Wayanad Landslide ಕೇರಳ(Kerala) ರಾಜ್ಯ ವಯನಾಡಿನಲ್ಲಿ ಸಂಭವಿಸಿದಂತ ಭೂ ಕುಸಿತ(Wayanad Landslide) ದುರಂತದಲ್ಲಿ ಮೃತರ ಸಂಖ್ಯೆ 282ಕ್ಕೆ ಏರಿಕೆಯಾಗಿದೆ. ಈವರೆಗೆ 192 ಮಂದಿ ನಾಪತ್ತೆಯಾಗಿದ್ದರೇ, 1,592 ಜನರನ್ನು ರಕ್ಷಣೆ ಮಾಡಲಾಗಿದೆ.
ದೇವರ ನಾಡಲ್ಲಿ Kerala ಭೀಕರ ಭೂಕುಸಿತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ವಯನಾಡಿನಲ್ಲಿ ಸಂಭವಿಸಿದಂತ ಭೂ ಕುಸಿತದಲ್ಲಿ Landslide ಈವರೆಗೆ 282 ಜನರು ಸಾವನ್ನಪ್ಪಿದ್ದಾರೆ.
192 ಮಂದಿ ನಾಪತ್ತೆಯಾಗಿದ್ದು, ಭೂಕುಸಿತದಲ್ಲಿ ಸಿಲುಕಿದ್ದಂತ 1,592 ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
8 ಸಾವಿರಕ್ಕೂ ಹೆಚ್ಚು ಜನರು ಕಾಳಜಿ ಕೇದ್ರ ಸ್ಥಾಳಂತರಿಸಲಾಗಿದೆ. 3,332 ಪುರುಷರು ಹಾಗೂ 3398 ಮಂದಿ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. 82 ನಿರಾಶ್ರಿತರ ಶಿಬಿರವನ್ನು ತೆರೆಯಲಾಗಿದೆ. 8 ಕ್ಯಾಂಪ್ ಅನ್ನು ಚೋರ್ ಮಂಡಲಾದಲ್ಲಿ ಓಪನ್ ಮಾಡಲಾಗಿದೆ.
ಈವರೆಗೆ 1884 ಮಕ್ಕಳನ್ನು ರಕ್ಷಿಸಲಾಗಿದ್ದು, ಅವರನ್ನು ಕಾಳಜಿ ಕೇಂದ್ರಗಳಲ್ಲಿ ಇರಿಸಲಾಗಿದೆ. ಗುಡ್ಡ ಕುಸಿತದಲ್ಲಿ ಸಂತ್ರಸ್ತರಾದಂತವರಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸುವಂತ ವ್ಯವಸ್ಥೆಯನ್ನು ಕೇರಳ ಸರ್ಕಾರ, ಹೊರ ರಾಜ್ಯಗಳು ಮಾಡುತ್ತಿದ್ದಾವೆ.
ಕೇರಳದ ವಯನಾಡು ಜಿಲ್ಲೆಯ ಚೂರಲ್ ಮಲಾ ಟೀ ಎಸ್ಟೇಟ್‌ನಲ್ಲಿ ಟೀ ಎಲೆ ಕೀಳುವ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಗೌರಮ್ಮ ಅವರ ಕುಟುಂಬ ಚಾ.ನಗರ ತಾಲೂಕಿನ ಮಂಗಲದಿಂದ ವಲಸೆ ಹೋಗಿ 50 ವರ್ಷಗಳಿಂದ ಅಲ್ಲಿ ನೆಲೆಸಿದೆ. ಗೌರಮ್ಮ ಮತ್ತು ಅವರ ಪುತ್ರ ವಿನೋದ್, ಗೌರಮ್ಮ ಅವರ ಸೋದರನ ಕುಟುಂಬ ಭೂಕುಸಿತದಿಂದ ಉಂಟಾದ ಪ್ರವಾಹದಿಂದ ಪಾರಾಗಿ ಈಗ ಮೇಪಾಡಿಯ ಕಾಳಜಿ ಕೇಂದ್ರದಲ್ಲಿದೆ.
