Sand- ಮರಳು ಸಮಸ್ಯೆ ಇಂದು ಸಿಎಂ ಸಭೆ

ಉಡುಪಿ ಜಿಲ್ಲೆಯಲ್ಲಿನ ಮರಳು Sand, ಕೆಂಪು ಕಲ್ಲು Black stone ಹಾಗೂ ಇನ್ನಿತರೇ ವಿಷಯಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಅ.5ರಂದು ಸಂಜೆ 5ಗಂಟೆಗೆ ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸದಲ್ಲಿ ಸಭೆ ಕರೆಯಲಾಗಿದೆ.
ಗುರುವಾರ ಸಚಿವ ಸಂಪುಟ ಸಭೆಯ ಅನಂತರ ಮರಳು Sand, ಕೆಂಪು ಕಲ್ಲು Black stone ಸಮಸ್ಯೆಗಳ ಬಗ್ಗೆ ಸಭೆ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲಿ ಹೋರಾಟ ನಡೆಯುತ್ತಿರುವ ಹಿನ್ನಲೆಯಲ್ಲಿ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಳ್ಕರ್ ಅವರ ಮುತುವರ್ಜಿಯಿಂದ ಈ ಸಭೆ ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ರೀತಿಯ ಸಮಸ್ಯೆ ಇದ್ದರೂ ಕೂಡ ಶಾಸಕರಾಗಲಿ, ವಿಧಾನಪರಿಷತ್ ಸದಸ್ಯರಾಗಲಿ, ಜಿಲ್ಲಾ ಉಸ್ತುವಾರ ಸಚಿವರಾಗಲಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ಸಹಿತ ಕಟ್ಟಡ ನಿರ್ಮಾಣಕ್ಕೆ ಕೆಂಪು ಕಲ್ಲು ಮತ್ತು ಮರಳು ಅಗತ್ಯ ಸಾಧನವಾಗಿರುವುದು ಮಾತ್ರವಲ್ಲದೆ, ಪ್ರಮುಖ ಉದ್ಯಮವೂ ಆಗಿದೆ. ಸಾವಿರಾರು ಮಂದಿ ಇವೆರಡು ಉದ್ಯಮಗಳನ್ನು ಪ್ರತ್ಯಕ್ಷವಾಗಿ ಮತ್ತು ಪರರೋಕ್ಷವಾಗಿ ಅವಲಂಬಿಸಿದ್ದಾರೆ. ಆದರೆ, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಬಿಲ್ಡರುಗಳು ದುಬಾರಿ ಬೆಲೆಯ ಅಕ್ರಮ ಮರಳನ್ನು ಬಳಸಿ ಅದರ ಖರ್ಚನ್ನು ಗ್ರಾಹಕನಿಗೆ ವರ್ಗಾಯಿಸುತ್ತಾರೆ. ಜೀವನದಲ್ಲೊಮ್ಮೆ ಮಾತ್ರ ಮನೆ ಕಟ್ಟುವ ಜನಸಾಮಾನ್ಯ ಮರಳು ಅಲಭ್ಯತೆ ಮತ್ತು ಗಗನಕ್ಕೇರಿದ ದರದಿಂದ ಹೈರಾಣವಾಗಿದ್ದಾನೆ.
ಕಳೆದ ಕೆಲವು ವರ್ಷಗಳಿಂದ ಕೆಂಪು ಕಲ್ಲು ತೆಗೆಯುವುದರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿದ್ದಾರೆ.
