Journalist Union  ಪತ್ರಕರ್ತರ ರಾಜ್ಯ ಸಂಘದ ಸದಸ್ಯತನ ನಿಬಂಧನೆಗೆ ಮೈಸೂರು ಪತ್ರಕರ್ತರ ವಿರೋಧ

Journalist Union ಮೈಸೂರು, ಫೆ.25 : (kannadadhvani.com ) ಕರ್ನಾಟಕ  ಕಾರ್ಯನಿರತ ಪತ್ರಕರ್ತರ ಸಂಘ (KUWJ)ದ ಸದಸ್ಯತ್ವ Membership ನಿಬಂಧನೆಗಳ ಬಗ್ಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ (Mysore Journalist Union) ವಿರೋಧ ವ್ಯಕ್ತಪಡಿಸರುವ ವಿದ್ಯಮಾನ ನಡೆದಿದೆ.ಸಂಘದ ಸದಸ್ಯತ್ವ ಪಡೆಯಲು ರಾಜ್ಯ ಸಂಘದಿಂದ ನೀಡಿರುವ ನಿಬಂಧನೆಗಳು ಜಿಲ್ಲಾ ಹಾಗೂ ಸ್ಥಳೀಯ ಪತ್ರಕರ್ತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಧ್ವನಿ ಎತ್ತಿದೆ.

ರಾಜ್ಯ ಸಂಘದಲ್ಲಿರುವ ನಿಬಂಧನೆಗಳು ನಿಯಮಗಳಿಗಿಂತ ಹೆಚ್ಚಾಗಿ ಒಂದು ರೀತಿ ಡಿಕ್ಟೇಟ‌ರ್‌ಶಿಪ್‌ ರೂಲ್ ನಂತೆ  ಅನಿಸುತ್ತಿದೆ. ಹಲವು ದಶಕಗಳಿಂದ ನನ್ನ ಜಿಲ್ಲಾ ಪತ್ರಕರ್ತರ ಸಂಘ ಸದೃಢವಾಗಿದ್ದು, ತನ್ನದೇ ಸ್ವಂತ ಅರ್ಥಪೂರ್ಣ ಬೈಲಾವನ್ನು ಹೊಂದಿತ್ತು. ಅದರ ನಿಯಮದಂತೆ ಇಷ್ಟು ವರ್ಷ ಸದಸ್ಯತ್ವವನ್ನು ಪಡೆದಿರುತ್ತೇನೆ. ಈ ವರ್ಷವೂ ಅದೇ ಬೈಲಾದಡಿ ಸದಸ್ಯತ್ವ ನವೀಕರಣ ಮಾಡುವುದಾದರೆ ನಾನು ಸದಸ್ಯತ್ವ ನವೀಕರಣ ಮಾಡಿಸುತ್ತೇನೆ. ಇಲ್ಲವಾದರೆ ನನಗೆ ಸಂಘದ ಸದಸ್ಯತ್ವ ಬೇಡ ಎಂದು ಮೈಸೂರು ಪತ್ರಕರ್ತರು ಅಭಿಯಾನವನ್ನೇ ಆರಂಭಿಸಿದ್ದಾರೆ.

ಕರ್ನಾಟಕ  ಕಾರ್ಯನಿರತ ಪತ್ರಕರ್ತರ ಸಂಘ ಸದಸ್ಯತನ ಅಭಿಯಾನ ಆರಂಭಿಸಿದ್ದು, ಸದಸ್ಯತನ ಅರ್ಜಿ ಸಲ್ಲಿಸಲು ಮಾರ್ಚ್ 3 ಕೊನೆಯ ದಿನಾಂಕ ಆಗಿರುತ್ತದೆ.