ಮಂಗಳವಾರ ಮಧ್ಯರಾತ್ರಿ ನಡೆದ ದುರಂತದಲ್ಲಿ ಪಾರಾಗಿ ಸುಮಾರು 18 ಗಂಟೆಗಳ ಕಾಲ ಪಕ್ಕದ ಗುಡ್ಡದಲ್ಲಿ ರಕ್ಷಣೆ ಪಡೆದು, ರಕ್ಷಣಾ ಪಡೆಗಳ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿ ಬಂದ ರೋಚಕ ಕಥೆಯನ್ನು ಗೌರಮ್ಮ ಅವರ ಪುತ್ರ ವಿನೋದ್ ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನು ವಿನೋದ್ (29 ವರ್ಷ) ಅವರ ಮಾತಿನಲ್ಲೇ ಕೇಳಿ.
“ನಮ್ಮ ಮುತ್ತಜ್ಜಿ ಮಾರಮ್ಮ ಅವರು, ಕರ್ನಾಟಕದ ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದವರು. ಸುಮಾರು 50 ವರ್ಷಗಳ ಹಿಂದೆಯೇ ಕೂಲಿ ಕೆಲಸಕ್ಕಾಗಿ ಕೇರಳದ ವಯನಾಡು ಜಿಲ್ಲೆಯ ಚೂರಲ್‌ಮಲಾದ ಟೀ ಎಸ್ಟೇಟ್‌ಗೆ ಬಂದರು. ಅವರ ಮಗಳು ನಮ್ಮ ಅಜ್ಜಿ ಜಯಮ್ಮ ಅವರ ಮಗಳು ನಮ್ಮ ತಾಯಿ ಗೌರಮ್ಮ. ನಮ್ಮ ತಂದೆ ಗುಂಡ್ಲುಪೇಟೆಯ ಅಣ್ಣೂರು ಕೇರಿ ಗ್ರಾಮದ ನಾಗರಾಜ ಶೆಟ್ಟಿ ಅವರನ್ನು ವಿವಾಹವಾದರು.
ನಮ್ಮ ತಾಯಿ ಚೂರಲ್ ಮಲೈ ಟೀ ಎಸ್ಟೇಟ್ ನಲ್ಲಿ ಟೀ ಕೀಳುವ ಕೆಲಸ ಮಾಡುತ್ತಿದ್ದಾರೆ. ನಮ್ಮ ತಂದೆ ನಾಗರಾಜ ಶೆಟ್ಟಿ ಗುಂಡ್ಲುಪೇಟೆಯ ಅಣ್ಣೂರು ಕೇರಿಯಲ್ಲಿ ನಮ್ಮ ಜಮೀನು ನೋಡಿಕೊಂಡು, ಎರಡೂ ಕಡೆ ಬಂದು ಹೋಗುತ್ತಾರೆ. ಚೂರಲ್‌ಮಲಾದಲ್ಲಿ ಹ್ಯಾರಿಸನ್ ಮಲಯಾಳಂ ಲಿಮಿಟೆಡ್ ಎಂಬ ದೊಡ್ಡ ಕಂಪೆನಿಯ ಟೀ ಎಸ್ಟೇಟ್ ಇದೆ. ಈ ಎಸ್ಟೇಟು ಸುಮಾರು 7000 ಎಕರೆಗಿಂತ ಹೆಚ್ಚು ವಿಸ್ತಾರವಾಗಿದೆ. ಇಲ್ಲಿ ನೂರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನಾನು ಕಲ್ಪೆಟ್ಟದಲ್ಲಿ ಆಯುರ್ವೇದಿಕ್ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಪತ್ನಿ ಪ್ರವೀದಾ ಚೂರಲ್‌ಮಲೈಯಿಂದ 13 ಕಿ.ಮೀ. ದೂರದ ಮೇಪಾಡಿಯವರು. ನರ್ಸ್ ಅಗಿದ್ದಾರೆ. ನನ್ನ ಪತ್ನಿ ಪ್ರವೀದಾ ಅವರ ತಂದೆ ತಾಯಿ ಚಾಮರಾಜನಗರ ಪಟ್ಟಣದಿಂದ ಹಲವಾರು ವರ್ಷಗಳ ಹಿಂದೆಯೇ ವಲಸೆ ಬಂದು ಮೇಪಾಡಿಯಲ್ಲೇ ನೆಲೆಸಿದ್ದಾರೆ.
