ಮಂಗಳೂರು, ಅ.1- ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದು, ಹಾಲಿ ಸಂಸದನನ್ನು ಹೊಂದಿರುವ ಭಾರತೀಯ ಜನತಾ ಪಾರ್ಟಿ ಮಧು ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ, ಜಾತ್ಯತೀತ ಮನೋಭಾವ ಹೊಂದಿರುವ ಹಿಂದುಳಿದ ವರ್ಗದ ಜನರು ಮತ್ತು ಹಿಂದುಳಿದ ವರ್ಗದ ಬಹುತೇಕ ಕಾಂಗ್ರೆಸ್ ಬೆಂಬಲಿಗರು ಸಚಿವ ಮಧು ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಡಿಗ, ಬಿಲ್ಲವ , ನಾಮಧಾರಿ ಸಮುದಾಯದ ಮಾತ್ರವಲ್ಲದೆ ಸಮಸ್ತ ಹಿಂದುಳಿದ ವರ್ಗಗಳು ಗೌರವಿಸುವ ಸ್ವಾಮೀಜಿ ಬ್ರಹ್ಮಶ್ರೀ ನಾರಾಯಣ ಶಕ್ತಿಪೀಠದ ಶ್ರೀಪ್ರಣವಾನಂದ ಸ್ವಾಮೀಜಿ ವಿರುದ್ಧವಾಗಿ ಸಚಿವ ಮಧು ಪ್ರತಿಕ್ರಿಯೆ ನೀಡಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ನೇಮಕವಾದ ಕೂಡಲೇ ಮಂಗಳೂರಿಗೆ ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮುಂಬರುವ ಚುನಾವಣೆ ಗೆಲ್ಲಲು ಬೇಕಾದ ಸರಿಯಾದ ಕ್ರಮಗಳನ್ನು ಕೈಗೊಳ್ಳುವ ಬದಲು ಸುದ್ದಿಮಾಧ್ಯಮ ಮತ್ತು ಜಿಲ್ಲಾ ಕಾಂಗ್ರೆಸ್ ಕಚೇರಿಯ ಕೆಲವು ಪಟ್ಟಭದ್ರರ ಹಿತಾಸಕ್ತಿಗೆ ಬಲಿಯಾಗಿರುವುದು ಸ್ಪಷ್ಟವಾಗಿದೆ.
ಮಂಗಳೂರಿನ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರು ಪ್ರಣವಾನಂದ ಸಸ್ವಾಮೀಜಿಯವರು ನಿಮ್ಮ(ಮಧು ಬಂಗಾರಪ್ಪ) ಮತ್ತು ಬಿಲ್ಲವ ಸಮುದಾಯದ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಉಲ್ಲೇಖಿಸಿ ಮಾತನಾಡಿದಾಗ ಶಿಕ್ಷಣ ಸಚಿವರು ಕೀಳಾಗಿ ಉತ್ತರ ನೀಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದು ಕರಾವಳಿಯಲ್ಲಿ ಕಾಂಗ್ರೆಸ್ ಮಾತ್ರವಲ್ಲದೆಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಧು ವಿರುದ್ಧ ಅಸಮಾಧಾನಕ್ಕೆ ಕಾರಣವಾಗಿದೆ.
ಇದು ಸಾರ್ವಜನಿಕ ಅಬಿಪ್ರಾಯವಾಗಿ ರೂಪುಗೊಂಡು ಗೆಲ್ಲಲು ಸಾಧ್ಯವೇ ಇಲ್ಲದ ಲೋಕಸಭಾ ಚುನಾವಣೆಯಲ್ಲಿ ಇನ್ನಷ್ಟು ಹಿನ್ನಡೆಯಾಗುವುದು ಬಹುತೇಕ ಸನ್ನಿಹಿತವಾಗಿದೆ.
ಎರಡನೇಯದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಯಾಕೆ ಸತತವಾಗಿ ಸೋಲುತ್ತಿದೆ ಎಂದು ತಿಳಿದುಕೊಳ್ಳದೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ ಅಥವ ಮಿಥುನ್ ರೈ ಸೋಲಲು ಬಿಜೆಪಿಯಾಗಲಿ ಪಕ್ಷದ ಕಾರ್ಯಕರ್ತರಾಗಲಿ ಕಾರಣರಲ್ಲ. ಬದಲಾಗಿ ಆಯಾಯ ಕಾಲದ ಶಾಸಕರು, ಮಾಜಿ ಶಾಸಕರು, ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಕಾರಣರಾಗಿತ್ತಾರೆ. ಬಿ. ಜನಾರ್ದನ ಪೂಜಾರಿ ಸತತವಾಗ ಸೋಲಲು ಎನು ಕಾರಣ ಎಂದು ತಿಳಿಯುವ ಗೋಜಿಗೆ ಇದುವರೆಗೆ ಕಾಂಗ್ರೆಸ್ ಮುಂದಾಗಿಲ್ಲ. ಆ ಕೆಲಸವನ್ನು ಮಧು ಕೂಡ ಮಾಡಿಲ್ಲ.
ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ ಅಥವ ಮಿಥುನ್ ರೈ ಹೆಡ್ ಮಾಸ್ಟರ್ ಆಗುವುದು ಜಿಲ್ಲೆಯ ಕಾಂಗ್ರೆಸ್ ಮುಕಂಡರಿಗ ಬೇಕಾಗಿಲ್ಲ. ಜನಾರ್ದನ ಪೂಜಾರಿಯಂತಹ ಸರ್ಕಸ್ ರಿಂಗ್ ಮಾಸ್ಚರನ್ನು Circus ring master ದಕ್ಷಿಣ ಕನ್ನಡದ ಮಾಜಿ, ಹಾಲಿ ಶಾಸಕರು ಒಪ್ಪುವುದಿಲ್ಲ.
1957 ರಿಂದ 1989ರ ತನಕ ನಿರಂತರವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಜಯಗಳಿಸುತ್ತಿದ್ದರು. 1977ರಿಂದ ಆರಂಭವಾಗಿ 1989ರ ಚುನಾವಣೆ ತನಕ ಬಿ. ಜನಾರ್ದನ ಪೂಜಾರಿಯವರೇ ಚುನಾವಣೆಯಲ್ಲಿ ಸತತ ನಾಲ್ಕು ಗೆದ್ದು ಬಂದರು. ಕೇಂದ್ರ ಸರಕಾರ ದಲ್ಲಿ ಸಚಿವರಾಗಿದ್ದರು.
1962 ರಲ್ಲಿ ಎ. ಶಂಕರ್ ಆಳ್ವ 1967ರಲ್ಲಿ ಕೊಡಗಿನ ಸಿಎಂ ಪೂಣಚ್ಚ 1971 ರಲ್ಲಿ ಕೆ.ಕೆ ಶೆಟ್ಟಿ ಲೋಕಭಾ ಸದಸ್ಯರಾಗಿದ್ದರು. ಅಂದನಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಕರಾವಳಿಯ ಬಹುಸಂಖ್ಯಾತ ಹಿಂದುಳಿದ ಬಿಲ್ಲವ ಸಮುದಾಯದ ವ್ಯಕ್ತಿಯನ್ನು ಸಂಸದನಾಗಿ ಮಾಡಬೇಕು ಎಂದೊಕೊಂಡಾಗ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರದ ಬಂಟ್ವಾಳದ ಕ್ರಿಮಿನಲ್ ವಕೀಲ ಎಲ್ಯಣ್ಣ ಪೂಜಾರಿಯವರ ಜ್ಯೂನಿಯರ್ ಬಿ. ಜನಾರ್ದನ ಪೂಜಾರಿಯವರು ಅಭ್ಯರ್ಥಿಯಾಗಿ ಆಯ್ಕೆ ಆಗುತ್ತಾರೆ.
ನಾಲ್ಕು ಬಾರಿ ಚುನಾವಣೆ ಗೆದ್ದ ಪೂಜಾರಿ ಬದಲಾದ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ ಅನುಪಸ್ಥಿತಿಯಲ್ಲಿ ಸತತವಾಗಿ ಐದು ಸೋಲುಗಳನ್ನು ಕಾಣುತ್ತಾರೆ. ಈ ಸೋಲುಗಳಿಗೆ ಪಕ್ಷ ಮಾತ್ರವಲ್ಲದೆ, ಸ್ವತಃ ಜನಾರ್ದನ ಪೂಜಾರಿಯವರು ಬದಲಾದ ಚುನಾವಣಾ ರಾಜಕೀಯಕ್ಕೆ ಸಿದ್ಧರಾಗದಿರುವುದು ಮತ್ತು ಜನಸಂಪರ್ಕದಿಂದ ದೂರ ಆಗಿರುವುದು ಕಾರಣವಾಗಿತ್ತು. ಅದಕ್ಕಿಂತಲು ಹೆಚ್ಚಾಗಿ ಅವರೇ ಟಿಕೇಟ್ ನೀಡಿ ಗೆಲ್ಲಿಸಿದಂತಹ ಅವರ ಪಕ್ಷದ ಶಾಸಕರೇ ಪೂಜಾರಿ ಸೋಲುವಂತೆ ನೋಡಿಕೊಂಡರು. ಇದನ್ನು ಪಕ್ಷ ಗಮನಿಸಲಿಲ್ಲ. ಇತ್ತ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಬದಲಾಯಿಸುತ್ತಲೇ ಬಂತು. ಅದು ಚುನಾವಣಾ ಗೆಲುವಿಗೆ ಒಂದು ಪ್ರಮುಖ ಕಾರಣವಾಗಿತ್ತು.
