Seizure of Money ಚುನಾವಣೆಯಲ್ಲಿ ಹಣದ ಹೊಳೆ, ಅಭಿವೃದ್ಧಿಯ ಇನ್ನೊಂಂದು ಮುಖ

Seizure of Money

ಪ್ರತಿದಿನ  100 ಕೋಟಿ ರೂಪಾಯಿ ಮೌಲ್ಯದ ವಸ್ತುಗಳ ಜಫ್ತಿ

ಗುಜರಾತ್, ರಾಜಸ್ತಾನದಲ್ಲಿ ಅತೀ ಹೆಚ್ಚು

395 ಕೋಟಿಗೂ ಅಧಿಕ ಮೊತ್ತದ ನಗದು ಹಾಗೂ 489 ಕೋಟಿಗೂ ಅಧಿಕ ಮೌಲ್ಯದ ಮದ್ಯ

Seizure of Money ಹೊಸದಿಲ್ಲಿ, ಏಪ್ರಿಲ್ 16(www.kannadadhvani.com )- ಮೊದಲ ಹಂತದ ಮತದಾನ Election 2024 ನಡೆಯುವ ಮುನ್ನವೇ ದೇಶದಾದ್ಯಂತ ಹಣ Money ಮತ್ತು ಮತದಾರರನ್ನು ಓಲೈಸಲು ಬಹುಮಾನಗಳನ್ನು Gift  ನೀಡಲಾಗುತಿದ್ದು, ದೇಶದಲ್ಲಿ ಚುನಾವಣೆಗೆ ಮುನ್ನವೇ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದ ನಗದು ಹಣ, ಚಿನ್ನಾಭರಣ, ಬಹುಮಾನ ವಸ್ತುಗಳನ್ನು ಚುನಾವಣಾ ಆಯೋಗ Election Commission ಜಫ್ತಿ ಮಾಡಿದೆ.

ದೇಶದಲ್ಲಿ ಚುನಾವಣಾ ಆಯೋಗ ಪ್ರತಿದಿನ  100 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಕೂಡ ಮತದಾರರನ್ನು ಓಲೈಸಲು ಹಣದ ಹೊಳೆಯೇ ಹರಿಸಲಾಗುತ್ತಿದ್ದು, ಭ್ರಷ್ಟ ರಾಜಕಾರಣಿಗಳು ಯಥೇಚ್ಚವಾಗಿ ಹಣ ಖರ್ಚು ಮಾಡುತ್ತಿರುವುದು ಚುನಾವಣಾ ಆಯೋಗದ ಗಮನಕ್ಕೆ ಬಂದಿದೆ.

ಕಳೆದ 75 ವರ್ಷಗಳಲ್ಲಿ ಚುನಾವಣೆಯ ಸಂದರ್ಭದಲ್ಲಿ ಡ್ರಗ್ಸ್ ಮತ್ತು ನಗದು ಸೇರಿದಂತೆ ದೊಡ್ಡ ಪ್ರಮಾಣದ ಪ್ರೇರಣೆಗಳನ್ನು ವಶಪಡಿಸಿಕೊಳ್ಳುವ ಹಾದಿಯಲ್ಲಿದೆ ಎಂದು ಏಪ್ರಿಲ್ 15 ರಂದು ಚುನಾವಣಾ ಆಯೋಗ (ಇಸಿ) ಹೇಳಿದೆ. ಲೋಕಸಭೆ ಚುನಾವಣೆಗೆ ಮತದಾನ ಆರಂಭವಾಗುವ ಮುನ್ನವೇ  4,650 ಕೋಟಿ ವಶಪಡಿಸಿಕೊಂಡಿದ್ದು, 2019ರ ಚುನಾವಣೆಯಲ್ಲಿ ವಸೂಲಿ ಮಾಡಿದ್ದಕ್ಕಿಂತ ಹೆಚ್ಚಿನ ಮೊತ್ತವಾಗಿದೆ. 2019 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, 3,475 ಕೋಟಿಯನ್ನು ಚುನಾವಣಾ ಆಯೋಗ EC ವಸೂಲಿ ಮಾಡಿತ್ತು.