Landslide ಬೆಳಗೆದ್ದು ನೋಡಿದಾಗ ನಮ್ಮ ಊರೇ ಇರಲಿಲ್ಲ.
ವಯನಾಡು ಜಿಲ್ಲೆಯ ಚೂರಲ್‌ವುಲ ಟೀ ಎಸ್ಟೇಟ್‌ನಲ್ಲಿ ಟೀ ಎಲೆ ಕೀಳುವ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಗೌರಮ್ಮ ಕುಟುಂಬ ಚಾಮರಾಜನಗರ ತಾಲೂಕಿನ ಮಂಗಲದಿಂದ ವಲಸೆ ಹೋಗಿ 50 ವರ್ಷಗಳಿಂದ ಅಲ್ಲಿ ನೆಲೆಸಿದೆ. ಗೌರಮ್ಮ ಮತ್ತು ಅವರ ಪುತ್ರ ವಿನೋದ್, ಗೌರಮ್ಮ ಅವರ ಸೋದರನ ಕುಟುಂಬ ಭೂಕುಸಿತದಿಂದ ಉಂಟಾದ ಪ್ರವಾಹದಿಂದ ಪಾರಾಗಿ ಈಗ ಮೇಪ್ಪಾಡಿಯ ಕಾಳಜಿ ಕೇಂದ್ರದಲ್ಲಿದೆ.
ಮಂಗಳವಾರ ಮಧ್ಯರಾತ್ರಿ ನಡೆದ ದುರಂತದಲ್ಲಿ ಪಾರಾಗಿ ಸುಮಾರು 18 ಗಂಟೆಗಳ ಕಾಲ ಪಕ್ಕದ ಗುಡ್ಡದಲ್ಲಿ ರಕ್ಷಣೆ ಪಡೆದು, ರಕ್ಷಣಾ ಪಡೆಗಳ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿ ಬಂದ ರೋಚಕ ಕಥೆಯನ್ನು ಗೌರಮ್ಮ ಅವರ ಪುತ್ರ ವಿನೋದ್ ಸುದ್ದಿಗಾರರೊಂದಿಗೆ ಹಂಚಿಕೊಂಡದ್ದು ಹೀಗೆ:
ಮಂಗಳವಾರ ಬೆಳಗಿನ ಜಾವ ನಮ್ಮ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ 20 ಹಸುಗಳು ಜೋರಾಗಿ ಕೂಗುತ್ತಿರುವ ಶಬ್ದ ಕೇಳಿಸಿತು. ಶಬ್ದಕ್ಕೆ ನಮಗೆ ನಿದ್ರೆಯಿಂದ ಎಚ್ಚರವಾಯಿತು. ಕರೆಂಟ್ ಇರಲಿಲ್ಲ. ಟಾರ್ಚ್ ಬೆಳಕು ಹಿಡಿದು ದನಗಳ ಕೊಟ್ಟಿಗೆಗೆ ಬಂದು ನೋಡಿದಾಗ ನೀರು ಆವರಿಸಿತ್ತು. ಕಟ್ಟಿ ಹಾಕಿದ್ದ ಹಸುಗಳ ಹಗ್ಗ ಬಿಡಿಸಿದೆವು. ಅಷ್ಟರಲ್ಲಿ ನೀರು ನಮ್ಮ ಎದೆ ಮಟ್ಟಕ್ಕೆ ಬಂತು.
