Police Arrest: ಅನೈತಿಕ ಪೊಲೀಸ್ ಗಿರಿ ಇಬ್ಬರ ಬಂಧನ

Mangalore Police Arrest ಬೈಕಿನಲ್ಲಿ‌ ಸಂಚರಿಸುತ್ತಿದ್ದ ಭಿನ್ನ ಧರ್ಮದ ಸಹೋದ್ಯೋಗಿಗಳನ್ನು ಬೈಕ್‌ನಲ್ಲಿ ಬಂದ ಇಬ್ಬರು ತಡೆದು ನಿಲ್ಲಿಸಿದ ಅನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಅಕ್ಷಯ್ ರಾವ್ ಮತ್ತು ಶಿಬಿನ್ ಪಡಿಕ್ಕಲ್ ಬಂಧಿತರು.

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿ

ಇಬ್ಬರು ಹಿಂದುತ್ವವಾದಿಗಳು ಅನ್ಯ ಧರ್ಮಕ್ಕೆ ಸೇರಿದ ಯುವಕ, ಯುವತಿಗೆ  ಕಿರುಕುಳ ನೀಡಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ.

ಸೆಲ್‌ಫೋನ್‌ ರಿಪೇರಿ ಮಾಡಿಸಿಕೊಳ್ಳಲು ಅಂಗಡಿಯೊಂದಕ್ಕೆ ಹೋಗಿದ್ದ ವೇಳೆ ಯುವಕ, ಯುವತಿಗೆ ಭಜರಂಗ ದಳಕ್ಕೆ ಸೇರಿದ ಆರೋಪಿಗಳು ಕಿರುಕುಳ ನೀಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

ಕಿರುಕುಳಕ್ಕೆ ಒಳಗಾದವರು ಸಹೋದ್ಯೋಗಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಹೊಯ್ಸಳ ತಂಡ ಸ್ಥಳಕ್ಕೆ ಧಾವಿಸಿದೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದರು.

ಸಾಕು ನಾಯಿಗಳಿಗೆ ಪರವಾನಗಿ ಕಡ್ಡಾಯ

ಕರಾವಳಿಯ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಆಗಸ್ಟ್ ತಿಂಗಳಲ್ಲಿ   ಉಡುಪಿ ಜಿಲ್ಲೆಯ ಕಾರ್ಕಳ (Karkala, Udupi) ಕುಂಟಲ್ಪಾಡಿಯಲ್ಲಿ ನೈತಿಕ ಪೊಲೀಸ್‌ಗಿರಿ ನಡೆಸಲಾಗಿತ್ತು. ಸಂತೋಷ್ ನಂದಳಿಕೆ, ಕಾರ್ತಿಕ ಪೂಜಾರಿ, ಸುನೀಲ್ ಮೂಲ್ಯ, ಸಂದೀಪ್ ಪೂಜಾರಿ, ಸುಜಿತ್ ಸಫಲಿಗ ಎಂಬವರನ್ನ ಬಂಧಿಸಲಾಗಿದತ್ತು.

ಕಾರಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದ ವೈದ್ಯರು ಹಾಗೂ ಪ್ರಾಧ್ಯಾಪಕರನ್ನು (Doctors And Professor) ಅಡ್ಡಗಟ್ಟಿ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ವಿಭಿನ್ನ ಕೋಮಿಗೆ ಸೇರಿದವರು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಆವಾಚ್ ಹಾಕಿದ್ದರಂತೆ. ಕಾರಿನಲ್ಲಿದ್ದ ಮಹಿಳೆ ನೀಡಿದ ದೂರಿನ (Complaint) ಮೇಲೆ ಐವರನ್ನ ಬಂಧಿಸಲಾಗಿದೆ.
ಮಂಗಳೂರಿನ ಹೆಸರಾಂತ ಕಾಲೇಜಿನ ವೈದ್ಯರ ತಂಡ ಹಾಗೂ ಇಬ್ಬರು ಮಹಿಳಾ ಪ್ರೊಫೆಸರ್ ಒಂದೇ ಕಾರ್​​ನಲ್ಲಿ ಪ್ರಯಾಣಿಸುತ್ತಿದ್ದರು. ಎಲ್ಲರೂ ಶೃಂಗೇರಿಗೆ ತೆರಳಿ ಕಾರ್ಕಳದ ಮೂಲಕ ವಾಪಸ್ ಆಗುತ್ತಿದ್ರು. ಈ ವೇಳೆ ಮಾಳ ಎಸ್​ಕೆ ಬಾರ್ಡರ್ ಬಳಿಯಿಂದ ಹಿಂಬಾಲಿಸಿ ಬಂದ ಐದು ಜನರ ತಂಡ ಕಾರ್ ಅಡ್ಡಗಟ್ಟಿದ್ದಾರೆ. ಕುಂಟಲ್ಪಾಡಿ ಬಳಿ ಕಾರನ್ನು ಅಡ್ಡಗಟ್ಟಿ ವಿಭಿನ್ನ ಕೋಮಿಗೆ ಸೇರಿದವರು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ನಿಂದಿಸಿದ್ದಾರೆ.

Leave a Reply

Your email address will not be published. Required fields are marked *