ಜ್ವಲಂತ ಮರಳು ಸಮಸ್ಯೆ
ಕಳೆದ ನಾಲ್ಕು ವರ್ಷಗಳಿಂದ ಕರಾವಳಿಯಲ್ಲಿ ಮರಳು ಲಭ್ಯತೆ ಕಡಿಮೆಯಾಗಿದೆ. ಆದರೆ, ಅಕ್ರಮ ಮರಳುಗಾರಿಕೆ ಅವ್ಯಾವಹತವಾಗಿ ಸಾಗಿದೆ. ಇದರಿಂದ ಜನರಿಗೆ ತೊಂದರೆಯಾಗಿದ್ದು, ಆಡಳಿತ ಪಕ್ಷದ ರಾಜಕಾರಣಿಗಳು. ಅಕ್ರಮಮರಳುಗಾರಿಕೆ ನಡೆಸುವ ಕಳ್ಳಕಾಕರಿಗೆ ಲಾಭವಾಗಿದ್ದು, ಪ್ರದೇಶದ ಆರ್ಥಿಕ ಸ್ಥಿತಿಗತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಹಿಂದಿನ ಯಡ್ಯೂರಪ್ಪ ಸರಕಾರದ ಇದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಕೃಷ್ಣ ಜೆ.ಪಾಲೇ ಮಾರ್ ಕಾಲದಲ್ಲಿ ಅಧಿಕೃತ ಮತ್ತು ಅನಧಿಕೃತ ಎರಡು ರೀತಿಯ ಮರಳುಗಾರಿಕೆಯು ನಡೆಯಲು ಅವಕಾಶ ನೀಡಿ ಜನರಿಗೆ, ಬಿಲ್ಡರುಗಳಿಗೆ ಮರಳು ಲಭ್ಯತೆ ಚೆನ್ನಾಗಿತ್ತು. ಕೇರಳಕ್ಕು ಮರಳು ಸಾಗಾಟ ಆಗುತಿತ್ತು. ಪಾಲೇಮಾರ್ ಸ್ವತಃ ರಿಯಲ್ ಎಸ್ಟೇಟ್ ಬಿಲ್ಡರ್ ಆದ ಕಾರಣ ಮರಳಿನ ಮಹತ್ವ ಅವರಿಗೆ ಗೊತ್ತಿತ್ತು.
2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ಮರಳಗಾರಿಕೆಯನ್ನು ತಕ್ಕ ಮಟ್ಟಿಗೆ ಸರಿದಾರಿಗೆ ತರಲಾಗಿತ್ತು. ಹೊಸ ಮರಳು ನೀತಿಯನ್ನು ಕೂಡ ಜಾರಿ ಮಾಡಲಾಗಿತ್ತು. ಅಕ್ರಮ ಸಾಗಾಟಕ್ಕೆ ಲಗಾಮ ಹಾಕಿ ಸರಕಾರಕ್ಕೆ ದೊಡ್ಡ ಪ್ರಮಾಣದ ಕಂದಾಯ ಸಂಗ್ರಹ ಕೂಡ ಮಾಡಲಾಗಿತ್ತು. ಆಗ ಮಂಗಳೂರಿನ ಮರಳು ತುಮಕೂರು, ಬೆಂಗಳೂರು ತನಕ ಕೂಡ ಸಾಗಾಟ ಆಗುತ್ತಿತ್ತು. ಅಲ್ಲಿಗೆತಲಪುವ ವೇಳೆಗೆ ಮರಳಿಗೆ ಚಿನ್ನದ ಬೆಲೆ ದೊರೆಯುತ್ತಿದ್ದರು. ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉಸಿರು ನೀಡುತಿತ್ತು.
ಕೆಲವು ವರ್ಷಗಳು ಹೀಗೆ ಸಾಗಿತು. ಕರಾವಳಿಯಲ್ಲಿ ಮರಳುಗಾರಿಕೆಯಲ್ಲಿ ತೊಡಗಿದ್ದ ಕಾರ್ಮಿಕರಿಗೆ, ಅದನ್ನು ಅವಲಂಬಿಸಿರುವ ಲಾರಿ ಚಾಲಕರು, ಗಾರೆಕೆಲಸದ ಕಾರ್ಮಿಕರು ಸೇರಿದಂತೆ ಹಲವರಿಗೆ ಆದಾಯ ದಾರಿ ಆಗುತಿತ್ತು.
