Kerala to Dubai cruise ದುಬೈಗೆ ಕೇರಳದಿಂದ ಕ್ರೂಸ್ ದರ ಎಷ್ಟು ಗೊತ್ತೆ?

Kerala to Dubai cruise  ದುಬಾರಿ ವಿಮಾನ ಪ್ರಯಾಣ ಖರ್ಚನ್ನು ಕಡಿಮೆ ಮಾಡಿಸಲು ಕೇರಳ ಸರಕಾರ ಕೊಚ್ಚಿಯಿಂದ ದುಬಾಯಿಗೆ ( Kochi to Dubai CRuise)ಹಡಗು ಸೇವೆ ಆರಂಭಿಸಲಿದೆ. ಮುಂದಿನ ವರ್ಷ ಕ್ರೂಸ್ ಸರ್ವೀಸ್ ಆರಂಭಗೊಂಡಾಗ ಹಡಗು ಪ್ರಯಾಣ ದರ ವಿಮಾನಕ್ಕಿಂತ ಮೂರನೇ ಒಂದರಷ್ಟಾಗಲಿದೆ( Kerala to Dubai cruise cost less than 1/3 the airfare).

ಕೊಚ್ಚಿ: ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಕೇರಳ ದೂರದ ಗಲ್ಫ್ ರಾಷ್ಟ್ರ ದುಬೈಗೆ ನೇರ ಪ್ರಯಾಣಿಕ ಹಡಗು ಸೇವೆ ಆರಂಭಿಸಲು ಚಿಂತನೆ ನಡೆಸಿದೆ. ಎಲ್ಲವೂ ಯೋಚಿದಂತೆ ಆದಲ್ಲಿ ಬರುವ 2024 ಮೊದಲರ್ಧದಲ್ಲಿ ಮೊದಲ ಪ್ರಯಾಣಿಕ ಹಡಗು Kochi ಕೊಚ್ಚಿಯಿಂದ ದುಬೈಗೆ Kochi CRuiseಪ್ರಯಾಣ ಆರಂಭಿಸಲಿದೆ.

Kerala to Dubai cruise ಬೇಪೋರ್‌ ಬಂದರಿನಿಂದ ದುಬೈಗೆ ಹಡಗು ಸೇವೆ

ಕೇರಳದ ಬೇಪೋರ್‌ ಬಂದರಿನಿಂದ ದುಬೈಗೆ ಹಡಗು ಸೇವೆಯನ್ನು ಆರಂಭಿಸಲು ಬಂದರು ಸಚಿವ ಅಹಮ್ಮದ್ ದೇವರಕೋವಿಲ್ ಉತ್ಸಾಹ ತೋರಿದ್ದು ಅವರು ಪ್ರಸ್ತಾಪಿಸಿದ ಪ್ರಸ್ತಾವನೆ ಕೊಲ್ಲಿ ರಾಷ್ಟ್ರಗಳಲ್ಲಿ ಕಡಿಮೆ ಸಂಬಳಕ್ಕೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಸಾವಿರಾರು ಕೇರಳಿಗರಲ್ಲಿ ಉತ್ಸಾಹವನ್ನು ಮೂಡಿಸಿದೆ.

ಆದಾಗ್ಯೂ, ವೆಚ್ಚದ ಅಂಶಗಳು, ಸಾಗಣೆ ಸಮಯ ಮತ್ತು ಮೂಲಸೌಕರ್ಯ ಸೌಲಭ್ಯಗಳ ಕೊರತೆಯಿಂದಾಗಿ ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆ ಹಡಗು ವಲಯದ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೊಲ್ಲಿ ದೇಶಗಳಲ್ಲಿ ಸಾವಿರಾರು ಕೇರಳಿಗರು ಕೆಲಸ ಮಾಡುತ್ತಿದ್ದಾರೆ, ಹತ್ತು ವರ್ಷಗಳ ನಂತರವೂ ತಮ್ಮ ಕುಟುಬಸ್ಥರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ವಿಪರೀತ ವಿಮಾನ ದರಗಳು. ಹಬ್ಬಗಳು ಮತ್ತು ಬೇಸಿಗೆ ರಜೆಗಳಲ್ಲಿ ವಿಮಾನ ದರಗಳು ರೂ 30,000 ರಿಂದ ರೂ 40,000 ಕ್ಕೆ ಏರುತ್ತದೆ, ಇದರಿಂದಾಗಿ ಕಡಿಮೆ ಆದಾಯದ ಕಾರ್ಮಿಕರಿಗೆ Gulf Workers  ಮನೆಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಡಗು ಇಂತಹ ಕಾರ್ಮಿಕರ ಪಾಲಿಗೆ ವರದಾನವಾಗಲಿದೆ ಎಂದು ನಂಬಲಾಗಿದೆ.

