Kerala Election ಕೇರಳದಲ್ಲಿ ಕಡಿಮೆ ಆಗಲಿದೆ ಕಾಂಗ್ರೆಸ್ ಸೀಟು

Kerala Election ಮಂಗಳೂರು. ಮಾರ್ಚ್ 23- ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಲೋಕಸಭೆಗೆ ಸ್ಪರ್ಧಿಸುತ್ತಿರುವ ಕೇರಳ (Kerala) ರಾಜ್ಯದಲ್ಲಿ ಈ ಬಾರಿಯ ಲೋಕಸಭಾ (Loksabha)  ಚುನಾವಣೆಯಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ ಕಡಿಮೆ ಸೀಟುಗಳನ್ನು ಗೆಲ್ಲಲಿದೆ.

ಸತತ ಎರಡನೇ ಅವಧಿಗೆ ಕೇರಳದಲ್ಲಿ ಎಡರಂಗ ಆಡಳಿತ ನಡೆಸುತ್ತಿದ್ದು, ಕಳೆದ ಬಾರಿ ಎರಡರಂಗ ಆಡಳಿತ ಇದ್ದರೂ ಕೂಡ ರಾಜ್ಯದ 20 ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಸೀಟು ಮಾತ್ರ ಎಡರಂಗ ಗೆಲ್ಲಲು ಯಶಸ್ವಿಯಾಗಿತ್ತು. ಬಿಜೆಪಿ ಖಾತೆ ತೆರೆದಿಲ್ಲ.

ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಗೆದ್ದ 41 ಸೀಟುಗಳಲ್ಲಿ ಬಹುಪಾಲು ಕೇರಳದ ಕೊಡುಗೆಯಾಗಿತ್ತು. ಈ ಬಾರಿ ಕಾಂಗ್ರೆಸ್ ಕನಿಷ್ಟ ಮೂರು ಸೀಟುಗಳನ್ನು ಕಳಕೊಳ್ಳಲಿದ್ದು, ಆ ಮೂರು ಸ್ಥಾನಗಳನ್ನು ಎಡರಂಗ ಗೆಲ್ಲಲಿದೆ. ಮಾಧ್ಯಮ ಸಂಸ್ಥೆಗಳು ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ  ಎಡರಂಗ ಮೂರರಿಂದ ನಾಲ್ಕು ಸೀಟುಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಮೈತ್ರಿಕೂಟ 16 ಸೀಟುಗಳನ್ನು ಗೆಲ್ಲಲಿದೆ. ಕೇರಳ ರಾಜ್ಯದಲ್ಲಿ ಇಂಡಿಯ ಒಕ್ಕೂಟದ ಕಾಂಗ್ರೆಸ್ ಮತ್ತು ಎಡರಂಗ ಪರಸ್ಪರ ಮೈತ್ರಿ ಮಾಡಿಕೊಂಡಿಲ್ಲ.

ಭಾರತೀಯ ಜನತಾ ಪಾರ್ಟಿ ಯಾವುದೇ ಸೀಟುಗಳನ್ನು ಗೆಲ್ಲುವ ಸಾಧ್ಯತೆ ಇಲ್ಲದಿದ್ದರು ನಾಲ್ಕು ಕ್ಷೇತ್ರಗಳಲ್ಲಿ ಮತಗಳನ್ನು ಸಂಖ್ಯೆಯನ್ನ ಹೆಚ್ಚಿಸಿಕೊಳ್ಳಲಿದೆ.

ಚುನಾವಣಾ ಬಾಂಡ್ ಖರೀದಿಸಿದ ಮೇಘಾ ಇಂಜಿನಿಯರಿಂಗ್ ಕಂಪೆನಿಗೆ ಸಾವಿರ ಕೋಟಿ ರೂ. ಲಾಭ

Leave a Reply

Your email address will not be published. Required fields are marked *