Sorake: ಸಿಎಂ ಆಪ್ತ ಸೊರಕೆಗೆ ಟಾಂಗ್ ನೀಡಿದ ಬಿ.ಕೆ.ಹರಿಪ್ರಸಾದ್

Sorake: ಸಿಎಂ ಆಪ್ತ ವಿನಯ ಕುಮಾರ್ ಸೊರಕೆ ಗೆ ಟಾಂಗ್ ನೀಡಿದ ಬಿ.ಕೆ.ಹರಿಪ್ರಸಾದ್
ಮೂಲ್ಕಿ, ಮಂಗಳೂರು.ಮಾರ್ಚ್ 11(kannadadhvani.com): ಬಿಲ್ಲವ ಮಹಾಮಂಡಲ Billava ನೀಡಿರುವ ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಪ್ತರಾಗಿರುವ ವಿನಯ ಕುಮಾರ್ ಸೊರಕೆ ಅವರು ನಡೆಸಿ ಕೊಡುತ್ತಾರೆ ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಅವರಿಗೆ ಟಾಂಗ್ ನೀಡಿದ ವಿದ್ಯಮಾನ ನಡೆದಿದೆ.

ಇದರಿಂದ ಸೊರಕೆ ಒಂದು ಕ್ಷಣ ಪೆಚ್ಚಾದರೆ, ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಮುಗುಳು ನಗೆ ಬೀರಿದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಕಟ್ಟಡ ಯೋಜನೆ ಬಗ್ಗೆ ಉಲ್ಲೇಖಿಸಿದ ಹಿರಿಯ ಕಾ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು, ರಾಜ್ಯ ಸರಕಾರ ಅನುದಾನ ನೀಡಿ ಅಧ್ಯಯನ ಪೀಠದ ಕಾರ್ಯಗಳನ್ನು ಮುಂದುವರಿಸಿದರೆ ಉತ್ತಮ. ಸರಕಾರಕ್ಕೆ ಈ ಕೆಲಸ ಮಾಡಲು ಸಾಧ್ಯ ಆಗದಿದ್ದರೆ ಆ ಪೂರ್ತಿ ಮಾಡುವ ಶಕ್ತಿಯನ್ನು ನಾರಾಯಣ ಗುರುಗಳು ತನಗೆ ನೀಡಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.
ತಾನು ರಾಜ್ಯಸಭಾ ಸದಸ್ಯನಾಗಿ ಮೊದಲಿಗೆ 50ಲಕ್ಷ ರೂ. ಅನುದಾನ ನೀಡಿದೆ. ವಿಧಾನ ಪರಿಷತ ಸದಸ್ಯನಾದಾಗ ಬೇಡಿಕೆ ಮೇರೆಗೆ 35ಲಕ್ಷ ರೂ. ನೀಡಿದ್ದೇನೆ. ಸೊರಕೆಯವರ ಸರಕಾರ ನಯ ಪೈಸೆ ನೀಡಿಲ್ಲ. ಉಮಾನಾಥ ಕೋಟ್ಯಾನ್ ಅವರ ಪಕ್ಷದ ಅಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಮತ್ತು ಹರೀಶ್ ಕುಮಾರ್ ಅನುದಾನ ನೀಡಿದ್ದಾರೆ. ನಾರಾಯಣ ಗುರು ಅಧ್ಯಯನ ಪೀಠ ಬೇಕೆಂದು ಬೇಡಿಕೆ ಇಟ್ಟವರು ಹಿಂದುಳಿದ ವರ್ಗಕ್ಕೆ ಸೇರಿದ ಪಿ.ವಿ. ಮೋಹನ್ ಅವರು. ಅವರ ಮನವಿ ಮೇರೆಗೆ ಬೆಂಬಲ ನೀಡಿದ್ದೇನೆ.
ವಿನಯಕುಮಾರ್ ಅವರ ಮೂಲಕ ಸರಕಾರ ಈ ಕೆಲಸ ಮಾಡದಿದ್ದರೆ ಆ ಕೆಲಸವನ್ನು ನಾನು ಮಾಡುತ್ತೇನೆ ಎಂದವರು ಹೇಳಿದರು.

ಅನಂತರ ಮಾತನಾಡಿದ ವಿನಯ ಕುಮಾರ್ ಸೊರಕೆಯವಮಹಾಮಂಡಲದ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಮತ್ತಿತರ ಬಿಲ್ಲವ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *