ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಡಾ.ಯು.ಟಿ. ಇಫ್ತಿಕಾರ್ ಸೂಕ್ತ ಅಭ್ಯರ್ಥಿ ಆಗಬಲ್ಲರು

ಮಂಗಳೂರುಃ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಮತದಾರರ ಪಟ್ಟಿ ಸಿದ್ದಪಡಿಸಲು ಚುನಾವಣಾ ಆಯೋಗ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಈ ಬಾರಿಯಾದರು  ಶಿಕ್ಷಕರ ಕ್ಷೇತ್ರವನ್ನು ಗೆಲ್ಲಲು ಪ್ರಯತ್ನ ಮಾಡಬೇಕಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಅನುಭವ ಹೊಂದಿರುವ ರಾಜಕೀಯ ಎಲ್ಲ ಆಗುಹೋಗುಗಳ ಅನುಭವ ಹೊಂದಿರುವ ಯು.ಟಿ. ಇಫ್ತಿಕಾರ್ ಸೂಕ್ತ ಅಭ್ಯರ್ಥಿ ಆಗಬಲ್ಲರು  ಎಂಬುದನ್ನು ಕಾಂಗ್ರೆಸ್ ಪಕ್ಷ ಮೊದಲು ಗಮನಿಸಬೇಕಾಗಿದೆ. ವಿಧಾನಸಭೆ ಸ್ಪೀಕರ್, ಮಂಗಳೂರು ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಫರೀದ್ ಅವರ ಸಹೋದರ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಎರಡನೇ ಅವಧಿಯ ಸೆನೆಟ್ ಸದಸ್ಯ ಡಾ.ಯು.ಟಿ. ಇಫ್ತಿಕಾರ್ ಅವರು ಎಲ್ಲ ವಿಚಾರಗಳಿಂದ ಸೂಕ್ತ ಅಭ್ಯರ್ಥಿ ಆಗಬಲ್ಲರು.

ಫಿಸಿಯಥೆರಪಿ ವೈದ್ಯರು, ಶಿಕ್ಷಕರು ಆಗಿರುವ  ಡಾ.ಯು.ಟಿ. ಇಫ್ತಿಕಾರ್ ಅವರು  ಸ್ವತಃ ಉದ್ಯಮಿ ಹಾಗೂ ಉತ್ತಮ ಸಂಘಟಕರು ಕೂಡ ಆಗಿದ್ದಾರೆ. ಯು.ಟಿ.ಖಾದರ್ ಅವರ ರಾಜಕೀಯ ಯಶಸ್ಸಿನ ಹಿಂದೆ ಇಫ್ತಿಕಾರ್ ಅವರ ಪರಿಶ್ರಮ ಮತ್ತು ಸಂಘಟನಾತ್ಮಕ ಜಾಣ್ಮೆ ಕೂಡ ಇದೆ.

ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಅಧಿಪತ್ಯ ಹಿಂದಿನಿಂದಲೇ ಬಂದಿದೆ. ಸ್ವಲ್ಪ ಮಟ್ಟಿಗೆ ಜಾತ್ಯತೀತ ಜನತಾದಳದ ಹುರಿಯಾಳುಗಳು ಬಿಜೆಪಿಯ ಏಕಸ್ವಾಮ್ಯವನ್ನು ಮುರಿಯುವ ಯತ್ನ ನಡೆಸಿದ್ದರು. ಈಗ ಬದಲಾದ ರಾಜಕೀಯ ವಾತಾವರಣದಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಅಥವ ಬಿಜೆಪಿಯ ಹುರಿಯಾಳುಗಳಿಗೆ ಮನ್ನಣೆ ನೀಡುವ ಬದಲಾಗಿ ನಿಲಯದ ಕಲಾವಿದರಿಗೆ ಅವಕಾಶ ನೀಡಲು ದೊಡ್ಡ ಮನಸ್ಸು ಮಾಡಬೇಕಾಗಿದೆ.

