Nov.26 Milk Day, ರಾಷ್ಟ್ರೀಯ ಕ್ಷೀರ ದಿನ

ಭಾರತ ದೇಶದಲ್ಲಿ ಕ್ಷೀರ ಕ್ರಾಂತಿಯನ್ನು ಮಾಡಿದ ಡಾ| ವರ್ಗೀಸ್ ಕುರಿಯನ್‌ ಅವರ ಹುಟ್ಟಿದ ದಿನವಾದ ನವೆಂಬರ್ 26ರಂದು ರಾಷ್ಟ್ರೀಯ ರಾಷ್ಟ್ರೀಯ ಕ್ಷೀರ ದಿನಾಚರಣೆ (ಹಾಲು ದಿನವಾಗಿ) ಭಾರತದಾದ್ಯಂತ ಪ್ರತಿ ವರ್ಷ ಆಚರಿಸಲಾಗುತ್ತಿದೆ.

ಭಾರತದ ಕ್ಷೀರಕ್ರಾಂತಿಯ ಹರಿಕಾರ ಡಾ.ವರ್ಗೀಸ್ ಕುರಿಯನ್‌ ಅವರು ಮಿಚಿಗನ್ ವಿಶ್ವವಿದ್ಯಾನಿಲಯದಲ್ಲಿ ಮ್ಯಾಕಾನಿಕಲ್ ವಿಭಾಗದಲ್ಲಿ ಸ್ನಾತಕೋತ್ತರ ಇಂಜಿನಿಯರಿಂಗ್ ಪದವಿಯನ್ನು 1948ರಲ್ಲಿ ಪೂರ್ಣಗೊಳಿಸಿದ್ದರು. ನಂತರ ಭಾರತಕ್ಕೆ ಮರಳಿ ಕ್ಷೀರಕ್ರಾಂತಿಗೆ ನಾಂದಿ ಹಾಡಿದರು. ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ತಂತ್ರಜ್ಞಾನ, ಹೊಸ ಆವಿಷ್ಕಾರಗಳು, ಸಾಮಾಜಿಕ ಸಬಲೀಕರಣ, ಅವರ ಅನುಕರಣೀಯ ನಾಯಕತ್ವ, ಸಮರ್ಪಣಾ ಭಾವ, ಬದ್ದತೆಯ ಮೂಲಕ ಡಾ.ಕುರಿಯನ್ ದೇಶದಾದ್ಯಂತ ಸ್ಥಾಪಿತ ಸಹಕಾರಿಗಳಿಂದ ಭಾರತದಲ್ಲಿ ಕ್ಷೀರಕ್ರಾಂತಿಗೆ ಹೊಸ ಆಯೋಮ ನೀಡಿದರು.

ಅಮೇರಿಕಾದಲ್ಲಿ ಡಾ. ವರ್ಗೀಸ್ ಕುರಿಯನ್ ದತ್ತಿ ನಿಧಿ ಸ್ಥಾಪನೆ

ಅವರು ಆಹಾರ ಮತ್ತು ಭದ್ರತೆಯನ್ನು ಹೆಚ್ಚಿಸಿದ್ದು ಮಾತ್ರವಲ್ಲ, ಗ್ರಾಮೀಣ ಭಾರತದ ಕೋಟ್ಯಾಂತರ ಜನರ ಜೀವನೋಪಾಯಕ್ಕೆ ಕಾರಣರಾದರು. ಡಾ.ಕುರಿಯನ್ ಸೆಪ್ಟಂಬರ್ 9, 2012ರಂದು ನಮ್ಮನ್ನು ಅಗಲಿರುತ್ತಾರೆ. ಅವರ ಸಾಧನೆಗಳನ್ನು ಗುರುತಿಸಿ ಮಿಚಿಗನ್ ವಿಶ್ವವಿದ್ಯಾಲಯವು ಕುರಿಯನ್ ಸ್ಮಾರಕ ದತ್ತಿ ಉಪನ್ಯಾಸವನ್ನು ಪ್ರಾರಂಭಿಸಿದೆ.