ವಶಪಡಿಸಿಕೊಂಡ 4,650 ಕೋಟಿಯಲ್ಲಿ 2,069 ಕೋಟಿ ಮೌಲ್ಯದ ಡ್ರಗ್ಸ್, 395 ಕೋಟಿಗೂ ಅಧಿಕ ಮೊತ್ತದ ನಗದು ಹಾಗೂ 489 ಕೋಟಿಗೂ ಅಧಿಕ ಮೌಲ್ಯದ ಮದ್ಯ ಸೇರಿದೆ ಎಂದು ಆಯೋಗ ಹೇಳಿಕೆಯಲ್ಲಿ ತಿಳಿಸಿದೆ. ಮಾರ್ಚ್ 1 ರಿಂದ, ಚುನಾವಣಾ ಸಂಸ್ಥೆ ಪ್ರತಿದಿನ  100 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದೆ.

ಚುನಾವಣಾ ಸಂದರ್ಭದಲ್ಲಿ ಅಕ್ರಮವಾಗಿ ಅಥವಾ ನಿಯಮಗಳಿಗೆ ವಿರುದ್ಧವಾಗಿ ನಗದು ಮತ್ತು ಮದ್ಯವನ್ನು ಬಳಸಿದ್ರೆ, ಸಾಗಿಸಿದ್ರೆ ಪೊಲೀಸರು ಅದನ್ನು ವಶಪಡಿಸಿಕೊಳ್ಳುತ್ತಾರೆ. ಆದ್ರೆ ಇಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಹಣ ಮತ್ತು ಮದ್ಯ ಏನಾಗುತ್ತದೆ ಎಂಬ ಪ್ರಶ್ನೆ ಹಲವರಿಗೆ ಇದೆ.

ಕ್ಲೇಮ್ ಮಾಡಬಹುದು: ಚುನಾವಣೆ ಸಂದರ್ಭದಲ್ಲಿ ಪೊಲೀಸರು ಎಷ್ಟೇ ನಗದು ವಶಪಡಿಸಿಕೊಂಡರೂ ಅದನ್ನು ನಂತರ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ. ಪೊಲೀಸರು ಯಾರಿಂದ ನಗದು ಸಂಗ್ರಹಿಸುತ್ತಾರೋ ಅವರು ಅದನ್ನು ನಂತರ ಕ್ಲೈಮ್ ಮಾಡುವ ಅವಕಾಶವೂ ಇರುತ್ತದೆ. ಆದರೆ ಈ ಹಣ ತನ್ನದು ಮತ್ತು ಅಕ್ರಮವಾಗಿ ಗಳಿಸಿಲ್ಲ ಎಂದು ಸಾಬೀತುಪಡಿಸುವಲ್ಲಿ ಆ ವ್ಯಕ್ತಿಯು ಯಶಸ್ವಿಯಾಗಿದ್ದರೆ ಹಣ ಮರು ಪಡೆಯಬಹುದು.

ವ್ಯಕ್ತಿಯೊಬ್ಬ ಸಂಪೂರ್ಣ ಮಾಹಿತಿಯನ್ನು ಪುರಾವೆಯಾಗಿ ಪ್ರಸ್ತುತಪಡಿಸಿದರೆ ಮಾತ್ರ ಹಣವನ್ನು ಅವನಿಗೆ ಹಿಂತಿರುಗಿಸಲಾಗುತ್ತದೆ. ಪುರಾವೆಗಾಗಿ, ನೀವು ಎಟಿಎಂ ವಹಿವಾಟು, ಬ್ಯಾಂಕ್ ರಸೀದಿ ಮತ್ತು ಪಾಸ್‌ಬುಕ್‌ನಲ್ಲಿ ನಿಖರ ಮಾಹಿತಿಯನ್ನು ಹೊಂದಿರಬೇಕು. ವಶಪಡಿಸಿಕೊಂಡ ಹಣವನ್ನು ಯಾರೂ ಕ್ಲೈಮ್ ಮಾಡದಿದ್ದರೆ, ಅದನ್ನು ಸರ್ಕಾರದ ಖಜಾನೆಗೆ ಜಮಾ ಮಾಡಲಾಗುತ್ತದೆ.

