ಮಂಗಳೂರು, ನ. 13- ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶದಲ್ಲಿ ಪೊರ್ಕ್ ಮಾಂಸ Pork meat (ಹಂದಿ ಮಾಂಸ) ದರ ಹೆಚ್ಚಳವಾಗಿದ್ದು, ಇದಕ್ಕೆ ಕರಾವಳಿಯಲ್ಲಿ ಹಂದಿ ಸಾಕಾಣೆ ಉದ್ಯಮ ಹಿನ್ನಡೆಯಾಗಿರುವುದೇ ಕಾರಣವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯ ವರದಿ ಮಾಡಿದೆ.
ಪೊರ್ಕ್ ಮಂಗಳೂರು ಕೊಡಗು, ಮಂಗಳೂರು, ಉಡುಪಿಸ ಕುಂದಾಪುರ, ಪುತ್ತೂರು ಗೋವಾ ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ನಾನ್ ವೆಜ್ ಖಾದ್ಯವಾಗಿದ್ದು, ಕರಾವಳಿಯಲ್ಲಿ ಅಂದಾಜು ಶೇಕಡ 15ರಿಂದ 20 ರಷ್ಟು ಪೋರ್ಕ್ ಬೆಲೆ ಹಚ್ಚಳವಾಗಿದೆ. ಇಂದು ಪೊರ್ಕ್ ಮಾಂಸ ಪೂರೈಸುವವರ ಕಡೆಯಿಂದ ಆಗಿರುವ ದರ ಹೆಚ್ಚಳವಾಗಿದ್ದು, ಅಂತಿಮವಾಗಿ ಗ್ರಾಹಕರಿಗೆ ತಲುಪುವ ವೇಳೆಗೆ ಹಾಗೂ ಹೊಟೇಲುಗಳ ಮೇನುಗಳಲ್ಲಿ ದರ ಇನ್ನಷ್ಟು ಹೆಚ್ಚಳವಾಗಲಿದೆ.
ಇದನ್ನು ಓದಿಃ
Rashmika Mandanna viral video:ರಶ್ಮಿಕಾ ಮಂದಣ್ಣ ಅರೆಬೆತ್ತಲೆ ಫೇಕ್ ವಿಡಿಯೋ ವೈರಲ್
ಟೈಮ್ಸ್ ಆಫ್ ಇಂಡಿಯ ಆಂಗ್ಲ ಪತ್ರಿಕೆಯ ಮಂಗಳೂರಿನ ಹಿರಿಯ ವರದಿಗಾರ ಕೆವಿನ್ ಮಂಡೋನ್ಸ ಅವರು ವರದಿ ಮಾಡಿರುವ ಪ್ರಕಾರ ಪೋರ್ಕ್ ದರ ಒಂದು ಕಿಲೋಗೆ 240 ರೂಪಾಯಿಂದ ಒಂದು ಕಿಲೋಗೆ 280 ರೂಪಾಯಿ ತನಕ ಹೆಚ್ಚಳವಾಗಲಿದೆ. ಇದು ಕಳೆದ ಹಲವು ವರ್ಷಗಳಿಂದ ಆಗಿರುವ ಅತ್ಯಂತ ದೊಡ್ಡ ಪ್ರಮಾಣದ ದರ ಏರಿಕೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಕಳೆದ ಐದಾರು ತಿಂಗಳಿನಿಂದ ಸ್ಥಳೀಯ ಮಂಗಳೂರು ಪೊರ್ಕ್ ಮಾಂಸದ ಪೂರೈಕೆ ಕಡಿಮೆಯಾಗಿದೆ. ಏಕೆಂದರೆ, ಪೊರ್ಕ್ ಮಾಂಸದ ಉತ್ಪಾದನೆ ಕುಸಿದಿರುತ್ತದೆ. ಪೂರೈಕೆ ಕಡಿಮಾಯಯಯಾಗಿದೆ ಇದರೊಂದಿಗೆ ಉತ್ಪಾದನ ವೆಚ್ಚ ಹೆಚ್ಚಳವಾಗಿದ್ದು, ಸಾಗಾಟ ವೆಚ್ಚ, ಆಹಾರ ವೆಚ್ಚ ಎಲ್ಲವೂ ಹೆಚ್ಚಳವಾಗಿರುವುದು ದರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರದಿ ಹೇಳಿದೆ.
ಹಂದಿ ಮಾಂಸ ದರ ಹೆಚ್ಚಳದ ಸುದ್ದಿಯನ್ನು ನ್ಯೂಸ್ ಕರ್ನಾಟಕ ವೆಬ್ ಸೈಟ್ ಕೂಡ ಪ್ರಕಟಿಸಿದೆ.
2019 ರಿಂದ ಹಂದಿ ಸಾಕಾಣೆ ಮಾಡುವವರು ದರ ಏರಿಕೆ ಮಾಡಿರಲಿಲ್ಲ ಎಂದು ಹೇಳಲಾಗಿದ್ದು, ಆ ಕಾಲದಲ್ಲಿ ಕಡಿಮೆ ಪ್ರಮಾಣದ ದರ ಏರಿಕೆ ಮಾಡಲಾಗಿತ್ತು.
ಹಂದಿ ಸಾಕಾಣೆಯಿಂದ ಹಲವರು ಹಿಂದೆ ಸರಿದಿದ್ದು, ಕಾಯಿಲೆ ಕಾರಣಕ್ಕಾಗಿ ಪಿಗ್ಗರಿಗಳನ್ನು ಬಂದ್ ಮಾಡಿದ್ದಾರೆ. ಪ್ರಾಯಕ್ಕೆ ಬಂದ ಹಂದಿಗಳನ್ನು ಮಾರಟ ಮಾಡಿ. ಹಂದಿ ಮರಿಗಳನ್ನು ಈಶಾನ್ಯ ರಾಜ್ಯಗಳಿಗೆ ಸಾಗಾಟ ಮಾಡಿದ್ದಾರೆ ಎನ್ನಲಾಗಿದೆ. ಹಂದಿ ಮಾಂಸ ಪೂರೈಕೆ ಮತ್ತೆ ಯಥಾಸ್ಥಿತಿಗೆ ಬರಲು ಇನ್ನಾರು ತಿಂಗಳು ಅಥವ ಒಂದು ವರ್ಷ ಬೇಕಾಗಬಹುದು.
ಹಂದಿ ಸಾಕಾಣೆ ಅತ್ಯಂತ ಲಾಭದಾಯಕ ಉದ್ಯಮವಾಗಿದೆ.