ಕರಾವಳಿಯಲ್ಲಿ ಪ್ರತ್ಯೇಕ ಮರಳುನೀತಿ ಇದೆ. ಇಲ್ಲಿ ಎರಡು ರೀತಿಯ ಮರಳುಗಾರಿಕೆ ನಡೆಸಲಾಗುತ್ತದೆ. ಒಂದು ಕರಾವಳಿ ತೀರ ನಿಯಂತ್ರಣ ಪ್ರದೇಶ(ಸಿಆರ್ ಝೆಡ್) ಮತ್ತು ಕರಾವಳಿ ತೀರ ನಿಯಂತ್ರಣದಿಂದ ಹೊರತಾದ ಪ್ರದೇಶ (ನಾನ್ ಸಿಆರ್ ಝೆಡ್). ಸಾಮಾನ್ಯವಾಗಿ ಮಂಗಳೂರು ಪ್ರದೇಶದಲ್ಲಿ ನದಿಯಿಂದ ಮತ್ತು ಸಮುದ್ರ ಮತ್ತು ನದಿ ಸೇರುವ ಅಳಿವೆ ಪ್ರದೇಶದಲ್ಲಿ ಮರಳುಗಾರಿಕೆ ಮಾಡಲಾಗುತ್ತದೆ. ಸಮುದ್ರ ತೀರ ಉಪ್ಪುನೀರು ಇರುವ ಪ್ರದೇಶದಲ್ಲಿ ದೊರೆಯುವ ಮರಳಿಗೆ ಬೇಡಿಕೆ ಇರುವುದಿಲ್ಲ. ಆದರೆ, ಅಳಿವೆ ಪ್ರದೇಶದಲ್ಲಿ ನದಿ ಸೇರುವಲ್ಲಿ ಮರಳಿನ ದಿಣ್ಣೆಗಳು ರಾಶಿ ಬೀಳುವುದರಿಂದಾಗಿ ದೋಣಿ ಸಾಗಾಟಕ್ಕೆ ಸಹಾಯಕ ಆಗುವಂತೆ ಇಂತಹ ದಿಣ್ಣೆಗಳನ್ನು ತೆರವು ಮಾಡಲು ಮರಳುಗಾರಿಕೆ ಮಾಡಲೇ ಬೇಕಾಗುತ್ತದೆ. ಇದಕ್ಕೆ ಸರಕಾರ ಅನುಮತಿ ನೀಡುತ್ತದೆ. ಇದನ್ನು ಲೀಸ್ ಪ್ರದೇಶವೆಂದು ಗುರುತಿಸಿ ಸಾಂಪ್ರದಾಯಿಕ ಮರಳುಗಾರರು ನೀರಲ್ಲಿ ಮುಳುಗಿ ಮರಳು ತೆಗೆದು ದೋಣಿಯಲ್ಲಿ ಸಂಗ್ರಹಿಸಬೇಕು. ಸಮುದ್ರ ತೀರದಿಂದ ಒಳನಾಡಿನ ಬಹುದೂರ ತನಕವು ಸಿಆರ್ ಝೆಡ್ ಪ್ರದೇಶ ಎಂದು ಗುರುತಿಸಲಾಗುತ್ತದೆ.
ಇಂತಹ ಸಿಆರ್ ಝೆಡ್ ಪ್ರದೇಶದಲ್ಲಿ ಪೋಕ್ ಲೈನರ್, ಆರ್ಥ್ ಮೂವರು ಬಳಸಿಕೊಂಡು ಮರಳುಗಾರಿಕೆ ನಡೆಸುವಂತಿಲ್ಲ. ನಾನ್ ಸಿಆರ್ ಝೆಡ್ ಪ್ರದೇಶದಲ್ಲಿ ಮಾತ್ರ ಯಂತ್ರೀಕ ಮರಳುಗಾರಿಕೆ ಮಾಡಬಹುದಾದರು ಅದು ಕೂಡ ಪರಿಸರಕ್ಕೆ ಹಾನಿಕಾರವಾಗಿದೆ. ಮನುಷ್ಯರಿಗೆ ಹಣ ದೊರೆಯುವುದಾದರೆ ಯಾವ ಪರಿಸರವು ಇಲ್ಲ, ಯಾವ ಭೂಮಿ ತಾಯಿಯು ಲೆಕ್ಕಕ್ಕೆ ಇಲ್ಲ.
ಎಲ್ಲವು ಸರಿಯಾಗಿಯೇ ನಡೆಯುತ್ತಿತ್ತು. ಎರಡು ವರ್ಷಕ್ಕೊಮ್ಮೆ ಲೀಸ್ ಅವಧಿ ಮುಗಿಯುವುದರಿಂದ ಲೀಸ್ ನವೀಕರಣ ಮಾಡಬೇಕು. ಕಾಂಗ್ರೆಸ್ ಪಕ್ಷ ಆಡಳಿತ ಇದ್ದಾಗಲೇ ಹಲವು ಮಂದಿ ಬಿಜೆಪಿ ಬೆಂಬಲಿಗರು ಕಾಂಗ್ರೆಸ್ಸಿನವರೊಂದಿಗೆ ಸೇರಿಕೊಂಡು ಮರಳುಗಾರಿಕೆ ಲೀಸ್ ಪಡಕೊಂಡರು. ಇದರಿಂದಾಗಿ ಕೊಲೆಗಳು ನಡೆದು ಸಚಿವರಾಗಿದ್ದ ರಮಾನಾಥ ರೈ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋತು ಮನೆ ಸೇರಿದರು.
