Ramanatha Rai ಬಿ.ರಮಾನಾಥ ರೈ ಅವರನ್ನು ವೇದಿಕೆಗೆ ಆಹ್ವಾನಿಸಿದ ಹರಿಪ್ರಸಾದ್

Ramanatha Rai ಬಿ.ರಮಾನಾಥ ರೈ ಅವರನ್ನು ಸರಕಾರಿ ಕಾರ್ಯಕ್ರಮದ ವೇದಿಕೆಗೆ ಆಹ್ವಾನಿಸಿದ ಬಿ.ಕೆ.ಹರಿಪ್ರಸಾದ್
ಬಂಟ್ವಾಳ, ಮಾ. 9: ಬಂಟ್ವಾಳದಲ್ಲಿ ಇಂದು ನಡೆದ ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದ ವೇದಿಕೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರನ್ನು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರನ್ನು ಆಹ್ವಾನಿಸಿದ ವಿದ್ಯಮಾನ ನಡೆಯಿತು.
ಹರಿಪ್ರಸಾದ್ ಅವರು ವೇದಿಕೆ ಏರಿದ ಕೂಡಲೇ ರಮಾನಾಥ ರೈ ಅವರನ್ನು ಆಹ್ವಾನಿಸಿದಾಗ ಜನರು ಕರತಾಡನ, ಹರ್ಷೋದ್ಘಾರದಿಂದ ಅನುಮೋದಿಸಿದರು.
ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದರು ಕೂಡ ರಮಾನಾಥ ರೈ ಅವರನ್ನು ಸಮಾರಂಭದ ವೇದಿಕೆಗಳಿಂದ ದೂರ ಇರಿಸಲಾಗುತಿತ್ತು.
ರಮಾನಾಥ ರೈ ಅವರನ್ನು ವೇದಿಕೆ ಆಹ್ವಾನಿಸಿದಾಗ ಮಾತನಾಡಿದ ಬಿ.ಕೆ. ಹರಿಪ್ರಸಾದ್ ಅವರು, ಇಂತಹ ಜನಪರ ಯೋಜನೆಗಳನ್ನು ಸರಕಾರದ ಬಂದಾಗ ಜಾರಿ ಮಾಡಬೇಕೆಂದು ಪಕ್ಷದ ವೇದಿಕೆಯಲ್ಲಿ ಒತ್ತಾಯಿಸಿದವರು ರಮಾನಾಥ ರೈ ಎಂದು ಹರಿಪ್ರಸಾದ್ ಹೇಳಿದರು.

ಈ ಸಂದರ್ಭದಲ್ಲಿ  ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಗೇರುಬೀಜ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷೆ ಮಮತಾ ಗಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *