Modi sarpanch Balveer Kauar ಜಮ್ಮುವಿನ ಗಡಿ ಪ್ರದೇಶದ ಸರಪಂಚ್ ಅವರ ಬದ್ಧತೆಗೆ ಪ್ರಧಾನ ಮಂತ್ರಿ ಶ್ಲಾಘನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಅವರು ಪ್ರಧಾನ ಮಂತ್ರಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದ ವೇಳೆ, ಪ್ರಧಾನಮಂತ್ರಿಯವರು ದಿಯೋಘರ್‌ನ ಏಮ್ಸ್‌ನಲ್ಲಿ 10,000ನೇ ಜನೌಷಧಿ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಿದರು.

ದೇಶದಲ್ಲಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10 ಸಾವಿರದಿಂದ 25 ಸಾವಿರಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿಸುವ ಕಾರ್ಯಕ್ರಮಕ್ಕೆ ಸಹ ಚಾಲನೆ ನೀಡಿದರು. ಈ ವರ್ಷ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಮಂತ್ರಿಯವರು ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸುವುದು ಮತ್ತು ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸುವುದು ಎರಡೂ ಉಪಕ್ರಮಗಳನ್ನು ಘೋಷಿಸಿದ್ದರು. ಈ ಕಾರ್ಯಕ್ರಮವು ಈ ಎರಡೂ ಭರವಸೆಗಳ ಈಡೇರಿಕೆಯನ್ನು ಸೂಚಿಸುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ಫಾರ್ಮ್ ಮೆಷಿನರಿ ಬ್ಯಾಂಕ್ ಯೋಜನೆ ಮತ್ತು ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳಂತಹ ಅನೇಕ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆದಿರುವುದಾಗಿ ರಂಗ್‌ಪುರ ಗ್ರಾಮದ ಸರಪಂಚ್ ಶ್ರೀಮತಿ ಬಲ್ವೀರ್ ಕೌರ್ sarpanch Balveer Kauarಮತ್ತು ಜಮ್ಮು ಜಿಲ್ಲೆಯ ಅರ್ನಿಯಾದ ರೈತರೊಬ್ಬರು ವಿಡಿಯೊ ಕಾನ್ಫರೆನ್ಸ್ ಸಂವಾದ ವೇಳೆ ಹೇಳಿದರು. ತನ್ನ ಗ್ರಾಮವು ಗಡಿಯ ಸಮೀಪದಲ್ಲಿದೆ ಎಂದು ಸರಪಂಚ್ ಹೇಳಿದರು. ಕಿಸಾನ್ ಕ್ರೆಡಿಟ್ ಕಾರ್ಡ್ ಬಳಸಿ ಟ್ರ್ಯಾಕ್ಟರ್ ಖರೀದಿಸಿದ ಅವರಿಗೆ ಪ್ರಧಾನಿ ಮೋದಿ ಧನ್ಯವಾದ ಹೇಳಿದರು.Modi sarpanch Balveer Kauar -

ತಮ್ಮ ಬೆರಳ ತುದಿಯಲ್ಲಿ ತಮ್ಮ ಪ್ರದೇಶದ ಬಗ್ಗೆ ದಾಖಲೆಗಳ ಮಾಹಿತಿ ತಿಳಿದುಕೊಂಡಿರುವ ಸರಪಂಚ್ ಶ್ರೀಮತಿ ಕೌರ್ (sarpanch Balveer Kauar) ಅವರನ್ನು ಪ್ರಧಾನಿ ಪ್ರಶಂಸಿಸಿದರು. ಅದಕ್ಕೆ ನಗುತ್ತಾ ಉತ್ತರಿಸಿದ ಶ್ರೀಮತಿ ಕೌರ್, ‘ಆಪ್ ಸೆ ಹೈ ಸೀಖಾ ಹೈ ಗ್ರಾಸ್ರೂಟ್ ಪಾರ್ ಕಾಮ್ ಕರ್ನಾ’ ಎಂದು ಉತ್ತರಿಸಿದರು. ಕಾಮ್ ಕಾರ್ತಿ ಹೂಂ ಔರ್ ಭೂಲ್ತಿ ನಹೀ ಹೂಂ.” (ನಾನು ತಳಮಟ್ಟದಲ್ಲಿ ಕೆಲಸ ಮಾಡಲು ನಿಮ್ಮಿಂದ ಕಲಿತಿದ್ದೇನೆ ಮತ್ತು ಮಾಡಿದ ಕೆಲಸದ ವಿವರಗಳನ್ನು ಮರೆಯಬಾರದು ಎಂಬುದನ್ನು ಕೂಡ ನಿಮ್ಮಿಂದ ಕಲಿತುಕೊಂಡೆ) ಎಂದು ಉತ್ತರಿಸಿದರು.