ಚುನಾವಣಾ ಸಂದರ್ಭದಲ್ಲಿ ಅಕ್ರಮವಾಗಿ ಅಥವಾ ನಿಯಮಗಳಿಗೆ ವಿರುದ್ಧವಾಗಿ ನಗದು ಮತ್ತು ಮದ್ಯವನ್ನು ಬಳಸಿದ್ರೆ, ಸಾಗಿಸಿದ್ರೆ ಪೊಲೀಸರು ಅದನ್ನು ವಶಪಡಿಸಿಕೊಳ್ಳುತ್ತಾರೆ. ಆದ್ರೆ ಇಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಹಣ ಮತ್ತು ಮದ್ಯ ಏನಾಗುತ್ತದೆ ಎಂಬ ಪ್ರಶ್ನೆ ಹಲವರಿಗೆ ಇದೆ.

ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.90 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ. ಬಾದಾಮಿ ತಾಲೂಕಿನ ಜಾಲಿಹಾಳ ಚೆಕ್​ಪೋಸ್ಟ್​ ಒಂದರಲ್ಲೇ 2.90 ಲಕ್ಷ ರೂ. ಮತ್ತು ಬೂದನಗುಡ್ಡ ರೋಡ್ ಚೆಕ್​ಪೋಸ್ಟ್​ನಲ್ಲಿ 1 ಲಕ್ಚ ರೂ. ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಮತಕ್ಕಾಗಿ ಜನರಿಗೆ ಆಮಿಷವೊಂಡುವುದನ್ನು ತಡೆಯಲು ಚುನಾವಣಾ ಆಯೋಗ (Election Commission) ಹಲವು ಕ್ರಮಗಳನ್ನು ಕೈಗೊಂಡಿದ್ದು, ಅಕ್ರಮ ಹಣ-ಹೆಂಡ ಹಾಗೂ ವಸ್ತುಗಳನ್ನು ಹಂಚುವುದು ಮತ್ತು ಸಾಗಾಟದ ಮೇಲೆ ಕಣ್ಣಿಟ್ಟಿದೆ. ನಾಕಾ ಬಂದಿಗಳನ್ನು ಹಾಕಿದೆ. ನಾಕಾ ಬಂದಿಗಳಲ್ಲಿ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಹಗಲು-ರಾತ್ರಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಸುಲ್ತಾನ್​ಪೇಟೆ ಚೆಕ್​ ಪೋಸ್ಟ್​​ ಮೂಲಕ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ನ್ಯಾಮತಿ ತಾಲ್ಲೂಕಿನ ಹೊಳೆಹರಹಳ್ಳಿ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 3.98 ಲಕ್ಷ ನಗದು ಮತ್ತು 21 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಜಯನಗರದಲ್ಲಿ ದಾಖಲೆಗಳಿಲ್ಲದ 1.34 ಕೋಟಿ ರೂಪಾಯಿ ಹಣವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯನ್ನು ಆಧರಿಸಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಶನಿವಾರ (ಏಪ್ರಿಲ್ 13) ಮಧ್ಯಾಹ್ನ ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಜಯನಗರ 4 ನೇ ಹಂತದಲ್ಲಿ ಎರಡು ಕಾರು ಮತ್ತು ಒಂದು ದ್ವಿಚಕ್ರ ವಾಹನದಲ್ಲಿ ಈ ಬೃಹತ್ ಮೊತ್ತವನ್ನು ಸಾಗಿಸಲು ಪ್ರಯತ್ನಿಸಲಾಗುತ್ತಿತ್ತು. ಈ ಬಗ್ಗೆ ಚುನಾವಣಾಧಿಕಾರಿ ಮುನೀಶ್‌ ಮೌದ್ಗಿಲ್‌ ಅವರಿಗೆ ಹಣ ಸಾಗಿಸುತ್ತಿರುವ ಖಚಿತ ಮಾಹಿತಿ ಲಭಿಸಿತ್ತು.

