ಮುಂಬರುವ Lokasabha ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ Candidate ಯಾರಾಗಬಹುದು ಎಂಬ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಭೆ ಶನಿವಾರ ರಾತ್ರಿ 11 ಗಟೆಗೆ ತನಕ ನಡೆಯಿತು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ Lokasabha Candidate ಸಮೀಕ್ಷೆ ನಡೆಸಲು ಕಾಂಗ್ರೆಸ್ ಪಕ್ಷದಿಂದ ನಿಯೋಜಿತರಾದ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಶ ಸಂಜೆ Mangalore ಮಲ್ಲಿಕಟ್ಟೆ ಇಂದಿರಾ ಭವನ ಜಿಲ್ಲಾ ಕಾಂಗ್ರೆಸ್ ಕಚೇರಿಗೆಆಗಮಿಸಿ ಹಲವು ಸುತ್ತಿನ ಮಾತುಕತೆ ನಡೆಸಿದರು. ಜಿಲ್ಲೆಯ 16 ಬ್ಲಾಕ್ ಕಾಂಗ್ರೆಸ್ ತಂಡಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ತೆರಳಿದಾಗ ರಾತ್ರಿ ಗಂಟೆ 11 ಆಗಿತ್ತು.
ಈಗಾಗಲೇ ಸುದ್ದಿಯಾಗಿರುವಂತೆ ರಮಾನಾಥ್ ರೈ ಅವರ ಪರ ಅನೇಕರು ಬೆಂಬಲ ಸೂಚಿಸಿದ್ದಾರೆ. ಬಹುತೇಕ ಮಾಜಿ ಸಚಿವ ಬಿ. ರಮಾನಾಥ್ ರೈ(Ramanatha Rai) ಅವರು ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಿದೆ.
ಕಾಂಗ್ರೆಸ್ 2 ರಾಜ್ಯದಲ್ಲಿ ಗೆದ್ದರೆ ಸರಕಾರ ಬದಲಾವಣೆ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಲ್ಲವರು ಮತ್ತು ಬ್ಯಾರಿ ಸಮುದಾಯ ಬಹುಸಂಖ್ಯಾತರಾಗಿರುವುದರಿಂದ ಬಹುಸಂಖ್ಯಾತರಿಗೆ ಟಿಕೇಟ್ ನೀಡಬೇಕೆಂಬುದು ಹಳೆಯ ವಾದವಾಗಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ ಅವರ ಹೆಸರು ಕೆಲವೇ ಕೆಲವರು ಹೇಳಿದ್ದಾರೆ. ಮುಸ್ಲಿಂ ಸಮುದಾಯದ ಕಣಚೂರ ಮೋನು, ಅಶ್ರಫ್ ಮನವಿ ಸಲ್ಲಿಸಿದ್ದಾರಂತೆ. ಉಳಿದ ಕೆಲವರು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಫರೀದ್ ಅವರ ಸಹೋದರ ಇಫ್ತಿಖಾರ್ ಹೆಸರು ಹೇಳಿದ್ದರೆ,
ಇದೇ ಮೊದಲ ಬಾರಿಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮಹಿಳೆ ಅಭ್ಯರ್ಥಿ ಆದರೆ ಮಮತಾ ಗಟ್ಟಿ ಹೆಸರು ಬಂದಿದೆ. ಜಾತಿ ಸಮೀಕರಣ ಬಿಟ್ಟು ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದಾದರೆ ಅದಕ್ಕೆ ಸುಳ್ಯದ ಭರತ್ ಮುಂಡೋಡಿ ಹಾಗೂ ಪ್ರಥಮ ಬಾರಿಗೆ ಅನೇಕರು ಬ್ರಾಹ್ಮಣ ಸಮುದಾಯದ ಎಂ ಜಿ ಹೆಗಡೆ ಹೆಸರನ್ನೂ ಸೂಚಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಒಪ್ಪುತ್ತಿರುವ ಅಚ್ಚರಿಯ ವಾದವಾಗಿ ಬರುತ್ತಿದೆ.
