ನವರಾತ್ರಿ ಧಾರ್ಮಿಕ ನೃತ್ಯ ಆಯೋಜನೆಗೆ ದುರ್ಗಾವಾಹಿನಿ ವಿರೋಧ..!

ಮಂಗಳೂರು : ಅನಿರೀಕ್ಷಿತ ವಿದ್ಯಮಾನವೊಂದರಲ್ಲಿ  ನವರಾತ್ರಿ ಸಂದರ್ಭ ಮಂಗಳೂರು ನಗರದಲ್ಲಿ ವಾಸಿಸುವ ಉತ್ತರ ಭಾರತದ ಕೆಲ ಸಮುದಾಯ ಆಯೋಜಿಸಿರುವ ದಾಂಡಿಯಾ ನೃತ್ಯಕ್ಕೆ ವಿಶ್ವ ಹಿಂದೂಪರಿಷತ್‌ನ ದುರ್ಗಾ ವಾಹಿನಿ ವಿರೋಧ ವ್ಯಕ್ತಪಡಿಸಿದೆ.

ಮಹಾರಾಷ್ಟ್ರ ಮತ್ತು ಇತರ ಉತ್ತರ ಭಾರತ ಮೂಲದ ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ದಾಂಡಿಯಾ ರಾಸ್ ಕಾರ್ಯಕ್ರಮಗಳು ನಡೆದು ಹೋಗಿವೆ. ನವರಾತ್ರಿಯ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ನಡೆಯುವಂತಹ ದಾಂಡಿಯಾ ನೃತ್ಯ (ಗರ್ಬ ಡ್ಯಾನ್ಸ್) ಹೆಸರಿನಲ್ಲಿ ಮಂಗಳೂರಿನಲ್ಲಿ ಕೆಲವೊಂದು ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಎಲ್ಲಾ ಯುವಕ ಯುವತಿಯರು ಇದರಲ್ಲಿ ಭಾಗವಹಿಸುವಂತೆ ಮುಕ್ತವಾಗಿ ಆಮಂತ್ರಣ ಹಂಚಿರುತ್ತಾರೆ. ದಾಂಡಿಯಾ ನೃತ್ಯ ಜಗನ್ಮಾತೆ ಮಾತೆ ಹೆಸರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವಾಗಿದ್ದು ಕಳೆದ ವರ್ಷಗಳಲ್ಲಿ ನಡೆದ ಇಂತಹ ಕಾರ್ಯಕ್ರಮದಲ್ಲಿ ಡ್ರಗ್ಸ್, ಮಾದಕ ದೃವ್ಯ ಸೇವನೆ, ಮತ್ತು ಅಸಭ್ಯ ನೃತ್ಯಗಳ ಬಗ್ಗೆ ದೂರುಗಳು ಬಂದಿವೆ ಎಂದು ದುರ್ಗಾ ವಾಹಿನಿ ಹೇಳಿದೆ.

ಹಾಗಾಗಿ ಯಾವುದೇ ಕಾರಣಕ್ಕೂ ಇಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದಾಗಿ ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಶ್ರೀಮತಿ ಶ್ವೇತ ಅದ್ಯಪಾಡಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *