Telangana Election kamareddy ಇಂದಿನ ಮುಖ್ಯಮಂತ್ರಿ, ಮುಂದಿನ ಮುಖ್ಯಮಂತ್ರಿ ಇಬ್ಬರನ್ನು ಸೋಲಿಸಿದ ಬಿಜೆಪಿ ಅಭ್ಯರ್ಥಿ

kamಹೈದರಾಬಾದ್ Telangana Election: ತೆಲಂಗಾನದ ಹಾಲಿ ಸಿಎಂ ಕೆಸಿಆರ್,  ಭಾವಿ ಸಿಎಂ ರೇವಂತ್​ ರೆಡ್ಡಿ ಇಬ್ಬರನ್ನೂ ಸೋಲಿಸಿ ದಿಗ್ವಿಜಯ ಸಾಧಿಸಿದ ಬಿಜೆಪಿ ಅಭ್ಯರ್ಥಿ!

ಬಿಆರ್‌ಎಸ್ ಅಧ್ಯಕ್ಷ ಸಿಎಂ ಕೆಸಿಆರ್ ಮತ್ತು ಟಿಪಿಸಿಸಿ ಮುಖ್ಯಸ್ಥ ರೇವಂತ್ ರೆಡ್ಡಿ ಕಾಮರೆಡ್ಡಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ತೆಲಂಗಾಣ ರಾಜಕೀಯದಲ್ಲಿ ಕುತೂಹಲ ಮೂಡಿಸಿದತ್ತು. ರಾಜ್ಯಾದ್ಯಂತ ಫಲಿತಾಂಶದ ಉತ್ಸಾಹ ಇದ್ದಂತೆಯೇ ಕಾಮರೆಡ್ಡಿ ಫಲಿತಾಂಶದತ್ತಾ ತಿರುಗಿದೆ. ಬೆಳಗ್ಗೆಯಿಂದ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾದಾಗಿನಿಂದ ಕಾಮರಡ್ಡಿಯಲ್ಲಿ ಕಿಂಗ್ ಮೇಕರ್ ಯಾರಾಗುತ್ತಾರೆ ಎಂಬ ಕುತೂಹಲ ಜನರಲ್ಲಿ ಹೆಚ್ಚಿಸಿತ್ತು.

ಮತ ಎಣಿಕೆಯ ಮೊದಲ 11 ಸುತ್ತುಗಳಲ್ಲಿ ರೇವಂತ್ ರೆಡ್ಡಿ ಮುನ್ನಡೆ ಸಾಧಿಸಿದ್ದಾರೆ. ಇದರೊಂದಿಗೆ ಕಾಮರೆಡ್ಡಿ ವಿಧಾನಸಕ್ಷಾ ಕ್ಷೇತ್ರದಲ್ಲಿ  ಹಾಗೂ ಕೊಡಂಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮುಖಂಡ ಮುಂದಿನ ಸಂಭಾವ್ಯ ಮುಖ್ಯಮಂತ್ರಿ ರೇವಂತ್ ರೆಡ್ಡಿ ಗೆಲ್ಲುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ 12ನೇ ಸುತ್ತಿನಲ್ಲಿ ಫಲಿತಾಂಶ ಉಲ್ಟಾ ಆಗಿದೆ. ಆದರೆ 12ನೇ ಸುತ್ತಿನಿಂದ ಬಿಜೆಪಿ ಅಭ್ಯರ್ಥಿ ವೆಂಕಟರಮಣ ರೆಡ್ಡಿ ಗೆಲುವು ಸಾಧಿಸಿದ್ದಾರೆ.

ಇವಿಎಂ ಮತಗಳ ಎಣಿಕೆ 12ನೇ ಸುತ್ತಿನಲ್ಲಿ ಉಲ್ಟಾ ಆಗಿದೆ. ಬಿಜೆಪಿ ಅಭ್ಯರ್ಥಿ ವೆಂಕಟರಮಣ 293 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ.

15ನೇ ಸುತ್ತಿನ ಅಂತ್ಯಕ್ಕೆ 4,030 ಮತಗಳನ್ನು ಪಡೆದು ರೇವಂತ್ ರೆಡ್ಡಿ ಎರಡನೇ ಸ್ಥಾನಕ್ಕೆ ಹಾಗೂ ಕೆಸಿಆರ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಎಲ್ಲಾ ಸುತ್ತುಗಳು ಮುಗಿದಾಗ ವೆಂಕಟರಮಣ ರೆಡ್ಡಿ 11 ಸಾವಿರ ಮತಗಳ ಬಹುಮತದಿಂದ ಗೆದ್ದಿದ್ದಾರೆ ಎಂದು ತಿಳಿದುಬಂದಿದೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಬರಬೇಕಿದೆ.

Telangana Election ಮಂತ್ರಿಯಾಗದೇ ಸಿಎಂ! ಎನ್​ಟಿಆರ್ ದಾಖಲೆ ಸರಿಗಟ್ಟುತ್ತಾರಾ ರೇವಂತ್ ರೆಡ್ಡಿ?

Telangana Electionಸಿಎಂ ರೇಸ್​ನಲ್ಲಿ ನಾಲ್ವರು ನಾಯಕರಿದ್ದಾರೆ. ಆದರೆ ಇವರಲ್ಲಿ ಟಿಪಿಸಿಸಿ ಮುಖ್ಯಸ್ಥ ರೇವಂತ್ ರೆಡ್ಡಿ ಮುಂದಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಪಕ್ಷದ ಹೈಕಮಾಂಡ್ ಕೃಪಾಕಟಾಕ್ಷವೂ ಅವರ ಕಡೆ ಇದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ರೇವಂತ್ ರೆಡ್ಡಿಯನ್ನು ನೋಡಿಯೇ ಕಾಂಗ್ರೆಸ್‌ಗೆ ವೋಟ್ ಹಾಕಿದ್ದೇವೆ ಎಂದು ಹಲವರು ಹೇಳುತ್ತಿದ್ದಾರೆ. ಚುನಾವಣೆಗೂ ಮುನ್ನವೇ ರೇವಂತ್ ಸಿಎಂ ಅಭ್ಯರ್ಥಿ ಎಂಬುದು ಅಂತಿಮಗೊಂಡಿದೆ ಎಂದು ಪಕ್ಷದ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರಾದ ಉತ್ತಮ್ ಕುಮಾರ್ ರೆಡ್ಡಿ, ಭಟ್ಟಿ ವಿಕ್ರಮಾರ್ಕ, ಮಧು ಯಾಶ್ಕಿ, ಶಬ್ಬೀರ್ ಅಲಿ ಅಂತಹ ನಾಯಕರು ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯದ ಅರ್ಧದಷ್ಟು ಕ್ಷೇತ್ರಗಳಲ್ಲಿ ಪಾದಯಾತ್ರೆ ಕೈಗೊಂಡಿರುವ ಭಟ್ಟಿ ಅವರಿಗೂ ಅವಕಾಶ ಸಿಕ್ಕರೂ ಅಚ್ಚರಿ ಇಲ್ಲ. ಪರಿಶಿಷ್ಠ ಸಮುದಾಯದ ನಾಯಕರಾಗಿರುವುದು ಕೂಡ ಅವರಿಗೆ ಒಂದು ಅವಕಾಶ ಇದೆ. ಆದರೆ ಸಾಮಾಜಿಕ ಸಮೀಕರಣಗಳ ಹಿನ್ನೆಲೆಯಲ್ಲಿ ನಾಯಕತ್ವ ರೇವಂತ್ ಕಡೆಗೆ ವಾಲುವ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗಾಗಿ ರೇವಂತ್ ರೆಡ್ಡಿ ಶಕ್ತಿ ಮೀರಿ ಹೋರಾಡಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ರಾಜ್ಯಾದ್ಯಂತ ಬಹುತೇಕ ಏಕಾಂಗಿಯಾಗಿ ಪ್ರಚಾರದ ನೇತೃತ್ವ ವಹಿಸಿದ್ದರು. ಕಣ್ಮರೆಯಾಗಿದ್ದ ಕಾಂಗ್ರೆಸ್ ಪಕ್ಷವನ್ನು ಜನರ ಮುಂದೆ ತರುವಲ್ಲಿ ರೇವಂತ್ ರೆಡ್ಡಿ ಪಾತ್ರ ಅಪಾರವಾಗಿದೆ.

