Rajyostva Award: ರಾಜ್ಯೋತ್ಸವ ಪ್ರಶಸ್ತಿ ಪಡೆಯುವುದು ಹೇಗೆ ?

ಬೆಂಗಳೂರುಃ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2023ರ  ಪಟ್ಟಿ ತಯಾರಿಸಲು ಸರಕಾರ ಆನ್ ಲೈನ್ ನಾಮನಿರ್ದೇಶಕನಕ್ಕೆ ಸೇವಾಸಿಂಧು ಮೂಲಕ ಸೌಲಭ್ಯ ನೀಡಿದ್ದು, 30 ಸದಸ್ಯರ ಸಲಹ ಸಮಿತಿನ್ನು ಕೂಡ ನೇಮಕ ಮಾಡಿದೆ.

ಕಳೆದ ವರ್ಷದಿಂದ ಕನ್ನಡ  ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಮೊ 5 ಲಕ್ಷ ರೂ. ಮೊತ್ತದ ನಗದು ಗೌರವಧನ ಕೂಡ ದೊರೆಯುತ್ತಿದೆ.

ಮುದಿನ ವರ್ಷದಿಂದ ಪ್ರಶಸ್ತಿಯೊಂದಿಗೆ 5 ಲಕ್ಷ ರೂಪಾಯಿ ನಗದು ಗೌರವಧನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2021ರ ಕನ್ನಡ ರಾಜ್ಯೋತ್ಸ ಸಮಾರಂಭದಲ್ಲಿ ಘೋಷಣೆ ಮಾಡಿದ್ದರು.

ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ  ಕಳೆದ ವರ್ಷದಿಂದ ಅರ್ಜಿ ಸಲ್ಲಿಸಿದವರಿಗೆ  ರಾಜ್ಯೋತ್ಸವ ಪ್ರಶಸ್ತಿ ನೀಡುವುದಿಲ್ಲ.ಸರಕಾರವು ಪ್ರಶಸ್ತಿ ಪಡೆಯುವವರನನ್ನು ಆಯ್ಕೆ ಮಾಡಲು ಹೊಸ ವಿಧಾನ ಅನುಸರಿಸಲಿದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದರು. ಅದೇ ರೀತಿಯಾಗಿ ಕಳೆದ ಬಾರಿ ಪ್ರಶಸ್ತಿಗಾಗಿ ಸರಕಾರ ಅರ್ಜಿ ಆಹ್ವಾನ ಮಾಡಿರಲಿಲ್ಲ.

ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಆಯ್ಕೆಗೆ ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಿದೆ. ಸುನೀಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗ ಆನ್ ಲೈನ್ ಶಿಫಾರಸು ಮಾಡುವ ವ್ಯವಸ್ಥೆ ಜಾರಿಗೆ ತಂದಿದ್ದರು. ಅನಂತರ ವಿವಿಧ ಕ್ಷೇತ್ರಗಳ ಸಾಧಕರನ್ನು ತಲಾಶ್ ಮಾಡಲು ಹಲವು ಸಮಿತಿಗಳನ್ನು ನೇಮಕ ಮಾಡಿ ಸಮತಿಗಳೇ ಸಧಕರ ಆಯ್ಕೆಗೆ ಶಿಫಾರಸು ಮಾಡುವ ವ್ಯವಸ್ಥೆ ಮಾಡಲಾಗಿತ್ತು.

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.

ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಹಿಂದಿನ ದಿನ ಅಂದರೆ ಅಕ್ಟೋಬರ್ 31ರಂದು ಸಂಜೆ ಸರಕಾರ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸುವುದು ಸಂಪ್ರದಾಯವಾಗಿದೆ.

 

ಪ್ರಶಸ್ತಿಯು ಇದುವರೆಗೆ ಒಂದು ಲಕ್ಷ ರೂಪಾಯಿಯ ಗೌರವಧನ, ೨೫ ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತು. ಕಳೆದ ವರ್ಷ ಪ್ರಶಸ್ತಿಯೊಂದಿಗೆ ನೀಡುವ ಗೌರವಧನವನ್ನು 5 ಲಕ್ಷ ರೂಪಾಯಿಗೆ ಏರಿಸಲಾಗಿದೆ.