ಪತ್ರಕರ್ತ ರಾಮ್‌ ಆರಂಭಿಸಿದ ಈ ಧ್ವನಿಗೆ ಪೂರಕವಾಗಿ ವಿನಯ್‌ ಸಾಲಿಗ್ರಾಮ, ಕೆ.ಪಿ.ನಾಗರಾಜ್‌, ಎಸ್.‌ ಆರ್.‌ ಮಧುಸೂಧನ್‌, ರಂಗಸ್ವಾಮಿ, ರಾಜೇಶ್ವರ್‌, ರಂಗಸ್ವಾಮಿ ಮಾದಾಪುರ ಮತ್ತಿತರರು ಪೂರಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

# ನನ್ನ ಜಿಲ್ಲಾ ಸಂಘ ನನ್ನ ಹೆಮ್ಮೆ – ನನ್ನ ಬೈಲಾ ನನ್ನ ಗರಿಮೆ

ಸ್ಥಳೀಯ ಟಿವಿ ಚಾನಲ್ ನ ಒಂದು ಸಂಸ್ಥೆಯ ಇಬ್ಬರಿಗೆ ಮಾತ್ರ ಸದಸ್ಯತ್ವ ನೀಡುವ ನಿಬಂಧನೆ ಸರಿಯಲ್ಲ. ಈ ಮೊದಲು ಸ್ಥಳೀಯ ಟಿವಿ ಚಾನಲ್ ಗಳಿಗೆ ಒಂದು ಸಂಸ್ಥೆಯ ಎಂಟು ಮಂದಿಗೆ ಸದಸ್ಯತ್ವ‌ ನೀಡಲಾಗುತ್ತಿತ್ತು. ನಂತರದ ವರ್ಷದಲ್ಲಿ ಅದನ್ನು ಆರಕ್ಕೆ ಇಳಿಸಲಾಯಿತು. ಕಳೆದ ವರ್ಷ ಐದಕ್ಕೆ ಇಳಿಸಲಾಯಿತು. ಈ ವರ್ಷದಿಂದ ಇಬ್ಬರಿಗೆ ಇಳಿಸಲಾಗಿದೆ‌. ಮುಂದಿನ ವರ್ಷದಿಂದ ಸದಸ್ಯತ್ವ ಕೊಡುವುದಿಲ್ಲ ಎಂದರೂ ಆಶ್ಚರ್ಯವಿಲ್ಲ. ಸ್ಥಳೀಯ ಟಿವಿ ಚಾನಲ್ ಗಳನ್ನು ಕಡೆಗಣಿಸಿರುವುದು ಸರಿಯಲ್ಲ‌.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಇರೋದು ಸರ್ವ ಸದಸ್ಯರ ಹಿತ ಕಾಪಾಡಲು, ಆದರೀಗ ಸದಸ್ಯರ ಹಿತ ಕಾಪಾಡುವುದರ ಬದಲು ಸದಸ್ಯರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ.

Ayodhya ಅಯೋಧ್ಯೆಯಲ್ಲಿ ವಸತಿ ಗೃಹ ನಿರ್ಮಿಸಲಿದೆ ಕಾಂಗ್ರೆಸ್ ಸರಕಾರ

ಈ ಬಾರಿ ಅರ್ಜಿಗೂ 10 ರೂಪಾಯಿ ಶುಲ್ಕ ವಿಧಿಸಿದ್ದಾರೆ‌. ನಾನು ನೋಡಿದ ಮಟ್ಟಿಗೆ ಇದೇ ಮೊದಲ ಬಾರಿ ಅರ್ಜಿಗೂ 10 ರೂಪಾಯಿ ಶುಲ್ಕ ವಿಧಿಸಿರೋದು.