ಇದನ್ನು ಓದಿ-ಏಡ್ಸ್ ರೋಗ​ ಸೋಂಕಿತರಲ್ಲಿ ಕರ್ನಾಟಕ 9ನೇ ಸ್ಥಾನ !

Modi sarpanch Balveer Kauar: ಸರ್ಕಾರದ ಯೋಜನೆಗಳನ್ನು ಪಡೆಯುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು. ಶ್ರೀಮತಿ ಕೌರ್ ಅಕ್ಕಪಕ್ಕದ ಹತ್ತು ಹಳ್ಳಿಗಳನ್ನು ತಲುಪಲು ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡುವಂತೆ ಸಲಹೆ ನೀಡಿದರು. ಸಮಾಜದ ಕೊನೆಯ ವ್ಯಕ್ತಿಯವರೆಗೆ ಎಲ್ಲಾ ಪ್ರಯೋಜನಗಳು ತಲುಪುತ್ತವೆ ಎಂಬ ನಂಬಿಕೆಯನ್ನು ಜನರಲ್ಲಿ ಮೂಡಿಸಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ಈಗಿರುವ ಫಲಾನುಭವಿಗಳ ಅನುಭವಗಳಿಂದ ಕಲಿಯಲು ಮತ್ತು ಇನ್ನೂ ಸರ್ಕಾರದ ಯೋಜನೆಗಳ ಫಲ ತಲುಪದವರಿಗೆ ತಲುಪಿಸಬೇಕಾದ ಗುರಿಯನ್ನು ವಿಕಸಿತ ಭಾರತ ಸಂಕಲ್ಪ ಯಾತ್ರೆ ಹೊಂದಿದೆ ಎಂದು ಹೇಳಿದರು.

ಏಡ್ಸ್ ಎಂದರೇನು?

 

ಏಡ್ಸ್- ಹೆಚ್ ಐವಿ ಯು ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ನ ಸಂಕ್ಷೇಪ ರೂಪ. ಏ-ಪಡೆದ (A-ಅಂದರೆ ACQUIRED) ಅಂದರೆ.; ವಂಶ ಪರಂಪರೆಯದಲ್ಲ.ಐ-(I-ಅಂದರೆ IMMUNE) ಅಂದರೆ.,ರೋಗನಿರೋಧ ಶಕ್ತಿಡಿ -(D- ಅಂದರೆ DEFICIENCY ) ಅಂದರೆ ಕೊರತೆ ಎಸ್-( S-ಅಂದರೆ SYNDROME,) ಅಂದರೆ., ನಿರ್ದಿಷ್ಟ ರೋಗದ ಲಕ್ಷಣಗಳು. ಹೆಚ್ ಐವಿ ಯು ಮಾನವದೇಹದ ರೋಗಗಳೊಡನೆ ಹೋರಾಡುವ ನಿರೋಧ ವ್ಯವಸ್ಥೆಯನ್ನು ನಾಶಮಾಡುವುದು. ಕ್ರಮೇಣ ದೇಹದ ನಿರೋಧ ವ್ಯವಸ್ಥೆಯು ಶಿಥಿಲವಾಗಿ ರೋಗಗಳನ್ನು ಎದುರಿಸುವ ನೈಸರ್ಗಿಕ ಸಾಮರ್ಥ್ಯವನ್ನು ಕಳೆದುಕೊಳ್ಳುವುದು. ಈ ಹಂತದಲ್ಲಿ ಆ ವ್ಯಕ್ತಿಗೆ ಅನೇಕ ರೋಗಗಳು ಬರುವವು.