ನೃಪತುಂಗ ಸಾಹಿತ್ಯ ಪ್ರಶಸ್ತಿ 

ರಾಜ್ಯ ಸರಕಾರ ನೀಡುವ ರಾಜ್ಯೋತ್ಸವಪ್ರಶಸ್ತಿಯು 5 ಲಕ್ಷ ರೂ. ನಗದು ಗೌರವಧನ ಹೊಂದಿದ್ದರೆ, ಸಾಹಿತ್ಯ ಲೋಕದಲ್ಲಿ ನೀಡಸಲಾಗುವ ನೃಪತುಂಗ ಸಾಹಿತ್ಯ ಪ್ರಶಸ್ತಿ 7 ಲಕ್ಷ ರೂಪಾಯಿ ಗೌರವಧನ ಹೊಂದಿದೆ.

ನೃಪತುಂಗ ಸಾಹಿತ್ಯ ಪ್ರಶಸ್ತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಸ್ಥಾಪಿಸಿರುವ ಪ್ರಶಸ್ತಿಯಾಗಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಮೃದ್ದವಾದ ಹಾಗೂ ಮೌಲಿಕವಾದ ಕೊಡುಗೆ ನೀಡಿದ ಬರಹಗಾರರೊಬ್ಬರಿಗೆ,  ಕನ್ನಡಪರ ಹೋರಾಟಗಾರರಿಗೆ  ಪ್ರತಿ ವರ್ಷ ಈ ಪ್ರಶಸ್ತಿಗೆ ನೀಡಲಾಗುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ  ನೀಡಲಾಗುವ  ಪ್ರತಿಷ್ಠಿತ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಯನ್ನು  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಸಾಪದಲ್ಲಿ ಇರಿಸಿರುವ 1.5 ಕೋಟಿ ರೂ. ದತ್ತಿಯ ಮೂಲಕನೀಡಲಾಗುತ್ತಿದೆ.

ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್  ಪ್ರಕಟಿಸಲಿದ್ದಾರೆ.

2021ರಲ್ಲಿ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇವಲ ಗೌರವಧನ ಮಾತ್ರ ಅಲ್ಲದೆ ರಾಜ್ಯೋತ್ಸವ ಈ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಬೇಕು. ಇಲ್ಲಿ ಹಣದ ಪ್ರಮಾಣ ಮುಖ್ಯವಲ್ಲ. ಪ್ರಶಸ್ತಿಯ ಮೌಲ್ಯ ಹೆಚ್ಚಿಸುವಂತವರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕು ಆಯ್ಕೆ ವಿಧಾನ ಬದಲಾಗಬೇಕಾಗಿದೆ ಎಂದು ಹಿಂದಿನ ಸರಕಾರ ಪ್ರಕಟಿಸಿತ್ತು.

ಪ್ರಶಸ್ತಗೆ ಸಾಧಕರ ವಯಸ್ಸನ್ನು 50ಕ್ಕೇರಿಸಲಾಗಿತ್ತು. ಅನಂತರ ರಾಜ್ಯೋತ್ಸವ ಪ್ರಶಸ್ತಿಯ ವಯೋಮಿತಿಯನ್ನು 60 ವರ್ಷಕ್ಕೆ ಏರಿಸಲಾಗಿತ್ತು. ನಂತರ ವಯೋಮಿತಿಯನ್ನು 60ಕ್ಕಿಂತ ಕಡಿಮೆಗೆ  ಇಳಿಸಲಾಗುವುದು ಎಂದು ಸರಕಾರ ಹೇಳಿತ್ತು.

ರಾಜ್ಯೋತ್ಸವ ಪ್ರಶಸ್ತಿಗೆ online ಅರ್ಜಿ ಸಲ್ಲಿಸಬಹುದು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡುವಿಕೆ ಹಿನ್ನೆಲೆಯಲ್ಲಿ  ಅಕ್ಟೋಬರ್ 15ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನಾಮನಿರ್ದೇಶನ ಮಾಡಬಹುದಾಗಿದ್ದು, ನಾಮ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ ಹೊರಡಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡುವಿಕೆ ಹಿನ್ನೆಲೆಯಲ್ಲಿ ಇಂದಿನಿಂದ ಅಕ್ಟೋಬರ್ 15ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನಾಮನಿರ್ದೇಶನ ಮಾಡಬಹುದಾಗಿದ್ದು, ನಾಮ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ ಹೊರಡಿಸಿದೆ.

