Hampi Home Stay: ಹಂಪಿಯಲ್ಲಿ ಹೋಂ ಸ್ಟೇ ಮತ್ತೆ ಆರಂಭವಾಗಲಿದೆಯೇ

ಬೆಂಗಳೂರು, ಅಕ್ಟೋಬರ್ 04 : World Heritage Site ವಿಶ್ವಪಾರಂಪರಿಕ ತಾಣವಾದ  ಹಂಪಿಯ Hampi ಸುತ್ತಲಿನ ಗ್ರಾಮಗಳ ಕುರಿತು ನ್ಯಾಯಾಲಯ ಆದೇಶ ನೀಡಿರುವಂತೆ  ಹೋಮ್ ಸ್ಟೇಗಳನ್ನು ತಕ್ಷಣಕ್ಕೆ ನಿಲ್ಲಿಸಬೇಕು.  ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಮುಂದಿನ ಕ್ರಮಕ್ಕೆ ತೀರ್ಮಾನ ಶೀಘ್ರದಲ್ಲೆ ತೆಗೆದುಕೊಳ್ಳುವುದು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ಹಂಪಿಯಲ್ಲಿ ಹೋಂ ಸ್ಟೇ ಗಳು ಮತ್ತೆ ಆರಂಭವಾಗುವ ಸೂಚನೆ ದೊರೆತಿದೆ.

ಕಳೆದ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ವಿಶ್ವಪಾರಂಪರಿಕ ತಾಣವಾದ  ಹಂಪಿಯ ಸುತ್ತಮುತ್ತಲಿನಲ್ಲಿ ಯಾವುದೇ ಅನಧಿಕೃತ ವಾಣಿಜ್ಯ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ. ಯಾವುದೇ ಲಾಬಿಗಳಿಗೆ ಸರಕಾರ ಜಗ್ಗುವುದಿಲ್ಲ ಎಂದು ಸಿದ್ದರಾಮಯ್ಯ ಸರಕಾರದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿಕೆ ನೀಡಿದ್ದರು.

ಲಾಬಿಗೆ ಮಣಿದ ಸರಕಾರ

ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಯ Hampi World Heritage Area Development Authority ಗ್ರಾಮಗಳ ಸಮಸ್ಯೆಗಳ  ಕುರಿತಂತೆ ಚರ್ಚಿಸಲು  ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ನೇತೃತ್ವದ ನಿಯೋಗವು ಇಂದು  ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರನ್ನು  ಭೇಟಿಯಾಗಿ  ಚರ್ಚಿಸಿದ ಸಂದರ್ಭದಲ್ಲಿ ಅವರು ಈ ರೀತಿ ಪ್ರತಿಕ್ರಿಕೆಯೆ ನೀಡಿದ್ದಾರೆ.

ವಿಶ್ವಪಾರಂಪರಿಕ ತಾಣವಾದ ಹಂಪಿಯಲ್ಲಿ ಮಾದಕವಸ್ತುಗಳ  ಬಳಕೆ, ವೇಶ್ಯಾವಾಟಿಕೆಗಳಂಥ ಕಾನೂನು ಬಾಹಿರ ಚಟುವಟಿಕೆಗಳನ್ನು ಗುರುತಿಸುವಂತೆ ನ್ಯಾಯಾಲಯ ಸೂಚಿಸಿದ್ದು, ಇದನ್ನು ಗುರುತಿಸಿ ನಿಲ್ಲಿಸುವ ಕೆಲಸವಾಗಬೇಕು ಮತ್ತು ಗ್ರಾಮಸ್ಥರಿಗೆ ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳನ್ನು ಸ್ಥಗಿತಗೊಳಿಸಬಾರದು ಎಂದು ಅವರು ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.

ಹಂಪಿ ಪ್ರದೇಶದ 29 ಗ್ರಾಮಗಳಲ್ಲಿ 10 ಸಾವಿರ ಜನರಿದ್ದಾರೆ. 2009 ರಲ್ಲಿ ನಾಲ್ಕು ಮಂದಿ ಸ್ವಾಮೀಜಿಗಳು  ದಾವೆ ಹೂಡಿದ್ದು,  ಅನಧಿಕೃತ ಚಟುವಟಿಕೆಗಳನ್ನು ಗುರುತಿಸುವ ಕೆಲಸ  ಪ್ರಾಧಿಕಾರದ್ದು ಎಂದು ನ್ಯಾಯಾಲಯ ಈ ದಾವೆಯ ಕುರಿತಾಗಿ ತೀರ್ಪು ನೀಡಿದೆ.

