Home Minister ಹೋಮ್ ಮಿನಿಸ್ಟರ್ ಆಗುತ್ತೀನಿ ಎಂದು ಪರಮೇಶ್ವರ್ ಗೆ ಶಾಕ್ ನೀಡಿದ ವಿದ್ಯಾರ್ಥಿನಿ

ಹೋಮ್ ಮಿನಿಸ್ಟರ್ ಆಗುತ್ತೀನಿ ಎಂದು ಪರಮೇಶ್ವರ್ ಗೆ ಶಾಕ್ ನೀಡಿದ ವಿದ್ಯಾರ್ಥಿನಿ
ಬೆಂಗಳೂರು, ಫೆ. 22: ನಾನೂ ಹೋಮ್ ಮಿನಿಸ್ಟರ್ ಆಗುತ್ತೀನಿ ಎಂದು ಶಾಲಾ ವಿದ್ಯಾರ್ಥಿನಿಯೊಬ್ಬಳು ಗೃಹ ಸಚಿವ ಡಾ.ಜಿ. ಪರಮೇಶ್ವರಲ್ಲಿ ಹೇಳಿದ ವಿದ್ಯಮಾನ ವಿಧಾನಸೌಧದಲ್ಲಿ ನಡೆಯಿತು.
ವಿಧಾನಮಂಡಲದ ಅಧಿವೇಶ ವೀಕ್ಷಿಸಲು ಆಗಮಿಸಿದ್ದ ಆಶ್ರಮ ಶಾಲೆಯ ವಿದ್ಯಾರ್ಥಿನಿಯರ ತಂಡ ಸಮಾಜ ಕಲ್ಯಾಣ ಸಚಿವರನ್ನು ಭೇಟಿಯಾಗಿ ವಾಪಾಸಗುತ್ತಿದ್ದಾಗ ಕಾರಿಡಾರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿಯಾಯಿತು. ‘ಮುಂದೇನಾಗುತ್ತೀರಿ?’ ಎಂದು ಗೃಹ ಸಚಿವರು ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದರು.
ಒಬ್ಬಳುಎಂಎಲ್ಎ ಅಂದರೆ ಇನ್ನೊಬಾಕೆ ಹೋಮ್ ಮಿನಿಸ್ಟರ್ ಆಗುತ್ತೀನಿ ಅಂದ್ಲು.
ಡಾ.ಪರಮೇಶ್ವರ್ ಖುಷಿಯಿಂದ ಬಾಲಕಿಯರ ಬೆನ್ನು ತಟ್ಟಿದರು.

Leave a Reply

Your email address will not be published. Required fields are marked *