Sugar Factory  ಆರೋಪ ಸಾಬೀತುಪಡಿಸಲು ಯತ್ನಾಳ್ ಗೆ ಶಿವಾನಂದ ಪಾಟೀಲ್ ಸವಾಲು

Sugar Factory  ಭಾಗಲಕೋಟೆ, ಏಪ್ರಿಲ್ 13- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ Yatnal ಅವರು ನನ್ನ ಮೇಲೆ ಮಗಳ ಚುನಾಚಣೆಗಾಗಿ ಸಕ್ಕರೆ ಕಾರ್ಖಾನೆಗಳಿಂದ Sugar Factory ಹಣ Bribe ಕೇಳಿರುವ ಆರೋಪ ಮಾಡಿದ್ದು, ಅದನ್ನು ಅವರು ಸಾಬೀತು ಮಾಡಿದರೆ‌ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಸಚಿವ ಶಿವಾನಂದ ಪಾಟೀಲ್ Sivananda Patil ಸವಾಲು ಹಾಕಿದ್ದಾರೆ.

ಎಲ್ಲ ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಅಳವಡಿಸಿ ರೈತರಿಗೆ ನ್ಯಾಯ ಒದಗಿಸುವುದಾಗಿ ಹೇಳಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು, ಈಗ ಪ್ರತಿ ಕಾರ್ಖಾನೆ ಮಾಲೀಕರಿಂದ 50 ಲಕ್ಷ ಹಣ ಕೇಳುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.

ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತೂಕದ ಯಂತ್ರದ ಬಗ್ಗೆ ಸಚಿವರು ವಿಧಾನಸಭೆಯಲ್ಲೇ ಹೇಳಿದ್ದರು. ಆದರೆ, ಈಗ ಅವರ ಪುತ್ರಿ ಚುನಾವಣೆಗೆ ನಿಂತಿರುವ ಕಾರಣ ಮಾತು ಬದಲಿಸಿ, ಕಾರ್ಖಾನೆಗಳಿಂದ 50 ಲಕ್ಷ ವಸೂಲಿ ಮಾಡುತ್ತಿದ್ದಾರೆ.

ಕಾರ್ಖಾನೆ ಮಾಲೀಕರಿಂದ ತಲಾ 50 ಲಕ್ಷ ರೂ.ಗಳನ್ನು ಪಡೆದುಕೊಳ್ಳಲು ‘ಏಜೆಂಟ’ರನ್ನು ನೇಮಿಸಿದ್ದಾರೆ. 50 ಲಕ್ಷ ರೂಪಾಯಿ ಕೋರಿ ‘ಏಜೆಂಟ್’ ಒಬ್ಬ ನನ್ನನ್ನು ಸಂಪರ್ಕಿಸಿದ್ದ. ಆದರೆ ನಾನು ಹಣ ನೀಡಲು ನಿರಾಕರಿಸಿ 10 ತೂಕದ ಯಂತ್ರಗಳನ್ನು ನನ್ನ ಕಾರ್ಖಾನೆಗೆ ಅಳವಡಿಸುವಂತೆ ಹೇಳಿದೆ ಎಂದು ಯತ್ನಾಳ್ ಆರೋಪಿಸಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಸಚಿವ ಶಿವಾನಂದ ಪಾಟೀಲ್ ಅವರು, “ಹಣ ಕೇಳಿರುವುದನ್ನು ಅವರು ಸಾಬೀತು ಮಾಡಬೇಕು. ಇಲ್ಲವೇ ಅವರು ‌ರಾಜಕೀಯದಿಂದ ನಿವೃತ್ತರಾಗಬೇಕು” ಎಂದು ಹೇಳಿದರು.

“ಗಂಡಸ್ಸಾಗಿದ್ದರೆ ಯತ್ನಾಳ್ ಅವರು ವಿಜಯಪುರ ನಗರದಿಂದ ಪಕ್ಷೇತರರಾಗಿ ನಿಲ್ಲಲಿ. ನಾನೂ ಪಕ್ಷೇತರನಾಗಿ ನಿಲ್ಲುತ್ತೇನೆ. ನನಗಿಂತ‌ ಅವರು ಒಂದು ಮತ ಹೆಚ್ಚಿಗೆ ಪಡೆದರೂ ರಾಜಕೀಯ ನಿವೃತ್ತಿ ಪಡೆಯುವೆ. ಇಲ್ಲದಿದ್ದರೆ, ಅವರು ನಿವೃತ್ತರಾಗಲಿ” ಎಂದು ಸವಾಲು ಹಾಕಿದರು.

“ಬೇರೆಯವರ ತರ ಚಿಲ್ಲರೆ ರಾಜಕಾರಣ ಮಾಡಲು ನನಗೆ ಬರುವುದಿಲ್ಲ. ಬಿಜೆಪಿ ಅನ್ನು ಹೆಚ್ಚು ಬೈದವರು ಯಾರಾದರೂ ಇದ್ದರೆ, ಅದು ಯತ್ನಾಳ್” ಎಂದು ಟೀಕಿಸಿದರು.

 

 

 

Leave a Reply

Your email address will not be published. Required fields are marked *