Loksabha Election ಲೋಕಸಭೆ ಚುನಾವಣೆಃ ರಮಾನಾಥ ರೈ, ಯು.ಟಿ.ಖಾದರ್ ಸಂಭ್ಯಾವ್ಯ ಅಭ್ಯರ್ಥಿಗಳು

 

ಮಂಗಳೂರುಃ ಮುಂಬರುವ Loksabha Election 2024 ಲೋಕಸಭೆ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ರಮಾನಾಥ ರೈ Ramanatha Rai, ಯು.ಟಿ.ಖಾದರ್ U.T.Khader ಸಂಭ್ಯಾವ್ಯ ಅಭ್ಯರ್ಥಿಗಳಾಗಲಿದ್ದು, ಇವರೊಂದಿಗೆ ಮಿಥುನ್ ರೈ ಅಥವ ಪ್ರವೀಣ್ ಆಳ್ವ ಹೆಸರು ಚಾಲ್ತಿಯಲ್ಲಿದೆ.

ಭಾರತೀಯ ಜನತಾ ಪಾರ್ಟಿಯಿಂದ ಹಾಲಿ ಸಂಸದ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರೇ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದ್ದು, ಸತತವಾಗಿ ಸೋಲನುಭವಿಸುತ್ತಿರುವ ಕಾಂಗ್ರೆಸ್ ಪಕ್ಷವು ಈ ಬಾರಿ ಹೊಸ ಮುಖವನ್ನು ಪರಿಚಯಿಸಲಿದೆ ಎಂದು ಚರ್ಚೆ ನಡೆದಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರು 10ನೇ ಬಾರಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದಾರೆ.

ಈ ಮಧ್ಯೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಲ್ಲವರು, ಬ್ಯಾರಿಗಳು ಮತ್ತು ಹಿಂದುಳಿದ ವರ್ಗದವರು ಬಹುಸಂಖ್ಯಾತ ಮತದಾರರಾಗಿರುವುದರಿಂದ ಅರ್ಹ ಮುಸ್ಲಿಮರಿಗೆ ಟಿಕೇಟ್ ನೀಡಬೇಕೆಂಬ ವಾದ ಮಂಡಿಸಲಾಗುತ್ತಿದೆ. ಈಗಾಗಲೇ ಕರಾವಳಿಯಲ್ಲ ಮಾತ್ರವಲ್ಲದೆ ಅಂತರಾಷ್ಟ್ರೀಯವಾಗಿ ಜನಪ್ರಿಯತೆ ಪಡೆದಿರುವ ವಿಧಾನಸಬೆಯ ಸ್ಪೀಕರ್ ಆಗಿರುವ ಯು.ಟಿ.ಖಾದರ್ ಅವರನ್ನು ಕಣಕ್ಕಿಳಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬುದು ಸಾವೃತ್ರಿಕ ಅಭಿಪ್ರಾಯವಾಗಿದೆ. ಖಾದರ್ ಅಭ್ಯರ್ಥಿಯಾದಾಗ ಬಿಜೆಪಿಯ ಕೋಮುವಾದ ಕೆಲಸ ಮಾಡುವುದಿಲ್ಲ ಎನ್ನಲಾಗುತ್ತಿದೆ.

ಯು.ಟಿ.ಖಾದರ್ ಅವರಿಗೆ ಹಿಂದೂಗಳೇ ಅಲ್ಲದೆ ಬಿಜೆಪಿಯಲ್ಲೂ ಅಭಿಮಾನಿಗಳಿದ್ದಾರೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಯು.ಟಿ.ಖಾದರ್ ಫರೀದ್ ಅವರು ಮಸೀದಿಗೆ ಮಾತ್ರ ಅಲ್ಲದೆ ಚರ್ಚ್, ದೇವಸ್ಥಾನಗಳಿಗೂ ಹೋಗುತ್ತಾರೆ, ಕರಾವಳಿಯ ಆರಾಧ್ಯ ದೈವ ಕೊರಗತನಿಯ ಕೋಲಕ್ಕೆ ತಪ್ಪದೆ ಹಾಜರಾಗುವುದರಿಂದ ಖಾದರ್ ಜನಪ್ರಿಯತೆ ಹೆಚ್ಚಿದೆ.