ಡಾ|| ವರ್ಗೀಸ್ ಕುರಿಯನ್ ದತ್ತಿ ನಿಧಿಯನ್ನು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಮಾನವ ಬಂಡವಾಳ, ಸಾಂಸ್ಥಿಕ ಉದ್ಯಮಶೀಲತೆ, ಸಾಮಾಜಿಕ ಸಬಲೀಕರಣ, ಭಾರತ iತ್ತು  ದಕ್ಷಿಣ ಏಷ್ಯಾದಲ್ಲಿ ತಂತ್ರಜ್ಞಾನ, ಹೊಸ ಆವಿಷ್ಕಾರಗಳ ಕಡೆಗೆ ಡಾ.ವರ್ಗೀಸ್ ಕುರಿಯನ್ ಪರಂಪರೆಯನ್ನು ಮುಂದುವರೆಸುತ್ತದೆ. ಇಂಟರ್‌ನ್‌ಶಿಪ್‌ಗಳು, ಸಮ್ಮೇಳನಗಳು, ಕಾರ್ಯಾಗಾರಗಳು iತ್ತು ತಜ್ಞರ ಸಭೆಗಳು ಸೇರಿದಂತೆ ಅಂತರ್‌ರಾಷ್ಟ್ರೀಯವಾಗಿ ನೀಡಲಾಗುವ ಮಿಚಿಗನ್ ವಿವಿಯ ಕಾರ್ಯಕ್ರಮಗಳಲ್ಲಿ ತರಬೇತಿ ಕಾರ್ಯಕ್ರಮಗಳಲ್ಲಿ ಹಾಜರಾಗಲು ಮಿಚಿಗನ್ ವಿವಿಯ ವಿದ್ಯಾರ್ಥಿಗಳು, ವಿದ್ವಾಂಸರು ಭಾರತ iತ್ತು ದಕ್ಷಿಣ ಏಷ್ಯಾದ ನಿವಾಸಿಗಳನ್ನು ಬೆಂಬಲಿಸಲು ಡಾ.ವರ್ಗೀಸ್ ಕುರಿಯನ್ ನಿಧಿಯನ್ನು ಬಳಸಲಾಗುತ್ತದೆ. ಇದು ಹೊಸ ಶೈಕ್ಷಣಿಕ, ತಂತ್ರಜ್ಞಾನ ವರ್ಗಾವಣೆ iತ್ತು ಸಾಮಾಜಿಕ ಸಬಲೀಕರಣವನ್ನು ಅಭಿವೃದ್ದಿಪಡಿಸಬಹುದು ಮತ್ತು ಭಾರತ iತ್ತು ದಕ್ಷಿಣ ಏಷ್ಯಾದ ವ್ಯಕ್ತಿಗಳಿಂದ ವಿದ್ಯಾರ್ಥಿ ವೇತನಗಳು, ಫೆಲೋಶಿಪ್‌ಗಳು iತ್ತು ಪ್ರಯಾಣದ ಅನುದಾನವನ್ನು ಒದಗಿಸಲು & ಆಹಾರ, ವ್ಯಾಪಾರ ಹಾಗೂ ಸಮಾಜಕ್ಕೆ ಜ್ಞಾನ ತಂತ್ರಜ್ಞಾನಗಳು ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವ, ಹಂಚಿಕೊಳ್ಳುವ ಇತರ ಅಭಿವೃದ್ದಿಶೀಲ ವ್ಯಕ್ತಿಗಳಿಂದ ಒದಗಿಸಬಹುದಾಗಿರುತ್ತದೆ. ಡಾ.ವರ್ಗೀಸ್ ಕುರಿಯನ್‌ರವರ ದತ್ತಿನಿಧಿ ಸ್ಥಾಪನೆಗಾಗಿ ಮಿಚಿಗನ್ ಸ್ಟೇಟ್ ವಿಶ್ವವಿದ್ಯಾನಿಲಯದ ಇಂಟರ್‌ನ್ಯಾಷನಲ್ ಪ್ರೋಗ್ರಾಮ್ಸ್, ಕಾಲೇಜ್ ಆಫ್ ಅಗ್ರಿಕಲ್ಚರ್ iತ್ತು ನ್ಯಾಚುರಲ್ ರಿಸೋರ್ಸಸ್‌ನ ನಿರ್ದೇಶಕರಾದ ಡಾ.ಕರೀಮ್ ಎಂ ಮರೇಡಿಯಾ ಮತ್ತು ಎಂ.ಎಸ್.ಯು ಅಥಾರಿಟಿಸ್‌ರವರ ಸತತ ಪ್ರಯತ್ನದ ಫಲವಾಗಿ ಸ್ಥಾಪನೆಯಾಗಿರುತ್ತದೆ.

Nov.26 Milk Day, ರಾಷ್ಟ್ರೀಯ ಕ್ಷೀರ ದಿನ

ಹೈನುಗಾರಿಕೆ ಮೂಲಕ ರೈತರು ಇವತ್ತು ಬದುಕು ಕಟ್ಟಿಕೊಂಡಿದ್ದಾರೆ, ಇವತ್ತು ಹಾಲಿನ ಡೈರಿಗಳು ಇವೆ, ಹಾಲು ಉತ್ಪಾದಕರ ಒಕ್ಕೂಟಗಳಿವೆ, ಹೈನುಗಾರಿಕೆ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ ಎಂದರೆ ಇದಕ್ಕೆಲ್ಲ ಕಾರಣಕರ್ತರು ಡಾ ವರ್ಗೀಸ್ ಕುರಿಯನ್ ಅವರು. ಜಗತ್ತಿನಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ದೇಶಗಳಲ್ಲಿ ಭಾರತ ಅಗ್ರ ಸ್ಥಾನದಲ್ಲಿ ನಿಂತಿದೆ ಎಂದರೆ ಅದಕ್ಕೆ ಕುರಿಯನ್ ಅವರೇ ಕಾರಣ. ವರ್ಗೀಸ್ ಕುರಿಯನ್ ಅವರು 1921ರ ನವೆಂಬರ್‌ನಲ್ಲಿ ಕೇಳರದ ಕೋಝಿಕೋಟ್‌ನಲ್ಲಿ ಸಿರಿಯನ್ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. 1940 ರಲ್ಲಿ ಲೊಯೋಲಾ ಕಾಲೇಜಿನನಲ್ಲಿ ಪದವಿ ಪಡೆಯುತ್ತಾರೆ. ಆ ನಂತರ ಚೆನ್ನೈನ ಗಿಂಡಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಮುಗಿಸುತ್ತಾರೆ.

ಇದಾದ ಬಳಿಕ ಕುರಿಯನ್ ಅವರು ಡೈರಿ ಇಂಜಿನಿಯರಿಂಗ್ ಅಧ್ಯಯಕ್ಕೆ ಮುಂದಾಗುತ್ತಾರೆ. ಇದಕ್ಕೆ ಭಾರತ ಸರ್ಕಾರ ವಿದ್ಯಾರ್ಥಿ ವೇತನವನ್ನು ನೀಡಿ ಪ್ರೋತ್ಸಾಹವನ್ನು ನೀಡುತ್ತದೆ. 1948 ರಲ್ಲಿ ವರ್ಗೀಸ್ ಕುರಿಯನ್ ಅವರು ಮಿಚಿಗನ್ ಸ್ಟೇಟ್ ಯೂನಿವರ್ಸಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪಡವಿ ಪಡೆದರು, ಇವರು ಚಿಕ್ಕ ವಯಸ್ಸಿನಲ್ಲೇ ಡೈರಿ ಇಂಜಿನಿಯರಿಂಗ್ ಮುಗಿಸಿ ಸೈ ಎನಿಸಿಕೊಳ್ಳುತ್ತಾರೆ.

ಡಾ ವರ್ಗೀಸ್ ಕುರಿಯನ್

ತಮ್ಮ ಶಿಕ್ಷಣವನ್ನು ಮುಗಿಸಿದ ಬಳಿಕ ಹಾಲು ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯಾಗಿಸಲು ಮತ್ತು ರೈತರ ಜೀವನ ಮಟ್ಟವನ್ನು ಸುಧಾರಿಸಲು ಪಣತೊಟ್ಟು ತ್ರಿಭುವನ್ ಭಾಯಿ ಪಟೇಲ್ ಅವರೊಂದಿಗೆ ಖೇಡಾ ಜಿಲ್ಲಾ ಸಹಕಾರ ಸಂಘವನ್ನು ಪ್ರಾರಂಭಿಸುತ್ತಾರೆ. 1949 ರಲ್ಲಿ ಗುಜರಾತ್‌ನ ಎರಡು ಗ್ರಾಮಗಳನ್ನು ಸದಸ್ಯರನ್ನಾಗಿ ಡೈರಿ ಸಹಕಾರಿ ಒಕ್ಕೂಟವನ್ನು ರಚಿಸುತ್ತಾರೆ. ಹೆಚ್ಚಿನ ಸಂಶೋಧನೆಗಳನ್ನು ಮಾಡಿದ ಬಳಿಕ ಕುರಿಯನ್ ಅವರು ಎಮ್ಮೆಯ ಹಾಲಿನಿಂದ ಪುಡಿಯನ್ನು ತಯಾರಿಸುತ್ತಾರೆ. ಈ ಸಾಧನೆ ಇವರಿಗೆ ದೊಡ್ಡ ಹೆಸರನ್ನು ತಂದುಕೊಡುತ್ತದೆ. ಜೊತೆಗೆ ಎಮ್ಮೆಯ ಹಾಲಿನಿಂದ ಹುಡಿಯನ್ನು ಮಾಡಿದ ವಿಶ್ವದ ಮೊದಲ ವ್ಯಕ್ತಿ ಎಂಬ ದಾಖಲೆಯನ್ನು ಬರೆಯುತ್ತಾರೆ. ಇದಕ್ಕೂ ಮೊದಲು ಹಾಲಿನ ಕಂಪನಿ ಹಸುವಿನ ಹಾಲಿನಿಂದ ಪುಡಿಯನ್ನು ತಯಾರು ಮಾಡಲಾಗುತ್ತಿತ್ತು.
ಹಾಲವು ಉದ್ಯಮವನ್ನ ಶಾಶ್ವತವಾಗಿ ಬದಲಾಯಿಸಿದ ಕ್ಷೀರ ಕ್ರಾಂತಿಕಾರ.

