Mangalore TDR Scam ಮರಕಡ ಗ್ರಾಮದ 9.15 ಎಕರೆ ಜಮೀನು ಟಿಡಿಆರ್ (TDR)ಮೂಲಕ ಖರೀದಿ
ದುರ್ಬಲ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ವಸತಿ ಯೋಜನೆಗೆ ಜಮೀನು
ವಸತಿ ಯೋಜನೆಗೆ ಅಯೋಗ್ಯವಾದ ಜಮೀನು- ಆರೋಪ
ಜಮೀನು ದಕ್ಷಿಣದಿಂದ ಉತ್ತರಕ್ಕೆ ಇಳಿಜಾರಾಗಿದೆ, ಪೂರ್ವದಿಂದ ಪಶ್ಚಿಮಕ್ಕೆ ಇಳಿಜಾರಾಗಿದೆಃ ಪಾಲಿಕೆ ಟಿಪ್ಪಣಿ
ಪರಿಷತ್ತಿನ ಮಂಜೂರಾತಿಯನ್ನು ನಿರೀಕ್ಷಿಸಿ ಪೂರ್ವಬಾವಿ ಅನುಮೋದನೆ
ಬಿಜೆಪಿ ಶಾಸಕ ಉಮನಾಥ ಕೋಟ್ಯಾನ್ ಅವರ ಬೊಂದೇಲ್ ನಿವಾಸ ಸಮೀಪದ ನಿವೇಶನ
ಬೆಳಗಾವಿ ಅಧಿವೇಶನ ವಿಷಯ ಪ್ರಸ್ತಾವಿಸುವರೇ ಶಾಸಕ ಉಮನಾಥ ಕೋಟ್ಯಾನ್ ?
ಮಂಗಳೂರು, ಆಗಸ್ಟ್ 2 (www.kannadadhvani.com ) ಮಂಗಳೂರು ನಗರದ ಬೊಂದೇಲ್ ಸಮೀಪ ಮರಕಡ (Marakada) ಗ್ರಾಮದ 9.15 ಎಕರೆ ಜಮೀನು ಟಿಡಿಆರ್ (TDR) ಮೂಲಕ ಖರೀದಿಸಿ ವಸತಿಯೋಜನೆಗೆ ಭೂಸ್ವಾಧೀನ ಪಡಿಸುವ ನಿರ್ಧಾರ ಹಗರಣದ ಸ್ವರೂಪ ಪಡೆಯುತ್ತಿದೆ.
Mangalore TDR Scam 100 ಕೋಟಿ ರೂ. ಟಿಡಿಆರ್ ಹಗರಣ
ಒಂದೆಡೆ ರಾಜ್ಯ ಸರಕಾರ ಮುಡಾ ನಿವೇಶನ ಹಗರಣದಲ್ಲಿ ವಿಲವಿಲ ಒದ್ದಾಡುತ್ತಿದ್ದರೆ, ಇನ್ನೊಂದೆಡೆ ಮಂಗಳೂರು ನಗರಪಾಲಿಕೆ ನಗರದ ಬಡವ ಮಧ್ಯಮ ವರ್ಗದ ವ್ಯಾಪಾರಿಗಳ ಗೂಡಂಗಡಿಗಳನ್ನು ಎತ್ತಂಗಡಿ ಮಾಡುವ ಕರಸೇವೆಯಲ್ಲಿ ಬ್ಯುಸಿಯಾಗಿದ್ದು, ಇನ್ನೊಂದೆಡೆ ಶ್ರೀಮಂತರಿ ಭೂರಿ ಭೋಜನ ಬಡಿಸಲು ಸನ್ನಧ್ಧವಾಗಿದೆ.
ಮಂಗಳೂರು (Mangalore) ಮಹಾನಗರ ಪಾಲಿಕೆಯಲ್ಲಿ 100 ಕೋಟಿ ರೂ. ಟಿಡಿಆರ್ ಹಗರಣ ನಡೆಯುತ್ತಿದೆ ಎನ್ನಲಾಗುತ್ತಿದೆ.
ಕಳೆದ ಜೂನ್ ತಿಂಗಳಲ್ಲಿ ಮಂಗಳೂರಿನ ಮರಕಡ ಗ್ರಾಮದಲ್ 9.15 ಎಕರೆ ಭೂಮಿಯನ್ನು ಟಿಡಿಆರ್ ಆಧಾರದ ಮೇಲೆ ಸ್ವಾಧೀನಪಡಿಸಿಕೊಳ್ಳುವ ಕಾರ್ಯಸೂಚಿಯನ್ನು ಮಂಗಳೂರು ಪಾಲಿಕೆಯ ಮಾಸಿಕ ಪರಿಷತ್ತು ಸಭೆಗೆ ಮಂಡಿಸಿತ್ತು. ಆದರೆ, ಕಳೆದ ತಿಂಗಳು ಈ ಅಜಂಡವನ್ನು ಮುಂದೂಡಲಾಗಿತ್ತು.