ಈ ಯೋಜನೆಯ ಸಾಧಕ ಭಾದಕಗಳ ಕುರಿತು ಅಧ್ಯಾಯನ ಮಾಡಲು ಕೇರಳ ಸರ್ಕಾರ 15 ಕೋಟಿ ರೂಪಾಯಿಯನ್ನುಮೀಸಲಿಟ್ಟಿದ್ದು ಮತ್ತು ಕೇರಳ ಮೆರಿಟೈಮ್ ಬೋರ್ಡ್ ಅಧ್ಯಕ್ಷ ಎನ್ಎಸ್ ಪಿಳ್ಳೈ ಅವರಿಗೆ ಇದರ ಜವಾಬ್ದಾರಿ ವಹಿಸಲಾಗಿತ್ತು. ತಜ್ಞರ ಪ್ರಕಾರ ಬೇಪೋರ್‌ನಿಂದ ದುಬೈಗೆ 1,879 ನಾಟಿಕಲ್ ಮೈಲುಗಳಷ್ಟು ದೂರವಿದ್ದು, ಪ್ರಯಾಣಿಕರ ಹಡಗು ಬೇಪೂರು ಬಂದರಿನಿಂದ ದುಬೈ ತಲುಪಲು ಮೂರೂವರೆಯಿಂದ ನಾಲ್ಕು ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ವಿಮಾನದಲ್ಲಿ ಪ್ರತಿ ಪ್ರಯಾಣಿಕರಿಗೆ ಗರಿಷ್ಟ 30 ಕಿಲೋಗ್ರಾಂಗಳಷ್ಟು ಮಾತ್ರ ಸರಕು ಸಾಗಿಸಲು ಅನುಮತಿಸಿದರೆ, ಹಡಗುಗಳಲ್ಲಿ ಮೂರು ಪಟ್ಟು ಹೆಚ್ಚಿನ ಸಾಮಾನುಗಳನ್ನು ಕೊಂಡೊಯ್ಯಬಹುದಾಗಿದೆ.

ದುಬಾರಿಯಾಗಲಿದೆಯಾ ಪ್ರಯಾಣ..?

 

ಪ್ರತಿ ಪ್ರಯಾಣಿಕರಿಗೆ ರೂ 10,000 ಮತ್ತು ರೂ 15,000 ರ ನಡುವೆ ದರ ಇರಬಹುದು ಎಂದು ಹೇಳಲಾಗಿದೆ. ಪೀಕ್ ಸೀಸನ್‌ನಲ್ಲಿ ವಿಮಾನ ಶುಲ್ಕದ ಅರ್ಧಕ್ಕಿಂತ ಇದು ಕಡಿಮೆ.

ಈ ಜನವರಿಯಲ್ಲಿ ಕೊಚ್ಚಿ-ದುಬೈ ಟಿಕೆಟ್‌ಗೆ 55,000 ರೂ. ಆಗಿತ್ತು. ಇನ್ನು ಹಡಗು ಪ್ರಯಾಣಿಕರಿಗೆ ಆಹಾರ ಮತ್ತು ಕೊಠಡಿಗಳನ್ನು ಒದಗಿಸಬೇಕು. ಬೋರ್ಡಿಂಗ್, ಇಳಿಯುವಿಕೆ ಮತ್ತು ಲಗೇಜ್ ವರ್ಗಾವಣೆ ಸಮಯ ಬೇಕಾಗುತ್ತೆ, ಹಡಗಿನಲ್ಲಿ ಹತ್ತು ಪ್ರಯಾಣಿಕರಿಗೆ ಮೂವರು ಸಿಬ್ಬಂದಿಯನ್ನು ನೇಮಿಸಬೇಕಾಗುತ್ತದೆ.

500 ಜನರು ಪ್ರಯಾಣಿಸುವ ಸಾಮರ್ಥ್ಯವಿರುವ ಹಡಗನ್ನು ಪಟ್ಟಿ ಮಾಡಿದರೆ, ಅದಕ್ಕೆ ಬೇಪೋರ್‌ನಲ್ಲಿ 7 ಮೀಟರ್ ಡ್ರಾಫ್ಟ್ ಅಗತ್ಯವಿದೆ. ಆದರೆ, ಬೇಪೋರ್ ಬಂದರಿನಲ್ಲಿ ಆಳ ಕೇವಲ 4 ಮೀಟರ್ ಇದೆ.

ಜೊತೆಗೆ ತಿಂಗಳ ಮಟ್ಟಿಗೆ ರಜೆ ಹಾಕಿ ಬರುವ ಕಾರ್ಮಿಕನಿಗೆ ಹೋಗಿ ಬರಲು ಹೆಚ್ಚು ಕಡಿಮೆ 10 ದಿನ ಪ್ರಯಾಣದಲ್ಲೇ ಕಳೆದರೆ ಅವನ ಬಳಿ ಉಳಿಯುವುದು ಕೇವಲ ಇಪ್ಪತ್ತು ದಿನಗಳು ಮಾತ್ರ.ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು 6 ಗಂಟೆಗಳ ಒಳಗೆ ತನ್ನ ಮನೆಗೆ ತಲುಪಿದಾಗ, ಅವರು ಶಿಪ್ಪಿಂಗ್ ಸೇವೆಯನ್ನು ಆರಿಸಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಮುಂದಿದ್ದರೆ ಆದ್ದರಿಂದ ವಿದೇಶಗಳಿಗೆ ಹೋಲಿಸಿದರೆ, ಕಡಿಮೆ ಟಿಕೇಟ್ ಹಣದೊಂದಿಗೆ ಇಷ್ಟೆಲ್ಲ ವ್ಯವಸ್ಥೆಗಳನ್ನು ಹೊಂದಿಸಿಕೊಳ್ಳಲು ಸಾಧ್ಯವೇ ಎಂಬ ಮತ್ತೊಂದು ಪ್ರಶ್ನೆಗೆ ಕೂಡ ಉತ್ತರ ಸಿಕ್ಕಿಲ್ಲ.

Beach Festival Special ಬೇಕಲ್ ಫೋರ್ಟ್ ನಿಲ್ದಾಣದಲ್ಲಿ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

ಇದಲ್ಲದ ಹೊರತಾಗಿ ಮಹತ್ವದ ಈ ಯೋಜನೆ ಸಾಕಾರಗೊಂಡರೆ, ಇದು ಭಾರತದಿಂದ ವಿದೇಶಕ್ಕೆ ಇಂತಹ ಮೊದಲ ಪ್ರಯಾಣಿಕ ಹಡಗು ಸೇವೆಯಾಗಲಿದೆ.

Leave a Reply

Your email address will not be published. Required fields are marked *