Teacher kidnap ಹಾಸನ – ಶಿಕ್ಷಕಿ ಅರ್ಪಿತಾ ಅಪಹರಿಸಿದ ಆರೋಪಿಗಳ ಬಂಧನ

ಪುತ್ತೂರು ಡಿಸೆಂಬರ್ 01: ಹಾಸನದಲ್ಲಿ ನಡೆದ ಶಾಲಾ ಶಿಕ್ಷಕಿ Teacher kidnap ಅರ್ಪಿತಾ Arpitha ಅಪಹರ ಪ್ರಕರಣದ ಆರೋಪಿಗಳನ್ನು ಘಟನೆ ನಡೆದ 7 ಗಂಟೆಯೊಳಗೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ರಾಮು ಎಂದು ಗುರುತಿಸಲಾಗಿದ್ದು. ಈತ ಶಿಕ್ಷಕಿ ಅರ್ಪಿತಾ ಅವರಿಗೆ ಸೋದರ ಮಾವನಾಗಬೇಕು ಎಂದು ತಿಳಿದು ಬಂದಿದೆ.

ಆರೋಪಿ ಅರ್ಪಿತಾ ಅವರನ್ನ ಮದುವೆಯಾಗಲು ಇಚ್ಚೆಪಟ್ಟಿದ್ದ ಆದರೆ ಆಕೆ ಮತ್ತು ಪೋಷಕರು ಇದಕ್ಕೆ ಒಪ್ಪಲಿಲ್ಲ ಎಂದು ತಿಳಿದು ಬಂದಿದ್ದು. 15 ದಿನಗಳ ಹಿಂದೆ ಮದುವೆ ಪ್ರಸ್ತಾಪದೊಂದಿಗೆ ಶಿಕ್ಷಕಿ ಅರ್ಪಿತಾ ಮನೆಗೆ, ಸಂಬಂಧಿ ರಾಮು ಮತ್ತು ಪೋಷಕರು ಬಂದಿದ್ದರು. ಮದುವೆ ಪ್ರಸ್ತಾಪಕ್ಕೆ ಶಿಕ್ಷಕಿ ಅರ್ಪಿತಾ ಹಾಗೂ ಪೋಷಕರು ಒಪ್ಪಿರಲಿಲ್ಲ. ಮದುವೆ ಒಪ್ಪದ ಹಿನ್ನೆಲೆಯಲ್ಲಿ ಇಂದು (ನ.30) ಬೆಳಗ್ಗೆ ಅರ್ಪಿತಾ ಅವರನ್ನು ರಾಮು ಅಪಹರಿಸಿರುವ ಆರೋಪ ಕೇಳಿಬಂದಿದೆ.

AIDS HIV: ಏಡ್ಸ್ ರೋಗ​ ಸೋಂಕಿತರಲ್ಲಿ ಕರ್ನಾಟಕ 9ನೇ ಸ್ಥಾನ ! ಏಡ್ಸ್ ಹರಡುವಿಕೆ ಇಳಿಕೆ

ನಿಮ್ಮ ಮಗಳನ್ನು ಮದವೆ ಮಾಡಿಕೊಡಿ ಎಂದು ರಾಮು ಮತ್ತು ಆತನ ಪೋಷಕರು ಕೇಳಲು ಬಂದಿದ್ದರು. ಆದರೆ ನಾವು ಕೊಡಲ್ಲ ಅಂತ ಹೇಳಿ ಕಳಿಸಿದ್ವಿ. ಕೊಡಲ್ಲ ಅಂದಿದ್ದಕ್ಕೆ ನನ್ನ ಮಗಳನ್ನ ಅಪರಣ  kidnap ಮಾಡಿದ್ದಾರೆ ಎಂದು ಅರ್ಪಿತಾ ತಾಯಿ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದರು.

ಮದುವೆ ಆಗಲು ಒಪ್ಪಿಗೆ ನೀಡಿಲ್ಲ ಎಂದು ಕೋಪಗೊಂಡ ಆರೋಪಿ ರಾಮು ಹೇಗಾದರು ಸರಿ ಅರ್ಪಿತಾಳನ್ನು ಮದುವೆಯಾಗಲೇ ಬೇಕೆಂದು ಗುರುವಾರ ಶಾಲೆಗೆ ಹೋಗುತ್ತಿದ್ದ ಅರ್ಪಿತಾರನ್ನು ಇನ್ನೋವಾ ಕಾರ್​​ ಅಪಹರಣ ಮಾಡಿದ್ದನು. ಆರೋಪಿ ರಾಮು ಕಾರಿನಲ್ಲೇ ಯುವತಿಯ ಮನವೊಲಿಸಿ ತಾಳಿಕಟ್ಟಲು ಯತ್ನಿಸಿದ್ದಾನೆ. ಆದರೆ ಯುವತಿ ಇದಕ್ಕೆ ಒಪ್ಪಲಿಲ್ಲ.

Bharat Jodo Yatra: ಡಿಸಂಬರಿನಲ್ಲಿ 2 ನೇ ಹಂತದ ಭಾರತ್​ ಜೋಡೋ ಯಾತ್ರೆ

Teacher kidnap : ಇತ್ತ ಅಪಹರಣ ವಿಚಾರ ತಿಳಿಯುತ್ತಿದ್ದಂತೆ ಆಕ್ಟಿವ್​ ಆದ ಹಾಸನ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆಯತ್ತ ಸಾಗುತ್ತಿದ್ದಾರೆ ಎಂಬ ವಿಚಾರ ಪೊಲೀಸರಿಗೆ ತಿಳಿಯುತ್ತದೆ. ಕೂಡಲೆ ಪೊಲೀಸರು ಆರೋಪಿಗಳನ್ನು ಬೆನ್ನು ಹತ್ತುತ್ತಾರೆ. ಪೊಲೀಸರು ಬೆನ್ನ ಹತ್ತುತ್ತಲೇ ಕಾರಿನಲ್ಲಿ ರಾಮುನನ್ನು ಮಾತ್ರ ಬಿಟ್ಟು ಉಳಿದವರು ಎಸ್ಕೇಪ್ ಆಗುತ್ತಾರೆ.teacher Kidnap

Teacher kidnap ಕೊನೆಗೆ ಪೊಲೀಸರು ಸಂಜೆ ಐದು ಗಂಟೆ ಸುಮಾರಿಗೆ ದಕ್ಷಿಣ ಕನ್ನಡದ ನೆಲ್ಯಾಡಿ ಬಳಿ ಆರೋಪಿ ರಾಮುನನ್ನು Kidnappers arrested ಬಂಧಿಸುತ್ತಾರೆ. ಪೊಲೀಸರು ರಾತ್ರಿ ಅರ್ಪಿತಾರನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ. ಹಾಸನ ನಗರ ಪೊಲೀಸರ ಕಾರ್ಯಾಚರಣೆಗೆ ಕುಟುಂಬ ಸದಸ್ಯರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೇಫಾಗಿ ಮಗಳು ಮನೆ‌ ಸೇರಿದ್ದಕ್ಕೆ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.                     Bharat Jodo Yatra: ಡಿಸಂಬರಿನಲ್ಲಿ 2 ನೇ ಹಂತದ ಭಾರತ್​ ಜೋಡೋ ಯಾತ್ರೆ

Leave a Reply

Your email address will not be published. Required fields are marked *