ಭೂಕುಸಿತಕ್ಕೆ ಅವೈಜ್ಞಾನಿಕ ರಬ್ಬರ್ ತೋಟಗಳೇ ಕಾರಣ
ನಾವು ಛಾವಣಿಯ ಶೀಟ್ ಒಡೆದು ಮೇಲೆ ಬಂದೆವು. ಚಿಕ್ಕ ಗುಡ್ಡಕ್ಕೆ ಹೋಗಿ ನಿಂತೆವು. ಅಲ್ಲಿ ಎಸ್ಟೇಟ್ ಅಸಿಸ್ಟೆಂಟ್ ಮ್ಯಾನೇಜರ್ ಬಂಗಲೆ ಇದೆ. ಅಕ್ಕಪಕ್ಕದಿಂದ ಜನರು ಸೇರಿ ಒಟ್ಟು 120 ಜನ ಸೇರಿದೆವು. ನಮ್ಮ ಎಸ್ಟೇಟಿನಿಂದ ಮೇಲ್ಭಾಗದಲ್ಲಿ ಮುಂಡಕೈ ಬೆಟ್ಟ ಇದೆ. ಅಲ್ಲಿ ಗುಡ್ಡ ಇನ್ನೊಮ್ಮೆ ಕುಸಿಯಿತು. 6 ಗಂಟೆ ನಸುಕಿನಲ್ಲಿ ಗುಡ್ಡದಿಂದ ನೋಡಿದರೆ ನಮ್ಮ ಊರೇ ಇಲ್ಲ. ನಮ್ಮ ಮನೆಗಳೆಲ್ಲ ನೆಲಸಮವಾಗಿತ್ತು. ನಮ್ಮ ಗುಂಪಿನಲ್ಲೊಬ್ಬರು ಕೇರಳದ ಪತ್ರಕರ್ತರಿಗೆ ಕರೆ ಮಾಡಿ ಲೊಕೇಷನ್ ಕಳಿಸಿದರು. ಮಧ್ಯಾಹ್ನದ ಹೊತ್ತಿಗೆ ಎಸ್‌ಡಿಆರ್‌ಎಫ್ ರಕ್ಷಣ ಪಡೆಯವರು ಬಂದರು. ನಮ್ಮನ್ನು ಎಚ್ಚರಿಸಿದ ಹಸುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಾವು ಹಗ್ಗ ಬಿಚ್ಚಿದ್ದೆವು. ಕತ್ತಲೆಯಲ್ಲಿ ಅವು ಎತ್ತ ಕೊಚ್ಚಿಕೊಂಡು ಹೋದವು ಎಂಬುದೂ ಗೊತ್ತಾಗಲಿಲ್ಲ.
ರಾಜೇಂದ್ರ ಶವಪತ್ತೆ, ರತ್ನಮ್ಮ ಇನ್ನೂ ನಾಪತ್ತೆ
ಚೂರಲ್‌ವುಲದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಚಾಮರಾಜನಗರ ಮೂಲದ ರಾಜೇಂದ್ರ (50) ಅವರ ಶವ ಕೇರಳದ ನೆಲಂಬೂರಿನಲ್ಲಿ ಪತ್ತೆಯಾಗಿದೆ. ಅವರ ಪತ್ನಿ ರತ್ನಮ್ಮ ಸಹ ಮೃತಪಟ್ಟಿದ್ದಾರೆಂದು ಹೇಳಲಾಗಿದ್ದು ಅವರ ಶವ ಇನ್ನೂ ಸಿಕ್ಕಿಲ್ಲ. ರಾಜೇಂದ್ರ ಅವರ ತಂದೆ ಚಿಕ್ಕಮೋಳೆಯವರು. ಇವರ ಕುಟುಂಬದವರು 50 ವರ್ಷಗಳ ಹಿಂದೆಯೇ ಟೀ ಎಸ್ಟೇಟ್‌ಗೆ ತೆರಳಿ ಗಾರೆ ಕೆಲಸ ಮಾಡಿಕೊಂಡಿತ್ತು. ರಾಜೇಂದ್ರ ಅವರು 6 ತಿಂಗಳ ಹಿಂದೆ ಗೃಹಪ್ರವೇಶ ಮಾಡಿದ್ದ ಮನೆ ಕೊಚ್ಚಿಕೊಂಡು ಹೋಗಿದೆ. ದಂಪತಿಗೆ ಮಕ್ಕಳಿರಲಿಲ್ಲ.
