Malur Morarji Desai School ಮಾಲೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕರನ್ನು ಬಂಧಿಸಲು ಆಗ್ರಹ

Malur Morarji Desai School  ಮಂಗಳೂರು: ಮಾಲೂರು ತಾಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರನ್ನು ಬಂಧಿಸುವಂತೆ ಎಸ್ ಸಿ ಎಸ್ಟಿ ಸಂಸ್ಥೆಗಳ ಮಹಾ ಒಕ್ಕೂಟ ಒತ್ತಾಯಿಸಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯMalur  Morarji Desai School  ಮಕ್ಕಳನ್ನು ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರೇ ಮಲದ ಗುಂಡಿಯೊಳಗೆ ಇಳಿಸಿದ ಶಿಕ್ಷಕರನ್ನು ಅಮಾನತು ಮಾಡಿದರೆ ಸಾಲದು, ಅವರೆಲ್ಲರನ್ನು ಘೋರ ಅಪರಾಧಕ್ಕಾಗಿ ತಕ್ಷಣವೇ ಬಂಧಿಸಬೇಕು ಎಂದು ಮಂಗಳೂರಿನ ದಕ್ಷಿಣ ಕನ್ನಡ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ Confederation of SC/ST Organizations  ಅಧ್ಯಕ್ಷ ಲೋಲಾಕ್ಷ  ಒತ್ತಾಯಿಸಿದ್ದಾರೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರೇ ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿರುವ ಘಟನೆಯಿಂದ ಇಡೀ ಸಮಾಜವೇ ಬೆಚ್ಚಿ ಬಿದ್ದಿದೆ, ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಹೇಳಿರುವ ಲೋಲಾಕ್ಷ ಅವರು , ಇಬ್ಬರೂ, ಸ್ವತಃ ದಲಿತರಾಗಿದ್ದಾಗ್ಯೂ ದಲಿತ ವಿದ್ಯಾರ್ಥಿಗಳು ಇಂತಹ ಅಮಾನವೀಯ ದೌರ್ಜನ್ಯಗಳಿಗೆ ಮತ್ತು ತಾರತಮ್ಯಕ್ಕೆ ಬಲಿಯಾಗುವಂತಾಗಿರುವುದು ನಾಚಿಕೆಗೇಡು ಎಂದಿದ್ದಾರೆ.

ಸಮೂಹ ಮಾಧ್ಯಮ (ಪ್ರಜಾವಾಣಿ ಹಾಗೂ ಟಿವಿ9) ಈ ಅಮಾನವೀಯ ಹಾಗೂ ಘೋರ ಅಪರಾಧ ಕೃತ್ಯದ ಬಗ್ಗೆ ವಿಸ್ತ್ರತ ವರದಿಗಳನ್ನು ಪ್ರಸಾರ ಮಾಡಿದ ಬಳಿಕವೂ ಸರಕಾರ ಈ ಅಪರಾಧಿಗಳನ್ನು ಇನ್ನೂ ಬಂಧಿಸದೇ ಇರುವುದು ದಲಿತ ಸಮುದಾಯಗಳ ಬಗ್ಗೆ ಸರಕಾರದ, ಅದರಲ್ಲೂ ಮುಖ್ಯವಾಗಿ ಪೊಲೀಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ, ನಿಷ್ಕಾಳಜಿಯನ್ನು ತೋರಿಸುತ್ತದೆ ಎಂದಿದ್ದಾರೆ.

