Rs 1000 notes: ಒಂದು ಸಾವಿರ ರೂಪಾಯಿ ನೋಟು ಮತ್ತೆ ಆರಂಭಿಸಲಾಗುತ್ತಾ

ಮುಂಬಯಿಃ October 25, 2023­-ಈಗ 1000 ರೂಪಾಯಿ ನೋಟನ್ನು ಮತ್ತೆ ಚಲಾವಣೆಗೆ ತರಲಾಗುತ್ತದೆಯೇ ಎಂಬುದು ಸಾರವಜಿನಕ ವಲಯದಲ್ಲಿ ವ್ಯಾಪಕ ಚರ್ಚೆ ಆಗುತ್ತಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ 19 ರಂದು 2000 ರೂಪಾಯಿಯನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರವನ್ನು ಪ್ರಕಟಿಸಿ, ಹಾಗೆಯೇ ನೋಟು ಬದಲಾವಣೆ, ನೋಟು ಡೆಪಾಸಿಟ್ ಮಾಡಲು ಅಕ್ಟೋಬರ್ 15ರವರೆಗೆ ಅವಕಾಶ ನೀಡಿತ್ತು. ಆದರೆ ಈಗ 1000 ರೂಪಾಯಿ ನೋಟನ್ನು ಮತ್ತೆ ಚಲಾವಣೆಗೆ ತರಲಾಗುತ್ತಾ ಎಂಬ ಸುದ್ದಿಯಿದೆ. 2016ರಲ್ಲಿ ಮೋದಿ ಸರ್ಕಾರವು 500 ರೂಪಾಯಿ ಹಾಗೂ 1000 ರೂಪಾಯಿ ನೋಟುಗಳನ್ನು ದಿಡೀರ್ ಆಗಿ ಬ್ಯಾನ್ ಮಾಡಿತ್ತು. ಈ ದಿಢೀರ್ ನಿರ್ಧಾರದಿಂದ ಜನರಿಗೆ ಆರ್ಥಿಕ ಸಮಸ್ಯೆ ತಲೆದೊರಿತ್ತು. ಹಾಗೆಯೇ ಚಲಾವಣೆಯಲ್ಲಿರುವ ಶೇಕಡ 88 ಕ್ಕಿಂತ ಹೆಚ್ಚು ಕರೆನ್ಸಿಯನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಆದರೆ ಈಗ ಮತ್ತೆ 1000 ರೂಪಾಯಿ ನೋಟು ಚಲಾವಣೆಗೆ ಬರಲಿದೆಯೇ? ಎಂಬ ಜಿಜ್ಞಾಸೆ ಹೆಚ್ಚಾಗಿದೆ.