ಆದರೆ, ಜುಲೈ 24ರಂದು ನಡೆದ ಪರಿಷತ್ತಿನ ಸಾಮಾನ್ಯ ಸಭೆ ಆರಂಭ ಆಗುತ್ತಿದ್ದಂತೆ ಸಭಾ ಕಲಾಪಗಳ ಸಂಪ್ರದಾಯ ಮತ್ತು ನಿಯಮಗಳನ್ನು ಬದಿಗೊತ್ತಿ ಕಳೆದ ತಿಂಗಳು ಮುಂದೂಡಲಾದ ಅಜೆಂಡ ಸಂಖ್ಯೆ 21 ಅನ್ನು ಅಂಗೀಕರಿಸಲಾಗಿದೆ ಎಂದು ಘೋಷಿಸಲಾಯಿತು.
ಈ ಮಧ್ಯೆ, ಕಳೆದ ತಿಂಗಳಲ್ಲೇ ಸಮಾನ ಮನಸ್ಕರ ಸಂಘಟನೆಯೊಂದು ಮರಕಡ ಗ್ರಾಮದಲ್ 9.15 ಎಕರೆ ಮತ್ತು ಪದವು ಗ್ರಾಮದಲ್ಲಿ 3.4 ಎಕರೆ ಭೂಮಿಯನ್ನು ಟಿಡಿಆರ್ TDR ಆಧಾರದ ಮೇಲೆ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿತ್ತು.
Mangalore TDR Scam ಪೂರ್ವಬಾವಿ ಅನುಮೋದನೆ
ಮಂಗಳೂರು ತಾಲೂಕು ಸುರತ್ಕಲ್ ಹೋಬಳಿ ಮರಕಡ ಗ್ರಾಮದ ಸರ್ವೇ ನಂಬ್ರ 81-2(ಪಿ) ಮತ್ತು 81-3 (ಪಿ)ರಲ್ಲಿನ ಒಟ್ಟು 9 ಎಕ್ರೆ 15 ಸೆಂಟ್ಸ್ ಜಾಗವನ್ನು ಟಿ.ಡಿ.ಆರ್ ನಿಯಮದಡಿ ಸ್ವಾಧೀನಪಡಿಸಿ ಸದ್ರಿ ಜಾಗದ ಮಾಲಿಕರಿಗೆ ಟಿ.ಡಿ.ಆರ್ ನೀಡಲು ಪರಿಷತ್ತಿನ ಮಂಜೂರಾತಿಯನ್ನು ನಿರೀಕ್ಷಿಸಿ ಪೂರ್ವಬಾವಿ ಅನುಮೋದನೆಯನ್ನು ಪಾಲಿಕೆ ನೀಡಿತ್ತು ಎನ್ನುತ್ತದೆ ಪಾಲಿಕೆ ಅಜೆಂಡ.
ಏನೀದು ಟಿ.ಡಿ.ಆರ್ ?
ಹಸ್ತಾಂತರಿಸಬಹುದಾದ ಅಭಿವೃದ್ಧಿ ಹಕ್ಕುಗಳು (Transferable Development Rights) (ಟಿಡಿಆರ್) ಸರಳವಾಗಿ ಹೇಳಬಹುದು. ಆದರೆ, ಟಿಡಿಆರ್ ವ್ಯವಹಾರ ಅಷ್ಟು ಸರಳವಾಗಿಲ್ಲ. 1921ರಲ್ಲಿ ಜಾರಿಗೆ ಬಂದ ಕರ್ನಾಟಕ ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ತಿದ್ದುಪಡಿ ಕಾಯಿದೆ 2021ರ (ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ) ಸೆಕ್ಷನ್ 14-ಬಿ ಪ್ರಕಾರ ಟಿಡಿಆರ್ ನೀಡುವ ಪ್ರಕ್ರಿಯೆಗೆ ತಿದ್ಗುಪಡಿ ತರಲಾಯಿತು.