ರಾಜ್ಯದ ಗೃಹ ಸಚಿವರು ಮತ್ತು ಸಮಾಜ ಕಲ್ಯಾಣ ಸಚಿವರು, ಇಬ್ಬರೂ, ಸ್ವತಃ ದಲಿತರಾಗಿದ್ದಾಗ್ಯೂ ದಲಿತ ವಿದ್ಯಾರ್ಥಿಗಳು ಇಂತಹ ಅಮಾನವೀಯ ದೌರ್ಜನ್ಯಗಳಿಗೆ ಮತ್ತು ತಾರತಮ್ಯಕ್ಕೆ ಬಲಿಯಾಗುವಂತಾಗಿರುವುದು ನಾಚಿಕೆಗೇಡು. ಇದು ನಾಡಿನ ಪ್ರಜ್ಞಾವಂತ ಜನರಲ್ಲಿ ಅತ್ಯಂತ ನೋವುವುಂಟು ಮಾಡಿದೆಎಂದು ಲೋಲಾಕ್ಷ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಈ ಘಟನೆ ನಡೆದು, ಬೆಳಕಿಗೆ ಬಂದು ದಿನಗಳೇ ಕಳೆದ ಮೇಲೂ ಇನ್ನು ಆ ಪಾಪಿ ಶಿಕ್ಷಕರನ್ನು ಬಂಧಿಸದೇ ಇರುವುದನ್ನು ಗಮನಿಸಿದರೆ, ಕೋಲಾರದ ಜಿಲ್ಲಾಡಳಿತ, ಅದರಲ್ಲೂ ಮುಖ್ಯವಾಗಿ ಜಿಲ್ಲಾ ಎಸ್ ಪಿ ಮತ್ತು ಜಿಲ್ಲಾಧಿಕಾರಿ, ಹೊಟ್ಟೆಗೆ ಅನ್ನ ತಿನ್ನುತ್ತಾ ಇದ್ದಾರಾ ಅಥವಾ ಬೇರೇನಾದರೂ ತಿನ್ನುತ್ತಾ ಇದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

Bharat Jodo Yatra: ಡಿಸಂಬರಿನಲ್ಲಿ 2 ನೇ ಹಂತದ ಭಾರತ್​ ಜೋಡೋ ಯಾತ್ರೆ

ಬೆಳಗಾವಿ ಜಿಲ್ಲೆಯಲ್ಲಿ ದಲಿತ ಮಹಿಳೆಯ ಅಮಾನವೀಯ ಬೆತ್ತಲೆ ಮೆರವಣಿಗೆ ಮತ್ತು ದೌರ್ಜನ್ಯ ಪ್ರಕರಣ ಇನ್ನೂ ಹಚ್ಚ ಹಸಿರಾಗಿರುವಾಗಲೇ ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತ ಮಕ್ಕಳ ಮೇಲೆ ವಸತಿ ಶಾಲೆಯ ಶಿಕ್ಷಕರೇ ನಡೆಸುತ್ತಿರುವ ಈ ಘೋರ ಅಪರಾಧ ಈ ಸರಕಾರದ ‘ಜನಪರ’ ಮುಖವಾಡವನ್ನು ಕಳಚಿ ಹಾಕಿದೆ. ಈ ಘೋರ ಅಪರಾಧ ಕೃತ್ಯ ವನ್ನು ಮತ್ತು ಸರಕಾರದ ನಿಷ್ಕಾಳಜಿ ಯನ್ನು ನಾವು ಅತ್ಯಂತ ಕಠಿಣ ಶಬ್ಧ ಗಳಲ್ಲಿ ಖಂಡಿಸುತ್ತೇವೆ.

ಈ ಘಟನೆ ಬಗ್ಗೆ ರಾಜ್ಯದ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಆಯೋಗ, ರಾಜ್ಯದ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯದ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಮತ್ತು ಈ ಸಂತ್ರಸ್ತ ವಿದ್ಯಾರ್ಥಿಗಳಿಗೆ ನ್ಯಾಯ ಬದ್ಧ ಪರಿಹಾರ ವನ್ನು ಖಾತರಿ ಮಾಡಬೇಕು ಎಂದು ನಾವು ಆಗ್ರಹಿಸುತ್ತೇವೆ.

