Vanditha Sharma Retires Rajaneesh New CS: ವಂದಿತಾ ಶರ್ಮಾ ನಿವೃತ್ತಿ ರಜನೀಶ್ ಗೋಯಲ್ ಹೊಸ ಸಿಎಸ್

ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯೆಲ್ ಅವರನ್ನು ನೇಮಕ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಹಾಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ನವೆಂಬರ್ 30ರಂದು ನಿವೃತ್ತಿಯಾಗುತ್ತಿದ್ದು, ಅವರಿಂದ ತೆರವಾಗುವ ಸ್ಥಾನಕ್ಕೆ 1986ನೇ ಬ್ಯಾಚ್ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗದಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಆರಂಭಿಸಿದ ರಜನೀಶ್ ಗೋಯಲ್ ಅವರು ಅನಂತರ ಪುತ್ತೂರಿನ ಕ್ಯಾಂಪ್ಕೊ ಕಂಪೆನಿಯಲ್ಲಿ ಆಡಳಿತ ನಿರ್ದೇಶಕರಾಗಿದ್ದರು.

ರಜನೀಶ್ ಗೋಯೆಲ್ ಪತ್ನಿ ಶಾಲಿನಿ ಅವರು ಇದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದರು.

ರಜನೀಶ್ ಗೋಯೆಲ್ ಅವರು ಪ್ರಸ್ತುತ ಗೃಹ ಇಲಾಖೆಯ ಹೆಚ್ಚಿವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಡಿಸೆಂಬರ್ 1 ರಂದು ನೂತನ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸರ್ಕಾರದ ಮುಂದಿನ ಮುಖ್ಯಕಾರ್ಯದರ್ಶಿ ಶಾಲಿನಿ ಗೋಯಲ್ ಆಗುವರೇ?​

ಜೂನ್‌ನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ  ಅವರ ಪತಿ ಐಎಸ್‌ಎನ್ ಪ್ರಸಾದ್  ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿ ಆಗಿದ್ದರು. ವಂದಿತಾ ಶರ್ಮಾ ಅವರ ನಿವೃತ್ತಿ ಅನಂತರ  ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯೆಲ್  ಅವರು ಮುಖ್ಯ ಕಾರ್ಯದರ್ಶಿ ಆಗಲಿದ್ದು, ಅವರ ಪತ್ನಿ ಶಾಲಿನಿ ರಜನೀಶ್ ಅವರು ಅನಂತರದ ಮುಖ್ಯಕಾರ್ಯದರ್ಶಿ  ಆಗುವ ಸಾಧ್ಯತೆ ಹೆಚ್ಚಿದೆ.ಮುಂದಿನ ಬಾರಿ ಶಾಲಿನಿ ರಜನೀಶ್ ಆಯ್ಕೆಯಾದರೆ, ಸುಮಾರು ನಾಲ್ಕು ವರ್ಷಗಳ ಕಾಲ ಉನ್ನತ ಹುದ್ದೆಯಲ್ಲಿರಲಿದ್ದಾರೆ.

ಎರಡು ದಶಕಗಳ ಹಿಂದೆ ಮುಖ್ಯ ಕಾರ್ಯದರ್ಶಿಯಾಗಿದ್ದ ಲೆಜೆಂಡರಿ ಬಿಪುಲ್ ಭಟ್ಟಾಚಾರ್ಯ ಮತ್ತು ತೆರೆಸಾ ಭಟ್ಟಾಚಾರ್ಯ ಅವರ ನಂತರ ಉನ್ನತ ಹುದ್ದೆಗೆ ನೇಮಕವಾಗಿದ್ದರು. ಅವರು ಕೂಡ ಹೆಚ್ಚಿನ ಸಮಯ ಕಾರ್ಯ ನಿರ್ವಹಿಸಿದ್ದರು. ಕಾರ್ಯವಿಧಾನದ ಪ್ರಕಾರ, ಮುಖ್ಯ ಕಾರ್ಯದರ್ಶಿಯನ್ನು ಉನ್ನತ ಮಟ್ಟದ ಅಧಿಕೃತ ಸೆಲೆಕ್ಷನ್ ಸಮಿತಿ ಆಯ್ಕೆ ಮಾಡುತ್ತದೆ, ಶಾಲಿನಿ ರಜನೀಶ್ ಅವರು ಮೊದಲು ಆ ಪ್ರಕ್ರಿಯೆಯನ್ನು ದಾಟಬೇಕಾಗುತ್ತದೆ.

ಶಾಲಿನಿ ಛಾಬ್ರ ಅವರು ಆ ವರ್ಷದ ಮಹಿಳಾ ವಿಭಾಗದಲ್ಲಿ ಐಎಎಸ್ ಟಾಪರ್ ಆಗಿದ್ದರು. ಪಂಜಾಬ್ ಚಂಂಡಿಗಢದ ಐಎಎಸ್ ಅಧಿಕಾರಿಯ ಪುತ್ರಿಯಾಗಿರುವ ಶಾಲಿನಿ ಆರು ತಿಂಗಳಲ್ಲಿ ಕನ್ನಡ ಕಲಿತ್ತಿದ್ದರು.

Leave a Reply

Your email address will not be published. Required fields are marked *