ಸೇವಾ ಸಿಂಧು ಪೋರ್ಟಲ್‌ನ ವೆಬ್‌ಸೈಟ್ ವಿಳಾಸ https://sevasindhu.karnataka.gov.in ಆಗಿದ್ದು, ಸಾಧಕರ ಹೆಸರನ್ನು ನಾಮನಿರ್ದೇಶನ ಮಾಡಬಹುದಾಗಿದೆ. 2023ನೇ ಸಾಲಿನ ಕನ್ನಡ ರಾಜೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು 39 ಸದಸ್ಯರ ಆಯ್ಕೆ ಸಲಹಾ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಚಿಸಿ ಆದೇಶಿಸಲಾಗಿದೆ.

1966 ಇಸವಿಯಲ್ಲಿ ಹತ್ತು ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮೊದಲಬಾರಿಗೆ ನೀಡಲಾಯಿತು. ಕಣ್ಣಿನ ಚಿಕಿತ್ಸೆಯ ಮಾಂತ್ರಿಕ ವೈದ್ಯರಾದ ಡಾ. ಎಂ.ಸಿ.ಮೋದಿ ರಾಜ್ಯೋತ್ಸವ ಪ್ರಶಸ್ತಿ ಪಡೆದವರಲ್ಲಿ ಮೊದಲಿಗರು.

 

  1. ಡಾ. ಎಂ.ಸಿ.ಮೋದಿ– ವೈದ್ಯಕೀಯ
  2. ಕಮಲಾದೇವಿ ಚಟ್ಟೋಪಾಧ್ಯಾಯ- ಸಮಾಜಸೇವೆ
  3. ಡಾ.ಎಂ.ಆದಿಕೇಶವುಲು- ವೈದ್ಯಕೀಯ
  4. ವೀರಣ್ಣಗೌಡ ಪಾಟೀಲ್- ಸಮಾಜಸೇವೆ
  5. ಎಂ.ನರಸಿಂಹಯ್ಯ-ಇಂಜಿನಿಯರಿಂಗ್
  6. ಎಚ್.ಎಸ್.ಕಟ್ಟೀಮನಿ-ಶಿಕ್ಷಣ
  7. ಮುನಿಸ್ವಾಮಪ್ಪ- ಸಮಾಜಸೇವೆಡಿ.
  8. ಎಸ್.ಕೃಷ್ಣಯ್ಯ ಶೆಟ್ಟಿ-ಸಮಾಜಸೇವೆ
  9. ಭಾಗೀರಥಿಬಾಯಿ ಪುರಾಣಿಕ್- ಶಿಕ್ಷಣ/ಸಮಾಜಸೇವೆ
  10. ಭೀಮಾರಾವ್ ಪೋತೆದಾರ್- ಸ್ವಾತಂತ್ರ ಹೋರಾಟಗಾರ

 

ಪಿ.ಆರ್.ರಾಮಯ್ಯನವರು 1947ರಿಂದ 1957ರವರೆಗೆ ವಿಧಾನಸಭೆಯ ಸದಸ್ಯರಾಗಿದ್ದರು.

ಮೂರು ದಶಕಗಳ ಕಾಲ ಮೈಸೂರು ಸಂಸ್ಥಾನದ ಜನತೆಯ ನೆಚ್ಚಿನ ಸುದ್ದಿ ಸಾಧನವಾಗಿ, ಸಾರ್ವಜನಿಕ ಕುಂದುಕೊರತೆಗಳ ಪ್ರಚಾರಕನಾಗಿ, ರಾಜಕೀಯ ಚಟುವಟಿಕೆಗಳ ಯಥಾರ್ಥದರ್ಶಿಯಾಗಿ, ಜಾಗತಿಕ ಪ್ರಗತಿ ವರ್ತಮಾನಗಳ ವಾಹಕವಾಗಿ ‘ತಾಯಿನಾಡು’ ವಿಜೃಂಭಿಸಿದ್ದೇನೋ

ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸುವಾಗ ಭಾರತ ನಾಗರಿಕ ಆಗರಿಬೇಕು ಹೊರತು ಇನ್ಯಾವುದೇ ಅರ್ಹತೆ, ದಾಖಲೆಗಳನ್ನು ಕೇಳಿಲಿಲ್ಲ. ಸರಕಾರ ನೇಮಿಸಿದ ಸಲಹಾ ಸಮಿತಿ ಸಾಧಕರ ಫಟ್ಟಿಯನ್ನು ತಯಾರಿಸಬೇಕಾದರೆ ಸಾಧಕರ ವಿವರವಾದ ಪರಿಚಯ ನೀಡುವುದು ಉತ್ತಮ. ಯಾವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂಬುದನ್ನು ಕೂಡ ಗುರುತಿಸಬೇಕಾಗುವುದು. ಜಿಲ್ಲೆ ಹೊರ ನಾಡಿನ ಕನ್ನಡಿಗರು ಇದನ್ನು ಕೂಡ ಗುರುತಿಸಬೇಕಾಗುತ್ತದೆ.