Kerala ಇತಿಹಾಸದಲ್ಲೇ ಅತಿ ಭೀಕರ ಭೂಕುಸಿತ! ಸಾವಿನ ಸಂಖ್ಯೆ ಏರಿಕೆ
ವಯನಾಡ್: 167 ಜನರ ಸಾವಿಗೆ ಕಾರಣವಾದ ವಯನಾಡಿನ ಮೇಪ್ಪಾಡಿ, ಚೂರಲ್ಮಲ ಮತ್ತು ಮುಂಡಕೈ ಭೂಕುಸಿತವು ಕೇರಳದ ಇತಿಹಾಸದಲ್ಲೇ ಅತಿದೊಡ್ಡ ದುರಂತ ಎನಿಸಿ ಕೊಂಡಿದೆ.
ಒಂದೇ ಭೂಕುಸಿತ ಘಟನೆಯಲ್ಲಿ ಇಷ್ಟೊಂದು ಜನ ಮೃತಪಟ್ಟ ಘಟನೆ ಕೇರಳದಲ್ಲಿ ಈ ಹಿಂದೆ ಸಂಭವಿಸಿರಲಿಲ್ಲ.
ಇಲ್ಲಿ ಇನ್ನೂ 191 ಮಂದಿ ನಾಪತ್ತೆಯಾಗಿದ್ದಾರೆ.
ಕೇರಳದ ಭೂಕುಸಿತಗಳ ಪಟ್ಟಿಯಲ್ಲಿ 2020 ರಲ್ಲಿ ಸಂಭವಿಸಿದ ಭೂಕುಸಿತ ಅತಿ ಹೆಚ್ಚು ಜೀವ ಬಲಿ ಪಡೆದ ಘಟನೆ ಎನ್ನಲಾಗಿತ್ತು. 2020ರ ಆ. 6ರಂದು ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿಯಲ್ಲಿ ಭೂಕುಸಿತ ಸಂಭವಿಸಿ, ಕಣ್ಣನ್ ದೇವನ್ ಹಿಲ್ಸ್ ಪ್ಲಾಂಟೇ ಶನ್‌ನ 66 ಕಾರ್ಮಿಕರು ಸಮಾಧಿಯಾಗಿದ್ದರು. ಭಾರೀ ಮಳೆಯಿಂದಾಗಿ ಇರವಿಕುಲಂ ರಾಷ್ಟ್ರೀಯ ಉದ್ಯಾನದ ಗಡಿಯಲ್ಲಿದ್ದ ಭಾರೀ ಬಂಡೆ ಪೆಟ್ಟಿಮುಡಿ ನದಿಯಲ್ಲಿ ಉರುಳಿ ಬಿದ್ದು, ಸಂಭವಿಸಿದ ಭೂಕುಸಿತದಿಂದ ಕಾರ್ಮಿಕರು ವಾಸವಿದ್ದ ಮನೆಗಳು 2 ಕಿ.ಮೀ. ವರೆಗೂ ಕೊಚ್ಚಿ ಹೋಗಿದ್ದವು!
ಎಲ್ಲರೂ ಗಾಢನಿದ್ರೆ ಯಲ್ಲಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಾವು ನೋವು ಉಂಟಾಗಿತ್ತು.ಪೆಟ್ಟಿಮುಡಿ, ಅಂಬೂರಿ ಭೂಕುಸಿತ ಹೊರತುಪಡಿಸಿದರೆ ಮಂಗಳವಾರ ರಾತ್ರಿ ಸಂಭವಿಸಿದ ವಯನಾಡು ಭೂಕುಸಿತದಲ್ಲಿ ಅತಿ ಹೆಚ್ಚು ಜನರು ಮೃತಪಟ್ಟಿದ್ದಾರೆ. ಗರಿಷ್ಠ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಹಾಗಾಗಿ ಇದು ಕೇರಳದ ಅತಿದೊಡ್ಡ ಭೂಕುಸಿತ ದುರಂತ ಎನ್ನಲಾಗುತ್ತಿದೆ. ಕೇರಳದಲ್ಲಿ 1881ರಲ್ಲಿ ಮೊದಲ ಬಾರಿಗೆ ಪ್ರವಾಹ ಉಂಟಾದ ದಾಖಲೆ ಇದೆ. 1882ರ ಅ. 4ರಂದು ಕೊಟ್ಟಾಯಂ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತವೂ ಕೇರಳದ ಮೊದಲ ಭೂಕುಸಿತ ಎನ್ನಲಾಗುತ್ತಿದೆ.