ಒಂದು ಸಾವಿರ ರೂಪಾಯಿ ನೋಟು ಮತ್ತೆ ಆರಂಭಿಸಲಾಗುತ್ತಾ? 1000 ರೂಪಾಯಿ ನೋಟು ಚಲಾವಣೆಗೆ ಬರುತ್ತಾ? ಮಾಹಿತಿ ಪ್ರಕಾರ ಆರ್‌ಬಿಐ ಆಗಲಿ ಅಥವಾ ಸರ್ಕಾರವಾಗಿ 1000 ರೂಪಾಯಿ ಕರೆನ್ಸಿ ನೋಟುಗಳನ್ನು ಮತ್ತೆ ಆರಂಭ ಮಾಡುವ ಯಾವುದೇ ನಿರ್ಧಾರವನ್ನು ಮಾಡಿಲ್ಲ. ಆರ್‌ಬಿಐ ಅಂತಹ ಯಾವುದೇ ಯೋಜನೆ ಅಥವಾ ತೀರ್ಮಾನವನ್ನು ಮಾಡಿಲ್ಲ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. “ಆರ್‌ಬಿಐ 1000 ರೂಪಾಯಿ ನೋಟು ಮರು ಪರಿಚಯಿಸುವ ನಿರ್ಧಾರವನ್ನು ಮಾಡಿಲ್ಲ, ಈ ಬಗ್ಗೆ ಯಾವುದೇ ಯೋಜನೆಯನ್ನು ಹೊಂದಿಲ್ಲ,” ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಹೇಳಿದೆ. 2016 ರಲ್ಲಿ ಹಳೆಯ 500 ರೂಪಾಯಿ ನೋಟುಗಳ ಜೊತೆಗೆ 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಲಾಗಿದೆ. 1000 ರೂಪಾಯಿ ನೋಟುಗಳ ಬದಲಿಗೆ ಸರ್ಕಾರವು ಹೊಸ 2000 ರೂಪಾಯಿ ನೋಟುಗಳನ್ನು ಪರಿಚಯಿಸಿದೆ. ಹಾಗೆಯೇ ಹೊಸದಾಗಿ 500 ರೂಪಾಯಿ ನೋಟುಗಳನ್ನು ಕೂಡಾ ಪರಿಚಯಿಸಿದೆ. ಆದರೆ 2000 ರೂಪಾಯಿ ನೋಟುಗಳನ್ನು ಈಗ ಆರ್‌ಬಿಐ ಚಲಾವಣೆಯಿಂದ ಹಿಂಪಡೆದಿದೆ. 2000 ರೂಪಾಯಿ ನೋಟುಗಳನ್ನು ಆರಂಭಿಕವಾಗಿ ಜನರು ಮತ್ತು ಸಂಸ್ಥೆಗಳು ಸೆಪ್ಟೆಂಬರ್ 30 ರೊಳಗೆ ಬದಲಾವಣೆ ಮಾಡಿಕೊಳ್ಳಲು ಅಥವಾ ಬ್ಯಾಂಕ್ ಖಾತೆಗಳಿಗೆ ಡೆಪಾಸಿಟ್ ಮಾಡಲು ತಿಳಿಸಲಾಗಿತ್ತು. ಆದರೆ ಗಡುವನ್ನು ಬಳಿಕ ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಅಕ್ಟೋಬರ್ 7 ರಿಂದ ಬ್ಯಾಂಕ್‌ನಲ್ಲಿ 2000 ರೂಪಾಯಿ ನೋಟು ಪಡೆಯುವುದನ್ನು ನಿಲ್ಲಿಸಲಾಗಿದೆ. ಅಕ್ಟೋಬರ್ 8 ರಿಂದ ಜನರು 19 ಆರ್‌ಬಿಐ ಕಚೇರಿಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವನ್ನು ಆರ್‌ಬಿಐ ನೀಡಿದೆ. ಒಂದು ಬಾರಿಗೆ 20 ಸಾವಿರ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳನ್ನು ಆರ್‌ಬಿಐ ಕಚೇರಿಗಳಲ್ಲಿ ಬದಲಾವಣೆ ಮಾಡುವ ಅವಕಾಶವಿದೆ.

2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅಥವಾ ಠೇವಣಿ ಇಡಲು ಅಕ್ಟೋಬರ್‌ 7ರವರೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಅವಕಾಶ ಕಲ್ಪಿಸಿತ್ತು. ಈ ಗಡುವು ಈಗ ಮುಕ್ತಾಯವಾಗಿದ್ದು, ವ್ಯವಸ್ಥೆಯಲ್ಲಿ ಇನ್ನೂ 10 ಸಾವಿರ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ಮುಖಬೆಲೆಯ ನೋಟುಗಳಿವೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ. ಅಕ್ಟೋಬರ್‌ 8 ರಿಂದ ಆರ್‌ಬಿಐ ಕೇಂದ್ರಗಳಲ್ಲಿ ಮಾತ್ರ ಈ ನೋಟುಗಳ ವಿನಿಮಯಕ್ಕೆ ಕೇಂದ್ರೀಯ ಬ್ಯಾಂಕ್‌ ಅವಕಾಶ ನೀಡಿದೆ.

2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಕೇಂದ್ರೀಯ ಬ್ಯಾಂಕ್‌ ಹಿಂದಕ್ಕೆ ಪಡೆದುಕೊಂಡ ಬಳಿಕ 1 ಸಾವಿರ ರೂ. ನೋಟನ್ನು ಮರು ಜಾರಿ ಮಾಡಲಾಗುತ್ತದೆ. ಈ ಕುರಿತು ಸಿದ್ಧತೆಗಳು ನಡೆದಿವೆ ಎಂಬ ವರದಿಗಳನ್ನು ರಿರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತಳ್ಳಿ ಹಾಕಿದೆ. 2016ರಲ್ಲಿ ನೋಟು ಅಮಾನ್ಯೀಕರಣ ಘೋಷಣೆ ಮಾಡಿದ್ದ ಕೇಂದ್ರ ಸರಕಾರ 500 ರೂ. ಹಾಗೂ 1,000 ರೂ. ಮುಖಬೆಲೆ ನೋಟನ್ನು ನಿಷೇಧಿಸಿತ್ತು.