KarnatKa Journalist Union :ನ.28 ಛಾಯಾಲೋಕ ವಿಚಾರ ಸಂಕಿರಣ

ಶ್ವೇತ ಕ್ರಾಂತಿಯ ಪಿತಾಮಹ ಕುರಿಯನ್ ಅವರು ಆಪರೇಷನ್ ಫ್ಲಡ್ ಕಲ್ಪನೆಯು ಭಾರತದ ಹಾಲವು ಉದ್ಯಮವನ್ನು ಶಾಶ್ವತವಾಗಿ ಬದಲಾಯಿಸಿತು. ಹಾಲಿನ ಕೊರತೆಯಿಂದ ಬಳಲುತ್ತಿದ್ದ ಬಾರತವನ್ನು 3 ದಶಕಗಳಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವನ್ನಾಗಿ ಮಾಡಿದರು. ಕುರಿಯನ್ ಅವರ ಈ ಅಪಾರವಾದ ಕೊಡುಗೆಗಾಗಿ ರಾಮನ್ ಮ್ಯಾಗ್ಸೆಸೆ, ಪದ್ಮವಿಭೂಷಣ ಮತ್ತು ವಿಶ್ವ ಆಹಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

೨೦೧೬ ಜೂನ್ ೩೦ರಂದು ಶಿವಮೊಗ್ಗ ಹಾಲು ಒಕ್ಕೂಟದ ಅಂದದಿನ ಉಪವ್ಯವಸ್ಥಾಪಕರಾಗಿದ್ದ ಈ ಬರಹದ ಲೇಖಕರು ಅಮೇರಿಕಾದ ಮಿಚಿಗನ್ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಅಂತರರಾಷ್ಟ್ರೀಯ ಅಧ್ಯಯನ ಕೇಂದ್ರದಲ್ಲಿ ಡಾ.ವರ್ಗೀಸ್ ಕುರಿಯನ್‌ರವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ಸ್ಮರಿಸಬಹುದಾಗಿದೆ.