ಲೀಸ್ ನವೀಕರಣ ವೇಳೆ ಮುಂಬರುವ ದಿನಗಳಲ್ಲಿ ತಮಗೆ ರಾಜಕೀಯವಾಗಿ ಅಡ್ಡಿ ಆಗಬಹದೆಂದು ಮನಗಂಡು ಕಾಂಗ್ರೆಸ್ ಮುಖಂಡರ ಸಾರಥ್ಯದಲ್ಲಿ ನೂರಾರು ಸಾಂಪ್ರದಾಯಿಕ ಮರಳು ಕಾರ್ಮಿಕರು, ಲೀಸ್ ಹೊಲ್ಡರ್ಸ್, ಲಾರಿ ಮಾಲೀಕರು, ಚಾಲಕರ ಮೇಲೆ ಕ್ರಿಮಿನಲ್ ಕೇಸು ಹಾಕಿ ಜೈಲಿಗೆ ಹಾಕಲಾಯಿತು. ಯು.ಟಿ.ಖಾದರ್ ಕಾಲದಲ್ಲಂತು ಇಂತಹ ಪ್ರಕರಣಗಳು ಮಿತಿ ಮೀರಿ ಹೆಚ್ಚಳವಾಯಿತು. ಇದರಿಂದ ಕಾಂಗ್ರೆಸ್ ಪಾರ್ಟಿ ಮುಳುವಾಗುವುದು ಖಚಿತವಾಗತೊಡಗಿತು. ಖಾದರ್ ಹೇಗೊ ಹಿಂದೂಗಳು ಮತ್ತು ಮುಸ್ಲಿಮರ ಮತ ಗಳಿಸಿ ಅಲ್ಪ ಬಹುದಿಂದ ಗೊದ್ದರೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಂಗ್ರೆಸ್ ಧೂಳೀಪಟವಾಯಿತು. ಇದಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಮರಳುಗಾರಿಕೆಯ ಆಧ್ವಾನಗಳೇ ಕಾರಣ ಎಂಬುದು ಕಾಂಗ್ರೆಸ್ಸಿನವರಿಗೆ ಇವತ್ತಿಗೂ ಗೊತ್ತಾದಾಗಿಲ್ಲ.
ಈ ಮಧ್ಯೆ, ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಮೈತ್ರಿಯಲ್ಲು ಇದೇ ಆಧ್ವಾನ ಮುಂದುವರಿಯಿತು. ಅನಂತರ ಯಡ್ಯೂರಪ್ಪ ಮುಖ್ಯಮಂತ್ರಿಯಾಗಿ ಈಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷ ಕಳೆದರು ಕಳೆದ ಎರಡು ವರ್ಷಗಳಿಂದ ಕಾನೂನುಬದ್ಧವಾಗಿ ಮರಳು ಪೂರೈಕೆ ಮಾಡುವ ಹೊಣೆಗಾರಿಕೆಯನ್ನು ಬಿಜೆಪಿ ಮುಖಂಡರು ವಹಿಸಿಕೊಳ್ಳಲಿಲ್ಲ. ಕರಾವಳಿ ಪ್ರದೇಶಧ ಅಭಿವೃದ್ಧಿ ಮತ್ತು ಆರ್ಥಿಕತೆ ಮೇಲೆ ನೇರವಾಗಿ ಅಡ್ಡಪರಿಣಾಮ ಬೀರುವ ಮರಳು ಪೂರೈಕೆ ಬಗ್ಗೆ ಬಿಜೆಪಿ ಮುಖಂಡರು ಗಮನ ಹರಿಸಲಿಲ್ಲ. ಆದರೆ, ರಾಜಕೀಯ ಪ್ರಭಾವದಿಂದ ಅಕ್ರಮಮರಳುಗಾರಿಕೆಗೆ ನಡೆಯಿತು.
ಜನಸಾಮಾನ್ಯರ ಬೇಡಿಕೆಗ ಸ್ಪಂದಿಸಿದ ಅಂದಿನ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು ಬಿಜೆಪಿ ರಾಜ್ಯ ಅಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸಹಕಾರದೊಂದಿಗೆ ಜಿಲ್ಲಾಡಳಿತದಿಂದಲೇ ಮರಳು ಪೂರೈಕೆಗೆ ವ್ಯವಸ್ಥೆ ಮಾಡಿದರು. ಆಪ್ ಮೂಲಕ ಮನೆ ಬಾಗಿಲಿಗೆ ಲಾರಿ ಲಾರಿ ಮರಳು ಪೂರೈಕೆ ಆಗತೊಡಗಿತು. ತುಂಬೆ, ಸರಪಾಡಿ ಮುಂತಾದರ ವೆಂಟೆಡ್ ಡ್ಯಾಂಗಳಿಂದ ಹೂಳೆತ್ತುವ ಮೂಲಕ ಮರಳು ಸಂಗ್ರಹ ಮಾಡಿ ಪೂರೈಸಲಾಗುತಿತ್ತು.