ವಿವಿಧಕ್ಷೇತ್ರಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಕ್ಷೇತ್ರಗಳ ಪಟ್ಟಿ ಇಂತಿದೆಃ

೧. ಪರಿಸರ ಮತ್ತು ವನ್ಯಜೀವಿ ರಕ್ಷಣೆ Environment and Wildlife

೨.ಕ್ರೀಡೆ Sports

೩.ಸಾಹಿತ್ಯ Literature

೪.ಸುಗಮ ಸಂಗೀತ Light Music

೫.ಮಾಧ್ಯಮ Media

೬.ಕನ್ನಡ ಸ್ವಾತಂತ್ರ್ಯ ಯೋಧರು Freedom Fighters

೭.ಸಂಕೀರ್ಣ

೮.ನೃತ್ಯ Dance

೯.ಹೊರನಾಡ /ಹೊರದೇಶ ಕನ್ನಡಿಗರು Non Resident Kannadiga

೧೦.ಕನ್ನಡ ಭಾಷಾ ಸಂಶೋಧನೆ Kannada Language Research

೧೧.ಸಿನಿಮಾ/ರಂಗಭೂಮಿ Cinema/ Theater

೧೨.ವಿಜ್ಞಾನ Science

೧೩.ಆಡಳಿತ Administration

೧೪.ಕೊಪ್ಪಳ ಕಲೆ/ಚಿತ್ರಕಲೆ Koppala Art/ Painting

೧೫.ಶಿಕ್ಷಣ Education

೧೬.ಚಲನಚಿತ್ರ Cinema

೧೭.ಶಾಸ್ರೀಯ ಸಂಗೀತ Clssical Music

೧೮. ಸಮಾಜಸೇವೆ Social Service

೧೯.ಕಿರುತೆರೆ Television

೨೦. ಸಾಂಸ್ಕೃತಿಕ ಸಂಘಟನೆ Cultural Organisation

೨೧.ಜಾನಪದ Folklore

೨೨.ಯಕ್ಷಗಾನ Yakshagana

೨೩.ವೈದ್ಯಕೀಯ Medical

೨೪ಪ್ರಕೃತಿ ಚಿಕಿತ್ಸೆ Naturopathy

೨೫.ಆಯುರ್ವೇದ Ayurveda

೨೬.ಸಂಘ/ಸಂಸ್ಥೆ Organisation

೨೭.ಕೃಷಿ Agriculture

2023-ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಗಣ್ಯರ ಆಯ್ಕೆಗೆ ನಾಮನಿರ್ದೇಶನ ಮೊದಲಾಗಿ ನೀವು ಸೇವಾ ಸಿಂಧು        ಸರ್ವೀಸ್ ಪೋರ್ಟಲಿಗೆ ಭೇಟಿ ನೀಡಬೇಕು.

ಸೇವಾ ಸಿಂಧು ತಾಣದಲ್ಲಿ ನೀವು ರಿಜಿಸ್ಟರ್ ಆಗಿದ್ದರೆ ಲಾಗಿನ್ ಆಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯನ್ನು ಆಕೆ ಮಾಡಿ ಕೆಳಗಡೆ ಕಾಣುವ 2023-ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಗಣ್ಯರ ಆಯ್ಕೆಗೆ ನಾಮನಿರ್ದೇಶನ ಎನ್ನುವ ಲಿಂಕ್ ಓಪನ್ ಮಾಡಬೇಕು ಹಾಗೂ ಲಾಗಿನ್ ಆಗಬೇಕು.

https://sevasindhu.karnataka.gov.in/Sevasindhu/DepartmentServicesKannada

ಈ ವಿಡಿಯೋ ನೋಡಿಃ ರಾಜ್ಯೋತ್ಸವ ಪ್ರಶಸ್ತಿ!RAJYOTSAVA

 

Leave a Reply

Your email address will not be published. Required fields are marked *