ಕಾಯಿದೆಯ ಪ್ರಕಾರ
(a) after the words “The Planning Authority shall issue
Development Rights” the words “in the form of Notional land”
shall be inserted;
(aa) the following shall be inserted at the end, namely:-
“The site remaining after surrender shall have same floor area
which was available before surrender for the original site or land
as per regulation.”;
“(13) The Development rights may be utilized within the same plot or
in other area in the same Local Planning area or as notified by the
Government, by the owner or the owner of such Development Rights may
transfer the Development rights to a transferee as Transferable
Development Rights which may be sold or utilized in any area as prescribed
within the Local Planning Area or as notified by the Government.
ಹೊಸ ಕಾಯಿದೆಯ ಸೆಕ್ಷನ್ 14-ಬಿಯ ಪ್ಯಾರ 13ರಲ್ಲಿ ಟಿಡಿಆರ್ ಎಂದರೇನು ಎನ್ನುವುದು ಗೊತ್ತಾಗುತ್ತದೆ.
ಹಳೆ ಕಾಯಿದೆ THE KARNATAKA TOWN AND COUNTRY PLANNING ACT, 1961 ರಲ್ಲಿ ಟಿಡಿಆರ್ ಬಗ್ಗೆ ವಿವರಿಸಲಾಗಿದೆ.
14B. Benefit of development rights.-(1) In a Local Planning Are
if any Public Authority requires any ‘Area’ for the public purpose, it shall notify the
same in such manner as may be prescribed and the owner of such ‘Area’ hands
over possession of such ‘Area’ free from all encumbrances to such Public Authority
in lieu of any compensation, under the Right to Fair Compensation and
Transparency in Land Acquisition, Rehabilitation and Resettlement Act, 2013
(central Act 30 of 2013) or any other law, he shall, notwithstanding anything
contained in this Act or regulations, be entitled to be granted Development Rights
(DR) under this section subject to conditions specified below. The Planning
Authority shall issue Development Rights to such persons not more than the extent
specified in table below, subject to such terms and conditions as may be
prescribed.
14B. ಪ್ರಕಾರ ಅಭಿವೃದ್ಧಿ ಹಕ್ಕುಗಳು ಅಂದರೆ ದರೆ.-(1) ಸ್ಥಳೀಯ ಯೋಜನಾ ಪ್ರದೇಶದಲ್ಲಿದರೆ ನಗರದಲ್ಲಿ
ಯಾವುದೇ ಸಾರ್ವಜನಿಕ ಪ್ರಾಧಿಕಾರಕ್ಕೆ ಸಾರ್ವಜನಿಕ ಉದ್ದೇಶಕ್ಕಾಗಿ ಯಾವುದೇ ‘ನಿವೇಶನ’ ಅಗತ್ಯವಿದ್ದರೆ,
ಮತ್ತು ಅಂತಹ ‘ನಿವೇಶನ’ ಗಳ ಮಾಲೀಕರು ಸಾರ್ವಜನಿಕ ಪ್ರಾಧಿಕಾರಕ್ಕೆ ನೀಡಲು ಬಯಸುವುದಾದರೆ
ಯಾವುದೇ ಪರಿಹಾರದ ಬದಲಿಗೆ, ನ್ಯಾಯಯುತ ಪರಿಹಾರದ ಹಕ್ಕಿನ ಅಡಿಯಲ್ಲಿ ಮತ್ತು ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸತಿ ಕಾಯಿದೆ, 2013 ರಲ್ಲಿ ಪಾರದರ್ಶಕತೆ (2013 ರ ಕೇಂದ್ರ ಕಾಯಿದೆ 30) ಅಥವಾ ಯಾವುದೇ ಇತರ ಕಾನೂನಿನ ಹೊರತಾಗಿಯೂ ಈ ಕಾಯಿದೆ ಅಥವಾ ನಿಬಂಧನೆಗಳಲ್ಲಿ ಒಳಗೊಂಡಿರುವ, ಅಭಿವೃದ್ಧಿ ಹಕ್ಕುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅವರಿಗೆ ನೀಡಲಾದ ಟಿಡಿಆರ್ ಅನ್ನು ಅವರು ನಗರದ ಇನ್ಯಾವುದೇ ಪ್ರದೇಶದಲ್ಲಿ ಉಪಯೋಗಿಸಬಹುದು ಅಥವ ಮಾರಾಟ ಮಾಡಬಹುದು.
ಇಂತಹ ಟಿಡಿಆರ್ ಅನ್ನು ಹೆಚ್ಚಾಗಿ ಬಿಲ್ಡರುಗಳು ಬಳಸಿಕೊಳ್ಳುತ್ತಾರೆ ಮತ್ತು ಇದರಿಂದ ಅವರಿಗೆ ಹೆಚ್ಚಿನ ಪ್ರಯೋಜನ ಅಥವ ಲಾಭ ಇರುತ್ತದೆ.