ಆದರೆ, ಅನಧಿಕೃತವಾಗ ರಾತೋರಾತ್ರಿ ಅಕ್ರಮ ಮರಳುಗಾರಿಕೆ ಹೆಚ್ಚಳವಾಗತೊಡಗಿತು. ಇದರಿಂದ ಜನರು ಹೈರಾಣವಾಗಿ ಹೋದರು. ಜಿಲ್ಲಾಧಿಕಾರಿಯಾಗಿದ್ದ ಕೆ.ವಿ.ರಾಜೇಂದ್ರ ಅವರು ಸಿಸಿ ಕ್ಯಾಮರಾ ಗಳನ್ನು ಅಳವಡಿಸಿ ಅಕ್ರಮ ಮರಳುಗಾರಿಕೆ ನಿಯಂತ್ರಣಕ್ಕೆ ಪ್ರಯತ್ನ ಪಟ್ಟರು.

ಕರಾವಳಿ ಜಿಲ್ಲೆಗಳಲ್ಲಿ ಮರಳುಗಾರಿಕೆ ಸಂಬಂಧ ಇದೊಂದು ಮಹತ್ವದ ಆದೇಶವಾಗಿದೆ. ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ಪೀಠದ ದಕ್ಷಿಣ ವಿಭಾಗದ ನ್ಯಾಯಾಂಗ ಸದಸ್ಯ ಕೆ ರಾಮಕೃಷ್ಣನ್, ತಜ್ಞ ಸದಸ್ಯ ಡಾ.ಸತ್ಯ ಗೋಪಾಲ ಕೊರ್ಲಪಾಟಿ ಅವರುಗಳಿದ್ದ ಪೀಠವು ಈ ಆದೇಶ ಮಾಡಿದೆ. ಪರ್ಮಿಟ್ ಪ್ರಕ್ರಿಯೆ ರಾಜಧನ ಸಂಗ್ರಹ , ಹೊರಗಡೆ ಮರಳು ಮಾರಾಟಕ್ಕೆ ಅನುಮತಿ ನೀಡಿರುವ ರಾಜ್ಯ ಸರಕಾರದ ನಿಯಮಾವಳಿಯೂ ಕೂಡ ಸಿಆರ್ ಝಡ್ ಅಧಿಸೂಚನೆಯಲ್ಲಿ ನಿಷೇಧಿಸಲಾದ ಮರಳುಗಾರಿಕೆಗೆ ಸಮವಾಗಿದೆ ಎಂದಿದೆ.
ಸಿಆರ್ ಝಡ್ ಪ್ರದೇಶದಲ್ಲಿ ಮರಳನ್ನು ತೆಗೆಯುವುದೇ ಆದರೆ ಅದನ್ನು ಮಾರಾಟ ಮಾಡುವಂತಿಲ್ಲ .ತೆಗೆದಿರುವ ಮರಳನ್ನು ಕೇವಲ ನದಿ ಪಾತ್ರವನ್ನು ಸಮತಟ್ಟು ಮಾಡಲು ಅಥವಾ ನದಿಪಾತ್ರದ ದಂಡೆ ಗಟ್ಟಿಗೊಳಿಸಲು ಬಳಸಬೇಕು ಎಂದು ಸೂಚನೆ ನೀಡಲಾಗಿದೆ.
ಪರವಾನಿಗೆ ಹೊಂದಿರುವವರು ಅಥವಾ ಅವರ ಕುಟುಂಬದ ಸದಸ್ಯರು ಮಾತ್ರ ಕಟ್ಟುನಿಟ್ಟಾಗಿ ಸಾಂಪ್ರದಾಯಿಕ ವಿಧಾನಗಳನ್ನು ಮಾತ್ರ ಬಳಸಿ ಮರಳು ತೆಗೆಯಬೇಕು. ಯಾವುದೇ ಉಪಗುತ್ತಿಗೆ ಅಥವಾ ಬಾಹ್ಯ ಕಾರ್ಮಿಕರ ನಿಯೋಜನೆ ಇರಬಾರದು ಎಂಬುದನ್ನು ಪೀಠವು ಸ್ಪಷ್ಟಪಡಿಸಿದೆ.