ಹೆಚ್ ಐವಿ ಹರಡುವ ವಿಧಾನ

 

ಒಬ್ಬ ವ್ಯಕ್ತಿಯು ಹೆಚ್ ಐವಿ ಯ ಸೋಂಕನ್ನು ಕೆಳಗಿನ ಮಾರ್ಗದಲ್ಲಿ ಪಡೆಯುವನು.

 

ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಒಬ್ಬ ವ್ಯಕ್ತಿಯು ಇನ್ನೊಬ್ಬ ಹೆಚ್ ಐವಿ ಸೋಂಕಿತವ್ಯಕ್ತಿ ಯೊಂದಿಗೆ ಕಾಂಡೋಮ್ ಬಳಸದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಸೋಂಕು ತಗಲುವುದು.

ಸಕ್ರಮವಾಗಿ ಕ್ರಿಮಿ ಶುದ್ಧ ವಾಗದ ಸೂಜಿ ಮತ್ತು ಇತರೆ ಆಸ್ಪತ್ರೆಯ ಉಪಕರಣಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದರಿಂದ ಶಸ್ತ್ರ ಕ್ರಿಯೆಯ ಉಪಕರಣಗಳಾದ ಸ್ಕ್ಯಾಪಲ್, ಸೀರಂಜು ಅಥವ ಇನ್ನಿತರ ಕೆಲ ಉಪಕರಣಗಳನ್ನು ಸೋಂಕಿತನಿಗೆ ಬಳಸಿದ ಮೇಲೆಕ್ರಿಮಿ ಶುದ್ಧ ಮಾಡದೆ ಬೆರೊಬ್ಬರ ಮೇಲೆ ಉಪಯೋಗಿಸಿದರೆ ಅವು ಸೋಂಕನ್ನು ಹರಡಬಹುದು. .

ಸುರಕ್ಷಿತವಲ್ಲದ ರಕ್ತ ಪೂರ್ಣಮಾಡುವುದರಿಂದ ಒಬ್ಬ ವ್ಯಕ್ತಿಗೆ ಹೆಚ್ ಐವಿ ಸೋಂಕಿರುವವರ ರಕ್ತವನ್ನು ಮರಪೂರಣ ಮಾಡಿದರೆ ಸೋಂಕು ಹರಡುವುದು.

ಸೋಂಕಿತ ತಾಯಿ ತಂದೆಯರಿಂದ ಮಗುವಿಗೆ: ಒಬ್ಬ ಹೆಚ್ ಐವಿ ಸೊಂಕಿತ ತಾಯಿಯು ಗರ್ಭಿಣಿಯಿದ್ದಾಗಲೆ ಅಥವ ಜನನ ಸಮಯದಲ್ಲಿ ಸೋಂಕು ಹರಡಬಹುದು. ಎದೆ ಹಾಲು ಕೂಡಾ ಸೋಂಕು ಹರಡುವ ಮಾಧ್ಯಮವಾಗಬಹುದು.

 

ಹೆಚ್ ಐವಿ ಹೀಗೆ ಹರಡುವುದಿಲ್ಲ

 

ಕೈಕುಲುಕುವುದರಿಂದ

ಸೋಂಕಿತರೊಂದಿಗೆ ಊಟಮಾಡುವುದರಿಂದ.

