Karnataka Survey ಹೊಸ ಸಮೀಕ್ಷೆ  ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಅಚ್ಚರಿ, ಬಿಜೆಪಿಗೆ ಶಾಕ್

Karnataka Survey ಬೆಂಗಳೂರು : ಕರ್ನಾಟಕದಲ್ಲಿ ಲೋಕಸಭಾ (Karnataka Loksabha) ಚುನಾವಣೆ (Election 2024) ಪ್ರಚಾರ ಭರದಿಂದ ಸಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ (Congress) ಮೇಲುಗೈ ಆಗುವುದೇ ಬಿಜೆಪಿ (BJP) ದಾಖಲೆ ಸೀಟುಗಳನ್ನು ಗೆಲ್ಲುವುದೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಇದೆ.

Karnataka Survey ಹೊಸ ಸಮೀಕ್ಷೆ  ಫಲಿತಾಂಶ ಪ್ರಕಟ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಮೊದಲ ಹಂತದ ಮತದಾನಕ್ಕೆ ಒಂದು ವಾರ ಮಾತ್ರ ಬಾಕಿಯುಳಿದಿದೆ. ಬಿಜೆಪಿ – ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರು ಮತದಾರರನ್ನು ತಮ್ಮತ್ತ ಸೆಳೆಯಲು ಶತಪ್ರಯತ್ನ ನಡೆಸುತ್ತಿದ್ದಾರೆ.

ಕಳೆದ ತಿಂಗಳು ಚುನಾವಣಾಪೂರ್ವ ಸಮೀಕ್ಷೆ Survey ಪ್ರಕಟಿಸಿದ್ದ ಎಬಿವಪಿ ABP ಹಾಗೂ ಸಿ ವೋಟರ್‌  C Voter ಇದೀಗ ಅಂತಿಮ ಚುನಾವಣೋತ್ತರ ಸಮೀಕ್ಷೆ Survey ಪ್ರಕಟವಾಗಿದೆ. ಕಾಂಗ್ರೆಸ್‌ ಆಡಳಿತಾರೂಢ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಮುಂದುವರಿಯಲಿದೆ ಎನ್ನುವ ಮುನ್ಸೂಚನೆ ನೀಡಿದ್ದು, ಕಾಂಗ್ರೆಸ್ಸಿಗೆ ಅಚ್ಚರಿ ಮೂಡಿಸಿದೆ.

Karnataka Survey  ಕಾಂಗ್ರೆಸ್ ಮುನ್ನಡೆ ಪಡೆದಿತ್ತು

ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ 12 ರಿಂದ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗಿತ್ತು. ಬಿಜೆಪಿ 10 ರಿಂದ 12 ಕ್ಷೇತ್ರಗಳಲ್ಲಿ, ಜೆಡಿಎಸ್‌ 1 ರಿಂದ 2 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ತಿಳಿಸಿತ್ತು. ಈಗ ಮತ್ತೆ ಅನೇಕ ಕ್ಷೇತ್ರಗಳಲ್ಲಿ ವ್ಯತ್ಯಾಸ ಆಗಿದ್ದು, ಲೋಕ್‌ ಪೋಲ್‌ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ತನ್ನ ಸ್ಥಾನಗಳನ್ನು ವೃದ್ಧಿಸಿಕೊಂಡಿತ್ತು. ಪ್ರತಿ ಕ್ಷೇತ್ರದಲ್ಲಿಯೂ 1350 ಜನರ ಪ್ರತಿಕ್ರಿಯೆಯನ್ನು ಪಡೆದು ಸಮೀಕ್ಷೆ ನಡೆಸಲಾಗಿದೆ.

ಕಳೆದ ತಿಂಗಳು ನಡೆದ ಹಲವು ಸರ್ವೇ ಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದಿತ್ತು. ಇದೀಗ ಮಕತದಾನ ದಿನ ಹತ್ತಿರ ಆಗುತ್ತರುವಂತೆ ಕಾಂಗ್ರೆಸ್ ಜನಪ್ರಿಯತೆ ಅತ್ಯಂತ ವೇಗವಾಗಿ ಕುಸಿಯುತ್ತಿದೆ.