ಹಿರಿಯೂರಿನ ಜವನಗೊಂಡನಹಳ್ಳಿ ಚೆಕ್ ಪೋಸ್ಟ್‌ನಲ್ಲಿ ಎಟಿಎಂಗಳಿಗೆ ಹಣ ತುಂಬಲು ತೆಗೆದುಕೊಂಡು ಹೋಗುವ ವಾಹನದಲ್ಲಿದ್ದ ಅನಧಿಕೃತ ₹1.44 ಕೋಟಿಯನ್ನು ಹಿರಿಯೂರು ತಹಶೀಲ್ದಾ‌ರ್ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್‌ ಮತ್ತು ಎಸ್‌ಎಸ್‌ಟಿ ತಂಡದವರು ವಶಪಡಿಸಿಕೊಂಡಿದ್ದಾರೆ.

ತುಮಕೂರು ಮತ್ತು ಶಿರಾ ಭಾಗದ ವಾಹನವಾಗಿದ್ದು, ಇದರಲ್ಲಿ ₹1.44 ಲಕ್ಷ ಹೇಗೆ ಬಂತು ಹಾಗೂ ಈ ವಾಹನ ಚಿತ್ರದುರ್ಗದ ಕಡೆಗೆ ಏಕೆ ಬಂತು ಎನ್ನುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಹಣವನ್ನು ವಶಕ್ಕೆ ಪಡೆದುಕೊಂಡಿರುವ ಸ್ಥಳಕ್ಕೆ ಅಧಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.ತುಮಕೂರು ಮತ್ತು ಶಿರಾ ಭಾಗದ ವಾಹನವಾಗಿದ್ದು, ಇದರಲ್ಲಿ ₹1.44 ಲಕ್ಷ ಹೇಗೆ ಬಂತು ಹಾಗೂ ಈ ವಾಹನ ಚಿತ್ರದುರ್ಗದ ಕಡೆಗೆ ಏಕೆ ಬಂತು ಎನ್ನುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಹಣವನ್ನು ವಶಕ್ಕೆ ಪಡೆದುಕೊಂಡಿರುವ ಸ್ಥಳಕ್ಕೆ ಅಧಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಎಟಿಎಂಗಳ ಹಣ ನಿರ್ವಹಣೆ ಮಾಡುವ ಸಿಎಂಎಸ್ ಕಂಪನಿಯು ತುಮಕೂರಿನಿಂದ ಶಿರಾ ತಾಲೂಕಿನವರೆಗೆ ಮಾತ್ರ ಎಟಿಎಂಗಳಿಗೆ ಹಣ ತುಂಬಲು ಅನುಮತಿ ಪಡೆದಿತ್ತು. ಆದರೆ ಶಿರಾ ತಾಲೂಕು ಹೊರತು ಪಡಿಸಿ ಹಿರಿಯೂರು ತಾಲೂಕು ಗಡಿ ಪ್ರವೇಶಿಸಿದೆ. ಈ ಕುರಿತು ಪರಿಶೀಲನೆ ನಡೆಸಿದಾಗ ಹಿರಿಯೂರು ಗಡಿ ಪ್ರವೇಶಿಸಿದ್ದಕ್ಕೆ ಯಾವುದೇ ಸೂಕ್ತ ದಾಖಲೆ ಪ್ರಸ್ತುತ ಪಡಿಸಿರುವುದಿಲ್ಲ. ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಟಿಎಂಗಳಿಗೆ ಹಣ ತುಂಬಲು ಜಿಲ್ಲೆಯ ಜಿಲ್ಲಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ

ಲೋಕಸಭಾ ಚುನಾವಣೆ ಕಾವಿನ ನಡುವೆ ಮಂಡ್ಯದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಮದ್ದೂರು ತಾಲೂಕಿನ ನಿಡಘಟ್ಟ ಬಳಿಯ ಮೈಸೂರು ಬೆಂಗಳೂರು ಹೆದ್ದಾರಿಯ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ವೇಳೆ ದಾಖಲೆಯಿಲ್ಲದ 1 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ.ಚೀಲದಲ್ಲಿತ್ತು 1 ಕೋಟಿಗೂ ಅಧಿಕ ಹಣ!