ಅಂಬೂರಿ ಭೂಕುಸಿತ
2001 ಸೆಪ್ಟಂಬರ್ 11ರಂದು ಸಂಭವಿಸಿದ ಅಂಬೂರಿ ಭೂಕುಸಿತ ದಲ್ಲೂ ಗರಿಷ್ಠ ಸಂಖ್ಯೆಯಲ್ಲಿ ಜನರು ಮೃತಪಟ್ಟಿದ್ದರು. ತಿರುವನಂತಪುರ ಜಿಲ್ಲೆಯ ಅಂಬೂರಿಯಲ್ಲಿ ಗುಡ್ಡದ ತುದಿ ಕುಸಿದು, 39 ಜನರು ಗಾಯಗೊಂಡಿದ್ದರು.
167 ಸಾವು, 192 ಮಂದಿ ನಾಪತ್ತೆ
ಈ ನಡುವೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, ಭೂಕುಸಿತದಲ್ಲಿ ಅಸುನೀಗಿದವರ ಸಂಖ್ಯೆ 167ಕ್ಕೆ ಏರಿಕೆಯಾಗಿದೆ, 192 ಮಂದಿಯ ಪತ್ತೆ ಇನ್ನೂ ಆಗಿಲ್ಲ. 2 ದಿನಗಳ ಕಾರ್ಯಾಚರಣೆಯಲ್ಲಿ 5,500 ಮಂದಿಯನ್ನು ರಕ್ಷಿಸಲಾಗಿದೆ ಎಂದರು.
ಭೂಸೇನೆ, ಭಾರತೀಯ ವಾಯು ಪಡೆ, ಭಾರತೀಯ ನೌಕಾಪಡೆ, ಎನ್‌ಡಿಆರ್‌ಎಫ್ನ 1200ಕ್ಕೂ ಅಧಿಕ ಸಿಬಂದಿ-ಅಧಿಕಾರಿಗಳು ಚೂರಲ್ಮಲ, ಮೇಪ್ಪಾಡಿ, ನೂಲ್‌ಪುಳ, ಮುಂಡಕೈಗಳಲ್ಲಿ ರಕ್ಷಣಾ ಕಾರ್ಯ ನಡೆಸಿದ್ದಾರೆ. 1,000ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದ್ದಾರೆ.
Wayanad Landslide ಇಂದು ವಯನಾಡ್‌ಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ
ಲೋಕಸಭೆ ವಿಪಕ್ಷ ನಾಯಕ ಹಾಗೂ ವಯನಾಡಿನ ಮಾಜಿ ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಗುರುವಾರ ವಯನಾಡ್‌ಗೆ ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಭೂಕುಸಿತದಿಂದ ಸಂತ್ರಸ್ತರಾಗಿರುವವರನ್ನು ಭೇಟಿ ಮಾಡಲಿದ್ದಾರೆ.
ರಾಹುಲ್ ಮತ್ತು ಪ್ರಿಯಾಂಕಾ ಅವರು ಮೇಪ್ಪಾಡಿಯ ಸರಕಾರಿ ಪ್ರೌಢ ಶಾಲೆ ಹಾಗೂ ಸಂತ ಜೋಸೇಫ್ ಶಾಲೆಯಲ್ಲಿ ಸ್ಥಾಪಿಸ ಲಾಗಿರುವ ಪರಿಹಾರ ಕೇಂದ್ರಗಳಿಗೆ ಮತ್ತು ಡಾ| ಮೂಪ್ಪನ್ ವೈದ್ಯಕೀಯ ಕಾಲೇಜುಗಳಿಗೆ ಭೇಟಿ ಮಾಡಿ ಸಂತ್ರಸ್ತರಿಗೆ ಸಾಂತ್ವನ ಹೇಳಲಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ರಾಹುಲ್, ಕೇಂದ್ರ ಸರಕಾರ ನೆರವು ಒದಗಿಸಬೇಕೆಂದು ಕೋರಿದ್ದರು.