ಅ.29- ಸೂರಿಕುಮೇರು ಗೋವಿಂದ ಭಟ್ ಅವರಿಗೆ ಶೇಣಿ ಪ್ರಶಸ್ತಿ

ಮಂಗಳೂರು- ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ 2023ರ ಶೇಣಿ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, ಅಕ್ಟೋಬರ್ 29ರಂದು ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಅವರಿಗೆ ಪ್ರದಾನ ಮಾಡಲಾಗುವುದು.

ಬಪ್ಪನಾಡು ಕ್ಷೇತ್ರ ಮಹಾತ್ಮೆ ಬಯಲಾಟದಲ್ಲಿ ಅವಿಸ್ಮರಣೀಯ ಬಪ್ಪಬ್ಯಾರಿ ಪಾತ್ರಕ್ಕೆ ಜೀವ ತುಂಬಿ ಬಪ್ಪ ಬ್ಯಾರಿಯ ವಿಶಿಷ್ಟ ವ್ಯಕ್ತಿತ್ವವನ್ನು ಸಾದರಪಡಿಸಿ ಜನಪ್ರಿಯರಾಗಿದ್ದ ಶೇಣಿಗೋಪಾಲಕೃಷ್ಣ ಭಟ್ ಸ್ಮಾರಕ ಟ್ರಸ್ಟ್ ಪ್ರತಿವರ್ಷ ಧೀಮಂತ ಯಕ್ಷಗಾನ ಕಲಾವಿದರಿಗೆ ಶೇಣಿ ಪ್ರಶಸ್ತಿ ಪ್ರದಾನ ಮಾಡುತ್ತದೆ. ಕಳೆದ ವರ್ಷ ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ ಶೇಣಿ ಪ್ರಶಸ್ತಿಗೆ ನೀಡಿ ಗೌರವಿಸಲಾಗಿತ್ತು.

ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್, ಗೋವಿಂದದಾಸ್ ಕಾಲೇಜು ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅ.29ರಂದು ಬೆಳಗ್ಗೆ 9ರಿಂದ ಸಂಜೆ ತನಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಗೋವಿಂದದಾಸ್ ಕಾಲೇಜಿನ ಪ್ರಾಚಾರ್ಯರಾದ ಕೃಷ್ಣ ಮೂರ್ತಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ಕೂಡ್ಲು ಮಹಾಬಲ ಶೆಟ್ಟಿ ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಬೆಳಗ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕೆ ಶೇಣಿ ಮುರಳಿ ಅವರು ಶಿವಭಕ್ತ ಬಾಣಾಸುರ ಹರಿಕಥೆ ನಡೆಯುವುದು. 10.40ರಿಂದ ಯಕ್ಷಗಾನ ತಾಳ ಮದ್ದಲೆ ಕರ್ಣನಾಸಚ್ಚೇದ ನಡೆಯುವುದು. ಪುತ್ತಿಗೆ ರಘುರಾಮ ಹೊಳ್ಳ ಭಾಗವತಿಕೆ ಅರ್ಥದಾರಿಗಳಾಗಿ ಗೋವಿಂದ ಭಟ್, ಡಾ. ಪ್ರಭಾಕರ ಜೋಶಷಿ, ಮಹಾಬಲ ಶೆಟ್ಟಿ, ಜಿ.ಕೆ ಭಟ್ ಸೇರಾಜೆ, ಸರ್ಪಂಗಳಈಶ್ವರ ಭಟ್, ಶೇಣಿ ವೇಣುಗೋಪಾಲ ಭಟ್, ಪಿ.ವಿರಾವ್ ಭಾಗವಹಿಸುವರು.

 

ಮಧ್ಯಾಹ್ನ 1.30ರಿಂದ ಕೊನೆಯ ಸುತ್ತಿನ ಪೌರಾಣಿಕ ರಸಪ್ರಶ್ನೆ ಸ್ಪರ್ಧೆ, 3.30ರಿಂದ ಮುಖವರ್ಣಿಕೆ ಸ್ಪರ್ಧೆ ಮತ್ತು ಪ್ರಾತ್ಯಕ್ಷಿಕೆ ಇರುವುದು.

ಸಂಜೆ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ಶೇಣಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅನಂತರ ಸಂಜೆ ಗಂಟೆ 5ರಿಂದಸುದರ್ಶನ ಗರ್ವಭಂಗ- ಭಾರ್ಗವ ವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ.

 

Leave a Reply

Your email address will not be published. Required fields are marked *