ಇದಲ್ಲದೆ, ಘೋರ ದಲಿತ ದೌರ್ಜನ್ಯ ವೆಸಗಿದ ಈ ಅಪರಾಧಿಗಳನ್ನು ನಿಯಮಾನುಸಾರ ತಕ್ಷಣ ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳದ ಜಿಲ್ಲಾ ಎಸ್ ಪಿ, ಮತ್ತು ಸಂಬಂಧ ಪಟ್ಟ ಪೊಲೀಸ್ ಠಾಣಾಧಿಕಾರಿಯನ್ನು ತಕ್ಷಣ ಸೇವೆಯಿಂದ ಅಮಾನತು ಮಾಡಿ, ಕರ್ತವ್ಯ ಲೋಪಕ್ಕಾಗಿ ಪರಿಶಿಷ್ಟರ ದೌರ್ಜನ್ಯ ತಡೆ ಕಾಯ್ದೆಯ ಕಲಂ 4 ರನ್ವಯ ಅವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದು ನಾವು ಸರಕಾರವನ್ನು ಆಗ್ರಹಿಸುತ್ತಿದ್ದೇವೆ.

Malur Morarji Desai School  ನಾಲ್ವರು ಸಿಬ್ಬಂದಿ ಅಮಾನತು

ಈ ಮಧ್ಯೆ, ಮಾಲೂರು ತಾಲೂಕಿನ ಯಲುವಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai Residential School) ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಕ್ಲೀನ್ ಮಾಡಿಸಿದ ಪ್ರಕರಣ ಸಂಬಂಧ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಪ್ರಕರಣದ ಬಗ್ಗೆ ಮಾಧ್ಯಮಗಳು (TV9 ಮತ್ತು prajavani)  ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್ ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರು ಕಳೆದ ಹಲವು ದಿನಗಳಿಂದ ಮಕ್ಕಳಿಗೆ ಹೊಡೆಯುವುದು, ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಕೂರಿಸಿ ಹಿಂಸೆ ನೀಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ವಸತಿ ಶಾಲೆಗೆ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಪರಿಶೀಲನೆ ನಡೆಸಿದ್ದರು. ಬಳಿಕ ಮಾತನಾಡಿದ್ದ ಅವರು, ಶೌಚಾಲಯ ಕ್ಲೀನ್ ಮಾಡಿಸಿದವರನ್ನು ಅಮಾನತು ಮಾಡುತ್ತೇವೆ. ಶಿಕ್ಷಕ ಅಭಿಷೇಕ್​ನನ್ನು​ ಕೆಲಸದಿಂದ ತೆಗೆದು ಹಾಕುತ್ತೇವೆ ಎಂದು ಹೇಳಿದ್ದರು.Malur Morarji Desai School

ಮಕ್ಕಳನ್ನ ಗುಂಡಿಗೆ ಇಳಿಸಿ ಕ್ಲೀನ್​ ಮಾಡಿಸಿರುವ ಬಗ್ಗೆ ಮಾಹಿತಿ ಬಂದಿದೆ. ಪ್ರಾಂಶುಪಾಲರು, ವಾರ್ಡನ್, ಗ್ರೂಪ್​ ಡಿ ಸೇರಿ ಎಲ್ಲರನ್ನೂ ಅಮಾನತು ಮಾಡಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾಗಿ ಇಲಾಖೆ ಸಚಿವ ಹೆಚ್​ಸಿ ಮಹಾದೇವಪ್ಪ ಹೇಳಿದ್ದರು. ಅಲ್ಲದೆ, ಇಂತಹ ಕೆಲಸ ರಾಜ್ಯದಲ್ಲಿ ಮಾಡಿಸದಂತೆ ಸುತ್ತೋಲೆ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಹೇಳಿದ್ದರು.