ಕೌನ್ಸಿಲ್ ಸಭೆಗೆ ಮಂಡಿಸಿದ ಅಜೆಂಡ
ಮಂಗಳೂರು ಮಹಾನಗರಪಾಲಿಕೆ ಜೂನ್ ತಿಂಗಳ ಕೌನ್ಸಿಲ್ ಸಭೆಗೆ ಮಂಡಿಸಿದ ಅಜೆಂಡ ಈ ಕೆಳಗೆ ಯಥಾವತ್ತಾಗಿ ನೀಡಲಾಗಿದೆಃ
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಮರಕಡ ಗ್ರಾಮದ ಸರ್ವೆ ನಂಬ್ರ: ೮೧-೨(ಪಿ)
ಮತ್ತು ೮೧-೩(ಪಿ) ರಲ್ಲಿನ ಒಟ್ಟು ೦೯.೧೫ ಎಕ್ರೆ ಜಮೀನಿಗೆ ಪಾಲಿಕೆ ವತಿಯಿಂದ ಟಿ.ಡಿ.ಆರ್
(Transferable Development Rights) ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಕಚೇರಿ
ಟಿಪ್ಪಣಿಯೊಂದಿಗೆ ಪರಿಷತ್ತಿಗೆ ಕಾರ್ಯಸೂಚಿ ಮಂಡಿಸಿದೆ.
ಕಚೇರಿ ಟಿಪ್ಪಣಿ
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ದುರ್ಬಲ ವರ್ಗದವರಿಗೆ ಹಾಗೂ ಆರ್ಥಿಕವಾಗಿ
ಹಿಂದುಳಿದ ವರ್ಗದವರಿಗೆ ವಸತಿ ಯೋಜನೆಯನ್ನು ಕಲ್ಪಿಸಲು ಅವಶ್ಯವಿರುವ ಜಮೀನನ್ನು ಟಿ.ಡಿ.ಆರ್
ನಿಯಮದಡಿ ಪಡೆದುಕೊಳ್ಳುವ ಬಗ್ಗೆ ದಿನಾಂಕ: ೨೮-೦೧-೨೦೨೪ ರಂದು ಪತ್ರಿಕಾ ಪ್ರಕಟಣೆಯನ್ನು
ನೀಡಲಾಗಿದ್ದು, ಈ ಸಂಬಂಧ ಶ್ರೀ ರೋಹನ್ ಮೊಂತೆರೊ ಬಿನ್ ದಿ|| ಜಿ. ಆರ್. ಮೊಂತೆರೊರವರು
ದಿನಾಂಕ: ೨೮-೦೨-೨೦೨೪ ರಂದು ಮಾನ್ಯ ಮಹಾಪೌರರಿಗೆ ಮನವಿ ನೀಡಿ ಮಂಗಳೂರು
ಮಹಾನಗರಪಾಲಿಕೆ ವ್ಯಾಪ್ತಿಯ ಮರಕಡ ಗ್ರಾಮದ ಸರ್ವೆ ನಂಬ್ರ: ೮೧-೨(ಪಿ) ಮತ್ತು ೮೧-೩(ಪಿ) ರಲ್ಲಿನ
ಒಟ್ಟು ೦೯.೧೫ ಎಕ್ರೆ ಜಾಗವನ್ನು ಟಿ.ಡಿ.ಆರ್ ನಿಯಮದಡಿ ಪಾಲಿಕೆಗೆ ನೀಡಲು ಒಪ್ಪಿ ದಾಖಲೆಗಳೊಂದಿಗೆ
ಪತ್ರ ನೀಡಿರುತ್ತಾರೆ. ಸದರಿ ಸ್ಥಳಕ್ಕೆ ೪೦ ಅಡಿ ಅಗಲದ ರಸ್ತೆಯಿರುವುದಾಗಿ ತಿಳಿಸಿರುತ್ತಾರೆ. ಕರ್ನಾಟಕ
ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಪ್ರಕರಣ ೧೪ಬಿ ರಡಿಯಲ್ಲಿ ಸಾರ್ವಜನಿಕ
ಉದ್ದೇಶಕ್ಕಾಗಿ ಟಿ.ಡಿ.ಆರ್ ಮೂಲಕ ಜಮೀನು ಸ್ವಾಧೀನ ಪಡಿಸಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ
ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಪ್ರಕರಣ ೧೪ಬಿರಂತೆ ಸಾರ್ವಜನಿಕ ಉದ್ದೇಶಕ್ಕಾಗಿ
ಟಿ.ಡಿ.ಆರ್ ಮುಖೇನ ಭೂಮಿ ಪಡೆಯಲು ಅವಕಾಶ ಇರುತ್ತದೆ.
