Tumakur Murder ಬೆಳ್ತಂಗಡಿಯ ಮೂವರನ್ನು ಕೊಂದು ಕಾರಲ್ಲಿ ಸುಟ್ಟು ಹಾಕಿದರೇ?

Tumakur Murder ಮಂಗಳೂರು ಮಾರ್ಚ್ 24-  ತುಮಕೂರು ಜಿಲ್ಲೆಯ ಕುಚ್ಚಂಗಿ ಕೆರೆಯ ಬಳಿ ಸುಟ್ಟು ಹೋಗಿದ್ದ ಕಾರಿನಲ್ಲಿ(Burnt Car)ಮೂವರ ಮೃತದೇಹ ಪತ್ತೆಯಾಗಿದ್ದು, ಇದೊಂದು ಕೊಲೆ (Murder)  ಆಗಿರಬೇಕೆಂದು ಪೊಲೀಸರು(Police) ಶಂಕೆ ವ್ಯಕ್ತ ಪಡಿಸಿದ್ದು ಆ ದಿಕ್ಕಿನಲ್ಲಿ ತನಿಖೆ ಆರಂಭಿಸಿದ್ದಾರೆ.

ಕೊರ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣೇನಹಳ್ಳಿಯ ಕುಚ್ಚಂಗಿ ಕೆರೆಯ ಏರಿ ಹಾದಿಯಲ್ಲ ಯಾವುದೇ ರಸ್ತೆ ಹಾದುಹೋಗದಿದ್ದರು ಕೂಡ ಒಣಗಿ ಹೋಗಿರುವ ಕೆರೆಯಿಂದ ಮಣ್ಣು ಕೊಂಡು ಹೋಗಲು ಮಾಡಿರುವ ಕಚ್ಚ ರಸ್ತೆಗಳಿದ್ದು, ಯಾರೊ ಪ್ರದೇಶದ ಪರಿಚಯ ಇದ್ದವರೇ ಈ ಕಡೆ ಬಂದು ಕೊಲೆ ಮಾಡಿರಬಹುದು ಅಥವ ಕೊಲೆ ಮಾಡಿ ಇಲ್ಲಿ ಹೆಣ ಸುಟ್ಟು ಹಾಕಿರಬಹುದು ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಟಿ.ಬಿ ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ (45), ಮದ್ದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ನಿವಾಸಿ ಇಮ್ತಿಯಾಝ್(34) ಅವರ ಮೃತದೇಹ ಇದು ಎಂದು ಗುರುತಿಸಲಾಗಿದೆ. ದೇವನಹಳ್ಳಿ RTO Office ಕಚೇರಿಯಲ್ಲಿ ನೋಂದಾವಣೆ ಮಾಡಲಾದ ಮಾರುತಿ ಕಾರು ಇದ್ದಾಗಿದೆ.

ಕಳೆದ ಶುಕ್ರವಾರ  ಸಾರ್ವಜನಿಕರು ಕೆರೆ ಬಳಿ ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಸುಟ್ಟ ಕಾರಿನಿಂದ ಹೊಗೆಯಾಡುತಿತ್ತು. ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರು ಬಂದು ನೋಡಿದಾಗ ಸಂಪೂರ್ಣ ಸುಟ್ಟು ಹೋಗಿದ್ದ ಮೂವರ ದೇಹದ  ಕುರುಹುಗಳು ಕಂಡುಬಂದಿವೆ. ಎರಡು ದೇಹಗಳು ಕಾರಿನ ಡಿಕ್ಕಿಯಲ್ಲಿದ್ದಿರುವುದು ಕೊಲೆ ಶಂಕೆಗೆ ಮತ್ತೊಂದು ಕಾರಣವಾಗಿದೆ.  ಮೂರನೇ ದೇಹ ಹಿಂದಿನ ಸೀಟಿನಲ್ಲಿತ್ತು.ಕಳೆದ ಗುರುವಾರ ರಾತ್ರಿ ಕಾರಿಗೆ ಬೆಂಕಿ ಹಾಕಿರುವ ಸಾಧ್ಯತೆ ಇದೆ.

ಮೂರು ಮಂದಿ ಬೆಳ್ತಂಗಡಿಯಿಂದ ಬಾಡಿಗೆ ಕಾರು ಮಾಡಿಕೊಂಡು ತುಮಕೂರು ಕಡೆಗೆ ತೆರಳಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕಾರಿನ ಮೊದಲ ಮಾಲೀಕ ಬೆಳ್ತಂಗಡಿ ತಾಲೂಕಿನವನು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ

ಕಾರಲ್ಲಿ ಐದು ಮಂದಿ ಇದ್ದಿರಬಹುದು ಎಂಬುದು ಪೊಲೀಸರ ಸಂಶಯವಾಗಿದೆ.