ಲಘುವಾಗಿ ಮುದ್ದಿಸುವುದರಿಂದ

ಗಾಳಿಯಿಂದ, ಅಥವ ಕೆಮ್ಮಿನಿಂದ, ಮತ್ತು ಸೀನುವುದರಿಂದ

ನೀರು ಮತ್ತು ಆಹಾರದಿಂದ

ಬೆವರು ಮತ್ತು ಕಣ್ಣೀರಿನಿಂದ

ತಟ್ಟೆ, ಲೋಟ ಮತ್ತು ಪಾತ್ರೆಗಳನ್ನು ಸೋಂಕಿತರೊಂದಿಗೆ ಹಂಚಿಕೊಳ್ಳುವುದರಿಂದ

ಸೋಂಕಿತರನ್ನು ಮುಟ್ಟುವುದರಿಂದ, ಅಪ್ಪಿಕೊಳ್ಳುವುದರಿಂದ

ಸೋಂಕಿತರು ಬಳಸಿದ ಸ್ನಾನದ ಮನೆ ಮತ್ತು ಕಕ್ಕಸನ್ನು ಉಪಯೋಗಿಸುವುದರಿಂದ

ಸೋಂಕಿತರ ಉಡುಪನ್ನು ತೊಡುವುದರಿಂದ

ಸೋಂಕಿತರ ಜೊತೆ ಇರುವುದರಿಂದ

ಸೊಳ್ಳೆ ನೊಣ ಮತ್ತು ಇತರ ಕೀಟಗಳಿಂದ

ಹೆಚ್ ಐವಿ ಮತ್ತು ಇತರೆ ಲೈಂಗಿಕ ರೋಗಗಳ (ಲೈಂಗಿಕವಾಗಿ ಹರಡುವ ರೋಗಗಳು) ನಡುವೆ ಸಂಬಂಧ ವಿದೆಯಾ ?

ಹೆಚ್ ಐವಿ ಮತ್ತು ಇತರೆ ಲೈಂಗಿಕ ರೋಗಗಳು ಪರಸ್ಪರ ಪರಿಣಾಮ ಬೀರುವವು. ಹೆಚ್ ಐವಿ ಇರುವ ವ್ಯಕ್ತಿಗೆ ಲೈಂಗಿಕ ರೋಗಗಳಿದ್ದರೆ ಹೆಚ್ ಐವಿ ಹರಡುವ ಅಪಾಯ ಹೆಚ್ಚಾಗುವುದು.

ಸಿನೆಮಾ ಥೇಟರಿನ ಸೀಟಿನಲ್ಲಿಂದ ಚುಚ್ಚಬಹುದಾದ ಸೂಜಿಗಳು ಹೆಚ್ ಐವಿ ಹರಡುತ್ತವೆಯೇ.?

ಹೆಚ್ ಐವಿ ಸೋಂಕು ಈ ರೀತಿಯಲ್ಲಿ ಹರಡಲು, ಸೂಜಿಯು ಹೆಚ್ಚಿನ ಮಟ್ಟದಲ್ಲಿ ವೈರಸ್ಸಿನಿಂದ ಸೋಂಕಿತವಾದ ರಕ್ತದಿಂದ ಕೂಡಿರಬೇಕು.

ಹೆಚ್ ಐವಿ ಸೋಂಕು ಹಚ್ಚೆ ಹಾಕಿಸಿಕೊಳ್ಳುವುದರಿಂದ, ದೇಹವನ್ನು ಚುಚ್ಚಿಸಿಕೊಳ್ಳುವುದರಿಂದ, ಅಥವ ಕ್ಷೌರಿಕರಿಂದ ಬರವುದು ಸಾಧ್ಯವೇ ?

ಉಪಕರಣವು ರಕ್ತದಿಂದ ಮಲಿನವಾಗಿದ್ದರೆ ಅದನ್ನು ಕ್ರಿಮಿಶುದ್ಧ ಮಾಡದಿದ್ದರೆ ಇನ್ನೊಬ್ಬರಿಗೆ ಬಳಸಿದಾಗ ಹೆಚ್ ಐವಿ ಹರಡುವ ಸಾಧ್ಯತೆ ಇದೆ. ಆದರೂ ಹಚ್ಚೆಹಾಕುವವರು ಅಥವ ದೇಹದ ಭಾಗವನ್ನು ಚುಚ್ಚುವವರು “ ಸಾರ್ವತ್ರಿಕ ಎಚ್ಚರಿಕೆ” ಯಿಂದ ಪ್ರಕ್ರಿಯೆಯನ್ನು ಅನುಸರಿಸಬೇಕು. ಅದು ರಕ್ತದಿಂದ ಹರಡುವ ಸೋಂಕುಗಳಾದ ಹೆಚ್ ಐವಿ ಮತ್ತು ಹೆಪಿಟೈತೆಸ್. ಬಿ ಗಳನ್ನು ತಡೆಯುವುದು.

ಆರೋಗ್ಯ ಸೇವೆ ನೀಡುವವರು ಹೆಚ್ ಐವಿ ಪಾಜಿಟಿವ್ ಸಂಪರ್ಕಕ್ಕೆ ಬರುವುದರಿಂದ ಅವರಿಗೆ ಅಪಾಯ ವಿದೆಯಾ?