ಒಂದು ಸಾವಿರ ರೂ. ಮುಖಬೆಲೆಯ ನೋಟನ್ನು ಮರು ಜಾರಿ ಮಾಡುವ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸ್ಪಷ್ಟಪಡಿಸಿದೆ. ಈ ಮೂಲಕ ಸಾವಿರ ರೂ. ಮುಖಬೆಲೆಯ ನೋಟನ್ನು ಮರುಪರಿಚಯಿಸಲಾಗುತ್ತದೆ ಎಂಬ ವದಂತಿಗಳಿಗೆ ಆರ್‌ಬಿಐ ತೆರೆ ಎಳೆದಿದೆ.

ನಮ್ಮ ದೇಶದಲ್ಲಿತ್ತು 5, 10 ಸಾವಿರ ಮುಖಬೆಲೆಯ ನೋಟು!

ಈ ತಲೆಮಾರಿನ ಜನರೆಲ್ಲರೂ ಭಾರತದಲ್ಲಿ ಇದುವರೆಗೆ ಮುದ್ರಿಸಿದ ಅತಿ ಹೆಚ್ಚು ಮುಖಬೆಲೆಯ ನೋಟು ಅಂದ್ರೆ ಅದು 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಅಂತ ಭಾವಿಸುತ್ತಾರೆ. ಆದರೆ ವಾಸ್ತವವಾಗಿ ಇದಕ್ಕಿಂತ ಹೆಚ್ಚು ಮೌಲ್ಯದ ಎರಡು ನೋಟುಗಳನ್ನು ಆರ್​ಬಿಐ ಮುದ್ರಿಸಿತ್ತು. 5000 ಹಾಗೂ 1000 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿತ್ತು.

ಈ ನೋಟುಗಳು ಮೊದಲ ಮುದ್ರಣಗೊಂಡಿದ್ದು ಯಾವಾಗ?

ವಸಾಹತುಶಾಹಿ ಕಾಲದಲ್ಲಿ, RBI 1938 ರಲ್ಲಿ ರೂ.10,000 ನೋಟನ್ನು ಪರಿಚಯಿಸಿತು. ಆದರೆ ಜನವರಿ 1946 ರಲ್ಲಿ ಅದನ್ನು ಅಪನಗದೀಕರಣ ಮಾಡಲಾಯಿತು. ಅಂದರೆ 1946ರ ನಂತರ ಅದು ಅಮಾನ್ಯವಾಗಿತ್ತು. ಮತ್ತೆ 1978 ರಲ್ಲಿ ಅದನ್ನು ಶಾಶ್ವತವಾಗಿ ರದ್ದು ಮಾಡಲಾಯ್ತು.

ಈ ನೋಟುಗಳನ್ನು ರದ್ದು ಮಾಡಿದ್ದು ಯಾಕೆ?

ವ್ಯಾಪಾರಿಗಳ ಲಾಭದಾಯಕ ಚಟುವಟಿಕೆಗಳಿಂದಾಗಿ ಬ್ರಿಟಿಷ್ ಸರ್ಕಾರ ಈ ನೋಟು ರದ್ದುಗೊಳಿಸಿದೆ ಎಂದು ನಂಬಲಾಗಿದೆ. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಹೊಸ 5,000 ಮತ್ತು 10,000 ರೂಪಾಯಿ ನೋಟುಗಳನ್ನು ಚಲಾವಣೆಗೆ ಪರಿಚಯಿಸಲಾಯಿತು. ಸ್ವಾತಂತ್ರ್ಯದ ಏಳು ವರ್ಷಗಳ ನಂತರ 1954 ರಲ್ಲಿ ಅವುಗಳನ್ನು ಮುದ್ರಿಸಲಾಯಿತು.

 

One Comment on “Rs 1000 notes: ಒಂದು ಸಾವಿರ ರೂಪಾಯಿ ನೋಟು ಮತ್ತೆ ಆರಂಭಿಸಲಾಗುತ್ತಾ”

Leave a Reply

Your email address will not be published. Required fields are marked *