ಸದರಿ ಪ್ರದೇಶವು ಈ ಹಿಂದೆ ದಿನಾಂಕ: ೨೭-೦೭-೨೦೨೧ರ ಪರಿಷತ್ ನಿರ್ಣಯದಂತೆ ಐ.ಟಿ
ಪಾರ್ಕ್ ನಿರ್ಮಾಣ ಉದ್ದೇಶಕ್ಕಾಗಿ ಟಿ.ಡಿ.ಆರ್ ಮುಖೇನ ಭೂ ಸ್ವಾಧೀನ ಮಾಡಲು
ತೀರ್ಮಾನಿಸಲಾಗಿದೆ. ಆದರೆ ಐ.ಟಿ ಪಾರ್ಕ್ ಅನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಎಂದು ಪರಿಗಣಿಸಲು
ಅವಕಾಶವಿಲ್ಲದ ಕಾರಣ ಸರ್ಕಾರದ ಹಂತದಲ್ಲಿ ಸದರಿ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ.
ಸ್ಥಳ ಪರಿಶೀಲಿಸಿದಾಗ ಸದರಿ ಪ್ರದೇಶವು ದಕ್ಷಿಣದಿಂದ ಉತ್ತರಕ್ಕೆ ಇಳಿಜಾರಾಗಿದೆ. ಪಶ್ಚಿಮದಿಂದ
ಮಧ್ಯ ಭಾಗಕ್ಕೆ (ಪೂರ್ವಕ್ಕೆ) ಹಾಗೂ ಪೂರ್ವದಿಂದ ಮಧ್ಯ ಭಾಗಕ್ಕೆ (ಪಶ್ಚಿಮಕ್ಕೆ) ಸಹ ಇಳಿಜಾರಾಗಿದೆ.
ಮೇಲ್ಕಂಡ ಅಂಶಗಳೊಂದಿಗೆ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಮರಕಡ ಗ್ರಾಮದ
ಸರ್ವೆ ನಂಬ್ರ: ೮೧-೨(ಪಿ) ಮತ್ತು ೮೧-೩(ಪಿ) ರಲ್ಲಿನ ಒಟ್ಟು ೦೯.೧೫ ಎಕ್ರೆ ಜಾಗವನ್ನು ಟಿ.ಡಿ.ಆರ್
ನಿಯಮದಡಿ ದುರ್ಬಲ ವರ್ಗದವರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ವಸತಿ
ಯೋಜನೆಯನ್ನು ಕಲ್ಪಿಸಲು ಅವಶ್ಯವಿರುವ ಜಮೀನನ್ನು ಸ್ವಾಧೀನಪಡಿಸಿ ಜಾಗದ ಮಾಲೀಕರಿಗೆ
ಟಿ.ಡಿ.ಆರ್ ನೀಡಲು ಸೂಕ್ತ ತೀರ್ಮಾನಕ್ಕಾಗಿ ಪರಿಷತ್ತಿಗೆ ಕಾರ್ಯಸೂಚಿಯನ್ನು ಮಂಡಿಸಿದೆ.
ಕಚೇರಿ ಟಿಪ್ಪಣಿಯನ್ನು ಪರಿಶೀಲಿಸಲಾಯಿತು. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ದುರ್ಬಲ
ವರ್ಗದವರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ವಸತಿ ಯೋಜನೆಯನ್ನು ಕಲ್ಪಿಸಲು ಮರಕಡ
ಗ್ರಾಮದ ಸರ್ವೇ ನಂಬ್ರ ೮೧-೨(ಪಿ) ಮತ್ತು ೮೧-೩ (ಪಿ)ರಲ್ಲಿನ ಒಟ್ಟು ೦೯.೧೫ ಎಕ್ರೆ ಜಾಗವನ್ನು ಟಿ.ಡಿ.ಆರ್
ನಿಯಮದಡಿ ಸ್ವಾಧೀನಪಡಿಸಿ ಸದ್ರಿ ಜಾಗದ ಮಾಲಿಕರಿಗೆ ಟಿ.ಡಿ.ಆರ್ ನೀಡಲು ಪರಿಷತ್ತಿನ
ಮಂಜೂರಾತಿಯನ್ನು ನಿರೀಕ್ಷಿಸಿ ಪೂರ್ವಬಾವಿ ಅನುಮೋದನೆ ನೀಡಿದೆ.