ಜಾತಿ ಸಮೀಕರಣವನ್ನು ಹೊರ ಗಿಟ್ಟು ಅಭ್ಯರ್ಥಿ ಆಯ್ಕೆ ಮಾಡಿ ಮಾತ್ರವಲ್ಲದೆ, ಬಣ ರಾಜಕೀಯಕ್ಕಿಂತ ಹೊರತಾದ ಹೊಸಬರಿಗೆ ಟಿಕೇಟ್ ನೀಡಿ ಎಂಬುದಾಗಿ ಕೂಡ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೆಸರು ಸೂಚಿಸಿರುವುದು ಸಾಮಾಜಿಕ ಜಾಲತಾಣದ ಬರಹಗಳಿಗೆ ವ್ಯಾಪಕ ಟೀಕೆ ಬರುತ್ತಿದೆ. ಅಚ್ಚರಿಯ ವಿಚಾರವೆಂದರೆ ಮತ್ತೊಬ್ಬ ವಿಧಾನ ಪರಿಷತ್ ಸದಸ್ಯನ ಹೆಸರು ಪ್ರಸ್ತಾವವೇ ಆಗಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಅವರ ಕೊಡುಗೆ ಏನು ಎಂದು ದೂರು ವಾಟ್ಸಾಪ ಲ್ಲಿ ಬರುತ್ತಿದೆ. ಬ್ಲಾಕ್ ಕಾಂಗ್ರೆಸನ್ನು ನಿಭಾಯಿಸಲಾಗದವರನ್ನು ತಂದು ಜಿಲ್ಲಾ ಅಧ್ಯಕ್ಷ ಮಾಡಿರುವುದಲ್ಲದೆ ವಿಧಾನಪರಿಷತ್ ಸದಸ್ಯ ಮಾಡಿರುವುದು ಪಕ್ಷ ತನ್ನ ನಿಷ್ಟಾವಂತ ಕಾರ್ಯಕರ್ತರಿಗೆ ಮಾಡಿರುವ ದ್ರೋಹ ಎಂದು ಕಾರ್ಯಕರ್ತರು ವಿಷಾದ ವ್ಯಕ್ತಿಪಡಿಸಿದ್ದಾರೆ. ಹರೀಶ್ ಕುಮಾರ್ ಮತ್ತು ಮಂಜುನಾಥ ಬಂಡಾರಿ ಇಬ್ಬರು ಸೇರಿಕೊಂಡು ಜಿಲ್ಲೆಯಲ್ಲಿ ಕಾಂಗ್ರೆಸ್ ನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಯತ್ನದಲ್ಲಿ ಪಕ್ಷವನ್ನು ಲಗಾಡಿ ತೆಗೆಯುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಕಾರ್ಯಕರ್ತರು ಗೊಣಗುತ್ತಿದ್ದಾರೆ. ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ವ್ಯವಸ್ಥೆಯೇ ಇಲ್ಲಾ ಎಂದೂ ಕಾರ್ಯಕರ್ತರು ಸೋಶಿಯಲ್ ಮಿಡಿಯಾದಲ್ಲಿ ಬರೆಯ ತೊಡಗಿರುವುದು, ಕರಾವಳಿ ಕಾಂಗ್ರೆಸ್ ನ ಅವನತಿಯನ್ನು ತೋರಿಸುತ್ತಿದೆ.
ಹಲವು ದಶಕಗಳ ಹಿಂದಿನ ಆಕ್ಷಾಂಕಿಗಳ ಬೆಂಬಲಿಗರ ಉತ್ಸಾಹ, ಶಕ್ತಿ ಪ್ರದರ್ಶನದ ಯಾವ ದೃಶ್ಯಗಳು ಕಂಡುಬರಲಿಲ್ಲ
ಹಿಂದಿನ ಕಾಲದಂತೆ ಆಕಾಂಕ್ಷಿಗಳ ಬಲಾಬಲ ಪ್ರದರ್ಶನ , ಹಠ ಉತ್ಸಾಹ ಇಲ್ಲದೇ ಒಟ್ಟಾರೆ ತೀರಾ ಸಪ್ಪೆಯಾದ ವಾತಾವರಣ ಇತ್ತು. ಇದೊಂದು ಪಕ್ಷದ ಹೈಕಮಾಂಡ್ ನಡೆಸುವ ಕಾಟಾಚಾರದ ಪ್ರದರ್ಶನ. ಸಚಿವ ಮಧುಬಂಗಾರಪ್ಪನವರ ಶಿಫಾರಸಿಗೆ ಕವಡೆ ಕಿಮ್ಮತ್ತು ದೊರೆಯುವುದಿಲ್ಲ ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿ ಇತ್ತು.
