Udupi Lokasabha: ಉಡುಪಿ ಕಾಂಗ್ರೆಸ್ ಲಿಸ್ಟಲ್ಲಿ ಬಿಜೆಪಿ ಮುಖಂಡರು

ಮಂಗಳೂರುಃ  ದಿ. ಟಿ ಎಂ ಎ ಪೈ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಪ್ರತಿನಿಧಿಸುತ್ತಿದ್ದ ಉಡುಪಿ ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಬ್ಬರು ಬಿಜೆಪಿ ಮುಖಂಡರ ಹೆಸರಿದ್ದು, ಕಾಂಗ್ರೆಸ್ಸಿನವರ ಹೆಸರಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಸತತವಾಗ ಸೋಲುತ್ತಿರುವ ಕ್ಷೇತ್ರಗಳಲ್ಲಿ ಒಂದಾದ ಉಡುಪಿ ಈ ಬಾರಿ ಬಿಜೆಪಿ ಮುಖಂಡರನ್ನೆ ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ಮುಂದಾಗಿದ್ದು, ಕಾಂಗ್ರೆಸ್ ಪಕ್ಷದ ಅಳಿದುಳಿದ ಪ್ರಾಮಾಣಿಕ ಕಾರ್ಯಕರ್ತರಿಗೆ ಶಾಕ್ ನೀಡಲು ಮುಂದಾಗಿದೆ.

ಇತ್ತ ಮಾಜಿ ಸಚಿವ ಹಾಗೂ ಮಾಜಿ ಸಂಸದರಾದ ವಿನಯ ಕುಮಾರ ಸೊರಕೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಬೃಹತ್ ಈಡಿಗ ಬಿಲ್ಲವ ಸಮಾವೇಶಕ್ಕೆ ಉತ್ಸಾಹದಿಂದ ಓಡಾಡುತ್ತಿದ್ದರೆ, ಅತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಚಿವ ಬಿಜೆಪಿಯ ಜಯಪ್ರಕಾಶ್ ಹೆಗ್ಡೆ ಅವರ ಹೆಸರನ್ನು ಲೋಕಸಭಾ ಚುನಾವಣೆಗೆ ಅಂತಿಮಗೊಳಿಸಿದ್ದಾರೆ.

ಜನತಾ ಪರಿವಾರದ ಜಯಪ್ರಕಾಶ್ ಹೆಗ್ಡೆ ಅವರು ಅನಂತರ ಬಿಜೆಪಿ ಸೇರಿ, ಬಿಜೆಪಿ ಸರಕಾರ ನೇಮಿಸಿದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದಾರೆ. ಆರಂಭದಲ್ಲಿ ಹಿಂದುಳಿದ ವರ್ಗಗಳ ಆಯೋಗ ಸಿದ್ದಪಡಿಸಿದ್ದ ಶೈಕ್ಷಣಿಕ , ಆರ್ಥಿಕ, ಸಾಮಾಜಿಕ (ಜಾತಿ )ಸಮೀಕ್ಷೆಗೆ ಅಪಸ್ವರ ಎತ್ತಿದ್ದ ಜಯಪ್ರಕಾಶ್ ಹೆಗ್ಡೆ ಅವರು ಡಿಸೆಂಬರ್ ತಿಂಗಳಲ್ಲಿ ಜಾತಿ ಸಮೀಕ್ಷೆಯ ವರದಿಯನ್ನು ಸರಕಾರಕ್ಕೆ ಮಂಡಿಸಲಿದ್ದಾರೆ. ಅದೇ ವೇಳೆ ಕಾಂಗ್ರೆಸ್ ಪಕ್ಷ ಕೂಡ ತನ್ನ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ.

ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಇರುವ ಇನ್ನೊಂದು ಹೆಸರು ಶ್ರೀನಿವಾಸ ಶೆಟ್ಟಿ. ಅವರ ಮನೆಗೆ ತೆರಳಿ ಅವರನ್ನು ಆಹ್ವಾನಿಸಲು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಆಗಿರುವ ಬಹುದೊಡ್ಡ ಬದಲಾವಣೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿಮ್ಮತ್ತಿಲ್ಲ  ಅದೇ ವೇಳೆ ಬಿಜೆಪಿ ಮುಖಂಡರನ್ನು ಕರೆಕರೆದು ಹೂಗುಚ್ಚ ಹೂಹಾರ ಹಾಕಿ ಸತ್ಕರಿಸಲಾಗುತ್ತಿದೆ. ಆದುದರಿಂದ ಉಡುಪಿಯಲ್ಲಿ ವಿದ್ಯಮಾನ ಕಾಂಗ್ರೆಸ್ ಕಾರ್ಯಕರ್ತರಿಗೆ ಅಚ್ಚರಿ ಮೂಡಿಸಿಲ್ಲ.

 

Leave a Reply

Your email address will not be published. Required fields are marked *