ಡಾ. ವರ್ಗೀಸ್ ಕುರಿಯನ್‌ರವರ ಸಾಧನೆಗಳ ಬಗೆಗೆ ನಾವೆಲ್ಲ ಹೆಮ್ಮೆ ಪಡಬೇಕು. ಭಾರತ ವಿಶ್ವದಲ್ಲೇ ಅತೀ ಹೆಚ್ಚು ಹಾಲು ಉತ್ಪಾದಿಸಲು ಸಹಕಾರಿ ಸಂಸ್ಥೆಗಳ ಸರಮಾಲೆಯನ್ನೇ ಕಟ್ಟಿ ಪೌಷ್ಟಿಕ ಹಾಗು ಆರೋಗ್ಯಪೂರ್ಣ ಹಾಲನ್ನು ಉತ್ಪಾದಿಸಿ ಕೋಟ್ಯಾಂತರ ಜನರನ್ನು ತಲುಪುವಂತಹ ವ್ಯವಸ್ಥೆಯನ್ನು ರೂಪಿಸಿ, ಪ್ರಪಂಚದಲ್ಲೇ ಅತೀ ದೊಡ್ಡ ಆಹಾರ ಮಾರುಕಟ್ಟೆ ವ್ಯಾಪಾರವನ್ನು, ದೇಶದ ದೊಡ್ಡ ಆಹಾರ ಲಾಂಛನ ಅಮೂಲ್ ಅನ್ನು ಹುಟ್ಟು ಹಾಕಿದ ದಾರ್ಶನಿಕ. ಪ್ರತೀ ವ್ಯಕ್ತಿಗೆ ದುಪ್ಪಟ್ಟು ಹಾಲು ಸಿಗುವ ಮತ್ತು ಗ್ರಾಮೀಣ ಭಾರತದಲ್ಲಿ ಹೈನುಗಾರಿಕೆ ಅತೀ ಹೆಚ್ಚು ಉದ್ಯೋಗ ನೀಡುವ ಹಾಗೆ ಮಾಡಿದರು. ಅವರು ಹುಟ್ಟು ಹಾಕಿದ ಸಹಕಾರಿ ಸಂಸ್ಥೆಗಳು ಮಹಿಳೆಯರಿಗೆ ಅಧಿಕಾರ ನೀಡುವ ಮತ್ತು ತಳಮಟ್ಟದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಅಳವಡಿಸಿ ಸಮಾಜವನ್ನು ಬದಲಿಸುವ ಶಕ್ತಿಯುತ ಪ್ರತಿನಿಧಿಗಳಾಗಿವೆ.

ಡಾ. ವರ್ಗೀಸ್ ಕುರಿಯನ್‌ರವರು ಭಾರತದಲ್ಲಿ 3೦ ಸಂಸ್ಥೆಗಳನ್ನು ಸ್ಥಾಪಿಸಿದ್ದು ಅವುಗಳ ಮಾಲಿಕರು ಈ ದೇಶದ ರೈತರು, ವೃತ್ತಿಪರ ಪರಿಣತರು ಈ ಸಂಸ್ಥೆಗಳ ಆಡಳಿತ ನಿರ್ವಾಹಕರು. ಭಾರತದಲ್ಲಿ 1970ರಲ್ಲಿ 2  ಕೋಟಿ 30 ಲಕ್ಷ ಮಿಲಿಯನ್ ಟನ್ ಹಾಲನ್ನು ಉತ್ಪಾದನೆ ಮಾಡಲಾಗುತ್ತಿತ್ತು. ಕುರಿಯನ್‌ರವರ ಪ್ರಯತ್ನಗಳಿಂದಾಗಿ ೧೯೯೬ರ ಹೊತ್ತಿಗೆ ಹಾಲಿನ ಉತ್ಪಾದನೆ ೬೬ ಮಿಲಿಯನ್ ಟನ್‌ಗಳಷ್ಟಾಯಿತು. ೨೦೨೦-೨೧ ರಲ್ಲಿ ೨೦೦ ಮಿಲಿಯನ್ ಮೆ.ಟನ್ ಹಾಲನ್ನು ಉತ್ಪಾದಿಸಿದೆ. ೨೮ ರಾಜ್ಯ ಸಹಕಾರಿ ಡೈರಿ ಮಹಾಮಂಡಳಿಗಳು, ೨೦೦ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಗಳು, ೧,೭೦,೦೦೦ ಹಾಲು ಉತ್ಪಾದಕರ ಸಹಕಾರಿ ಸಂಘಗಳು & ೧೬.೫ ಮಿಲಿಯನ್ ಹಾಲು ಉತ್ಪಾದಕ ಸದಸ್ಯರು ಈ ಕ್ಷೀರಕ್ರಾಂತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಭಾರತದ ಕ್ಷೀರ ಕ್ರಾಂತಿಯ ಹರಿಕಾರ ಡಾ.ವರ್ಗೀಸ್ ಕುರಿಯನ್‌ರವರ ಸಾಧನೆಗಳಿಂದಾಗಿ ೧೬.೫ ಮಿಲಿಯನ್ ರೈತರ ಕುಟುಂಬಗಳ ಬಾಳ್ವೆ ಹಸನಾಗಿದೆ.

 

ಡಿ.ವಿ. ಮಲ್ಲಿಕಾರ್ಜುನ

ವಿವೃತ್ತ ಉಪ ವ್ಯವಸ್ಥಾಪಕರು

ಕೆ.ಎಮ್.ಎಫ್ ಶಿಮುಲ್

 

 

Leave a Reply

Your email address will not be published. Required fields are marked *