ಎಲ್ಲವನ್ನೂ ಹೈ ಕಮಾಂಡಿಗೆ ಬಿಟ್ಟು ಕೈ ಕಟ್ಟಿ ನಿಲ್ಲಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸುವ ಮಾಡುವ ಅಭ್ಯರ್ಥಿಯನ್ನು ಹೈಕಮಾಂಡ್ ಘೋಷಣೆ ಮಾಡಬಹುದು. ಮಾಜಿ ಸಂಸದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರನ್ನು ಅಭ್ಯರ್ಥಿ ಮಾಡಬೇಕೆಂಬ ಇರಾದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿದೆ. ಮಾಜಿ ಸಚಿವ ರಮಾನಾಥ ರೈ ಅವರು ಕಾಂಗ್ರೆಸ್ ನ್ನು ಗೆಲ್ಲಿಸಬೇಕು ಎಂಬುದನ್ನು ಬಿಟ್ಟು, ಜಿಲ್ಲೆಯ ಕಾಂಗ್ರೆಸ್ ಪಕ್ಷದೊಳಗೆ ಅಧಿಕಾರ ಹಿಡಿಯಬೇಕು ಎಂದೇ ಹಳೆ ಹೊಸ ಬಣದ ನಾಯಕರ ಹೋರಾಟ ನಡೆಯುತ್ತಿದೆ.
ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿರುವ ಯು.ಟಿ.ಖಾದರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಜನಪ್ರಿಯತೆ ಕಳಕೊಂಡಿರುವ ಇಬ್ಬರು ವಿಧಾನ ಪರಿಷತ್ ಸದಸ್ಯರು ಒಂದು ಗುಂಪಾದರೆ, ಮಾಜಿ ರಮಾನಾಥ ರೈ ಅವರದು ಏಕಾಂಗಿ ಹೋರಾಟ.
ಸಣ್ಣ ಆದರೂ ಪ್ರಭಾವಿ ಸಮುದಾಯಗಳಿಗೆ ಅವಕಾಶ ನೀಡಬೇಕು ಎಂದು ಬಂದಾಗ ಎಂ.ಜಿ. ಹೆಗಡೆ, ಮಮತಾ ಗಟ್ಟಿ ಮುಂತಾದವರ ಹೆಸರು ಶಿಫಾರಸು ಆಗುವ ಸಾಧ್ಯತೆ ಇದೆ.
ಅಂತಿಮವಾಗಿ ಕೆಪಿಸಿಸಿಯಿಂದ ಯು.ಟಿ.ಖಾದರ್, ಯು.ಕೆ.ಮೋನು,ಯು.ಟಿ. ಇಫ್ತಿಕಾರ್, ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಮಮತಾ ಗಟ್ಟಿ, ಪ್ರತಿಭಾ ಕುಳಾಯಿ, ಎಂ.ಜಿ. ಹೆಗಡೆ ಅವರ ಹೆಸರು ಮೊದಲ ಪಟ್ಟಿಯಲ್ಲಿ ದೆಹಲಿಗೆ ಹೋಗುವ ಸಾಧ್ಯತೆ ಇದೆ.
ಅಭ್ಯರ್ಥಿ ಯಾರೇ ಆದರು ಗೆಲುವು ಮಾತ್ರ ನಳಿನ್ ಕುಮಾರ್ ಕಟೀಲ್ ಅವರಿಗೆ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತರು.
Bharat Jodo Yatra: ಡಿಸಂಬರಿನಲ್ಲಿ 2 ನೇ ಹಂತದ ಭಾರತ್ ಜೋಡೋ ಯಾತ್ರೆ