ಆರೋಗ್ಯ ಸೇವೆ ನೀಡುವವರು ಹೆಚ್ ಐವಿ ಪಾಜಿಟಿವ್ ರವರ ಸಂಪರ್ಕಕ್ಕೆ ಬರುವುದರಿಂದ ಅವರಿಗೆ ಅಪಾಯವಾಗುವ ಸಂಭವ ತೀರಾ ಕಡಿಮೆ. ವಿಶೇಷವಾಗಿ ಅವರು ಸಾರ್ವತ್ರಿಕ ಆರೋಗ್ಯ ರಕ್ಷಣಾ ಪ್ರಕ್ರಿಯೆಗಳನ್ನು ಪಾಲಿಸಿದರೆ. ಅವರಿಗೆ ಆಗಬಹುದಾದ ಮುಖ್ಯ ಅಪಾಯವೆಂದರೆ ಅಕಸ್ಮಾತ್ತಾಗಿ ಮಲಿನವಾದ ಸೋಂಕಿತ ಸೂಜಿ ಮತ್ತು ಉಪಕರಣಗಳಿಂದ ಗಾಯವಾದರೆ ಮಾತ್ರ ಕಷ್ಟ.

ವೈದ್ಯರಲ್ಲಿಗೆ ಮತ್ತು ದಂತಚಿಕತ್ಸೆಗೆ ಹೋದಾಗ ಹೆಚ್ ಐವಿ ಸೋಂಕು ತಗುಲುವ ಸಾಧ್ಯತೆ ಇದೆಯಾ ?

ವೈದ್ಯರಲ್ಲಿಗ ಮತ್ತು ದಂತಚಿಕತ್ಸೆಗೆ ಹೋದಾಗ ಹೆಚ್ ಐವಿ ಸೋಂಕು ತಗುಲುವ ಸಾಧ್ಯತೆ ಬಹಳ ಕಡಿಮೆ. ವೃತ್ತಿಪರರಾದ ಅವರು ಸೋಂಕನ್ನು ನಿಯಂತ್ರಿಸುವ ಎಲ್ಲ ಎಚ್ಚರಿಕೆ ತೆಗೆದುಕೊಂಡಿರುವರು.

ಕಣ್ಣಿಗೆ ರಕ್ತದ ಹನಿಗಳು ಚಿಮ್ಮಿದರೆ ಹೆಚ್ ಐವಿ ಸೋಂಕು ತಗಲುವುದೆ ?

ಈ ರೀತಿಯಾಗಿ ವೈದ್ಯರಲ್ಲಿಗೆ ಮತ್ತು ದಂತಚಿಕತ್ಸೆಗೆ ಹೋದಾಗ ಹೆಚ್ ಐವಿ ಸೋಂಕು ತಗುಲುವ ಸಾಧ್ಯತೆ ಹರಡುವ ಸಂಭವ ಬಹು ಕಡಿಮೆ ಎಂದು ಸಂಶೋಧನೆಗಳು ತಿಳಿಸಿವೆ. ಬಹಳ ಕಡಿಮೆ ಸಂಖ್ಯೆಯ ಜನ ಈ ರಿತಿಯ ಸೋಂಕಿಗೆ ಒಳಗಾಗಿದ್ದಾರೆ

 

ಯಾರಾದರೂ ಕಚ್ಚಿದಾಗ ಹೆಚ್ ಐವಿ ಬರುವ ಸಾಧ್ಯತೆ ಇದೆಯಾ ?

 

ಯಾರಾದರೂ ಕಚ್ಚಿದಾಗ ಹೆಚ್ ಐವಿ ಬರುವ ಸಾಧ್ಯತೆ ಬಹು ಅಸಹಜ. ಇಂಥಹ ಪ್ರಕರಣಗಳು ಎಲ್ಲೋ ಒಂದೆರಡು ವರದಿಯಾಗಿವೆ. ತೀವ್ರವಾಗಿ ಅಂಗಾಂಶಗಳು ಮತ್ತು ಮಾಂಸ ಖಂಡಗಳು ಹರಿದು ಜೊತೆಗೆ ರಕ್ತವೂ ಬಂದಿದ್ದರೆ ಮಾತ್ರ ಇದು ಸಾಧ್ಯ.