ಈ ಮಧ್ಯೆ, ಸರ್ವೇ ಫಲಿತಾಂಶ ನೋಡಿ ಸುಮ್ಮಗಾಗಬೇಡಿ ಎಂದು ಕಾಂಗ್ರೆಸ್ ಪಾರ್ಟಿ ತನ್ನ ಕಾರ್ಯಕರ್ತರಿಗೋ ಮನವಿ ಮಾಡಿದ್ದು, ಚುನಾವಣಾ ಹಿನ್ನಡೆಯ ಸೂಚನೆ ಸಪಷ್ಟವಾಗಿದೆ.
ಹಣದ ಥೈಲಿ ಇಟ್ಟುಕೊಂಡಿರುವ ಮಂತ್ರಿ ಮಕ್ಕಳನ್ನು ಮತ್ತು ಗ್ಯಾರಂಟಿಗಳನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್‌ ಮತ್ತೆ ಒಂದಂಕಿ ಸಾಧನೆ ಮಾಡಲಿದೆ ಎಂದು ಹೊಸ ಸಮೀಕ್ಷೆ ತಿಳಿಸಿದೆ. ಇನ್ನು, ಜೆಡಿಎಸ್‌ ಸ್ಪರ್ಧಿಸಿರುವುದೇ ಮೂರು ಕ್ಷೇತ್ರಗಳಲ್ಲಾಗಿರುವುದರಿಂದ ಬಿಜೆಪಿಗೆ ಉತ್ತಮ ಪ್ರಯೋಜನ ನೀಡಲಿದೆ ಎಂದು ಎಬಿಪಿ – ಸಿ ವೋಟರ್‌ ಸಮೀಕ್ಷೆ ಭವಿಷ್ಯವನ್ನು ನುಡಿದಿದೆ.

ಇದನ್ನು ಓದಿಃ Sugar Factory ಆರೋಪ ಸಾಬೀತುಪಡಿಸಲು ಯತ್ನಾಳ್ ಗೆ ಶಿವಾನಂದ ಪಾಟೀಲ್ ಸವಾಲು

ಕಳೆದ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು ಹಾಗೂ ಕಾಂಗ್ರೆಸ್ ಕೇವಲ ಒಂದು ಸೀಟು ಗೆದ್ದುಕೊಂಡಿತ್ತು. ಜೆಡಿಎಸ್‌ ಕಳೆದ ಬಾರಿ ಒಂದು ಕ್ಷೇತ್ರದಲ್ಲಿ ಗೆದ್ದಿತ್ತು. ಮಂಡ್ಯದಲ್ಲಿ ಸುಮಲತಾ ಪಕ್ಷೇತರರಾಗಿ ಗೆದ್ದುಕೊಂಡಿದ್ದರು.

ರಾಜ್ಯದಲ್ಲಿ ಬಿಜೆಪಿ ಪ್ರಾಬಲ್ಯ ಮುಂದುವರಿದಿದ್ದರೂ ಕೂಡ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂಬುದನ್ನು ಸಮೀಕ್ಷೆ ಅಂದಾಜಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಸಮಾಧಾನ ನೀಡಲಿದೆ. ಕಾಂಗ್ರೆಸ್ 2 ಸೀಟು ಗೆದ್ದರು ಕೂಡ ದುಪ್ಪಟ್ಟು ಸಾಧನೆ ಮಾಡಿದಂತಾಗುತ್ತದೆ.

ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ – ಜೆಡಿಎಸ್‌ ಮೈತ್ರಿ 23 ಕ್ಷೇತ್ರಗಳನ್ನು ಹಾಗೂ ಕಾಂಗ್ರೆಸ್‌ ಕೇವಲ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.