ಮೈಸೂರು ಪತ್ರಕರ್ತರ ಸಂಘ ಈಗ ಅಕ್ಷರಶಃ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಡಿಯಾಳು!. ಇಷ್ಟು ವರ್ಷ ಮೈಸೂರು ಪತ್ರಕರ್ತರ ಸಂಘ ತನ್ನದೆ ಆದ ಮೌಲ್ಯಯುತ ಬೈಲಾ ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ.  2006 ರಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ( ಅವತ್ತಿನ ಕಾಲಕ್ಕೆ ಬೇರೆ ಸಂಘ ಆಗಬಾರದು ಎಂಬ ದೃಷ್ಟಿಯಿಂದ) ರಾಜ್ಯ ಸಂಘದ affiliation ಪಡೆದಿತ್ತು. ಹಾಗಂದ ಮಾತ್ರಕ್ಕೆ ರಾಜ್ಯದ ಬೈಲಾವನ್ನು ಒಪ್ಪಿಕೊಳ್ಳದೆ ಮೈಸೂರು ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಪ್ರತ್ಯೇಕ ಬೈಲಾ ರಚಿಸಿ ಕೊಂಡು ಅದರಂತೆ ಬಹಳ ವ್ಯವಸ್ಥಿತ ವಾಗಿ ಸಂಘ ನಡೆಸಲಾಗುತ್ತಿತ್ತು. ಆಯಾ ಕಾಲಕ್ಕೆ ಒಂದಿಷ್ಟು ಬದಲಾವಣೆ ಕೂಡ ಮಾಡಿಕೊಳ್ಳಲಾಗುತ್ತಿತ್ತು. ಹೀಗಾಗಿ ಮೈಸೂರು ಸಂಘಕ್ಕೆ ತನ್ನದೇ ಆದ ಹಿರಿಮೆ ಬೆಳೆಯಿತು. ಈಗ ಏಕಾಏಕಿಯಾಗಿ ರಾಜ್ಯ ಸಂಘದ ಬೈಲಾವನ್ನು ಪರಿಪೂರ್ಣವಾಗಿ ಒಪ್ಪಿಕೊಳ್ಳುವ ಸ್ಥಿತಿಯನ್ನು  ಸೃಷ್ಟಿ ಮಾಡಿ ಮೈಸೂರು ಸಂಘದ ಮೂಲ ಸ್ವರೂಪವನ್ನೆ ಸಂಪೂರ್ಣವಾಗಿ ಹಾಳು ಮಾಡಲು ಹೆಜ್ಜೆ ಇಟ್ಟಿದ್ದಾರೆ.

ರಾಜ್ಯದ ಸಂಘದ ಬೈಲಾ ಪ್ರಕಾರ ಸ್ಥಳೀಯ ಟಿವಿ ವಾಹಿನಿಗಳಿಗೆ ಕೇವಲ ಎರಡೇ ಎರಡು ಸದಸ್ಯತ್ವ ಸಿಗುತ್ತದೆ. ಮೈಸೂರಿನಲ್ಲಿ ಆರಕ್ಕೂ ಹೆಚ್ಚು ಸ್ಥಳೀಯ ಕೇಬಲ್ ಚಾನಲ್ ಗಳು ಬಹಳ ಸಕ್ರಿಯವಾಗಿದ್ದು 10 ಕ್ಕೂ ಹೆಚ್ಚು ವರದಿಗಾರರು, 10 ಕ್ಕೂ ಹೆಚ್ಚು ಕ್ಯಾಮರಾಮೆನ್ ಗಳು ದಿನ ನಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲಾ ಏನ್ ಮಾಡುಬೇಕು?.

ವಾರಪತ್ರಿಕೆಯವರಿಗೆ ಸಂಘದ ಒಳಗೆ ಪ್ರವೇಶವಿಲ್ಲ ಅಂತಾ ಬೋರ್ಡ್ ಹಾಕಿ ದಿಟ್ಟತನ ಮೆರದಿದ್ದ ಸಂಘವಿದು. ಆದರೆ ರಾಜ್ಯ ಬೈಲಾ ಪ್ರಕಾರ ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಎಲ್ಲರಿಗೂ ತಲಾ ಎರಡು ಸದಸ್ಯತ್ವ ಕೊಡಬೇಕು.