ಸಚಿವರ ಸೂಚನೆ ಮೇರೆಗೆ ವಸತಿ ಶಾಲೆಯ‌ ಪ್ರಾಂಶುಪಾಲೆ ಭಾರತಮ್ಮ, ಕ್ರಾಫ್ಟ್ ಶಿಕ್ಷಕ ಮುನಿಯಪ್ಪ, ಶಿಕ್ಷಕ‌ ಅಭಿಷೇಕ್​, ವಸತಿ ಶಾಲೆಯ ವಾರ್ಡನ್ ಮಂಜುನಾಥ್ ಎಂಬವರನ್ನು ಅಮಾನತು ಮಾಡಿ ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷ ಅವರು ಆದೇಶ ಹೊರಡಿಸಿದ್ದಾರೆ.

Malur Morarji Desai School

ಸಮಾಜ ಕಲ್ಯಾಣ ಸಚಿವರ ಪ್ರತಿಕ್ರಿಯೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಸಚಿವ ಡಾ‌.ಎಚ್.ಸಿ.ಮಹದೇವಪ್ಪ, ‘ಇದೊಂದು ತೀರಾ ಗಂಭೀರವಾದ ವಿಚಾರ. ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು ದೊಡ್ಡ ಲೋಪ ಎಸಗಿದ್ದಾರೆ. ಹೀಗಾಗಿ, ಅಮಾನತುಗೊಳಿಸಿ ತನಿಖೆ ನಡೆಸಲು ನಿರ್ದೇಶನ ನೀಡಿದ್ದೇನೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಮೊರಾರ್ಜಿ ದೇಸಾಯಿ ಶಾಲೆಗೆ ಜಿಲ್ಲಾ ನ್ಯಾಯಾಧೀಶರಾದ ಸುನೀಲ್‌ ಹೊಸಮಣಿ ಹಾಗೂ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಮಕ್ಕಳ ಬಳಿಯೂ ಸಮಸ್ಯೆಯನ್ನು ವಿಚಾರಿಸಿದ್ದಾರೆ. ಪ್ರತಿ ಕೊಠಡಿಗೂ ಭೇಟಿ ಕೊಟ್ಟು ಪರಿಶೀಲನೆ ‌ನಡೆಸಿದ ನ್ಯಾಯಾಧೀಶರು ಮಕ್ಕಳಿಂದ ದೂರು ಪಡೆದುಕೊಂಡರು.

ಪ್ರಿನ್ಸಿಪಾಲ್ ಸೇರಿ ಇಬ್ಬರ ಬಂಧನ.ಇಬ್ಬರ ಬಂಧನ

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಯಲವಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಮಾನವೀಯ ಕೃತ್ಯ ನಡೆದಿತ್ತು. ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಲಾಗಿತ್ತು. ಸದ್ಯ ಪ್ರಾಂಶುಪಾಲೆ ಭಾರತಮ್ಮ, ಸಹ ಶಿಕ್ಷಕ ಮುನಿಯಪ್ಪರನ್ನು ಮಾಸ್ತಿ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಹಾಸ್ಟೆಲ್ ವಾರ್ಡನ್ ಮಂಜುನಾಥ್ ಮತ್ತು ಅತಿಥಿ ಶಿಕ್ಷಕ ಅಭಿಷೇಕ್‌ ಪರಾರಿ ಆಗಿದ್ದು, ಹುಡುಕಾಟ ನಡೆಸುತ್ತಿದ್ದಾರೆ.

In a shocking incident at Malur Morarji Desai Residential School in Yaluvahalli, Malur taluk, Kolar students, all belonging to Scheduled Caste and Scheduled Tribe communities, were allegedly forced to clean a septic tank.

AIDS HIV: ಏಡ್ಸ್ ರೋಗ​ ಸೋಂಕಿತರಲ್ಲಿ ಕರ್ನಾಟಕ 9ನೇ ಸ್ಥಾನ ! ಏಡ್ಸ್ ಹರಡುವಿಕೆ ಇಳಿಕೆ

Leave a Reply

Your email address will not be published. Required fields are marked *