 

ಮಾದಕ ವಸ್ತುವನ್ನು ಚುಚ್ಚಿಕೊಳ್ಳುವಾಗ ಇತರರ ಜೊತೆ ಅದೇ ಸೂಜಿಯನ್ನು ಕ್ರಿಮಿಶುದ್ಧ ಮಾಡದೆ ಹಂಚಿ ಕೊಂಡರೆ ಹೆಚ್ ಸೋಂಕು ಬರುವುದೆ ?

 

ಮಾದಕ ವಸ್ತುವನ್ನು ಚುಚ್ಚಿಕೊಳ್ಳುವಾಗ ಇತರರ ಜತೆ ಅದೇ ಸೂಜಿಯನ್ನು ಕ್ರಿಮಿಶುದ್ಧ ಮಾಡದೆ ಹಂಚಿಕೊಂಡರೆ ಹೆಚ್ ಸೋಂಕು ಬರುವ ಸಾಧ್ಯತೆ ಇದೆ. ಸೂಜಿಯಲ್ಲಿ ಸೋಂಕಿತ ರಕ್ತವಿದ್ದು ಅದು ರಕ್ತಪ್ರವಾಹವನ್ನು ಸೇರುವುದು. ಆದ್ದರಿಂದ ಸೋಂಕಿತರು ಬಳಸಿದ ಸೂಜಿಯನ್ನು ಉಪಯೋಗಿಸಿದರೆ ವೈರಸ್ ಹರಡುವುದು.

ನಾನು ಗಭಿಣಿಯಾದಾಗಲೇ ಮತ್ತು ನಂತರ ಎದೆ ಹಾಲು ನೀಡಿದರೆ ಮಗುವಿಗೆ ಸೋಂಕು ನ್ನು ಹರಡುವುದೇ?

ಸೋಂಕಿತ ಗರ್ಭಿಣಿಯು ಇನ್ನೂ ಜನಿಸದ ಮಗುವಿಗೆ ಅಥವ ಹುಟ್ಟಿದ ಕೂಡಲೆ ಹೆಚ್‌ಐವಿ ಸೋಂಕನ್ನು ಹರಡಬಹುದು. ಅಲ್ಲದೆ ಎದೆಹಾಲು ಕುಡಿಸುವುದರಿಂದಲೂ ಸೋಂಕು ಹರಡುವುದು. ಮಹೀಳೆಗೆ ಸೋಂಕು ಇದೆ ಎಂದು ಗೊತ್ತಾದಾಗ ಸೂಕ್ತ ಔಷಧಿಗಳನ್ನು ತೆಗೆದುಕೊಂಡರೆ ಸೋಂಕು ತಗಲುವ ಸಾಧ್ಯತೆ ಕಡಿಮೆಯಾಗುವುದು. ಅಲ್ಲದೆ ಹೆರಿಗೆಯನ್ನೂ ಸಹಾ ಸಿಸೆರಿಯನ್ ವಿಧಾನದಲ್ಲಿ ಮಾಡಿಸಿ ಕೊಂಡು ಮತ್ತು ಎದೆ ಹಾಲನ್ನು ಕುಡಿಸದಿದ್ದರೆ ಸೋಂಕು ತಗುಲುವುದುನ್ನು ತಡೆಯಬಹುದು.

ರಕ್ತವನ್ನು ಪಡೆಯುವುದು ಇಲ್ಲವೆ ದಾನ ಮಾಡುವುದರಿಂದ ಹೆಚ್ ಐವಿ ಬರುವ ಅಪಾಯವಿದೆಯಾ?

ಕೆಲವು ಜನ ರಕ್ತ ಮರುಪೂರಣ ದಿಂದ ಹೆಚ್ ಐವಿ ಸೋಂಕಿತರಾಗಿದ್ದಾರೆ. ಆದರೆ ಈಗ ರಕ್ತ ಮರುಪೂರಣ ಮಾಡುವಾಗ ಎಲ್ಲ ರಕ್ತದ ಮಾದರಿಗಳನ್ನು ಸಂಪೂರ್ಣ ತಪಾಸಣೆ ಮಾಡುತ್ತಾರೆ ಆದ್ದರಿಂದ ರಕ್ತದಾನ ಮಾಡುವಾಗ ಇಲ್ಲವೆ ಪಡೆಯುವಾಗ ಸೋಂಕು ತಗುಲುವುವ ಸಾದ್ಯತೆ ಇಲ್ಲ.

 

Leave a Reply

Your email address will not be published. Required fields are marked *