ಎನ್‌ಡಿಎ ಮೈತ್ರಿ ಪೈಕಿ ಬಿಜೆಪಿ 21 ಹಾಗೂ ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ಗೆಲ್ಲಬಹುದು ಎನ್ನಲಾಗಿದೆ. ಇದು ಕರ್ನಾಟಕದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಕನಸು ಕಾಣ್ತಿದ್ದ ಬಿಜೆಪಿ – ಜೆಡಿಎಸ್‌ ಮೈತ್ರಿಗೆ ಶಾಕ್‌ ನೀಡಿದೆ. ಅದರ ಜೊತೆಗೆ  ಗ್ಯಾರಂಟಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ.ಶಿವಕುಮಾರ್ ನಾಯಕತ್ವ ಮ್ಯಾಜಿಕ್ ಮಾಡಲಿದೆ ಎಂದುಕೊಂಡಿದ್ದ ಕಾಂಗ್ರೆಸ್‌ಗೂ ಸಮೀಕ್ಷೆ ಆಘಾತ ನೀಡಿದೆ.

ಕಳೆದ ಬಾರಿ ಬಿಜೆಪಿ 25 ಕ್ಷೇತ್ರಗಳನ್ನು ಗೆದ್ದಿತ್ತು. ಆದರೆ, ಈ ಬಾರಿ ಅದು 21 ಕ್ಕೆ ಇಳಿಯುವುದರಿಂದ ಐದು ಸ್ಥಾನಗಳನ್ನು ಕಳೆದುಕೊಂಡಂತೆ ಆಗಲಿದೆ. ಇನ್ನು, ಜೆಡಿಎಸ್‌ ಕಳೆದ ಬಾರಿ ಒಂದು ಕ್ಷೇತ್ರದಲ್ಲಿ ಗೆದ್ದಿತ್ತು, ಈ ಬಾರಿ ಅದು ಎರಡು ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದ್ದರೆ, ಕಾಂಗ್ರೆಸ್‌ ಕೂಡ ತನ್ನ ಸ್ಥಾನಗಳನ್ನು ಒಂದರಿಂದ ಐದಕ್ಕೆ ಏರಿಸಿಕೊಳ್ಳಲಿದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಆದರೆ, ಆಡಳಿತಾರೂಢ ಕಾಂಗ್ರೆಸ್‌ಗೆ ಇದು ಹಿನ್ನಡೆ ಆಗಲಿದೆ ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯ.

Mysore : ಮೈಸೂರು, ಚಾಮರಾಜ ನಗರದಲ್ಲಿ ಸಿದ್ದು ಪ್ರತಿಷ್ಠೆ ಪಣಕ್ಕೆ, ಕಾಂಗ್ರೆಸ್ ಕಠಿಣ ಪರಿಶ್ರಮ

ಬಿಜೆಪಿಜೆಡಿಎಸ್ಮೈತ್ರಿ VS ಕಾಂಗ್ರೆಸ್‌!

ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿವೆ. 28 ಕ್ಷೇತ್ರಗಳ ಪೈಕಿ ಬಿಜೆಪಿ 25 ಹಾಗೂ ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಬಿಜೆಪಿ ತನ್ನ ಹಾಲಿ ಸಂಸದರು ಇರುವ ಎರಡು ಕ್ಷೇತ್ರಗಳನ್ನು (ಪಕ್ಷೇತರ ಸಂಸದರು ಇರುವ ಮಂಡ್ಯ ಸೇರಿ) ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ.

ಇತ್ತ ಕಾಂಗ್ರೆಸ್‌ ಏಕಾಂಗಿಯಾಗಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಕಳೆದ ಬಾರಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದವು. ಈ ಬಾರಿ ಪರಿಸ್ಥಿತಿ ಬದಲಾಗಿದ್ದು, ಮೈತ್ರಿಯೂ ಬದಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಯು ಬಿಜೆಪಿಗೆ ಲಾಭ ತರಲಿದೆ.