ಈಗಿಂದೀಗಲೇ ಕೆಲಸ ಮಾಡಲು ಪ್ರಾರಂಭಿಸಿದರೆ ಚುನಾವಣಾ ಗೆಲುವು ಗಗನ ಕುಸುಮವಲ್ಲ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹೊರಗಿನವರಿಗೆ ಅವಕಾಶ ನೀಡುವ ಮೊದಲು ಅರ್ಹ ಮತ್ತು ಸೂಕ್ತವಾದ ಹಾಗೂ ಗೆದ್ದು ಬರಬಲ್ಲ ಛಾತಿ ಹೊಂದಿರುವ ಡಾ.ಯು.ಟಿ. ಇಫ್ತಿಕಾರ್ ಅವರಿಗೊಂದು ಅವಕಾಶ ನೀಡಲು ಕೂಡಲೇ ನಿರ್ಧಾರ ಕೈಗೊಳ್ಳಬೇಕಾಗಿದೆ.

ಚುನಾವಣೆಗಾಗಿ ಎಲ್ಲಾ ಅರ್ಹ ಪದವೀಧರ ಹಾಗೂ ಶಿಕ್ಷಕರನ್ನು ಸೇರ್ಪಡೆಗೊಳಿಸಬೇಕೆಂದು ಚುನಾವಣಾ ಆಯೋಗ ಸೂಚಿಸಿದೆ. ಈ ನಿಟ್ಟಿನಲ್ಲಿ ಸರಕಾರಿ ಅಧಿಕಾರಿಗಳಿಂದ ಹೆಚ್ಚಾಗಿ ರಾಜಕೀಯ ಪಕ್ಷಗಳು ಹೆಚ್ಚು ಚುರುಕಾಗಿ ಕೆಲಸ ಮಾಡಬೇಕಾಗಿದೆ. ಹೊಸದಾಗಿಯೇ ಮತದಾರರ ಪಟ್ಟಿ ರಚನೆಯಾಗುವುದರಿಂದ ಎಲ್ಲರು ಮತ್ತೆ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ನೊಂದಾವಣೆ ಮಾಡಬೇಕಾಗಿದೆ. 01-11-2023 ಕ್ಕಿಂತ ಮೂರು ವರ್ಷಗಳ ಪೂರ್ವದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವೀಧರರಾಗಿರಬೇಕು ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಯಂ ಶಿಕ್ಷಕರಾಗಿ ಕನಿಷ್ಠ ಮೂರು ವರ್ಷ ಬೋಧನೆ ಮಾಡಿರಬೇಕು.

ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ನಮೂನೆ 19 ರಲ್ಲಿ ಹಾಗೂ ಪದವಿಧರರಿಗೆ ಸಂಬAಧಿಸಿದAತೆ ನಮೂನೆ 18 ರಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ತಾಲೂಕು ಕಚೇರಿಯ ಚುನಾವಣೆ ಶಾಖೆಗೆ ತಲುಪಿಸಬೇಕು.ಶಿಕ್ಷಕರ ಆಯಾಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಶಿಕ್ಷಕರ ದೃಢೀಕರಣ ಮಾಡಿಸಿ ನಮೂನೆ 19 ರಲ್ಲಿ ಅರ್ಜಿ ಭರ್ತಿ ಮಾಡಬೇಕು ಮತ್ತು ಪದವಿಧರರು ಕಡ್ಡಾಯವಾಗಿ ತಾವು ಉತೀರ್ಣವಾಗಿರುವ ಅಂಕಪಟ್ಟಿ,ಪದವಿ ಪ್ರಮಾಣಪತ್ರ ಅಥವಾ ಪ್ರಾವಿಜನಲ್ ಪ್ರಮಾಣಪತ್ರವನ್ನು ಜಿಲ್ಲೆಯ ಪತ್ರಾಂಕಿತ ಅಧಿಕಾರಿ ಅಥವಾ ನೋಟವರಿಯವರಿಂದ ದೃಢೀಕರಣ ಮಾಡಿಸಿ ನಮೂನೆ 18 ರಲ್ಲಿ ಅರ್ಜಿ ಭರ್ತಿ ಮಾಡಿ ಚುನಾವಣೆ ಶಾಖೆಗೆ ಕಳುಹಿಸಬೇಕು.ಅರ್ಜಿ ಸಲ್ಲಿಸಲು 6-11-2023 ಕೊನೆ ದಿನಾಂಕವಾಗಿರುತ್ತದೆ.

