manila ವಿಟ್ಲ ಡಿ. 26: ಬಂಟ್ವಾಳ ತಾಲೂಕು ವಿಟ್ಲ ಬಳಿಯ ಮಾಣಿಲ ಗ್ರಾಮದ ತಾರಿದಳ Taridala ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ anganwadi ವಾರ್ಷಿಕೋತ್ಸವ ಮತ್ತು ಸ್ತ್ರೀ ಶಕ್ತಿ ಗಂಪಿನ ವಾರ್ಷಿಕ ದಿನಾಚರಣೆ ಆಚರಿಸಲಾಯಿತು.
ಮನೆಯೇ ಮೊದಲ ಪಾಠಶಾಲೆ ತಂದೆ ತಾಯಿಯೆ ಮೊದಲ ಗುರು ಎಂಬಂತೆ ಮನೆಯಲ್ಲಿ ತಂದೆ ತಾಯಿ ಮತ್ತು ಮನೆಯವರು ಸಂಸ್ಕಾರಯೂತವಾಗಿ ಮಕ್ಕಳೊಂದಿಗೆ ಬೆರೆತರೆ ಮಕ್ಕಳು ಆ ಸಂಸ್ಕಾರವನ್ನು ಕಲಿತು ಸಂಸ್ಕಾರಯೂತ ಮಕ್ಕಳಾಗಿ ಬೆಳೆಯಲು ಸಾಧ್ಯ ಎಂದು ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಶ್ರೀಧರ್ ಬಾಳೆಕಲ್ಲು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದರು.
Taridala ಅಂಗನವಾಡಿ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ವಿವಿಧ ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಗ್ರಾಮಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ವನಿತಾ, ಗ್ರಾ ಪಂಚಾಯತ್ ಸದಸ್ಯ ವಿಷ್ಣುಭಟ್ ಕೊಮ್ಮುಂಜೆ, ಕಾಮಜಾಲು ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಧಾ, ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ ಶ್ರೀಮತಿ ಹರಿಣಾಕ್ಷಿ, ಆಶಾ ಕಾರ್ಯಕರ್ತೆ ಶ್ರೀಮತಿ ಜಾನಕಿ ತಾರಿದಳ,ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಸುಜಾತ ಕುಕ್ಕಾಜೆ, ಸಹಾಯಕಿ ಪ್ರೇಮಾ, ಮತ್ತಿತರರು ಉಪಸ್ಥಿತರಿದ್ದರು.
ಸ್ತ್ರೀಶಕ್ತಿ ಗುಂಪಿನ ಶ್ರೀಮತಿ ಅನುರಾಧ ಪಳನೀರು ಸ್ವಾಗತಿಸಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರೇವತಿ ಟೀಚರ್ ತಾರಿದಳ ಕಾರ್ಯಕ್ರಮ ನಿರೂಪಣೆಮಾಡಿ ವಂದಿಸಿದರು .
Kerala to Dubai cruise ದುಬೈಗೆ ಕೇರಳದಿಂದ ಕ್ರೂಸ್ ದರ ಎಷ್ಟು ಗೊತ್ತೆ?