ಇದನ್ನು ಓದಿಃ ಗೂಡಂಗಡಿ ತೆರವಿಗೆ ಮಂಜುಳಾ ನಾಯಕ್ ಖಂಡನೆ
Mangalore TDR Scam ಜುಲೈ ತಿಂಗಳ ಪಾಲಿಕೆ ಕಲಾಪದಲ್ಲಿ ಏನು ನಡೆಯಿತು
ಸಾರ್ವಜನಿಕರ ಉಪಸ್ಥಿತಿಯಲ್ಲೇ ಜುಲೈ 25ರಂದು ಕೌನ್ಸಿಲ್ ಸಭೆ ನಡೆಯಿತು. ಮೇಯರ್ ಸುಧೀರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ, 12.45 ಎಕರೆ ಭೂಮಿಯನ್ನು ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ ಮೂಲಕ ಸ್ವಾಧೀನಪಡಿಸಿಕೊಳ್ಳುವ ಅಜೆಂಡವನ್ನು ಎತ್ತಿ ಕೊಳ್ಳಲಾಯಿತು. ಇದಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಅಬ್ದುಲ್ ರವೂಫ್ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ತರಾತುರಿಯಲ್ಲಿ ನಿರ್ಧರಿಸುವ ಕುರಿತು ರವೂಫ್ ನಗರ ಪಾಲಿಕೆಯನ್ನು ಪ್ರಶ್ನಿಸಿದರು. ತಮ್ಮ ಆಕ್ಷೇಪವನ್ನು ದಾಖಲಿಸುವುದಾಗಿ ಸಭಾಧ್ಯಕ್ಷರು ತಿಳಿಸಿದರು.
ಆಕ್ಷೇಪ ದಾಖಲಿಸಿದರೆ ಸಾಲದು ಇದರಿಂದ ಪಾಲಿಕೆಗೆ ಗಬಹುದಾದ ಸಂಭಾವ್ಯ ಆರ್ಥಿಕ ನಷ್ಟಗಳು ಮತ್ತು ವಸತಿ ಯೋಜನೆಗೆ ಅನರ್ಹವಾದ ಜಮೀನು ವಿಚಾರವಾಗಿ ಮಾತನಾಡಲು ಸಮಯ ಕೋರಿದರು. ಮತ್ತು ಅಬ್ದುಲ್ ರವೂಫ್ ಮಾತನಾಡಿ, ಟಿಡಿಆರ್ ಮೂಲಕ ಭೂಮಿ ಸ್ವಾಧೀನಪಡಿಸಿಕೊಂಡರೆ ಮಹಾನಗರ ಪಾಲಿಕೆಗೆ 50 ಕೋಟಿ ರೂ.ನಷ್ಟ ಆಗಲಿದೆ. ಭೂಸ್ವಾಧೀನಕ್ಕೆ ಟಿಡಿಆರ್ ಏಕೆ ನೀಡಬೇಕು. ಟಿಡಿಆರ್ ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳಲು ಗುರುತಿಸಲಾದ ಜಮೀನು ನಗರ ನಿಗಮವು ಯೋಜಿಸಿದಂತೆ ವಸತಿ ಯೋಜನೆಗಳಿಗೆ ಸೂಕ್ತವಲ್ಲ ಎಂದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ನಗರದಲ್ಲಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಲು ಟಿಡಿಆರ್ ಆಧಾರದ ಮೇಲೆ ಎಂಸಿಸಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸೂಚಿಸಿದ್ದಾರೆ ಎಂದು ಮೇಯರ್ ಹೇಳಿದರು .
ಆಕ್ಷೇಪಣೆಗಳ ಹೊರತಾಗಿಯೂ, ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು.
ಅಬ್ದುಲ್ ರವೂಫ್ ಮತ್ತು ಅಬ್ದುಲ್ ಲತೀಫ್ ಹೊರತುಪಡಿಸಿ, ಯಾವುದೇ ಕಾರ್ಪೊರೇಟರ್‌ಗಳು ಮಂಗಳೂರು ಮಹಾನಗರ ಪಾಲಿಕೆ ಕೌನ್ಸಿಲ್‌ನಲ್ಲಿ ಪ್ರಸ್ತಾವನೆಗೆ ಆಕ್ಷೇಪಣೆ ಎತ್ತಲಿಲ್ಲ.