ಏಪ್ರಿಲ್‌ 26 ಮತ್ತು ಮೇ 7 ರಂದು ಮತದಾನ!

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯ ಚುರುಕಾಗಿದ್ದು, ರಾಜ್ಯದಲ್ಲಿ ಮೊದಲಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್‌ 26 ಮತ್ತು ಮೇ 7 ರಂದು ಕರ್ನಾಟಕದಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.ದೇಶದ ಇತರ ರಾಜ್ಯಗಳ ಫಲಿತಾಂಶದ ಜತೆಗೆ ಜೂನ್‌ 4 ರಂದು ಫಲಿತಾಂಶ ಬರಲಿದೆ. ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರ, ಎರಡನೇ ಹಂತದಲ್ಲಿ ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇನ್ನು, ದೇಶಾದ್ಯಂತ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

ಲೋಕ್‌ ಪೋಲ್‌ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುನ್ನಡೆ

ಈ ತಿಂಗಳು ಲೋಕ್‌ ಪೋಲ್‌ ಸಮೀಕ್ಷೆಯಲ್ಲಿ ಕಳೆದ ಬಾರಿಗಿಂತ ಸುಮಾರು 10ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದು, ಕಾಂಗ್ರೆಸ್‌ ಹೆಚ್ಚು ಕಡಿಮೆ 20 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಸೂಚಿಸಿದೆ. ಈಗಲೇ ಚುನಾವಣೆ ನಡೆದರೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ 11 ರಿಂದ 13 ಕ್ಷೇತ್ರಗಳನ್ನು ಗೆಲ್ಲಲಿದ್ದರೆ, ಕಾಂಗ್ರೆಸ್‌ 15 ರಿಂದ 17 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಲೋಕ್‌ ಪೋಲ್‌ ಸಮೀಕ್ಷೆ ಹೇಳಿದೆ.

ಕಳೆದ ತಿಂಗಳು  ಪ್ರಕಟವಾಗಿದ್ದ ಇದೇ  ಲೋಕ್ ಪಾಲ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ 12 ರಿಂದ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗಿತ್ತು. ಬಿಜೆಪಿ 10 ರಿಂದ 12 ಕ್ಷೇತ್ರಗಳಲ್ಲಿ, ಜೆಡಿಎಸ್‌ 1 ರಿಂದ 2 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ತಿಳಿಸಿತ್ತು. ಆದರೆ, ಇದೀಗ ಈ ವಾರ ಪ್ರಕಟಿಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಹೆಚ್ಚು ಕಡಿಮೆ 20 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಸೂಚಿಸಿದೆ.

ಸಮೀಕ್ಷೆಯ ವೇಳೆ ಹಲವು ವಿಚಾರಗಳು ಗಮನಕ್ಕೆ ಬಂದಿವೆ ಎಂದು ಲೋಕ್‌ ಪೋಲ್‌ ಸಮೀಕ್ಷೆ ತನ್ನ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹೇಳಿದೆ. ಪ್ರಮುಖವಾಗಿ ನಿರುದ್ಯೋಗ, ಹಣದುಬ್ಬರ, ಪ್ರಧಾನಿ ಅಭ್ಯರ್ಥಿ, ಕಲ್ಯಾಣ ಯೋಜನೆಗಳು ಮತ್ತು ಕನ್ನಡ ಅಭಿಮಾನದ ಐದು ವಿಷಯಗಳನ್ನು ಜನರು ಮುಖ್ಯವಾಗಿ ಗಮನಿಸಿದ್ದಾರೆ. ಜೊತೆಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಕಾಂಗ್ರೆಸ್‌ ಪರ ಒಲವು ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ ಎಂದು ಸಮೀಕ್ಷೆ ಹೇಳಿದೆ.

Leave a Reply

Your email address will not be published. Required fields are marked *