Shubhodaya Alva ಡಿಸಿಸಿ ಉಪಾಧ್ಯಕ್ಷರಾಗಿ ಶುಭೋದಯ ಆಳ್ವ ನೇಮಕ

Shubhodaya Alva ಮಲ್ಲಿಕಟ್ಟೆ, ಮಂಗಳೂರು, ಮಾ.9: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ DCC ಉಪಾಧ್ಯಕ್ಷರಾಗಿ Vice president ಶುಭೋದಯ ಆಳ್ವ ಅವರನ್ನು ನೇಮಕ ಮಾಡಲಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯ ಆಲ್ ಕಾಲೇಜು ಮುಖಂಡರಾಗಿದ್ದ ಆಳ್ವ ಸುದೀರ್ಘ ಕಾಲದಿಂದ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಜಿಲ್ಲೆಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯನ್ನು ಸಂಘಟಿಸುವಲ್ಲಿ ಮೊದಲಿಗರಾಗಿದ್ದಾರೆ.

ಎಂಎಲ್ಸಿ ಮಂಜುನಾಥ ಭಂಡಾರಿಯವರ ಆಪ್ತವಲಯದಲ್ಲಿರುವ ಶುಭೋದಯ ಆಳ್ವ ಅವರ ಪಕ್ಷ ನಿಷ್ಠೆ, ಹೊಣೆಗಾರಿಕೆಗಳ ನಿರ್ವಹಣೆಯನ್ನು ಗಮನಿಸಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಅವರು ಈ ನೇಮಕ ಮಾಡಿದ್ದಾರೆ.

ಡಿಸಿಸಿ ಇತರ ಉಪಾಧ್ಯಕ್ಷರಾಗಿ  ನೀರಜ್ ಚಂದ್ರ ಪಾಲ್, ಸಂತೋಷ್ ಕುಮಾರ್ ಶೆಟ್ಟಿ, ಟಿ ಹೊನ್ನಯ್ಯ ನೇಮಕವಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಪಕ್ಷದ ಸಕ್ರಿಯ ಕಾರ್ಯಕರ್ತರನ್ನು ನೂತನ ಪದಾಧಿಕಾರಿಗಳಾಗಿ ನೇಮಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ಶುಕ್ರವಾರ ಮಾರ್ಚ್ 8ರಂದು ಅದೇಶ ಹೊರಡಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳಾಗಿ ಬಸ್ಜ ಮಾಲಕರ ಸಂಘದ ಜಯಶೀಲ ಅಡ್ಯಂತಾಯ, ಲೋಕಸಭಾ ಟಿಕೇಟ್ ಆಕಾಂಕ್ಷಿ ಕಿರಣ್ ಬುಡ್ಲೆಗುತ್ತು ಸುಳ್ಯ, ಭರತೇಶ್ ಅಮೀನ್ ಬಜಾಲ್, ಟಿ ಡಿ ವಿಕಾಸ್ ಶೆಟ್ಟಿ, ಸೈಮನ್ ಸಿ ಜೆ ಕಡಬ, ಹೇಮಂತ್ ಕುಮಾರ್ ಬಿ ಎನ್ ಸುರತ್ಕಲ್, ರಂಜನ್ ಜಿ ಗೌಡ ಬೆಳ್ತಂಗಡಿ, ಅಬ್ದುಲ್ ನಝೀರ್ ಮಠ, ಅಶ್ರಫ್ ಬಸ್ತಿಕಾರ್ ಉಪ್ಪಿನಂಗಡಿ, ಕೃಷ್ಣ ಪ್ರಸಾದ್ ಆಳ್ವ ಪುತ್ತೂರು ನೇಮಕವಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಪಕ್ಷದ ಸಕ್ರಿಯ ಕಾರ್ಯಕರ್ತರನ್ನು ನೂತನ ಪದಾಧಿಕಾರಿಗಳಾಗಿ ನೇಮಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ಶುಕ್ರವಾರ ಆದೇಶ ಹೊರಡಿಸಿರುವುದ ನ್ನು ಗಮನಿಸಿದರೆ ಮತ್ತೊಂದು ಅವಧಿಗೆ ಹರೀಶ್ ಕುಮಾರ್ ಅಧ್ಯಕ್ಷರಾಗಿ ಮತ್ತು ಪರಿಷತ್ ಲದಸ್ಯರಾಗಿ ಮುಂದುವರಿಯುವುದು ಹಾಗೂ ದ.ಕ. ಲೋಕಸಭಾ ಅಭ್ಯರ್ಥಿ ಸೋಲುವುದು ಖಚಿತವಾಗಿದೆ.

 

Leave a Reply

Your email address will not be published. Required fields are marked *