ಬರುವುದಾದರೆ, ಚುನಾವಣೆ ಟಿಕೇಟ್ ನೀಡುವಾಗ ಮಂತ್ರಿಗಳು, ಶಾಸಕರ ಮಕ್ಕಳಿಗೆ ಆದ್ಯತೆ. ಮಂತ್ರಿ ಪದವಿ ಕೊಡಲು ಮಾಜಿ ಮುಖ್ಯಮಂತ್ರಿಗಳು ಮಕ್ಕಳು ಎಷ್ಟೇ ನಾಲಾಯಕ್ ಆದ್ರೂ ಅವರನ್ನು ಸಚಿವರನ್ನಾಗಿ ಮಾಡುತ್ತಾರೆ. ಸೊಶಿಯಲಿಸ್ಟ್ ಎಂದು ಆರೋಪ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರಂ ಸಿಂಗ್ ಮಗನನ್ನು ಹೊರತುಪಡಿಸಿ ಎಲ್ಲ ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಸಚಿವರನ್ನಾಗಿ ಮಾಡಿದ್ದಾರೆ.
One Booth Five Youth ಕಾರ್ಯಕರ್ತರ ಶ್ರಮಕ್ಕೆಕೆ ಮನ್ನಣೆ ಇಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗಮ, ಮಂಡಳಿ, ಪ್ರಾಧಿಕಾರಗಳ ನೇಮಕದಲ್ಲಿ ಕೂಡ ಚುನಾಯಿತ ಶಾಸಕರನ್ನೇ ನೇಮಕ ಮಾಡಲು ಉತ್ಸಾಹ ತೋರಿದರೆ ಹೊರತು ಪಕ್ಷದ ಕಾರ್ಯಕರ್ತರ ಕೆಲಸಕ್ಕೆ ಮನ್ನಣೆ ನೀಡಲಿಲ್ಲ. ಇದೀಗ
1 ಬೂತ್, 5 ಯೂತ್ ಎನ್ನುವ ಘೋಷಣೆ ಮೂಲಕ ಇದು ಬೂತ್ ಮಟ್ಟದ ಕಾರ್ಯಕರ್ತರನ್ನು ನೇಮಕ ಮಾಡುವ ಪ್ರಕ್ರಿಯೆ ಹೊರತು ಹೊಸ ಯುವ ನಾಯಕರನ್ನು ರೂಪಿಸುವ ಭಿಯಾನ ಅಲ್ಲ ಎಂಬುದು ಸ್ಪಷ್ಟವಾಗಿದೆ. ಬಹುಮುಖ್ಯವಾಗಿ ಕಾಂಗ್ರೆಸ್ ಪಕ್ಷದಿಂದ ಸಾಕಷ್ಟು ಲಾಭ ಅನುಭವಿಸಿದ ಮುಖಂಡರ ಮಕ್ಕಳು ಯೂತ್ ಕಾಂಗ್ರೆಸ್ ಪದಾಧಿಕಾರಿಗಳಾಗುವ ಸಾಧ್ಯತೆಗಳು ಕಡಿಮೆ ಎನ್ನುತ್ತಾರೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು.
ಕಾಂಗ್ರೆಸ್ ಮುಖಂಡರ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಯೂತ್ ಕಾಂಗ್ರೆಸ್ ಸದಸ್ಯರಾಗಲಿ ಎಂಬ ಅಭಿಪ್ರಾಯವನ್ನು ಯೂತ್ ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಸಿಸಿ ಅಧ್ಯಕ್ಷರ ಪುತ್ರ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದು, ಯೂತ್ ಕಾಂಗ್ರೆಸ್ ಮೂಲಕ ವೇ ತನ್ನ ಕಾರ್ಯಕ್ರಮಗಳ ಮೂಲಕ ಇದೀಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಾಗಿರುವುದು ಗಮನಾರ್ಹ. ಅದೇ ರೀತಿಯಲ್ಲಿ ಡಿಸಿಸಿ ಅಧ್ಯಕ್ಷರ ಅತ್ಯಪ್ತ ಮಿತ್ರರು ಕೂಡ ತಮ್ಮ ಮಕ್ಕಳಿಗೆ ಯೂತ್ ಕಾಂಗ್ರೆಸ್ಸಿನ ಜವಾಬ್ದಾರಿ ವಹಿಸಲಿ ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿದೆ.
ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ಮಕ್ಕಳು ಯುವ ಕಾಂಗ್ರೆಸ್ ನಾಯಕತ್ವದಲ್ಲಿ ಮಂಚೂಣಿಯಲ್ಲಿದ್ದರು. ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಲಿ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಸಂಜಯ್ ಗಾಂಧಿಯಿಂದ ರಾಹುಲ್ ತನಕ
1970 ರ ದಶಕದಲ್ಲಿ, ಸಂಜಯ್ ಗಾಂಧಿಯವರ ನೇತೃತ್ವದಲ್ಲಿ , ಯುವ ಕಾಂಗ್ರೆಸ್ ಮರ ನೆಡುವಿಕೆ, ಕುಟುಂಬ ಯೋಜನೆ ಮುಂತಾದ ಚಟುವಟಿಕೆಗಳನ್ನು ಕೈಗೊಂಡಿತು ಮತ್ತು ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಸಾವುಗಳ ವಿರುದ್ಧ ಹೋರಾಡಿತು. ಸಂಜಯ್ ಗಾಂಧಿ ನಿಧನದ ನಂತರ ರಾಜೀವ್ ಗಾಂಧಿ ಯುವ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡರು. ಅವರು 1984 ರಲ್ಲಿ ಪ್ರಧಾನ ಮಂತ್ರಿಯಾದ ನಂತರ, ರಾಜೀವ್ ಗಾಂಧಿಯವರು ಮತದಾನದ ವಯಸ್ಸನ್ನು 18 ಕ್ಕೆ ಇಳಿಸಿದರು. ರಾಹುಲ್ ಗಾಂಧಿ ಅವರನ್ನು 24 ಸೆಪ್ಟೆಂಬರ್ 2007 ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು ಮತ್ತು ರಾಷ್ಟ್ರೀಯ ಜೊತೆಗೆ ಭಾರತೀಯ ಯುವ ಕಾಂಗ್ರೆಸ್ ಮತ್ತು ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಉಸ್ತುವಾರಿಯನ್ನು ನೀಡಲಾಗಿತ್ತು.
ಇಂದು ಕರ್ನಾಟಕ ರಾಜ್ಯದ ಎಐಸಿಸಿ ಉಸ್ತುವಾರಿಯಾಗಿ ರಂದೀಪ್ ಸುರ್ಜೀವಾಲ ಕೂಡ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
ಇಂದಿನ ಬಹುತೇಕ ಕಾಂಗ್ರೆಸ್ ಮುಖಂಡರ ಮಕ್ಕಳು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದೆ, ದುರ್ಗಾವಾಹಿನಿ, ಬಜರಂಗದಳ,ವಿಶ್ವ ಹಿಂದೂ ಪರಿಷತ್, ಮುಂತಾದ ಮೋದಿ ಪರಿವಾರದ ಸಂಘಟನೆಗಳ ಕಾರ್ಯಕರ್ತರಾಗಿದ್ದಾರೆ ಅಥವ ಬೆಂಬಲಿಗರಾಗಿದ್ದಾರೆ.
ವೇದಿಕೆಯಲ್ಲಿ ಭಾಷಣ ಮಾಡುವ ಕಾಂಗ್ರೆಸ್ ಮುಖಂಡರು ತಮ್ಮ ಮನೆಯವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಲು ಕರೆ ನೀಡುತ್ತಾರೆ. ಆದರೆ, ಬಹುತೇಕ ಕಾಂಗ್ರೆಸ್ ಮುಖಂಡರ ಮಕ್ಕಳು ಬಿಜೆಪಿಗೆ ಮತ ಹಾಕುತ್ತಾರೆ ಎಂಬುಗ ಗುಟ್ಟಾಗಿ ಉಳಿದಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರ ಮನೆಯವರು ಮಾತ್ರವಲ್ಲದೆ ಮುಖಂಡ ಕೂಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ ಮತ ಹಾಕಿರುತ್ತಾರೆ ಎಂದು ಪಕ್ಷದ ಕಾರ್ಯಕರ್ತರೇ ಹೇಳುತ್ತಾರೆ.