ರಾಜ್ಯ ಸಂಘದಿಂದ ನಮಗೆ ವರ್ಷಕ್ಕೆ ಒಂದು ಗುರುತಿನ ಕಾರ್ಡ್ ಬರುತ್ತೆ ಅಷ್ಟೆ. ಅದು ನಾವು ಕೊಡುವ ದುಡ್ಡಿನಲ್ಲಿ.

ನಮ್ಮ ಪ್ರತಿ ಸದಸ್ಯನಿಂದ 350 ರೂ ಪಡೆಯುವ ರಾಜ್ಯ ಸಂಘ ಒಂದು ಗುರುತಿನ ಕಾರ್ಡ್ ಕೊಡುತ್ತೆ. ಆ ಕಾರ್ಡ್ ನಿಂದ ನಮಗೆ ಯಾವ ಸೌಲಭ್ಯವು, ರಿಯಾಯಿತಿಯೂ ಯಾವ ವ್ಯವಸ್ಥೆಯಲ್ಲೂ ಸಿಗುವುದಿಲ್ಲ. ಬಹುತೇಕರು ಆ ಕಾರ್ಡ್ ನ್ನು ಒಂದು ದಿನವೂ ಪರ್ಸ್ ನಿಂದ ಹೊರಗೆ ತೆಗೆಯುವುದಿಲ್ಲ.

ನಮ್ಮಿಂದ ಹಣ ಪಡೆಯುವ ರಾಜ್ಯ ಸಂಘ, ನಮ್ಮ ಆರ್ಥಿಕ ಕಷ್ಟಕ್ಕೆ ಯಾವತ್ತಿಗೂ ನಯಾ ಪೈಸೆ ಕೊಡುವುದಿಲ್ಲ. ಸಾಲ, ಅನುದಾನ ಹೀಗೆ ಯಾವುದಕ್ಕೂ ನಮ್ಮ ನೆರವಿಗೆ ಅವರು ಬರುವುದಿಲ್ಲ.

ಈಗ ನಾವು ಸಿಎ ಸೈಟ್ ಗೆ ತುರ್ತಾಗಿ 3 ಲಕ್ಷ ರು ಕಟ್ಟಬೇಕು. ರಾಜ್ಯ ಕೊಡುತ್ತಾ? ಖಂಡಿತ ಇಲ್ಲ. ನಮ್ಮ ಬಳಿ ಈ ವ್ಯವಸ್ಥೆ ಇಲ್ಲ ಎಂಬ ಉತ್ತರ ಕೊಡುತ್ತಾರೆ.

ಕೇವಲ ನಮ್ಮ ಸದಸ್ಯರ ಹಣ ಪಡೆದು ನಮ್ಮ ಮೇಲೆ ಹಿಡಿತ ಸಾಧಿಸೋದಷ್ಟೆ ಆ ಸಂಘದ ಉದ್ದೇಶ.

ಪರಿಸ್ಥಿತಿ ಹೀಗಿರುವಾಗ ನಾವು ಪುರುಷಾರ್ಥಕ್ಕೆ ರಾಜ್ಯ ಸಂಘದ ಅಡಿಯಾಳುಗಳಾಗಬೇಕು? ಎಂದು ಮೈಸೂರು ಪತ್ರಕರ್ತರು ಪ್ರಶ್ನಿಸಿದ್ದಾರೆ.

