Police Officer Death ಯಾದಗಿರಿ ನಗರ ಠಾಣೆ ಪಿಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವು(Police Officer Death )
ಯಾದಗಿರಿ ಶಾಸಕ ಹಾಗೂ ಅವರ ಪುತ್ರನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ
ಯಾದಗಿರಿ ಶಾಸಕ ಹಾಗೂ ಅವರ ಪುತ್ರನಿಂದ ಹಣದ ಬೇಡಿಕೆಯಿತ್ತು ಎಂಬ ಆರೋಪವಿದೆ
ಪರಶುರಾಮ್ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ ರಾಜ್ಯ ಸರ್ಕಾರ
ಬೆಂಗಳೂರು ಆಗಸ್ಟ್ 3: ಯಾದಗಿರಿಯ (yadagiri) ಸೈಬರ್ ಠಾಣೆಯಲ್ಲಿ (Cyber Police) ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಪರಶುರಾಮ್ ಅನುಮಾನಾಸ್ಪದ ರೀತಿಯಲ್ಲಿ(Police Officer Death) ಸಾವನ್ನಪ್ಪಿದ್ದು, ಕಾಂಗ್ರೆಸ್ ಸರಕಾರಕ್ಕೆ ಹೊಸ ಕಳಂಕ ತಟ್ಟಿದೆ.
ಸಬ್ ಇನ್ಸ್ ಪೆಕ್ಟರ್ ಪರಶುರಾಮ್ ಸಾವಿನ ಪ್ರಕರಣವನ್ನು(Police Officer Death ) ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ವಹಿಸಿ ಆದೇಶಿಸಿದೆ.
ರಾಾಜಕಾರಣಿಗಳ ಒತ್ತಡ, ಮಾನಸಿಕ ಕಿರುಕುಳದಿಂದ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಯಾದಗಿರಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಎಸ್ ಐ) ಪರಶುರಾಮ್ ಅವರ ಸಾವಿಗೆ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಅವರ ಪುತ್ರ ಸನ್ನಿಗೌಡ ಕಾರಣ ಎಂದು ಅವರ ಪತ್ನಿ ಮತ್ತು ಕುಟುಂಬಸ್ಥರು ಗಂಭೀರ ಆರೋಪ ಮಾಡಿ ಲಿಖಿತ ದೂರು ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ.
Police Officer Death 30 ಲಕ್ಷ ರೂಪಾಯಿ ಲಂಚ ಡಿಮ್ಯಾಂಡ್
ಯಾದಗಿರಿಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಪರಶುರಾಮ್ ಅವರನ್ನು ಆರು ತಿಂಗಳಲ್ಲೇ ಯಾದಗಿರಿಯ ಸೈಬರ್ ಠಾಣೆಗೆ ವರ್ಗಾಯಿಸಲಾಗಿತ್ತು. ಯಾದಗಿರಿಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಮುಂದುವರಿಯಲು ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಅವರ ಪುತ್ರ ಸನ್ನಿಗೌಡ 30 ಲಕ್ಷ ರೂಪಾಯಿ ಲಂಚ ಕೇಳಿದ್ದರು. ಇದರಿಂದ ವಿಚಲಿತರಾದ ಪೊಲೀಸ್ ಅಧಿಕಾರಿ ಅಧಿಕ ರಕ್ತದ ಒತ್ತಡದಿಂದ ಹೃದಯಾಘವಾಗಿ ಸಾವನಪ್ಪಿದರು ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಗೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಉಳಿಗಾಲವಿಲ್ಲದಂತಾಗಿದ್ದು, ಈ ಕೂಡಲೇ ಶಾಸಕ ಚೆನ್ನಾರೆಡ್ಡಿ ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು ಮತ್ತು ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು ಎಂದು ಸಿಎಂ ಸಿದ್ಧರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಒತ್ತಾಯಿಸಿದ್ದರು.
ಈ ಬೆನ್ನಲ್ಲೇ ರಾಜ್ಯ ಸರ್ಕಾರವು ಯಾದಗಿರಿಯ ಸೈಬರ್ ಠಾಣೆಯಲ್ಲಿ ಪಿಎಸ್‌ಐ ಆಗಿದ್ದಂತ ಪರಶುರಾಮ್ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಅವರ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ವಹಿಸಿ ಆದೇಶಿಸಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ ಪ್ರಾಮಾಣಿಕ ದಲಿತ ಅಧಿಕಾರಿ ಚಂದ್ರಶೇಖರನ್ ಅವರನ್ನು ಬಲಿ ಪಡೆದ ಕಾಂಗ್ರೆಸ್ ಸರ್ಕಾರ, ಈಗ ವರ್ಗಾವಣೆಗಾಗಿ ಲಂಚದ ಬೇಡಿಕೆ ಇಟ್ಟು ಮತ್ತೊಬ್ಬ ದಲಿತ ಅಧಿಕಾರಿ ಯಾದಗಿರಿಯ ಪಿಎಸ್‌ಐ ಪರಶುರಾಮ್ ಅವರನ್ನ ಬಲಿ ಪಡೆದುಕೊಂಡಿದೆ ಅಂತ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದರು.