ರೇವಂತ್‌ ರೆಡ್ಡಿ ಮೂಲ ಕಾಂಗ್ರೆಸಿಗರೇನಲ್ಲ. ಕಾಲೇಜು ದಿನಗಳಲ್ಲಿ ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿಯೊಂದಿಗೆ ಗುರುತಿಸಿಕೊಂಡಿದ್ದ ರೆಡ್ಡಿ ಮೊದಲ ಚುನಾವಣೆಗೆ ಬಂದಾಗ ಎಲ್ಲಾ ಪಕ್ಷದಿಂದಲೂ ಅಂತರ ಕಾಪಾಡಿಕೊಂಡಿದ್ದರು. ಮೊದಲಿಗೆ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ರೆಡ್ಡಿ, ಯಶಸ್ವಿಯಾಗಿ ಚುನಾವಣಾ ರಾಜಕೀಯ ಆರಂಭಿಸಿದ್ದರು. 2007ರಲ್ಲಿ ಅವರು ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಆರೆಸ್ಸೆಸ್‌ ಮೂಲದ ವಿದ್ಯಾರ್ಥಿ ಸಂಸ್ಥೆಯ ಮೂಲಕ ರಾಜಕೀಯ ಜೀವನವನ್ನು ಆರಂಭ ಮಾಡಿ, ಬಳಿಕ ಸ್ವತಂತ್ರವಾಗಿ ತಮ್ಮ ಚರಿಷ್ಮಾ ಬೆಳೆಸಿಕೊಂಡು ತೆಲುಗು ದೇಶಂ ಪಾರ್ಟಿಯಲ್ಲೂ ತಮ್ಮ ಕರಾಮತ್ತು ತೋರಿಸಿ ಈಗ ಕಾಂಗ್ರೆಸ್‌ನ ತೆಲಂಗಾಣ ರಾಜ್ಯಾಧ್ಯಕ್ಷರಾಗಿರುವ ರೇವಂತ ರೆಡ್ಡಿ ತಮ್ಮ 54ನೇ ವಯಸ್ಸಿನಲ್ಲೇ ಹಲವು ವಿಕ್ರಮಗಳನ್ನು ಸಾಧಿಸಿದವರು.

ಮುಂದೆ ಟಿಡಿಪಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದ ರೇವಂತ್‌ ರೆಡ್ಡಿ ತೆಲುಗು ದೇಶಂ ಪಕ್ಷ ಸೇರ್ಪಡೆಯಾದರು. 2009ರಲ್ಲಿಅವಿಭಜಿತ ಆಂಧ್ರ ಪ್ರದೇಶದ ಕೋಡಂಗಲ್‌ ಕ್ಷೇತ್ರದಿಂದ ಟಿಡಿಪಿ ಟಿಕೆಟ್‌ನಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು.

Bharat Jodo Yatra: ಡಿಸಂಬರಿನಲ್ಲಿ 2 ನೇ ಹಂತದ ಭಾರತ್​ ಜೋಡೋ ಯಾತ್ರೆ

2015ರಲ್ಲಿ ನಾಮನಿರ್ದೇಶಿತ ಆಂಗ್ಲೋ-ಇಂಡಿಯನ್‌ ಶಾಸಕ ಎಲ್ವಿಸ್‌ ಸ್ಟೀಫನ್‌ಸನ್‌ಗೆ ಲಂಚ ನೀಡುವ ವೇಳೆ ಸಿಕ್ಕಿಬಿದ್ದು ಎಸಿಬಿ ರೇವಂತ್‌ ರೆಡ್ಡಿಯನ್ನು ಬಂಧಿಸಿತ್ತು. 30 ದಿನಗಳ ಕಾಲ ರೆಡ್ಡಿ ಜೈಲಿನಲ್ಲಿ ಇರಬೇಕಾಯಿತು. ಮುಂದೆ ಶಾಸಕರು ಸರಣಿಯಾಗಿ ಟಿಆರ್‌ಎಸ್‌ಗೆ ವಲಸೆ ಹೋಗಲಾರಂಭಿಸಿದರು. ಅತ್ತ ಚಂದ್ರಬಾಬು ನಾಯ್ಡು ಕೂಡ ಆಂಧ್ರಕ್ಕೆ ಹೆಚ್ಚಿನ ಒತ್ತು ನೀಡಲಾರಂಭಿಸಿ, ತೆಲಂಗಾಣದತ್ತ ನಿರ್ಲಕ್ಷ ತಾಳಿದರು. ಈ ವೇಳೆ ರೇವಂತ್‌ ರೆಡ್ಡಿಗೆ ತನ್ನ ಅಸ್ತಿತ್ವದ ಪ್ರಶ್ನೆ ಕಾಡಲಾರಂಭಿಸಿತು. ಆಗ ಅವರಿಗೆ ಕಾಣಿಸಿದ್ದೇ ಕಾಂಗ್ರೆಸ್‌.

Leave a Reply

Your email address will not be published. Required fields are marked *