Science Model ಶಾರದಾ ವಿದ್ಯಾಲಯದಲ್ಲಿ ದಿ.ಗಂಗಾಧರ ಐತಾಳ್ ಸ್ಮಾರಕ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯ ಬಹುಮಾನ ವಿತರಣೆ 

Science Model

Science Model ಮಾದರಿಗಳನ್ನು ವಿದ್ಯಾರ್ಥಿಗಳು ಸ್ವತಃ ತಯಾರಿಸಲು ಕಲಿತರೆ ಅವರ ಬುದ್ಧಿ ಇನ್ನಷ್ಟು ಚುರುಕಾಗಿ ಅಧ್ಯಾಪಕರ ಸಹಾಯವಿಲ್ಲದೆ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

ಮಂಗಳೂರು Mangalore  :    ‘ವಿಜ್ಞಾನ ಮತ್ತು ಗಣಿತ ಮಾದರಿಗಳನ್ನು (Science Model) ಅಧ್ಯಾಪಕರು ತಮ್ಮ ತರಗತಿ ಬೋಧನೆಯ ಸಂದರ್ಭದಲ್ಲಿ ಬಳಸಿದರೆ ವಿದ್ಯಾರ್ಥಿಗಳಿಗೆ ವಿಷಯಗಳು ಹೆಚ್ಚು ಬೇಗನೆ ಮತ್ತು ಸುಲಭವಾಗಿ ಮನದಟ್ಟಾಗುವ ಸಾಧ್ಯತೆ ಇರುತ್ತದೆ. ಮಾದರಿಗಳನ್ನು ವಿದ್ಯಾರ್ಥಿಗಳು ಸ್ವತಃ ತಯಾರಿಸಲು ಕಲಿತರೆ ಅವರ ಬುದ್ಧಿ ಇನ್ನಷ್ಟು ಚುರುಕಾಗಿ ಅಧ್ಯಾಪಕರ ಸಹಾಯವಿಲ್ಲದೆ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ವಿಜ್ಞಾನ ಮಾದರಿಗಳ(Science Model) ತಯಾರಿಕಾ ಸ್ಪರ್ಧೆಯನ್ನು ಶಾಲೆಗಳಲ್ಲಿ ಏರ್ಪಡಿಸುವುದು ತುಂಬಾ ಸೂಕ್ತ ಮತ್ತು ಅರ್ಥ ಪೂರ್ಣ ‘  ಎಂದು ಸೈಂಟ್ ಆಗ್ನೆಸ್ ಕಾಲೇಜಿನ ನಿವೃತ್ತ  ಭೌತಶಾಸ್ತ್ರ ಪ್ರೊಫೆಸರ್ ಸರಸ್ವತಿ ಎಸ್.ರಾವ್ ಹೇಳಿದರು.Science Model

ಅವರು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ (SHARADA VIDYALAYA) ನಡೆದ ‘ವಿದ್ಯಾಲಯ ಡೇ ‘ ಸಂದರ್ಭದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೋಸ್ಕರ ನಡೆಸಿದ  ‘ದಿ.ಗಂಗಾಧರ ಐತಾಳ್ ಸ್ಮಾರಕ ವಿಜ್ಞಾನ ಮಾದರಿ (Science Model) ತಯಾರಿ ಸ್ಪರ್ಧೆ ‘ಯ ವಿಜೇತರಿಗೆ  ದತ್ತಿನಿಧಿ ಬಹುಮಾನ ವಿತರಣೆ ಮಾಡಿ ಮಾತನಾಡಿದರು. ಮೊದಲ ಬಹುಮಾನವಾದ  ರೂ.೫೦೦೦/ ಮೊತ್ತವನ್ನು ಮೂವರು ವಿದ್ಯಾರ್ಥಿಗಳ ಮೂರು ತಂಡ, ಎರಡನೇ ಬಹುಮಾನವಾದ ರೂ. ೪೦೦೦/ ಮೊತ್ತವನ್ನು ಮೂವರು ವಿದ್ಯಾರ್ಥಿಗಳ ಮೂರು  ತಂಡ ಮತ್ತು ಮೂರನೇ ಬಹುಮಾನವಾದ ರೂ. ೩೦೦೦ ಮೊತ್ತವನ್ನು ಮೂವರು ವಿದ್ಯಾರ್ಥಿಗಳ ಮೂರು  ತಂಡಗಳಿಗೆ  ವಿತರಿಸಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ  ಮಂಗಳೂರು ನಗರ ಸಭೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಎಂ.ಬಿ.ಪುರಾಣಿಕ್, ಸುನಂದಾ ಪುರಾಣಿಕ್, ಡಾ.ಲೀಲಾ ಉಪಾಧ್ಯಾಯ, ಆಡಳಿತಾಧಿಕಾರಿ ಸಮೀರ್ ಪುರಾಣಿಕ್ ಮತ್ತು ಪ್ರಾಂಶುಪಾಲೆ ಸುನೀತಾ ವಿ.ಮಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *