Mizoram Election 2023: ಇಂದು ಮಿಜೊರಾಂ ಚುನಾವಣಾ ಫಲಿತಾಂಶ Result Today

Mizoram Election

ಹೊಸದಿಲ್ಲಿ: ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಈ ಹಿಂದೆ ಡಿಸೆಂಬರ್ 3 ಭಾನುವಾರದಂದು ಮತ ಎಣಿಕೆಗೆ ಚುನಾವಣಾ ಆಯೋಗ ECIನಿರ್ಧರಿಸಿತ್ತು.

ಆದರೆ, ಕ್ರಿಶ್ಚಿಯನ್ ಬಹುಸಂಖ್ಯಾತ ರಾಜ್ಯವಾದ ಮಿಜೋರಾಂನ ಜನರಿಗೆ ಭಾನುವಾರ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಎಂಬ ಕಾರಣಕ್ಕಾಗಿ  ಎಣಿಕೆ ದಿನಾಂಕವನ್ನು ಬದಲಾಯಿಸುವಂತೆ ವಿವಿಧ ವಲಯಗಳಿಂದ ಮನವಿ ಮಾಡಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಜನರ ಈ ಮನವಿಗಳನ್ನು ಪರಿಗಣಿಸಿದ ಆಯೋಗ Mizoram Election 2023ಮಿಜೋರಾಂನ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯ ಮತಗಳ ಎಣಿಕೆ ದಿನಾಂಕವನ್ನು ಡಿಸೆಂಬರ್ 3 ರ ಬದಲಿಗೆ 4 ರಂದು (Today) ಸೋಮವಾರ ನಡೆಸುವುದಾಗಿ ಆಯೋಗ ನಡೆಸಲಿದ್ದು, ಈಗಾಗಲೇ ಮತ ಏಣಿಕೆ ಆರಂಭವಾಗಿದೆ.

ಕಳೆದ ತಿಂಗಳು ವಿಧಾನಸಭಾ ಚುನಾವಣೆ ನಡೆದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳ ಮತ ಎಣಿಕೆ ಭಾನುವಾರ ನಡೆದು, ಮೂರು ರಾಜ್ಯಗಳು ಬಿಜೆಪಿ ಪಾಲಾಗಿವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ.

2018 ರಲ್ಲಿ, ಎಂಎನ್‌ಎಫ್‌ ಬಹುಮತ ಪಡೆಯುವ ಮೂಲಕ ಸರ್ಕಾರ ರಚನೆ ಮಾಡಿದೆ. 2008 ಮತ್ತು 2013ರಲ್ಲಿ ಸರ್ಕಾರ ರಚಿಸಿದ್ದ ಕಾಂಗ್ರೆಸ್ 2018ರಲ್ಲಿ ಸೋಲು ಕಂಡಿತ್ತು. 2018 ರ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದ ಪ್ರಾದೇಶಿಕ ಪಕ್ಷವಾದ ಝಡ್‌ಪಿಎಂ ಎಂಟು ಸ್ಥಾನಗಳಲ್ಲಿ ಗೆದ್ದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಕಾಂಗ್ರೆಸ್ ಐದು ಸ್ಥಾನಗಳನ್ನು ಮತ್ತು ಬಿಜೆಪಿ ಒಂದನ್ನು ಗೆದ್ದಿತ್ತು.

Mizoram Election 2023 ವಿವಿಧ ಸಮೀಕ್ಷೆಗಳು ಹೇಳಿದ್ದೇನು?

Mizoram Election ಇನ್ನು ಹಲವು ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ಫಲಿತಾಂಶ ಬರುತ್ತದೆ ಎಂದು ಭವಿಷ್ಯ ನುಡಿದರೆ, ಕೆಲವು ಸಮೀಕ್ಷೆಗಳು ಎಂಎನ್‌ಎಫ್ ಬಹುಮತ ಪಡೆಯುತ್ತದೆ ಎಂದು ಹೇಳಿವೆ. ಮತ್ತೊಂದು ಸಮೀಕ್ಷೆ ಇಲ್ಲಿ ಝಡ್‌ಪಿಎಂ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿವೆ.

40 ಕ್ಷೇತ್ರಗಳ ಮತ ಏಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ.

Leave a Reply

Your email address will not be published. Required fields are marked *