ಬ್ರಹ್ಮಾವರದ ಉದಯ ಸುವರ್ಣ , ಕಲ್ಯಾಣಪುರದ ದಿನೇಶ್ ಕುಂದರ್ ಎಂಬ ಅರ್ಜಿದಾರರು ಜಿಲ್ಲೆಯ ಸಿ ಆರ್ ಝಡ್ ವ್ಯಾಪ್ತಿಗೆ ಬರುವ ಸೌಪರ್ಣಿಕಾ ,ವಾರಾಹಿ ,ಪಾಪನಾಶಿನಿ, ಸ್ವರ್ಣ ,ಮಾವಿನಹೊಳೆ ನದಿಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಿದ್ದಾರೆ ಎಂದು ಆಕ್ಷೇಪಿಸಿದ್ದರು. ಜಿಲ್ಲಾಡಳಿತವು ಎನ್ ಜಿಟಿ ಆ ದೇಶವನ್ನು ಪಾಲನೆ ಮಾಡದೆ ಪರಿಸರಕ್ಕೆ ಈ ಮೂಲಕ ಸಾಕಷ್ಟು ಹಾನಿ ಮಾಡಿದೆ ಎಂದು ದೂರಲಾಗಿತ್ತು. ಅರ್ಜಿದಾರರ ಪರವಾಗಿ ಬೆಂಗಳೂರಿನ ನ್ಯಾಯವಾಗಿ ರಂಜನ್ ವಾದ ಮಂಡಿಸಿದ್ದರು.
ನದಿಯ ಹರಿಯುವಿಕೆಗೆ ಸಮಸ್ಯೆಯಾಗುವುದು ಮತ್ತು ಮೀನುಗಾರಿಕೆ ದೋಣಿಗಳ ಚಲನೆಗೆ ಸಮಸ್ಯೆಯಾಗುತ್ತದೆ ಮರಳನ್ನು ತೆಗೆಯದೆ ಇದ್ದಲ್ಲಿ ಪ್ರವಾಹ ಮತ್ತು ನೆರೆ ಉಂಟಾಗಲು ಕಾರಣವಾಗುತ್ತದೆ ಎಂಬ ವಾದವನ್ನು ಜಿಲ್ಲೆಯ ಸಿಆರ್ ಝಡ್ ಮರಳು ಪರವಾನಿಗೆದಾರರ ಪರ ವಕೀಲರು ವಾದ ಮಂಡಿಸಿದ್ದರು.
ಜಿಲ್ಲೆಯಲ್ಲಿ ಸಿ ಆರ್ ಝಡ್ ವ್ಯಾಪ್ತಿಯಲ್ಲಿ 23 ಮರಳು ದಿಬ್ಬಗಳನ್ನು ಗುರುತಿಸಿ ರಾಜ್ಯ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರ ಅನುಮೋದನೆ ನೀಡಿತ್ತು. ಅದರಲ್ಲಿ ನಾಲ್ಕು ಮರಳು ದಿಬ್ಬಗಳು ಕುಂದಾಪುರ ವ್ಯಾಪ್ತಿಯಲ್ಲಿದ್ದು ಅದರ ಪರವಾನಿಗೆ ಅವಧಿ ಪೂರ್ಣಗೊಂಡಿದೆ. ಉಳಿದಂತೆ ಪ್ರಸ್ತುತ ಉಡುಪಿ ಬ್ರಹ್ಮಾವರ ಭಾಗದಲ್ಲಿ 13 ಮರಳು ದಿಬ್ಬಗಳಲ್ಲಿ ಮರಳನ್ನು ತೆರವುಗೊಳಿಸಲಾಗುತ್ತಿದೆ.