ನೈರುತ್ಯ ಶಿಕ್ಷಕರ ಕ್ಷೇತ್ರ ಜಿಲ್ಲೆಗಳು ಯಾವುವು

ನೈರುತ್ಯ ಶಿಕ್ಷಕರ ಕ್ಷೇತ್ರ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕುಗಳನ್ನು ಒಳಗೊಂಡಿದೆ. ಈ ಕ್ಷೇತ್ರವನ್ನು ಈ ಹಿಂದೆ ಬಿಜೆಪಿಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಅವರು ಪ್ರತಿನಿಧಿಸುತ್ತಿದ್ದರು. ಅನಂತರ ನಡೆದ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳದ ಬೋಜೇ ಗೌಡರು ಶಾಸಕರಾದರು.

2020ರ ನ.1ರ ಮೊದಲು ಪದವಿ ಪಡೆದ ಭಾರತೀಯ ಪ್ರಜೆ ಹಾಗೂ ನೈರುತ್ಯ ಪದವಿ, ಶಿಕ್ಷಕ ಕ್ಷೇತ್ರದ ನಿವಾಸಿಯಾಗಿರಬೇಕು. ಫೋಟೋ, ಆಧಾರ್ ಕಾರ್ಡ್ ಪ್ರತಿ, ಪದವಿ ಪೂರೈಸಿರುವ ಮಾರ್ಕ್ಸ್ ಕಾರ್ಡ್ ಮತ್ತು ಪದವಿ ಪ್ರಮಾಣಪತ್ರ, ಎಲ್ಲ ದಾಖಲೆಗಳಲ್ಲೂ ಸ್ವಯಂಘೋಷಿತ ಸಹಿ, ವೋಟರ್ ಐಡಿ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ನಮೂನೆ 19ರ ಮೂಲಕ ನೈರುತ್ಯ ಶಿಕ್ಷಕರ ಕ್ಷೇತ್ರದ ಮತದಾರರನ್ನಾಗಿ ಅರ್ಜಿ ಸಲ್ಲಿಸಲು 2023ರ ನ.1ಕ್ಕೆ ಅನ್ವಯವಾಗುವಂತೆ ಕನಿಷ್ಠ 3 ವರ್ಷ(ಕಳೆದ 6ವರ್ಷಗಳಲ್ಲಿ) ಬೋಧನಾ ವೃತ್ತಿ ಕೈಗೊಂಡಿರಬೇಕು (ಶಿಕ್ಷಕ ವೃತ್ತಿಯನ್ನು ಆರಂಭಿಸಿ ಮೂರು ವರ್ಷ ಪೂರೈಸಿರುವವರು). ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ತಾನು ಹಿಂದಿನ ಆರು ವರ್ಷಗಳಲ್ಲಿ ಒಟ್ಟು ಮೂರು ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಕುರಿತು ಅರ್ಜಿಯೊಂದಿಗೆ ಪ್ರಮಾಣಪತ್ರವನ್ನು ಲಗತ್ತಿಸಬೇಕು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ನೋಂದಾವಣೆಗಾಗಿ ಪುತ್ತೂರಿನ ಉಲ್ಲಾಸ್ ಕೋಟ್ಯಾನ್ ಅವರನ್ನು ಸಂಯೋಜಕರಾಗಿ ನೇಮಕ ಮಾಡಲಾಗಿದೆ. ಅವರ ಸಂಪರ್ಕ ದೂರವಾಣಿ ನಂಬರ್ 9972419022ಇಂತಿದೆ. ಡಾ.ಯು.ಟಿ. ಇಫ್ತಿಕಾರ್ ಸಂಪರ್ಕ ಸಂಖ್ಯೆ8197911591

Leave a Reply

Your email address will not be published. Required fields are marked *