ಇನ್ನೊಂದೆಡೆ ಕರಾವಳಿಯಲ್ಲಿ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರ ಅನಂತರ ಅತ್ಯಂತ ಹಿರಿಯರಾದ ರಾಜಕಾರಣಿ ಬಿ.ರಮಾನಾಥ ರೈ ಜಿಲ್ಲಾ ರಾಜಕೀಯದಲ್ಲಿ ತನ್ನದೇ ಆದ ಚಾಪು ತೋರಿಸಿದವರು. ಬಂಟ್ವಾಳದಿಂದ ಚುನಾವಣೆ ಸ್ಪರ್ಧಿಸಿದರು ಕೂಡ ಜಿಲ್ಲೆಯಾದ್ಯಾಂತ ಬೆಂಬಲಿಗರನ್ನು ಹೊಂದಿರುವ ಮುಖಂಡ ರಮಾನಾಥ ರೈ. ಸತತವಾಗಿ ಎರಡು ಬಾರಿ ಸೋತಿರುವ ರಮಾನಾಥ ರೈ ಮತ್ತೊಂದು ಬಾರಿ ಸ್ಪರ್ಧಿಸುವ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣ ರೈಯವರ ಬೆಂಬಲಿಗರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದರೂ ಕೂಡ  ರೈಯವರು ಅಧಿಕಾರದಲ್ಲಿ ಇಲ್ಲ ಅಂದರೆ ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿಲ್ಲ. ಮಾತ್ರವಲ್ಲದೆ, ತಾವೇ ಮುಂದೆ ನಿಂತು ನೇಮಕ ಮಾಡಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೇ ರಾಯವರ ವಿರುದ್ಧ ತಿರುಗಿಬಿದ್ದು ಗುಂಪು ಕಟ್ಟಿಕೊಂಡಿರುವುದು ರೈಯವರ ಬಣಕ್ಕೆಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ರಮಾನಾಥ ರೈ ಅವರು ನೇರವಾಗಿ ಚುನಾವಣೆ ಎದುರಿಸಿ ಗೆಲ್ಲಬೇಕು ಎಂಬುದು ಅವರ ಬೆಂಬಲಿಗರ ಆಸೆ.

1991ರಲ್ಲಿ ಬಿಜೆಪಿಯ ಧನಂಜಯ ಕುಮಾರ್ ಅವರೆದುರು ಜನಾರ್ದನ ಪೂಜಾರಿ ಸೋತ ನಂತರ ನಿರಂತರವಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುತ್ತಲೇ ಬಂದಿದ್ದಾರೆ. ಜನಾರ್ದನ ಪೂಜಾರಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಇತ್ತೀಚೆಗೆ ಮಿಥುನ್ ರೈ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದರು.

ಕಳೆದ ಲೋಕಸಭಾ ಚುನವಾಣೆಯಲ್ಲಿ ಮೂಡಬಿದಿರೆ ವಿಧಾನಸಭಾ ಟಿಕೇಟ್ ದೊರೆಯದ ಹಿನ್ನೆಲೆಯಲ್ಲಿ ಮಿಥುನ್ ರೈಗೆ ಅವಕಾಶ ನೀಡಲಾಗಿತ್ತು. ಚುನಾವಣಾ ರಾಜಕೀದ ಅನುಭವ ಇಲ್ಲದ ಪರಿಣಾಮ ಮಿಥುನ್ ರೈ ಸೂಕ್ತವಾದ ಸ್ಪರ್ಧೆ ನೀಡಲು ಸಾಧ್ಯವಾಗಲಿಲ್ಲ. 2013ರಲ್ಲಿ ಮೂಡಬಿದರೆ ವಿಧಾನಸಭಾ ಟಿಕೇಟ್ ಪಡೆದ ಮಿಥುನ್ ರೈ ಇಲ್ಲೂ ಗೆಲ್ಲಲು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಮುಖವಾಗಿ ಮಂಗಳೂರು ಮಹಾನಗರಪಾಲಿಕೆಯ ಸದಸ್ಯ ಪ್ರವೀಣ್ ಆಳ್ವ ಹೆಸರನ್ನು ಶಿಫಾರಸು ಮಾಡುವ ಸಾಧ್ಯತೆ ಇದೆ.