ಹಣವನ್ನು ಚೀಲದಲ್ಲಿ ಇರಿಸಿಕೊಂಡು ಕ್ರೇಟಾ ಕಾರಿನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಚೆಕ್‌ ಪೋಸ್ಟ್‌ನಲ್ಲಿ ತಪಾಸಣೆ ನಡೆಸುವಾಗ ಹಣ ಪತ್ತೆಯಾಗಿದೆ. ಇದರ ಮೌಲ್ಯ ಸುಮಾರ್ 1 ಕೋಟಿಗೂ ಅಧಿಕ ಎನ್ನಲಾಗಿದೆ.

Seizure of Money ರಾಜಸ್ತಾನದಲ್ಲಿ 244 ಕೋಟಿ ರೂಪಾಯಿ

ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಕಳೆದ 15 ದಿನಗಳಲ್ಲಿ 244 ಕೋಟಿ ರೂಪಾಯಿ ಹಣವನ್ನು ಜಾರಿ ಏಜೆನ್ಸಿಗಳು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಪೊಲೀಸ್, ಅಬಕಾರಿ, ಆದಾಯ ತೆರಿಗೆ ಮತ್ತಿತರ ಸಂಸ್ಥೆಗಳಿಂದ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ ಮತ್ತು ಅಕ್ರಮ ನಗದು, ಮದ್ಯ, ಮಾದಕ ದ್ರವ್ಯ, ಚಿನ್ನ, ಬೆಳ್ಳಿ ಇತ್ಯಾದಿಗಳನ್ನು ವಶಪಡಿಸಿಕೊಳ್ಳುವಲ್ಲಿ ಹೊಸ ದಾಖಲೆ ಮಾಡಲಾಗಿದೆ. 2023ರಲ್ಲಿ ಒಟ್ಟು 1,000 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ವರ್ಷ ವಶಕ್ಕೆ ಪಡೆದುಕೊಂಡ ಹಣದ ಮೊತ್ತ ಮೂರು ಪಟ್ಟು ಹೆಚ್ಚಾಗಿದೆ. 2021 ರಲ್ಲಿ 322 ಕೋಟಿ ರೂ., 2022 ರಲ್ಲಿ 347 ಕೋಟಿ ರೂ. ಮತ್ತು 2023 ರಲ್ಲಿ ಇದುವರೆಗೆ 1,021 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೂನ್‌ನಿಂದ ಚುನಾವಣಾ ಆಯೋಗ ಎಲ್ಲಾ  ಜಾರಿ ಸಂಸ್ಥೆಗಳೊಂದಿಗೆ ನೇರ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಅಂದಿನಿಂದ ರೂ. 648 ಕೋಟಿ  ಮೌಲ್ಯದ ನಗದು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ 15 ದಿನಗಳಲ್ಲಿ 244 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಪ್ರವೀಣ್ ಗುಪ್ತಾ ಹೇಳಿದ್ದಾರೆ.

ಈ ಅವಧಿಯಲ್ಲಿ 39.30 ಕೋಟಿ ರೂಪಾಯಿ ನಗದನ್ನು ಪೊಲೀಸರು, ಆದಾಯ ತೆರಿಗೆ ಇಲಾಖೆ ಹಾಗೂ ಇತರೆ ಸಂಸ್ಥೆಗಳು ವಶಪಡಿಸಿಕೊಂಡಿವೆ. ಅದೇ ರೀತಿ 20.12 ಕೋಟಿ ಮೌಲ್ಯದ 10.60 ಲಕ್ಷ ಲೀಟರ್ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆ, ಪೊಲೀಸರು ಮತ್ತು ಇತರ ಏಜೆನ್ಸಿಗಳು ವಶಪಡಿಸಿಕೊಂಡಿವ

 

 

 

 

 

Leave a Reply

Your email address will not be published. Required fields are marked *