ಇದನ್ನು ಓದಿಃ  ಸಿಎಂ ಆಪ್ತ ಸೊರಕೆಗೆ ಟಾಂಗ್ ನೀಡಿದ ಬಿ.ಕೆ.ಹರಿಪ್ರಸಾದ್

ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಹಿರಿಯ ಎಸ್ಪಿ ಅಶೋಕ್ ಕೆ.ವಿ, ಅಡಿಷನಲ್ ಎಸ್ಪಿ ಮರಿಯಪ್ಪ, ಡಿವೈಎಸ್ಪಿ ಚಂದ್ರಶೇಖರ್ ಸೇರಿದಂತೆ ಹಲವರು ಭೇಟಿ ನೀಡಿದ್ದು, ಈ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ. ಘಟನೆಗೆ ಸಂಬಂಧ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕೆಎ43 ರಿಜಿಸ್ಟ್ರೇಷನ್‌ ನಂಬರಿನ Maruthi ಎಸ್‌ಪ್ರೆಸ್‌ ಕಾರು ರಫೀಕ್‌ ಎಂಬುವವರಿಗೆ ಸೇರಿದ್ದೆಂದು ಹೇಳಲಾಗಿದೆ. ಮೃತದೇಹ ಸಂಪೂರ್ಣವಾಗಿ ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾದ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದಿದೆ. ಯಾವ ವಿಷಯಕ್ಕೆ ಸಂಬಂಧಪಟ್ಟಂತೆ ತುಮಕೂರು ಕಡೆಗೆ ಈ ಮೂವರು ಹೋಗಿದ್ದರು ಎಂದು ಇನ್ನೂ ತಿಳಿದು ಬಂದಿಲ್ಲ.

ಐದು ಜನರು ಕಾರಿನಲ್ಲಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇದೀಗ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಶ್ವಾನದಳ, ಎಫ್.ಎಸ್.ಎಲ್ ತಂಡ ಭೇಟಿ ನೀಡಿ ತನಿಖೆಯನ್ನು ನಡೆಸುತ್ತಿದ್ದಾರೆ. ಸ್ಥಳೀಯರು ಯಾವುದೋ ವ್ಯವಾಹಾರಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿರುವ ಶಂಕೆ ವ್ಯಕ್ತಡಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಮೃತರು ಕುಟುಂಬಸ್ಥರು ಮತ್ತು ಸ್ಥಳೀಯರು ಬೆಳ್ತಂಗಡಿಯಿಂದ ತುಮಕೂರಿಗೆ ತೆರಳಿದ್ದಾರೆ.

ಕಾರಿನಲ್ಲಿ ಸುಟ್ಟು ಬೂದಿಯಾದವರನ್ನು ಹೊರಗೆ ಎಲ್ಲಾದರೂ ಕೊಂದು ಇಲ್ಲಿಗೆ ತಂದು ಕಾರು ಸಮೇತ ಸುಟ್ಟು ಹಾಕಲಾಗಿದೆಯೋ , ಅಥವಾ ಇಲ್ಲೇ ಕೊಂದು ಸುಡಲಾಗಿದೆಯೋ, ಅಥವಾ ಯಾರದಾರೂ ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೋ ಎಂಬುದು ತನಿಖೆಯಂದಷ್ಟೇ ಹೊರಬರಬೇಕಿದೆ. ಎಸ್‌ಪಿ ಕೆ.ವಿ.ಅಶೋಕ್‌ ಅವರು ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾರಿನ ಗುರುತು ಪತ್ತೆಯಾಗಿದೆ. ತನಿಖೆಯ ನಂತರವಷ್ಟೇ ಮಾಹಿತಿ ಹೊರಬರಬೇಕಿದೆ ಎಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವ್ಯಕ್ತಿಯೊಬ್ಬರು ಮೂರೂಕಾಲು ವರ್ಷದ ಹಿಂದೆ ಖರೀದಿಸಿರುವ ಮಾರುತಿ ಸುಜುಕಿ ಕಂಪನಿಯ ಎಸ್‌ಪ್ರೆಸೋ ಎಂಬ ಬಿಳಿ ಬಣ್ಣದ ಸಣ್ಣ ಗಾತ್ರದ ಕಾರು ಇದಾಗಿದೆ. ಅವರ ಕಾರನ್ನು ಯಾರೋ ಎರವಲು ಪಡೆದು ಹೋಗಿದ್ದಾರೆ ಎಂದು ಹೇಳಲಾಗಿದೆ.

