ನ.28 : ಛಾಯಲೋಕ : ವಿಚಾರ ಸಂಕಿರಣ
ಮಂಗಳೂರು : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಛಾಯಾಲೋಕ ವಿಚಾರ ಸಂಕಿರಣವನ್ನು ನ.28 ರ ಮಂಗಳವಾರ ಮಧ್ಯಾಹ್ನ 2.00 ಗಂಟೆಗೆ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಇಲ್ಲಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಬೆಂಗಳೂರು ಅವರ ‘ಕರುನಾಡಿನ ಕೋಟೆಗಳು’ ಹಾಗೂ ‘ಕನ್ನಡ ನಾಡಿನ ಬಣ್ಣದ ಬಾನಾಡಿಗಳು’ ಈ ಎರಡು ಛಾಯಾ ಸಂಪುಟ ಕೃತಿಗಳ ಬಗ್ಗೆ ‘ಕೋಟೆನಾಡಿನ ಪಕ್ಷಿನೋಟ’ ಎಂಬ ಹೆಸರಿನಲ್ಲಿ ಹಾಗೂ ಖ್ಯಾತ ಟ್ರಾವೆಲ್ ಪೊಟೋಗ್ರಾಪರ್ ಜಿನೇಶ್ ಪ್ರಸಾದ್ ಮೂಡಬಿದ್ರೆಯವರ ದೇಶ ವಿದೇಶಗಳ ಛಾಯಾಚಿತ್ರಗಳ ಬಗ್ಗೆ ಪ್ರವಾಸಿ ಕಣ್ಣಲ್ಲಿ ಛಾಯಾಲೋಕ ಎಂಬ ಅವಲೋಕನ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಿ ‘ಕರುನಾಡಿನ ಕೋಟೆಗಳು’ ಕೃತಿಯ ಬಗ್ಗೆ ಮಾತನಾಡಲಿದ್ದಾರೆ. ವಕೀಲ ನವನೀತ್ ಬಿ.ಹಿಂಗ್ಹಾಣಿ ಅವರು ‘ಪೊಟೋಗ್ರಾಪಿ ಮತ್ತು ಕಾಪಿರೈಟ್ ಕಾಯಿದೆ ಬಗ್ಗೆ ಮಾತನಾಡಲಿದ್ದಾರೆ. ನಿವೃತ್ತ ಪ್ರಾಂಶುಪಾಲ ಪ್ರೊ.ಉದಯ ಕುಮಾರ್ ಇರ್ವತ್ತೂರು , ಪಕ್ಷಿ ವೀಕ್ಷಕಿ ಹಾಗೂ ಉಪನ್ಯಾಸಕಿ ವೈಭವಿ .ಜಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಗೌರವ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸುವರು.
ಕರ್ನಾಟಕದ ಸಮಗ್ರ ಕೋಟೆಗಳನ್ನು ಹಾಗೂ ಕರ್ನಾಟಕದ ಪಕ್ಷಿಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದಿರುವ ವಿಶ್ವಾನಾಥ್ ಸುವರ್ಣ ಹಾಗೂ ಟ್ರಾವೆಲ್ ಪೊಟೋಗ್ರಾಪಿಯ ಬಗ್ಗೆ ಜಿನೇಶ್ ಪ್ರಸಾದ್ ಅವರೊಂದಿಗೆ ಸಂವಾದ
ನಡೆಯಲಿದೆ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.