ಅದರ ಆಧಾರದ ಮೇಲೆ ಸ್ಥಳೀಯರಿಗೆ ಅಂಗಡಿ ಹಾಕಲು ಅವಕಾಶವಿಲ್ಲ. 230 ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹಂಪಿ ಅಭಿವೃದ್ಧಿಗೆ ಪ್ರಾಚ್ಯವಸ್ತು ಇಲಾಖೆ ಕ್ರಮವಹಿಸಿಲ್ಲ. ಹಂಪಿಗೆ ಬರುವ ಜನರಿಗೆ ಈ ಕ್ರಮದಿಂದ ತೊಂದರೆಯಾಗಿದೆ.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಮೂಲಭೂತ ಸೌಕರ್ಯಗಳನ್ನುನೀಡಬೇಕಿದೆ.  ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ, ಹಾಗೂ ಆರ್ಥಿಕ ಚಟುವಟಿಕೆ ಹಮ್ಮಿಕೊಳ್ಳಲು,  ಹೋಮ್ ಸ್ಟೇ ನಡೆಸಲು ಅವಕಾಶ ಕಲ್ಪಿಸಲು ಅವಕಾಶ ನೀಡುವಂತೆ ಮಾಜಿ ಸಂಸದ ಉಗ್ರಪ್ಪ ಮನವಿ ಮಾಡಿದರು.

ಹೋಮ್ ಸ್ಟೇ ಗೆ ಅವಕಾಶ ಕಲ್ಪಿಸಿಲ್ಲ.

ದಿನನಿತ್ಯದ ಅವಶ್ಯಕತೆಗಳಿಗೆ 50 ಚಟುವಟಿಕೆಗಳನ್ನು ಗುರುತಿಸಲಾಗಿದೆ. ಹೋಮ್ ಸ್ಟೇ ಗೆ ಇದರಲ್ಲಿ ಅವಕಾಶ ಕಲ್ಪಿಸಿಲ್ಲ.

ಹಿಂದಿನ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಜಾಗದಲ್ಲಿ ಸ್ಟಾರ್ ಹೋಟೆಲ್ ನಿರ್ಮಿಸಲು ಅನುಮತಿ ನೀಡಲಾಗಿದೆ.‌ ಜೈನರ ಆಶ್ರಮ, ಮಠವಿದೆ, ಖಾಸಗಿಯವರಿಗೆ ಹೋಮ್ ಸ್ಟೇ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ಆದರೆ ಬಡವರಿಗೆ ಹೋಟೆಲು, ಹೋಮ್ ಸ್ಟೇ  ನಡೆಸಲು ಅವಕಾಶವಿಲ್ಲ ಎಂದು ಉಗ್ರಪ್ಪ ಅವರು ವಿವರಿಸಿದರು.

ಹೋಮ್ ಸ್ಟೇ ವಾಣಿಜ್ಯ ಚಟುವಟಿಕೆ ಯಾಗಿದೆ ಎಂದು ನ್ಯಾಯಾಲಯ ಪರಿಗಣಿಸಿದೆ. ಸದ್ಯ ನ್ಯಾಯಾಲಯ ಸ್ಥಳ ಪರಿಶೀಲನೆ ಮಾಡಲು ಸೂಚಿಸಿದ್ದು,ಈ ಚಟುವಟಿಕೆಗಳಿಂದ  ಪಾರಂಪರಿಕ ತಾಣಕ್ಕೆ ಹಾನಿಯಾಗುತ್ತದೆಯೇ  ಎಂಬ ಅಂಶಗಳನ್ನು ಪರಿಶೀಲಿಸಲು ತಿಳಿಸಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು  ಸಭೆಯಲ್ಲಿ ತಿಳಿಸಿದರು.

ಕಳೆದ ಅಧಿವೇಶನದಲ್ಲಿ ಹಂಪಿ ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಯ ಗಂಗಾವತಿ, ಆನೆಗೊಂದಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಇರುವ 58 ಅನಧಿಕೃತ ಫಾರ್ಮ್‌ ಸ್ಟೇಗಳ ಅಕ್ರಮ ಸಕ್ರಮಕ್ಕೆ ಕಾನೂನಲ್ಲಿ ಅವಕಾಶವಿಲ್ಲ. ಹಾಗಾಗಿ ನಿಯಮಾನುಸಾರ ಅವುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಸದನದಲ್ಲಿ ತಿಳಿಸಿದರು. ಆದರೆ, ಈಗ ಮುಖ್ಯಮಂತ್ರಿಯವರು ಇದಕ್ಕೆ ವ್ಯತಿರಿಕ್ತವಾದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಅಧಿವೇಶದ ಶೂನ್ಯವೇಳೆಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು, ಆನೆಗೊಂದಿ ಸೇರಿದಂತೆ ಸುತ್ತಮುತ್ತಲ ವಿವಿಧ ಪ್ರದೇಶಗಳಲ್ಲಿ ಸುಮಾರು 2000 ಕುಟುಂಬಗಳು ಹೋಂ ಸ್ಟೇ ಮಾದರಿಯಲ್ಲಿ ಫಾರ್ಮ್‌ ಸ್ಟೇ ನಡೆಸುತ್ತಿದ್ದು ಅದರಿಂದಲೇ ಜೀವನ ನಡೆಸುತ್ತಿವೆ. ಅಲ್ಲದೆ, ಇದರಿಂದ ವಿದೇಶಿ ಪ್ರವಾಸಿಗರಿಗೆ ಬಹಳ ಅನುಕೂಲವಾಗುತ್ತಿದೆ. ಆದರೆ, ಸರ್ಕಾರ ಈ ಫಾರ್ಮ್‌ ಸ್ಟೇಗಳನ್ನು ತೆರವು ಮಾಡುತ್ತಿರುವುದರಿಂದ ಆ ಕುಟುಂಬಗಳು ಬೀದಿಗೆ ಬೀಳಲಿವೆ. ಹಾಗಾಗಿ ತೆರವು ಮಾಡಬಾರದು ಎಂದು ಮನವಿ ಮಾಡಿದ್ದರು.