ಶುಕ್ರವಾರ ಮಧ್ಯಾಹ್ನ ಕೆರೆ ಅಂಗಳದಲ್ಲಿ ಮಣ್ಣು ಸಾಗಿಸಲೆಂದು  ಬಂದ ತಿಮ್ಮಲಾಪುರದ ಟ್ರಾಕ್ಟರ್‌ ಚಾಲಕ ಇನ್ನೂ ಹೊಗೆಯಾಡುತ್ತಿದ್ದ ಕಾರನ್ನು ಕಂಡ ಬಳಿಕವಷ್ಟೇ ಪೊಲೀಸರಿಗೆ ಸುದ್ದಿ ತಲುಪಿದೆ.

ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ಅರಕೆರೆ ಗ್ರಾಮ ಪಂಚಾಯಿತಿಗೆ ಸೇರಿದ ಈ ಪ್ರದೇಶದಲ್ಲಿ ಕೆರೆ ಮುಕ್ಕಾಲು ಪಾಲು ಒಣಗಿದ್ದು ಜಾಲಿ ಮರಗಳು ಹಾಗೂ ಕುರುಚಲು ಪೊದಗಳಿಂದ ಆವೃತವಾಗಿದೆ.ಕೋರ ಪೊಲೀಸ್‌ ಠಾಣೆ ವ್ಯಾಪ್ತಿಗೆ ಬರುವ ಕುಚ್ಚಂಗಿ ಗ್ರಾಮದ ಕೆರೆ ಅಂಗಳದಲ್ಲಿ ರಾಯದುರ್ಗ ರೈಲ್ವೆ ಮಾರ್ಗ ಸಾಗಿದೆ. ಇಲ್ಲಿ ರೈಲ್ವೆಯೂ ಸೇರಿ ಹಲವು ಕಾಮಗಾರಿಗಳಿಗೆ ಮಣ್ಣನ್ನು ಅಗೆದು ಸಾಗಿಸುವುದು ಹತ್ತಾರು ವರ್ಷಗಳಿಂದ ನಡೆದಿದ್ದು, ಊರುಕೆರೆ-ಅಣ್ಣೇನಹಳ್ಳಿ ಕಡೆಯಿಂದ ರೈಲ್ವೆ ಮಾರ್ಗವನ್ನು ನಿರ್ಮಿಸುತ್ತಿದ್ದು ಕೆರೆಯನ್ನು ಅರ್ಧಕ್ಕೆ ವಿಭಾಗಿಸಿಕೊಂಡೇ ಎತ್ತರದ ಏರಿ ಹಾಗೂ ಸೇತುವೆಗಳನ್ನು ನಿರ್ಮಿಸಲಾಗಿದೆ. ಅಣ್ಣೇನಹಳ್ಳಿ ರೈಲು ನಿಲ್ದಾಣ ನಿರ್ಮಾಣವೂ ಅಪೂರ್ಣಸ್ಥಿತಿಯಲ್ಲಿದ್ದು  ಕಾರು, ಟ್ರಾಕ್ಟರ್‌ಗಳು ಈ ಸೇತುವೆ ಮಾರ್ಗದಲ್ಲೇ ಸಂಚರಿಸುತ್ತ ಕುಚ್ಚಂಗಿ ಕೆರೆ ಅಂಗಳಕ್ಕೆ ಬಂದು ತಲುಪುತ್ತವೆ. ಅಷ್ಟು ತಡ ರಾತ್ರಿಯಲ್ಲಿ ನಿರ್ಮಾನುಷವಾದ ಕುಚ್ಚಂಗಿ ಕೆರೆ ಅಂಗಳಕ್ಕೆ ಬಂದು ತಲುಪಬೇಕೆಂದರೆ ಸ್ಥಳದ ಪೂರ್ವ ಪರಿಚಯ ಇರುವವರೇ ಆಗಿರುತ್ತಾರೆ ಎನ್ನಬಹುದಾಗಿದೆ.

ಅಷ್ಟು ತಡ ರಾತ್ರಿಯಲ್ಲಿ ನಿರ್ಮಾನುಷವಾದ ಕುಚ್ಚಂಗಿ ಕೆರೆ ಅಂಗಳಕ್ಕೆ ಬಂದು ತಲುಪಬೇಕೆಂದರೆ ಸ್ಥಳದ ಪೂರ್ವ ಪರಿಚಯ ಇರುವವರೇ ಆಗಿರುತ್ತಾರೆ ಎನ್ನಬಹುದಾಗಿದೆ. ಪೊಲೀಸರು ಪ್ರಕರಣದ ಕೂಲಂಕಷ ತನಿಖೆ ನಡೆಸುತ್ತಿದ್ದಾರೆ.

 

 

Leave a Reply

Your email address will not be published. Required fields are marked *