ಪರವಾನಿಗೆ ಹೊಂದಿರುವವರು ಅಥವಾ ಅವರ ಕುಟುಂಬದ ಸದಸ್ಯರು ಮಾತ್ರ ಕಟ್ಟುನಿಟ್ಟಾಗಿ ಸಾಂಪ್ರದಾಯಿಕ ವಿಧಾನಗಳನ್ನು ಮಾತ್ರ ಬಳಸಿ ಮರಳು ತೆಗೆಯಬೇಕು ಎಂದು ನ್ಯಾಯಪೀಠ ಹೇಳಿದ್ದರು ಜಾರಿ ಮಾತ್ರ ಆಗಿಲ್ಲ. ಹಲವು ದಶಕಗಳಿಂದ 108 ಮಂದಿ ಕಾರ್ಮಿಕರು ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಾರೆ. ಇವರು ನೀರಿನಿಂದ ಮರಳು ತೆಗೆದು ದೋಣಿಗೆ ತುಂಬಿಸುತ್ತಾರೆ. ಈಗ ಭಾರತೀಯ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ಮುಖಂಡರು ಈ 108 ಮಂದಿ ಕಾರ್ಮಿಕರ ಪಟ್ಟಿಗೆ ಇನ್ನೊಂದು 100 ಮಂದಿ ಮೀನುಗಾರರ ಹೆಸರು ಸೇರಿಸಿ ಸಮಸ್ಯೆಯನ್ನು ಇನ್ನಷ್ಟು ಜಟಿಲ ಪಡಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತಿನಿತ್ಯ ಸರಾಸರಿ 200 ಲೋಡ್ ಮರಳು ಬೇಡಿಕೆ ಇದೆ. ಒಂದು ಲೋಡ್ ಮರಳಿಗೆ 6000 ರೂಪಾಯಿಯಂದ ಎಂಟು ಸಾವಿರ ರೂಪಾಯಿ ತನಕ ದೊರೆತಾಗದ ಇದರಲ್ಲಿ ನೂರಾರು ಮಂದಿ ಸಾಂಪ್ರದಾಯಿಕ ಮರಳು ಕಾರ್ಮಿಕರು, ಸಾಗಾಟ ಮಾಡುವ ಲಾರಿ ಮಲೀಕರು, ಚಾಲಕರು, ಗಾರೆ ಕೆಲಸ ಮಾಡುವವರು ಸೇರಿದಂತೆ ಸಾವಿರಾರು ಮಂದಿಗೆ ಉದ್ಯೋಗ ದೊರೆಯುತ್ತದೆ. ಇದರೊಂದಿಗೆ ಸಿಮೆಂಟ್, ಕಬ್ಬಿಣ, ಪೈಂಟಿಂಗ್, ಕರಕುಶಲಕರ್ಮಿಗಳು,ಇಂಟಿರಿಯರ್ ಡೆಕೊರೆಟರ್ಸ್, ಟೈಲ್ಸ್, ಮಾರ್ಬಲ್ಸ್ ವ್ಯಾಪಾರಿಗಳು ಸೇರಿದಂತೆ ನೂರಾರು ಕ್ಷೇತ್ರ ವ್ಯಾಪಾರಿಗಳಿಗೆ ಕೋಟ್ಯಾಂತರ ವ್ಯಾಪಾರ ಆಗುತ್ತದೆ, ಒಂದು ಅಂದಾಜಿನ ಪ್ರಕಾರ 12 ಕೋಟಿ ರೂಪಾಯಿ ವೆಚ್ಚದ 200 ಲೋಡ್ ಮರಳು ಮಾರುಕಟ್ಟೆಗೆ ಬಂದರೆ ನೂರಾರು ಕೋಟಿ ವಹಿವಾಟು ನಡೆಯುವುದರಿಂದ ಪ್ರದೇಶದಲ್ಲ ಹಣಕಾಸಿನ ಚಲಾವಣೆಯು ಆಗುತ್ತದೆ ಸರಕಾರಕ್ಕೆ ಪರೋಕ್ಷ ತೆರಿಗೆ ಸಂಗ್ರಹ ಕೂಡ ಆಗುತ್ತದೆ. ಪುತ್ತೂರು ಸುಳ್ಯ ಪ್ರದೇಶದಲ್ಲಿ ಸದ್ಯ ಕೆಂಪಡಕೆ ಮಾರುಕಟ್ಟೆ ಅಲ್ಲದೆ ಇನ್ನಿತರ ಯಾವುದೇ ಉತ್ಪದನಾ ಕ್ಷೇತ್ರದ ಆದಾಯದ ಹರುವುಇಲ್ಲ. ಕರಾವಳಿಯ ಆರಂಭದಲ್ಲಿ ಹಂಚು ಮತ್ತು ನೇಕಾರಿಕೆ ದೊಡ್ಡ ಪ್ರಮಾಣದ ಉದ್ಯೋಗ ನೀಡಿದರೆ, ಅವುಗಳು ಬಂದ್ ಆಯಿತು. ಅನಂತರ ಲಕ್ಷಾಂತರ ಮಂದಿಗೆ ಉದ್ಯೋಗ ಮತ್ತು ಶಿಕ್ಷಣ ನೀಡಿದ ಬೀಡಿ ಉದ್ಯಮ ತನ್ನ ಕೊನೆಯ ಹಂತದಲ್ಲಿದೆ. ಬೀಡಿ ಉತ್ಪಾದನೆ ಕಡಿಮೆಯಾಗಿದೆ. ಇತರ ಯಾವುದೇ ಉದ್ಯೋಗ ನೀಡುವ ಗುಡಿಕೈಗಾರಿಕೆಗಳು ಇಲ್ಲ. ಐಟಿ ಕಂಪೆನಿಗಳು ಕೂಡ ಫ್ರಿಂಜ್ ಸೇನೆಗಳ ಭಯದಿಂದ ಮಂಗಳೂರಿಗೆ ಬರುತ್ತಿಲ್ಲ. ಇನ್ನುಳಿದಿರುವುದು ಮೀನುಗಾರಿಕೆ ಮಾಕ್ರ ಇದರಲ್ಲಿ ಮೀನುಗಾರರಿಗಿಂತ ತಮಿಳುನಾಡು ತೆಲಂಗಾಣದ ರಾಜ್ಯದ ಮತ್ತು ಉತ್ತರ ಕರ್ನಾಟಕದ ಕಾರ್ಮಿಕರೇ ಹೆಚ್ಚಿದ್ದಾರೆ. ಆರ್ಥಿಕ ಚಲಾವಣೆಯ ದೊಡ್ಡ ಸಾಮರ್ಥ್ಯ ಹೊಂದಿರುವ ಮರಳು ಉದ್ಯಮ ನಾಲಾಯಕ್ ಮುಖಂಡರಿಂದ ಮುಳುಗಿ ಹೋಗಿದೆ. ಕಾನೂನುಬದ್ಧವಾಗಿ ಮಾಡಿದಾಗ ಯಾವ ಅಕ್ರಮವು ಇರುವುದಿಲ್ಲ. ನಿಯಮಬದ್ಧವಾಗಿ ಮಾಡಲು ಯಾರೂ ಸಿದ್ಧರಿಲ್ಲಅನಂತರ ಮರಳುಗಾರಿಕೆ ಸೂಸೂತ್ರ ವಾಗ ನಡೆಸಲು ಜಿಲ್ಲಾಧಿಕಾರಿಯಾಗಿ ಎಂ.ಆರ್.ರವಿಕುಮಾರ್ ಅವರನ್ನುನೇಮಿಸಲಾಗಿತ್ತು. ಕಾನೂನಿನ ಅಡಕತ್ತರಿಯಲ್ಲಿ ಕಾನೂನುಬದ್ಧ ಮರಳುಗಾರಿಕೆಗೆ ಅನುವು ಮಾಡಿಕೊಡಲು ಸಾಧ್ಯ ಆಗಲಿಲ್ಲ. ಆದರೂ ಕೂಡ ಮರಳುಗಾರಿಕೆಗೆ ದೊರೆತಿರುವ ಪರಿಸರ ಇಲಾಖೆಯ ಅನುಮತಿ ಕಳೆದ ಫೆಬ್ರುವರಿ ತಿಂಗಳಿಗೆ ಮುಗಿದಿದೆ. ಈಗ ಲೀಸ್ ಅಥವ ಗುತ್ತಿಗೆ ನೀಡಿದರೆ ದೊಡ್ಡ ಪ್ರಮಾಣದ ಪ್ರಯೋಜನ ಆಗುವುದಿಲ್ಲ. ಮೇ ತಿಂಗಳಲ್ಲಿ ಚುನಾವಣೆ ನಡೆದು ಸಿದ್ದರಾಮಯ್ಯ ನೇತೃತ್ವದ ಸರಕಾರ ಬಂದರೂ ಕೂಡ ಜನರಿಗೆ ಅಗತ್ಯ ಬೇಕಾದ ಮರಳು ಸಮಸ್ಯೆ ಪರಿಹಾರ ಆಗಿಲ್ಲ. ಮರಳು ದರ ವಿಪರೀತ ಏರಿಕೆಯಾಗಿದೆ.
ಫರಂಗಿಪೇಟೆ, ಪೊಳಲಿ ಸಮೀಪದ ಉಳ್ಳಾಲ, ಬೆಳ್ತಂಗಡಿಯಲ್ಲಿ ಅಕ್ರಮ ಮರಳಗಾರಿಕೆ ನಡೆಯುತ್ತಿದೆ.
ಸಾಂಪ್ರದಾಯಿಕ ಮರಳುಗಗಾರಿಕೆ ಮಾಡುವ ನೋಂದಾಯಿತ ಮುಳುಗಾರರು ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಿದರೆ ಮಾತ್ರ ಮರಳು ದರ ಇಳೆಕೆಯಾಗಬಹುದು

Leave a Reply

Your email address will not be published. Required fields are marked *