ಟಿಡಿಆರ್ ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳಲು ಗುರುತಿಸಲಾದ ಜಮೀನು ನಗರ ನಿಗಮವು ಯೋಜಿಸಿದಂತೆ ವಸತಿ ಯೋಜನೆಗಳಿಗೆ ಸೂಕ್ತವಲ್ಲ ಎಂದು ಅಬ್ದುಲ್ ರವೂಫ್ ಮತ್ತು ಅಬ್ದುಲ್ ಲತೀಫ್ ಅವರು ಸೂಚಿಸಿದರು. ಆದರೆ, ಪ್ರತಿಪಕ್ಷಗಳ ಆಕ್ಷೇಪಣೆಗಳನ್ನು ದಾಖಲಿಸುವ ಮೂಲಕ ಪರಿಷತ್ತು ಪ್ರಸ್ತಾವನೆಯನ್ನು ಅಂಗೀಕರಿಸಿತು.
ಟಿಡಿಆರ್ ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳುವ ಅಗತ್ಯ ಏನೀದೆ ಎಂದು ಫಳ್ನಿರ್ ವಾರ್ಡ್ ಕೌನ್ಸಿಲ್ ಅಬ್ದುಲ್ ರವೂಫ್ ಮತ್ತು ಬಂದರು ವಾರ್ಡ್ ಕೌನ್ಸಿಲರ್ ಲತೀಫ್ ಸಭೆಯಲ್ಲಿ ಹಲವು ಬಾರಿ ಮೇಯರ್ ಅವರನ್ನು ಪ್ರಶ್ನಿಸಿದರು ಎಂದು ದಿ ಹಿಂದೂ ಮತ್ತು ಟೈಮ್ಸ್ ಆಫ್ ಇಂಡಿಯ ವರದಿ ಮಾಡಿದೆ.
ಮರಕಡ ಅಲ್ಲದೆ ನಗರದ ವಿವಿಧ ಸ್ಥಳಗಳಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮಂಗಳೂರು ನಗರಪಾಲಿಕೆ ಇವೆರಡು ಸಭೆಗಳಲ್ಲಿ ನಿರ್ಣಯ ಕೈಗೊಂಡಿದೆ.
ಸಮಾನ ಮನಸ್ಕ ಸಂಘಟನೆಗಳ ವೇದಿಕೆವಿರೋಧ
TDR ಆಧಾರದ ಮೇಲೆ ಹೆಚ್ಚಿನ ಪ್ರಮಾಣದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮಂಗಳೂರು ಮಹಾನಗರ ಪಾಲಿಕೆಯ (ಎಂಸಿಸಿ) ನಿರ್ಧಾರವನ್ನು ವಿರೋಧಿಸಿ ಸಮಾನ ಮನಸ್ಕ ಸಂಘಟನೆಗಳ ವೇದಿಕೆಯು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಬಹಿರಂಗ ಪತ್ರ ಬರೆದಿದೆ. ಇತ್ತೀಚೆಗೆ ನಡೆದ ಕೌನ್ಸಿಲ್ ಸಭೆಯಲ್ಲಿ ಇದಲ್ಲದೆ ಟಿಡಿಆರ್ ಆಧಾರದ ಮೇಲೆ ನಗರದ ವಿವಿಧ ಸ್ಥಳಗಳಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಪಾಲಿಕೆ ನಿರ್ಣಯಗಳನ್ನು ಕೈಗೊಂಡಿದೆ.
ಟಿಡಿಆರ್‌ಗೆ ಬದಲಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಹಗರಣವಾಗಿದೆ ಎಂದು ಹೇಳಿರುವ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟವು ಪಾಲಿಕೆಯಲ್ಲಿ ನಡೆದಿರುವ ಇಂತಹ ಎಲ್ಲಾ ವ್ಯವಹಾರಗಳ ಬಗ್ಗೆ ತನಿಖೆಗೆ ಆದೇಶಿಸುವಂತೆ ಸಚಿವರನ್ನು ಒತ್ತಾಯಿಸಿದೆ.
“ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಬಳಸಬೇಕಾದ ಟಿಡಿಆರ್‌ನ ನಿಬಂಧನೆಯನ್ನು ಪ್ರಭಾವಿ ವ್ಯಕ್ತಿಗಳಿಗೆ ಅವರ ವ್ಯವಹಾರಕ್ಕೆ ಸಹಾಯ ಮಾಡಲು ಬಳಸಲಾಗುತ್ತಿದೆ. ರಸ್ತೆ, ಚರಂಡಿ, ಫುಟ್ ಪಾತ್ ಅಭಿವೃದ್ಧಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಟಿಡಿಆರ್ ಬಳಸಬೇಕಿದ್ದು, ಈಗ ಬಿಲ್ಡರ್ ಗಳ ಅನುಕೂಲಕ್ಕಾಗಿ ಬಳಸಲಾಗುತ್ತಿದೆ. ಇದರಿಂದ ಮಹಾನಗರ ಪಾಲಿಕೆ ಕೋಟ್ಯಂತರ ರೂಪಾಯಿ ಆದಾಯ ಕಳೆದುಕೊಳ್ಳುತ್ತಿದೆ’ ಎಂದು ಒಕ್ಕೂಟದ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದರು.
ಟಿಡಿಆರ್ ಆಧಾರದ ಮೇಲೆ ಭೂಸ್ವಾಧೀನದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮಾಜಿ ಆಯುಕ್ತರನ್ನು ಲೋಕಾಯುಕ್ತರು ಬಂಧಿಸಿರುವುದನ್ನು ಉಲ್ಲೇಖಿಸಿದ ಮುನೀರ್, ಈ ಘಟನೆಯು ಅಂದಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.
ನಗರದ ಮರಕಡದಲ್ಲಿ 9.1 ಎಕರೆ ಮತ್ತು ಪಡವುನಲ್ಲಿ 3.4 ಎಕರೆ ಭೂಮಿಯನ್ನು ಟಿಡಿಆರ್ ಆಧಾರದ ಮೇಲೆ ಸ್ವಾಧೀನಪಡಿಸಿಕೊಳ್ಳಲು ಪಾಲಿಕೆ ಏಕಪಕ್ಷೀಯವಾಗಿ ನಿರ್ಧರಿಸಿದೆ. ಈ ಹಿಂದೆ ಐಟಿ ಪಾರ್ಕ್ ಹೆಸರಿನಲ್ಲಿ ಟಿಡಿಆರ್ ಆಧಾರದ ಮೇಲೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ನಡೆದಿತ್ತು. ಆದರೆ, ಜನರಿಂದ ಆಕ್ಷೇಪಣೆ ವ್ಯಕ್ತವಾಗಿದ್ದರಿಂದ ಮಹಾನಗರ ಪಾಲಿಕೆ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಇದೀಗ ಅದೇ ಭೂಮಿಯನ್ನು ಬಡವರಿಗೆ ವಸತಿ ಯೋಜನೆ ನೆಪದಲ್ಲಿ ಸ್ವಾಧೀನಪಡಿಸಿಕೊಳ್ಳಲು ಮಹಾನಗರ ಪಾಲಿಕೆ ನಿರ್ಧರಿಸಿದೆ. ದುರದೃಷ್ಟವಶಾತ್, ಅಬ್ದುಲ್ ರವೂಫ್ ಮತ್ತು ಅಬ್ದುಲ್ ಲತೀಫ್ ಹೊರತುಪಡಿಸಿ, ಯಾವುದೇ ಕಾರ್ಪೊರೇಟರ್‌ಗಳು ಮಂಗಳೂರು ಮಹಾನಗರ ಪಾಲಿಕೆ ಕೌನ್ಸಿಲ್‌ನಲ್ಲಿ ಪ್ರಸ್ತಾವನೆಗೆ ಆಕ್ಷೇಪಣೆ ಎತ್ತಲಿಲ್ಲ ಎಂದು ಮುನೀರ್ ಹೇಳಿದರು, ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ ಆಧಾರದ ಮೇಲೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪಾಲಿಕೆಯ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ನೀಡದಂತೆ ಸಚಿವರನ್ನು ಒತ್ತಾಯಿಸಿದ್ದಾರೆ.
Mangalore TDR Scam ಅಡ್ಜ್ಸ್ ಮೆಂಟ್ ರಾಜಕೀಯದ ವಾಸನೆ
ಕಾಂಗ್ರೆಸ್ ಮತ್ತು ಬಿಜೆಪಿ ಅಡ್ಜ್ಸ್ ಮೆಂಟ್ ರಾಜಕೀಯ ನಡೆಸುತ್ತಿರುವ ಜಗಜಾಹೀರಾಗಿದ್ದು, ಇದೇ ಟಿಡಿಆರ್ ವ್ಯವಹಾರದಲ್ಲಿ ಎರಡೂ ಪಕ್ಷಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.