Riverfront Project : ನೇತ್ರಾವತಿ ನದಿಯಲ್ಲಿ ಪರಿಸರ ಕಾನೂನು ಉಲ್ಲಂಘಿಸಿ ಕಾಮಗಾರಿ

Riverfront Project  ಇದೊಂದು ಬೇಲಿಯೆ ಹೊಲ ಮೇಯುವ ಗಾದೆಯನ್ನು ದಿಟ ಮಾಡುವ ವಿದ್ಯಮಾನ. ಸರಕಾರವೇ ರೂಪಿಸಿದ ಪರಿಸರ ಕಾನೂನನ್ನು ಸರಕಾರದ ಕಂಪೆನಿಯೊಂದು ಖುಲ್ಲಂ ಖುಲಂ ಉಲ್ಲಂಘಿಸಿ ಪರಿಸರ ದೌರ್ಜನ್ಯ ನಡೆಸುತ್ತಿದ್ದರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತಿದ್ದಾರೆ.

ಮಂಗಳೂರು, ಡಿ.21- ಸ್ಮಾರ್ಟ್ ಸಿಟಿ ಯೋಜನೆ (Smart City Project)ಯಡಿ ರಿವರ್ ಫ್ರಂಟ್ ಅಭಿವೃದ್ಧಿ (Riverfront Project) ಎಂಬ ಹೆಸರಿನಲ್ಲಿ ನೇತ್ರಾವತಿ ನದಿಗೆ (Nethravathy River) ತಡೆಗೋಡೆ ನಿರ್ಮಾಣ, ನದಿ ಪಾತ್ರಕ್ಕೆ ಮಣ್ಣು ತುಂಬಿಸುವುದು ಮತ್ತು ಕಾಂಡ್ಲಾ ಗಿಡಗಳ ನಾಶ ಮಾಡುವಂತ ಅತ್ಯಂತ ಅವೈಜ್ಞಾನಿಕ ಮತ್ತುಪರಿಸರ ಹಾಳುಗೆಡಹುವ ಕಾಮಗಾರಿ ರಾಜರೋಷವಾಗಿ ನಡೆಯುತ್ತಿದೆ.

Bharat Jodo Yatra: ಡಿಸಂಬರಿನಲ್ಲಿ 2 ನೇ ಹಂತದ ಭಾರತ್​ ಜೋಡೋ ಯಾತ್ರೆ

ಯಾವುದೇ ನದಿಗೆ ಶಾಶ್ತವಕ ತಡೆಗೋಡೆ ನಿರ್ಮಾಣ ಮಾಡುವಂತಿಲ್ಲ. ಸಿಆರ್ ಝೆಡ್ ವಲಯದಲ್ಲಿ ಇಂತಹ ಕಾಮಗಾರಿಗಳನ್ನು ನಡೆಸುವುದು ಕಾನೂನು ಉಲ್ಲಂಘನೆ ಆಗುತ್ತದೆ. ನದಿ ಪಾತ್ರಕ್ಕೆ ಪೊಕ್ ಲೈನರುಗಳಂತಹ ಬೃಹತ್ ಭೂಮಿ ಸಮತಟ್ಟುವ ಮಾಡುವ ಯಂತ್ರಗಳನ್ನು ಇಳಿಸುವುದೇ ಪರಿಸರ ನಿಯಮದ ಉಲ್ಲಂಘನೆ ಆಗುತ್ತದೆ. ಗುತ್ತಿಗೆದಾರರು ನೇತ್ರಾವತಿ ನದಿಗೆ ಇಳಿಸಿ ನದಿ ಪಾತ್ರದ ಸಹಜತೆಯನ್ನು ಕೆಡಹುವ ಕಾಮಗಾರಿ ನಡೆಸುತ್ತಿದ್ದಾರೆ. ಕೆಲವೆಡೆ ನದಿಗೆ ಮಣ್ಣು ತುಂಬಿಸಲಾಗುತ್ತಿದೆ.

ಮೋರ್ಗನ್ ಗೇಟ್ ಪರಿಸರದ ನೇತ್ರಾವತಿ ನದಿ ತೀರದಲ್ಲಿ

ನದಿ ಪಾತ್ರಕ್ಕೆ ಮಣ್ಣು ತುಂಬಿಸಿ ರಸ್ತ್ ಮಾಡುವುದಾಗಲಿ ಇನ್ಯಾವುದೇ ಕಾಮಗಾರಿಯನ್ನು ಮಾಡುವಂತಿಲ್ಲ.

AIDS HIV: ಏಡ್ಸ್ ರೋಗ​ ಸೋಂಕಿತರಲ್ಲಿ ಕರ್ನಾಟಕ 9ನೇ ಸ್ಥಾನ ! ಏಡ್ಸ್ ಹರಡುವಿಕೆ ಇಳಿಕೆ

Leave a Reply

Your email address will not be published. Required fields are marked *