Ex minister Ramantha Rai probable candidate

ಈ ಮಧ್ಯೆ, ಹೊಸಬರಿಗೆ ನೀಡಬೇಕು, ಬಂಟರು ಬಿಲ್ಲವರನ್ನು ಹೊರತುಪಡಿಸಿ ಬೇರೆ ಸಮುದಾಯದವರಿಗೆ ಮಾತ್ರವಲ್ಲ ಹೊಸಬರಿಗೆ, ಅವಕಾಶ ದೊರೆಯದವರಿಗೆ ಸಾಮಾನ್ಯ ಕಾರ್ಯಕರ್ತರಿಗೆ, ಆರ್ಥಿಕವಾಗಿ, ಜಾತಿವಿಚಾರದಲ್ಲಿ ಸಬಲರಲ್ಲದವರಿಗೆ ಕೂಡ ಪರಿಗಣನೆ ಮಾಡಬೇಕೆಂದು ಒತ್ತಾಯ ಕೇಳಿ ಬಂದಿದೆ.

ಕಾಂಗ್ರೆಸ್ ಪರವಾಗಿ ಸೋಶಿಯಲ್ ಮಿಡಿಯ, ಮಾಧ್ಯಮಗಳಲ್ಲಿ ಬಡಿದಾಡುವ ಮಂದಿಗೆ ಅವಕಾಶ ನೀಡಬೇಕು ಎಂಬ ಹಿನ್ನೆಲೆಯಲ್ಲಿ  ಸಾಮಾಜಿಕ ಕಾರ್ಯಕರ್ತ ಎಂ.ಜಿ ಹೆಗ್ಡೆ, ನ್ಯಾಯವಾದಿ ನಿತ್ಯಾನಂದ ಶೆಟ್ಟಿ ಅವರ ಹೆಸರು ಚಲಾವಣೆಯಲ್ಲಿದ್ದು, ಅರ್ಜಿ ಕೂಡ ಗುಜರಾಯಿಸಿದ್ದಾರೆ. ಇವರೊಂದಿಗೆ ಗುರುಪುರದ ಗಣೇಶ್ ಪೂಜಾರಿ ಕೂಡ ಅರ್ಜಿ ಸಲ್ಲಿಸಿದ್ದಾರೆ.

ಲೋಕಸಭಾ ಸಂಭಾವ್ಯ  ಆಕ್ಷಾಂಕ್ಷಿಗಳ ಶಾರ್ಟ್ ಲಿಸ್ಟ್ ಮಾಡಲು ಕಾಂಗ್ರೆಸ್ ಪಕ್ಷ ಸಚಿವ ಮಧು ಬಂಗಾರಪ್ಪ ಅವರನ್ನುನೇಮಕ ಮಾಡಿದೆ. ಆದರೆ, ಶುಲ್ಕ ಪಾವತಿ ಮಾಡಿ ಅರ್ಜಿ ಗುಜರಾಯಿಸಲು ಸೂಚಿಸಿಲ್ಲ. ಅದಕ್ಕೆ ಮೊದಲೇ ನೇರವಾಗಿ ದೆಹಲಿಗೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.

ಇದನ್ನು ಓದಿ- ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಃ ಮಧು ನೇಮಕವೇ ಕಾಂಗ್ರೆಸ್ ಮೊದಲ ಯಡವಟ್ಟು

 

 

 

 

Leave a Reply

Your email address will not be published. Required fields are marked *