ಇದಕ್ಕೆ ಉತ್ತರಿಸಿದ ಸಚಿವರು, ಸರ್ಕಾರದ ನಿಯಮಾವಳಿಯಂತೆ ಹಂಪಿ ಪ್ರದೇಶಾಭಿವೃದ್ಧಿ ಮಹಾ ಯೋಜನೆ ಅಡಿ ಪ್ರಾಧಿಕಾರದ ವಲಯ ನಿಯಮಾವಳಿಗಳ ಪ್ರಕಾರ ಈ ಪ್ರಾಧಿಕಾರ ವ್ಯಾಪ್ತಿಗೆ ಒಳಪಡುವ 17 ಪ್ರದೇಶಗಳಲ್ಲಿ ಭೂ ಪರಿವರ್ತನೆ ಇಲ್ಲದೆ ಕೃಷಿ ಭೂಮಿಯಲ್ಲಿ ಹೋಟೆಲ್‌, ರೆಸ್ಟೋರೆಂಟ್‌, ರೆಸಾರ್ಟ್‌ ಮತ್ತಿತರೆ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ. ಹಾಗಾಗಿ ಆನೆಗೊಂದಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅನಧಿಕೃತವಾಗಿ 58 ಫಾಮ್‌ರ್‍ ಸ್ಟೇಗಳು ನಡೆಯುತ್ತಿರುವುದನ್ನು ಗುರುತಿಸಲಾಗಿದೆ. ಅಲ್ಲದೆ, ಈ ಅನಧಿಕೃತ ಫಾರ್ಮ್‌ ಸ್ಟೇಗಳ ತೆರವು ಸಂಬಂಧ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನಾ ಅರ್ಜಿ ಕೂಡ ದಾಖಲಾಗಿತ್ತು. ಹಾಗಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಇವುಗಳನ್ನು ತೆರವು ಮಾಡಲಾಗುತ್ತಿದೆ. 58ರ ಪೈಕಿ 28 ಫಾರ್ಮ್‌ ಸ್ಟೇ ತೆರವು ಮಾಡಲಾಗಿದೆ. 31 ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿದ್ದೇವೆ. ಉಳಿದ 21 ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿವೆ. ಪ್ರಕರಣಗಳು ಇತ್ಯರ್ಥವಾದ ಬಳಿಕ ಮುಂದಿನ ಕ್ರಮ ವಹಿಸಲಾಗುವುದು ಎಂದು ಹೇಳಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ರೀತಿಯ ತೀರ್ಮನ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಮುಖ್ಯಮಂತ್ರಿಗಳ ಮಾತಿನಲ್ಲಿ ನ್ಯಾಯಾಲಯದ ತೀರ್ಪಿಗೆ ವ್ಯತಿರಿಕ್ತವಾಗಿ ಪಾಲಿಸಿ ಬದಲಾವಣೆಯ ಸೂಚನೆ ಕಂಡುಬರುತ್ತಿದ

ಇವು ಪ್ರಮುಖ ಡ್ರಗ್‌ ತಾಣಗಳು:

ಈ ವೇಳೆಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ಬಸವರಾಜ ರಾಯರೆಡ್ಡಿ, ಈ ಫಾರ್ಮ್‌ ಸ್ಟೇಗಳು ರಾಜ್ಯ ಪ್ರಮುಖ ಡ್ರಗ್‌ ಕೇಂದ್ರಗಳಾಗಿವೆ. ಇಸ್ರೇಲಿಯನ್ನರು ಸೇರಿದಂತೆ ಬೇರೆ ಬೇರೆ ದೇಶದ ಡ್ರಗ್‌ ಪೆಡ್ಲರ್‌ಗಳು ಇಲ್ಲಿ ಸಿಕ್ಕಿಬಿದ್ದಿರುವ ಉದಾಹರಣೆಗಳಿವೆ. ಹಾಗಾಗಿ ಇದನ್ನು ಮಟ್ಟ ಹಾಕಲು ಕ್ರಮ ವಹಿಸಬೇಕು. ಅಗತ್ಯವಿದ್ದರೆ ಫಾಮ್‌ರ್‍ ಸ್ಟೇಗಳ ಸಕ್ರಮಕ್ಕೆ ಪರಿಶೀಲಿಸಬಹುದು ಎಂದರು. ಇದಕ್ಕೆ ಸಚಿವರು ಫಾರ್ಮ್‌ ಸ್ಟೇಗಳ ಅಕ್ರಮ ಸಕ್ರಮಕ್ಕೆ ಕಾನೂನಲ್ಲಿ ಅವಕಾಶವೇ ಇಲ್ಲ ಎಂದರು.

Leave a Reply

Your email address will not be published. Required fields are marked *