Hindu Rashtra Book ಹಿಂದೂ ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು ಲತಾಮಾಲ ಅವರ ಪುಸ್ತಕ ಬಿಡುಗಡೆ

Hindu Rashtra Book ಹಿಂದೂ ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು ಲತಾಮಾಲ ಅವರ ಪುಸ್ತಕ ಬಿಡುಗಡೆ

ಬೆಂಗಳೂರು, ಮಾರ್ಚ್ 31 (www.kannadadhvani.com) ಲೇಖಕಿ ಲತಾಮಾಲ ( Latha Mala) ಅವರ ಚೊಚ್ಚಲ ಕೃತಿ “ಹಿಂದೂ ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು” ಪುಸ್ತಕವನ್ನು
ಯುವಜನತೆ ಓದಲೇ ಬೇಕಾದ ಪುಸ್ತಕ (Book) ಎಂದು ಕೃತಿ ಪರಿಚಯಿಸಿದ ಕೆ.ಪಿ.ಸುರೇಶ್ ಹೇಳಿದರು.

ಮೈಸೂರಿನ ಅಭಿರುಚಿ ಗಣೇಶ್ ಪ್ರಕಟಿಸಿದ ಲತಾಮಾಲ ಅವರ”ಹಿಂದೂ ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು”ಪುಸ್ತಕವನ್ನು ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಪ್ರೊ.ಆರ್. ಸುನಂದಮ್ಮ, ಡಾ.ಕೆ.ಷರೀಫ,ಡಾ.ಎ.ಆರ್ ವಾಸವಿ ಬಿಡುಗಡೆ ಮಾಡಿದರು.
ಲಕ್ಷ ಕೋಟಿ ರೂಪಾಯಿ ಹಗರಣಗಳು ಆಗುತ್ತಿವೆ. ಸಿಎಜಿ ವರದಿಗಳು ಬರುತ್ತಿವೆ. ಆದ್ರೂ, ಮಾಧ್ಯಮಗಳು ಯಾಕೆ ಬರೆಯುತ್ತಿಲ್ಲ. 2ಜಿ ಹರಾಜು ವಿಚಾರದಲ್ಲಿ ದೊಡ್ಡ ಗುಲ್ಲೆಬಿಸಿದರು. 2ಜಿ ಹಗರಣವೇ ನಡೆದಿಲ್ಲ ಎಂದು ನ್ಯಾಯಾಲಯ ಹೇಳಿತು. ಇಂದು ಹಗರಣಗಳಿಗೆ ಲೆಕ್ಕವೇ ಇಲ್ಲ. ಹೆದ್ದಾರಿ ಗುತ್ತಿಗೆಗಳು ನೂರಾರು ಪಟ್ಟು ಹೆಚ್ಚು(Above) ಮೊತ್ತಕ್ಕೆ ನೀಡಲಾಗುತ್ತಿದೆ ಇದು ಭ್ರಷ್ಟಚಾರ ಅಲ್ಲವೇ ಎಂದು ಕೃತಿ ಬಿಡುಗಡೆ ಮಾಡಿದ ಪ್ರೊ.ಆರ್. ಸುನಂದ ಪ್ರಶ್ನಿಸಿದರು.
ಕಾಂಗ್ರೆಸ್ಸಿಗರು ನಿಷ್ರಯೋಜಕರಾಗಿದ್ದಾರೆ. ಲತಾಮಾಲ ಸಂಶೋಧಿಸಿ ಈ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. ಢೋಂಗಿವಾದಿಗಳ ಬಂಡವಾಳವನ್ನು ಆಧಾರ ಸಹಿತವಾಗಿ ಬಯಲು ಮಾಡಿದ್ದಾರೆ. ಯುವಜನರು ಮಾತ್ರ ಅಲ್ಲದೆ, ಪ್ರತಿಮನೆಯ ಅಂಕಲುಗಳಿಗೂ ಈ ಪುಸ್ತಕ ತಲುಪಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸ ಮಾಡಬೇಕೆಂದು ಆಶಿಸಿದರು.
30 ವರ್ಷಗಳ ಹಿಂದೆ
“ಆರ್ ಎಸ್ ಎಸ್ ವಿಷವೃಕ್ಷ” ಎಂಬ ಕೃತಿ ಪ್ರಕಟವಾಗುತ್ತು. ಆದರೆ, ಮಹಿಳೆಯೊಬಬ್ಬರು ಸಂಘ ಪರಿವಾರದ ಷಡ್ಯಂತ್ರಗಳನ್ನು ಬಹಿರಂಗ ಪಡಿಸಿ ಹೊರತಂದ ಮೊದಲ ಸಮಗ್ರ ಕೃತಿ ಇದಾಗಿದೆ ಎಂದು ಡಾ.ಷರೀಫ ಹೇಳಿದರು.
ವರ್ತಮಾನದ ಇಂದಿನ ಸ್ಥಿತಿಯಲ್ಲಿ ಮೌನ ಕೂಡ ಅಪರಾಧ ಆಗಿರುತ್ತದೆ. ಲತಾಮಾಲ ಅವರು ದಿಟ್ಟತನದಿಂದ ಪುಸ್ತಕ ರಚಿಸಿದ್ದಾರೆ. ಇದೊಂದು ಚಾರಿತ್ರಿಕ ದಾಖಲೆಯಾಗಿದೆ ಎಂದವರು ಹೇಳಿದರು.
ಮೋದಿ ಸರಕಾರ ಸಂವಿಧಾತ್ಮಕ ಸಂಸ್ಥೆಗಳನ್ನು ಶಿಥಿಲ ಮಾಡಿರುವುದಲ್ಲದೆ. ದೇಶದ ಬಹು ಸಂಸ್ಕೃತಿಗೆ ಧಕ್ಕೆಯಾಗಿದೆ. ಆರ್ಥಿಕ ಅಸಮಾನತೆ ಸೃಷ್ಟಿಯಾಗಿದೆ ಎಂದು ಕೃತಿ ಬಿಡುಗಡೆ ಮಾಡಿದ ಡಾ.ಎ.ಆರ್ ವಾಸವಿ ಹೇಳಿದರು.
ಮೋದಿ ಸರಕಾರ ಬಂದ ಮೇಲೆ ದೇಶದ ಜನರು ನ್ಯಾಯಪ್ರಜ್ಞೆ ಕಳಕೊಂಡಿದ್ದಾರೆ. ಮನುಷ್ಯವನ್ನು ಕೊಂದು ಹಾಕಿದ್ದಾರೆ ಎಂದು
ಪತ್ರಕರ್ತ ಶಿವ ಸುಂದರ್ ಅಭಿಪ್ರಾಯಪಟ್ಟರು.
ಲೇಖತ, ಚಿಂತಕ ಜಿ.ರಾಮಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಭಿರುಚಿ ಪ್ರಕಾಶನದ ಗಣೇಶ್ ವಂದಿಸಿದರು.

Leave a Reply

Your email address will not be published. Required fields are marked *