ಪ್ರಿಯಾಂಕ್ ಖರ್ಗೆ ಇಂದಿನ ಡಿಫ್ಯಾಕ್ಟೊ ಸಿಎಂ, ಸತೀಶ್ ಜಾರಕಿ ಹೊಳಿ ಮುಂದಿನ ಸಿಎಂ

 

ಮಂಗಳೂರು, ಅಕ್ಟೋಬರ್ 30- ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬದಲಾಗುತ್ತದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಚರ್ಚೆ ಆಗುತ್ತಿರುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರೀಯಾಂಕ್ ಖರ್ಗೆ ಮತ್ತು ಲೋಕೊಪಯೋಗಿ PWD ಇಲಾಖೆ ಸಚಿವ ಗೋಕಾಕದ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿಗಳಾಗಿದ್ದು, ಸಿದ್ದರಾಮಯ್ಯ ಸರಕಾರ ಪತನಗೊಂಡಾಗ ಮುಖ್ಯಮಂತರಿಯಾಗಲು ತುದಿಗಾಲ ಮೇಲೆ ನಿಂತಿದ್ದಾರೆ ಎಂಬುದು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿದೆ.

20 ವರ್ಷಗಳ ಹಿಂದೆಯೇ ತಾನು ಮುಖ್ಯಮಂತ್ರಿಯಾಗಲು ಇನ್ನು 15 ವರ್ಷ ಕಾಯುತ್ತೇನೆ ಎಂದುಬಹಿರಂಗ ಹೇಳಿಕೆ ನೀಡಿದ್ದರು ಸತೀಶ್ ಜಾರಕಿಹೊಳಿ. ದಲಿತರು ಮುಖ್ಯಮಂತ್ರಿ ಆಗಬೇಕೆಂದು ಕೂಡ ಅವರು ಹೇಳಿದ್ದರು. ಅವರ ಪ್ರಕಾರ ದಲಿತರೆಂದರೆ  ಕೇವಲ ಪರಿಶಿಷ್ಟ ಜಾತಿಯವರಲ್ಲ ಪರಿಶಿಷ್ಟ ಪಂಗಡದವರು ಕೂಡ ಸೇರುತ್ತಾರೆ.

ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ವ್ಯಕ್ತಿ ಸಿದ್ದರಾಮಯ್ಯ ಎಂಬ ಶಕ್ತಿಯಾಗಿ ಬೆಳೆಯ ಬೇಕಾಗದರೆ ಅಂದಿನ ಹಿಂದುಳಿದ ವರ್ಗದ ಮತ್ತು ಈಡಿಗ ಮುಖಂಡ ಮಾಜಿ ಕೇಂದ್ರ ಸಚಿವ ಆರ್. ಎಲ್ ಜಾಲಪ್ಪ ಆದಿಯಾಗಿ ಅಬಕಾರಿ ಲಾಬಿಯ ಕೊಡುಗೆ ಎಷ್ಟಿದೆಯೊ ಅಷ್ಟೇ ಕೊಡುಗೆ ಹಿಂದುಳಿದ ವರ್ಗದ ಮುಖಂಡ, ಉದ್ಯಮಿ ನಿಜ ಅರ್ಥದಲ್ಲಿ  ಅಹಿಂದ ಮುಖಂಡರಾಗಿದ್ದ ಸಕ್ಕರೆ ದೊರೆ ಸತೀಶ್ ಜಾರಕಿ ಹೊಳಿ ಅವರ ಕೊಡುಗೆ ಕೂಡ ಇದೆ ಎಂಬದನ್ನು ಸಿದ್ದರಾಮಯ್ಯ ಮತ್ತವರನ್ನು ಸುತ್ತುವರಿದಿರುವ ಪವರ್ ಬ್ರೋಕರುಗಳು ತಿಳಿದಿರಬೇಕು.  ರಾಜ್ಯದ ಜನತೆಗೆ ಇದು ಗೊತ್ತಿರುವ ವಿಚಾರ. ಭಯಂಕರ ನೆನಪಿನ  ಶಕ್ತಿ ಹೊಂದಿರುವ ಸಿದ್ದರಾಮಯ್ಯ ಅವರಿಗೆ ಎರಡನೇ ಬಾರಿ ಮುಖ್ಯಮಂತ್ರಿ ಪಟ್ಟ ಏರುವಾಗ ಮರೆತು ಹೋಗಿರಲೂ ಬಹುದು.