ಸಿಎಂ ಸಿದ್ಧರಾಮಯ್ಯನವರೇ, ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ, ಮುಖ್ಯಮಂತ್ರಿಗಳು, ಸಚಿವರು ಭ್ರಷ್ಟಾಚಾರಕ್ಕೆ ಇಳಿದಿರುವಾಗ ಇನ್ನು ಶಾಸಕರು ಸುಮ್ಮನಿರುತ್ತಾರೆಯೇ? ಎಂದು ಪ್ರಶ್ನಿಸಿದ್ದರು.
ಯಾದಗಿರಿ ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣ ವಿಚಾರವಾಗಿ ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲೇ ದಲಿತರ ಹತ್ಯೆಗಳು ಹೆಚ್ಚಾಗುತ್ತಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಅಧಿಕಾರಿ ಆತ್ಮಹತ್ಯೆಗೆ ಶರಣಾದ. ಈಗ ಪಿಎಸ್ಐ ಪರಶುರಾಮ ಮೃತಪಟ್ಟಿದ್ದಾನೆ. ಪಿಎಸ್ಐ ಸಾವಿಗೆ ಕಾಂಗ್ರೆಸ್ ಶಾಸಕರ ಭ್ರಷ್ಟಾಚಾರವೇ ಕಾರಣ. ಪೊಲೀಸ್ ಅಧಿಕಾರಿಗಳೇ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ನೀಡಿದರೆ ಸಾಲದು. ಸಿಎಂ ರಾಜೀನಾಮೆ ಕೊಟ್ಟರೆ ಡಿಕೆ ಶಿವಕುಮಾರ್ ಸಿಎಂ ಆಗಲು ಅನುಕೂಲವಾಗುತ್ತೆ. ಹಾಗಾಗಿ ವಿಧಾನಸಭೆಯನ್ನು ವಿಸರ್ಜನೆ ಮಾಡಬೇಕು. ಮತ್ತೆ ಚುನಾವಣೆಗೆ ಹೋಗೋಣ ಎಂದು ಹೇಳಿದ್ದಾರೆ.
Police Officer Death ಚಿತ್ತಾಪುರ ರಸ್ತೆಯಲ್ಲಿ ದಿಢೀರ್ ಧರಣಿ
ಈ ಮಧ್ಯೆ,ಘಟನೆ ಸಂಬಂಧ ಪ್ರಕರಣ ದಾಖಲಿಸದ ಪೊಲೀಸ್ ಇಲಾಖೆ ಧೋರಣೆ ಖಂಡಿಸಿ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆ ಎದುರಿಗೆ ಚಿತ್ತಾಪುರ ರಸ್ತೆಯಲ್ಲಿ ದಿಢೀರ್ ಧರಣಿ ನಡೆಸಿ ರಸ್ತೆ ತಡೆ ನಡೆಸಿದರು.
ಯಾದಗಿರಿ ಪಿಎಸ್ಐ ಪರಶುರಾಮ ಅವರ ಅನುಮಾನಸ್ಪದ ಸಾವು ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡಿಲ್ಲ. ಡೆತ್‌ನೋಟ್ ಬರೆದಿಟ್ಟಿಲ್ಲ. ವರ್ಗಾವಣೆ ವಿಚಾರಕ್ಕೆ ನೊಂದಿದ್ದರು ಎಂದು ಆತನ ಪತ್ನಿ ದೂರು ಕೊಟ್ಟಿದ್ದಾರೆ. ಅವರ ಆರೋಪವನ್ನು ಪರಿಗಣಿಸುತ್ತೇನೆ. ಆ ಆಯಾಮದಲ್ಲಿಯು ತನಿಖೆ ನಡೆಯಲಿದೆ. ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್‌ನವರು ಪಾದಯಾತ್ರೆಯನ್ನು ಕಾನೂನು ಬಾಹಿರವಾಗಿ ಮಾಡುವುದಿಲ್ಲ. ಶಾಂತಿಯುತವಾಗಿ ನಡೆಸುವುದಾಗಿ ಕೇಳಿಕೊಂಡಿದ್ದರಿಂದ ಸಿಎಂ ಜೊತೆ ಚರ್ಚಿಸಿ ಅವಕಾಶ ನೀಡಿದ್ದೇವೆ. ಯಾವುದೇ ರೀತಿಯ ಅಹಿತಕರ ಘಟನೆಗಳಾಗಬಾರದು, ಜನರಿಗೆ ತೊಂದರೆಗಳಾಗದಂತೆ ನೋಡಿಕೊಳ್ಳುವಂತೆ ಕಂಡಿಷನ್ ಹಾಕಲಾಗಿದೆ ಎಂದು ತಿಳಿಸಿದರು.
ಏನಿದು ಪ್ರಕರಣ?
ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪಿಎಸ್ಐ ಪರಶುರಾಮ್ (35) ಅವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಆ. 2ರಂದು ಮಧ್ಯಾಹ್ನ ಅವರು ಊಟ ಮಾಡಿ ಪೊಲೀಸ್ ವಸತಿ ಗೃಹದಲ್ಲಿರುವ ತಮ್ಮ ರೂಮಿನಲ್ಲಿ ಮಲಗಿದ ನಂತರ ಪುನಃ ಮೇಲೆದ್ದಿಲ್ಲ. ವಸತಿಗೃಹದಲ್ಲಿದ್ದ ಇತರ ಪೊಲೀಸರು ಅವರನ್ನು ಮಾತನಾಡಿಸಿದಾಗ ಅವರು ಅಸುನೀಗಿರುವುದು ತಿಳಿದುಬಂದಿತ್ತು.