ರಾಜ್ಯ ಸಂಘದ ಬೈಲಾ ಪ್ರಕಾರ ನಮ್ಮ ಸಂಘದ ಸದಸ್ಯರ ಸಂಖ್ಯೆ 700 – 800 ಆಗುತ್ತೆ. ಈಗ ಇರುವ 400 ಸದಸ್ಯರಿಗೆ ಎಲ್ಲಾ ಅನುಕೂಲ ಕೊಡಲು ಆಗುತ್ತಿಲ್ಲ. 400 ಸದಸ್ಯರು ಇದ್ದಾಗಲೇ ದಸರಾದಲ್ಲಿ ಒಂದೊಂದು ಪಾಸ್ ಬರುತ್ತೆ. ನಮ್ಮ ಸಂಖ್ಯೆ 700 ದಾಟಿದ್ದಾಗ ಮೂವರಿಗೆ ಒಂದು ಪಾಸ್ ಅನ್ನೋ ಸ್ಥಿತಿ ಬರಬಹುದು.

ಮೈಸೂರು ಜಿಲ್ಲಾ ಪತ್ರಕರ್ತರ ವಲಯದಲ್ಲಿ ಈ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಅಡಾಕ್‌ ಸಮಿತಿಯ ಬಾಲಕೃಷ್ಣ ಮದ್ದೂರು ಸ್ಪಷ್ಟನೆ ನೀಡಿದ್ದು, ತಾಲೂಕು, ಜಿಲ್ಲಾ, ರಾಜ್ಯ ಸಂಘದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗಬೇಕು. ಹೆಚ್ಚಿನ ವಿಷಯಗಳನ್ನು ರಾಜ್ಯ ಸಂಘದ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಏನೇ ಗೊಂದಲಗಳಿದ್ದರೂ ಸರಿಪಡಿಸುವ ಭರವಸೆಯನ್ನು ರಾಜ್ಯ ಸಂಘದ ಅಧ್ಯಕ್ಷರ ನೀಡಿದ್ದಾರೆ ಎಂದಿದ್ದಾರೆ.

ಸದ್ಯ ನಮ್ಮ ಸಂಘದಲ್ಲಿನ ನಗರ ವ್ಯಾಪ್ತಿಯ ಸದಸ್ಯರು ಮತ್ತು ಗ್ರಾಮಾಂತರದಲ್ಲಿ ಕೆಲಸ ಮಾಡುತ್ತಿರುವ ಉತ್ಸಾಹಿಗಳಿಗೆ ಹೊಸ ನಿಬಂಧನೆಗಳಿಂದ ಯಾವುದೇ ಸಮಸ್ಯೆಯಾಗಬಾರದೆನ್ನುವುದು ನನ್ನ ನಿಲುವು. ತಾಲ್ಲೂಕಿನಲ್ಲಿ ಸದಸ್ಯತ್ವ ನೀಡಲು ತಾಲೂಕು ಸಂಘವೇ ಅಂತಿಮ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಘಗಳೇ ಸದಸ್ಯತ್ವ ನೀಡುತ್ತಾ ಬಂದಿವೆ. ಸರ್ವ ಸಮ್ಮತವಾಗಿ ಒಪ್ಪಿದ ಪಟ್ಟಿಯನ್ನು ರಾಜ್ಯ ಸಂಘ ಪ್ರತಿವರ್ಷ ಅನುಮೋದಿಸಿ ಸದಸ್ಯತ್ವ ಕಾರ್ಡ್ ನೀಡುತ್ತಾ ಬಂದಿದೆ. ವ್ಯತ್ಯಾಸಗಳಾದಾಗ ಸರಿಪಡಿಸಿದೆ. ಆ ಪ್ರಕಾರವೇ ಚುನಾವಣೆಯೂ ನಡೆದುಕೊಂಡು ಬರುತ್ತಿದೆ.ಹಾಗೆ ಮುಂದುವರಿಯಲಿ ಮುಂದಿನ ನಡೆ ಬಗ್ಗೆ ಹೊಸ ಆಡಳಿತ ಮಂಡಳಿ ನಿರ್ಧರಿಸಲಿ ಎಂದಿದ್ದಾರೆ ಬಾಲಕೃಷ್ಣ ಮದ್ದೂರು.

 

 

 

 

 

Leave a Reply

Your email address will not be published. Required fields are marked *