ನಿಮ್ಮ ಪ್ರಕಾರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನ ಹುಂಡಿ ಸಿದ್ದರಾಮಯ್ಯ ಆಗಿರಬಹುದು. ನಿಜಕ್ಕು ಹೌದು ಮುಖ್ಯಮಂತ್ರಿಯಾಗಿ ರಾಜ್ಯಪಾಲರಿಂದ  ಪ್ರಮಾಣ ವಚನ ಸ್ವೀಕರಿಸಿ ಮುಖ್ಯಮಂತ್ರಿ ಪದವಿಯನ್ನು ವಹಿಸಿಕೊಂಡಿರುವುದು ಕೂಡ ಹೌದು. ಆದರೆ,ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರಾಜ್ಯದ ಮುಖ್ಯಮಂತ್ರಿ ಪ್ರಿಯಾಂಕ್ ಖರ್ಗೆ ಎಂದೇ  ಹೇಳಲಾಗುತ್ತಿದೆ. ಹೌದು ಅದೇ ಏಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಸುಪುತ್ರ ಪ್ರಿಯಾಂಕ್ ಖರ್ಗೆ. ಅವರೇ de facato Chief Minister ಎನ್ನಲಾಗುತ್ತಿದೆ.

ಮುಂದಿನ ಮುಖ್ಯಮಂತ್ರಿಯಾಗಿ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬುದು ಡಿ.ಕೆ.ಶಿ. ಬೆಂಬಲಿಗರು ಮತ್ತು ಸಾರ್ವಜನಿಕರು ತಪ್ಪು ತಿಳಿದುಕೊಂಡಿದ್ದಾರೆ. ಈಗ ಮಖ್ಯಮಂತ್ರಿ ಹುದ್ದೆಗಾಗಿ ಪ್ರಿಯಾಂಕ್ ಖರ್ಗೆ ಮತ್ತು ಸತೀಶ್ ಜಾರಕಿ ಹೊಳಿ ಪ್ರತ್ಯೇಕವಾಗಿ ರಾಜಕೀಯ ತಂತ್ರಗಳನ್ನು ನಡೆಸಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ.

ಡಿ.ಕೆ.ಶಿವಕುಮಾರ್ ಅವರಿಗೆ ನೈತಿಕ ಬೆಂಬಲ ನೀಡಿದ್ದ ಹಿರಿಯ ಕಾಂಗ್ರೆಸ್ ಮುಖಂಡ , ಅಹಿಂದ ವರ್ಗದ ನೈಜ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಕೂಡ ನೀಡದೆ ಅವರನ್ನು ಮೂಲೆಗುಂಪು ಮಾಡಲು ಯತ್ನಿಸಿರುವುದು ಡಿ.ಕೆ.ಶಿವಕುಮಾರ್ ಅವರಿಗೂ ಕೂಡ ಹಿನ್ನಡೆಯಾಗಿದೆ.

ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಗಳು ನಡೆಯುತ್ತಿದೆ ಎಂಬುದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಕಾಂಗ್ರೆಸ್ ಪಕ್ಷದ ಒಳ ಜಗಳದಿಂದಲೇ ಸರಕಾರ ಪತನ ಆಗುತ್ತದೆ ಎಂದುಹೇಳಿಕೆ ನೀಡಿರುವುದು ರಾಜಕೀಯ ಬದಲಾವಣೆಯನ್ನು ಖಚಿತ ಪಡಿಸಿದೆ.

ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ  ಈ ಮೂರು ಮಂದಿಯ ಗುಂಪುಗಳಿದ್ದು, ಯಾವುದೇ ಗುಂಪು ಸರಕಾರದಿಂದ ಹೊರಬರಬಹುದು. ಆಗ ಸರಕಾರ ಪತನ ಆಗುತ್ತದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿರುವುದು ಮುಂದೆ ನಡೆಯ ಬಹುದಾದ ರಾಜಕೀಯ ಭವಿಷ್ಯದಂತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ, ಸಿದ್ದರಾಮಯ್ಯರಿಗಾಗಿಯೇ ಹೆಲಿಕಾಪ್ಟರ್ ಖರೀದಿಸಿದ್ದ ಸತೀಶ್ ಜಾರಕಿಹೊಳಿ ಮುನಿಸಿಕೊಂಡಿರುವುದು ಇಂದು ಮೊನ್ನೆಯಲ್ಲ. ಯಾವಾಗಲೊ ಮುನಿಸಿಕೊಂಡಿದ್ದರು ಹಿಂದುಳಿದ ವರ್ಗಗಳ ಎಳಿಗೆಗಾಗಿ ಸುಮ್ಮನಿದ್ದರು. ಈಗ ಅಹಿಂದ, ಹಿಂದುಳಿದ ವರ್ಗ ಎಲ್ಲ ಬೂಟಾಟಿಕೆ ಎಂದು ಗೊತ್ತಾದ ಮೇಲೆ ತಮ್ಮ  ಅಸಮಾಧಾನವನ್ನು ಬಹಿರಂಗಗೊಳಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯದಲ್ಲಿ ಮಹತ್ತರವಾದ ರಾಜಕೀಯ ಬದಲಾವಣೆ ಈಗಲಿರುವುದು ನಿಶ್ಚಿತ.

 

Leave a Reply

Your email address will not be published. Required fields are marked *