ಕರಾವಳಿಯಲ್ಲಿ ಕೇಸರಿ ರಾಜಕೀಯ ಪ್ರಬಲವಾದಾಗ ಕಾಂಗ್ರೆಸ್ ಮುಖಂಡರಾದ ವೀರಪ್ಪ ಮೊಯ್ಲಿ., ಆಸ್ಕರ್ ಫರ್ನಾಂಡಿಸ್, ಮಾರ್ಗರೇಟ್ ಆಳ್ವ ವಲಸೆ ಹೋದರೂ, ಜನಾರ್ದನ ಪೂಜಾರಿಯವರು ಕೇಸರಿ ರಾಜಕೀಯದ ವಿರುದ್ಧ ಹೋರಾಟ ನಡೆಸಿದರು. ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಲು ಕಾರಣವಾದ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕರಾವಳಿಯಲ್ಲಿ ಸಿಂಹಪಾಲು ಸೀಟುಗಳನ್ನು ಗೆಲ್ಲಲು ಪೂಜಾರಿಯವರು ಕಾರಣ ಎಂದು ಕ್ಯಾರವಾನ್ ಪತ್ರಿಕೆ How Hindutva lost its stronghold in coastal Karnataka ವರದಿ ಮಾಡಿತ್ತು.
ಈ ವರದಿಯ ಕಾರಣದಿಂದಲೇ ಪೂಜಾರಿ ಮತ್ತೊಮ್ಮೆ ಚುನಾವಣಾ ಟಿಕೇಟ್ ಪಡೆದು ಸೋತರು. 2013ರಲ್ಲಿ ಚುನಾವಣೆ ಗೆದ್ದ ಮೇಲೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕರಾವಳಿಯ ಜನತೆಗೆ ನೀಡಿದ ಭರವಸೆಯನ್ನು ಮರೆಯಿತು. ಪ್ರಗತಿಪರರು, ಎಡಪಂಥೀಯರು ಕೂಡ ಸಿದ್ದರಾಮಯ್ಯ ಆಸ್ಥಾನದ ವಿದೂಷಕರಾಗಿದ್ದರೆ ಹೊರತು ಅರ ವೈಫಲ್ಯವನ್ನು ನೆನಪಿಸಿ ಎಚ್ಚರಿಸುವ ಕೆಲಸವನ್ನು ಮಾಡಲಿಲ್ಲ.
ಕರಾವಳಿಯಲ್ಲಿ ಕಾಂಗ್ರೆಸ್ ಗೆಲ್ಲಲು ಪ್ರಮುಖ ಕಾರಣವಾಗಿದ್ದು, ಮಿತಿ ಮೀರಿದ ಮೊರಲ್ ಪೊಲೀಸಿಂಗ್ ಅರ್ಥಾತ್ ಅನೈತಿಕ ಗೂಂಡಾಗಿರಿ, ಚರ್ಚ್ ದಾಳಿ, ಕೋಮುವಾದ ಇತ್ಯಾದಿ. ಇವುಗಳನ್ನುನಿಯಂತ್ರಿಸುವ ಯಾವ ಕಾರ್ಯಕ್ಕೂ ಸಿದ್ದರಾಮಯ್ಯ ಸರಕಾರ ಮುಂದಾಗಲಿಲ್ಲ.
ಇದರಿಂದಾಗಿ ಕಾಂಗ್ರೆಸ್ ಅನಂತರದ ಎಲ್ಲ ಚುನಾವಣೆಯಲ್ಲೂ ಮಣ್ಣುಮುಕ್ಕಿತು. ಸ್ವತಃ ಸಿದ್ದರಾಮಯ್ಯ ಮೈಸೂರಿನಲ್ಲಿ ಸೋತು ಹೋದರು.
ಈ ಮಾಹಿತಿಗಳು ಮಧುಬಂಗಾರಪ್ಪ ಅವರಿಗೆ ಗೊತ್ತಿರುವುದು ಒಳಿತು. ಅದಕ್ಕಿಂತಲೂ ಹೆಚ್ಚಾಗಿ ಕರಾವಳಿಯಲ್ಲಿ ಜಾತಿ ರಾಜಕೀಯ ನಡೆಯುವುದಿಲ್ಲ.
2 Comments on “ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಃ ಮಧು ನೇಮಕವೇ ಕಾಂಗ್ರೆಸ್ ಮೊದಲ ಯಡವಟ್ಟು”