GAS SCAM ಚುನಾವಣಾ ಬಾಂಡ್ ಖರೀದಿಸಿದ ಮೇಘಾ ಇಂಜಿನಿಯರಿಂಗ್ ಕಂಪೆನಿಗೆ ಸಾವಿರ ಕೋಟಿ ರೂ. ಲಾಭ

GAS SCAM ಚುನಾವಣಾ ಬಾಂಡ್ ಖರೀದಿಸಿದ ಮೇಘಾ ಇಂಜಿನಿಯರಿಂಗ್ ಕಂಪೆನಿಗೆ(Megha Engineering and Infrastructure Ltd (MEIL)) ರಾಜ್ಯದಲ್ಲಿ ಸಾವಿರ ಕೋಟಿ ರೂ. ಲಾಭ,  ಉದ್ಯಮಿಗಳ ಅನುಕೂಲಕ್ಕಾಗಿ ಅನಿಲ ನೀತಿ ಬದಲಾವಣೆ

ಮುಖ್ಯಮಂತ್ರಿ ಉತ್ತರಿಸುವರೇ ?ಕೈಗಾರಿಕಾ ಮಂತ್ರಿ ಉತ್ತರಿಸುವರೇ?

ಬೆಂಗಳೂರು ಮಾ.16(www.kannadadhvani.com)- ಚುನಾವಣಾ ಬಾಂಡ್ ಖರೀದಿ ವಿಚಾರದಲ್ಲಿ ದೇಶದಾದ್ಯಂತ ಚರ್ಚೆ ಆಗುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಅನಿಲ ವಿತರಣೆ ಗುತ್ತಿಗೆ ಪಡೆದುಕೊಂಡಿರುವ ಕಂಪನಿಯೊಂದು ದೊಡ್ಡ ಪ್ರಮಾಣದಲ್ಲಿ ಚುನಾವಣಾ ಬಾಂಡ್ Bond Scam  ಖರೀದಿ ಮಾಡಿರುವುದಲ್ಲದೆ ರಾಜ್ಯದಲ್ಲಿ ನಡೆಸುತ್ತಿರುವ ವ್ಯವಹಾರದಲ್ಲಿ ಸಾವಿರ ಕೋಟಿ ರೂಪಾಯಿ ಲಾಭ ಮಾಡಿಕೊಂಡಿದೆ.

ಚುನಾವಣಾ ಬಾಂಡ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಬಾಂಡ್ ಹರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕು ಎಂದು ಟ್ವೀಟ್ ಮಾಡಿದ್ದರು.

ಸಿದ್ದರಾಮಯ್ಯ ಅವರ ಸರಕಾರ ರಾಜ್ಯದ ಅನಿಲ ನೀತಿಯಲ್ಲಿ ಬದಲಾವಣೆ ಮಾಡಿರುವ ಪರಿಣಾಮ ಮೇಘಾ ಇಂಜಿನಿಯರಿಂಗ್ ಕಂಪೆನಿಗೆ  1,787 ಕೋಟಿ ರೂ. ಲಾಭವಾಗಿದೆ. ಅದೇ ರೀತಿ ಅದಾನಿ ಕಂಪೆನಿಗೆ ಅಂದಾಜು 387 ಕೋಟಿ ರೂ. ಲಾಭವಾಗಿದೆ ಎಂದು ದಿ ಫೈಲ್ ವರದಿ ಮಾಡಿದೆ.

ಮೇಘಾ ಇಂಜಿನಿಯರಿಂಗ್ ಕಂಪೆನಿಗೆ  1,787 ಕೋಟಿ ರೂ. ಲಾಭ ಮಾಡಿಕೊಳ್ಳಲು ರಾಜ್ಯದ ಅನಿಲ ನೀತಿಯಲ್ಲಿ ಬದಲಾವಣೆ ಮಾಡಲಾಗಿದೆಯೋ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರದ ವೇಳೆ ಅನಂತರ ವಿಧಾನ ಮಂಡಲದಲ್ಲಿ ಉತ್ತರಿಸಬಹುದು.

ರಾಜ್ಯದ ಅನಿಲ ನೀತಿ ಏನು

ಗ್ಯಾ ಪೈಪ್ ಲೈನ್ ಹಾಕಲು ಅನುಮತಿ ಪ್ರಮಾಣ ಪತ್ರಗಳನ್ನು ಕೈಗೆಟಕುವ ದರದಲ್ಲಿ ಒದಗಿಸುವ ಅಗತ್ಯ ಇದೆ ಎಂಬುದು ಸರಕಾರದ ಅಭಿಪ್ರಾಯ. ಆದುದರಿಂದ ರಸ್ತೆಗಳ ಬದಿಗಳಲ್ಲಿ ಅನಿಲ ಪೈಪೈಪ್ ಲೈನ್ ಹಾಕಲು ಅನುಮತಿ ಮತ್ತು ಮೇಲ್ವಿಚಾರಣೆ ಶುಲ್ಕವನ್ನು  ಪ್ರತಿ ಕಿಮೀಗೆ 1000 ರೂ. ಮಿತಿ ಗೊಳಿಸಲಾಯಿತು. ಪೈಪೈಪ್ ಲೈನ್ ಹಾಕಲು ಅನುಮತಿ ಮತ್ತು ಮೇಲ್ವಿಚಾರಣೆ ಶುಲ್ಕಗಳು ಲೋಕೋಪಯೋಗಿ ಇಲಾಖೆಯ ಪ್ರದೇಶ, ಮಹಾನಗರಪಾಲಿಕೆ ಪ್ರದೇಶ, ನಗರ ಮುನ್ಸಿಪಲ್ , ನಗರಾಭಿವೃದ್ಧಿ ಪ್ರಾಧಿಕಾರ, ಪಂಚಾಯತು ಪ್ರದೇಶ, ಕೈಗಾರಿಕಾ ಪ್ರದೇಶ, ಜಲಮೂಲಗಳ ಕ್ರಾಸಿಂಗ್ ಹೀಗೆ ಎಲ್ಲ ಪ್ರದೇಶಗಳಲ್ಲಿ ರಾಜ್ಯದಾದ್ಯಂತ ಏಕ ರೂಪದಲ್ಲಿ ಶಉಲ್ಕವನ್ನು ನಿಗದಿ ಮಾಡಲಾಯಿತು.

ಮೀಟರ್ ಶುಲ್ಕದಲ್ಲಿ ಕಡಿತ

ಅನಿಲ ಸರಬರಾಜು  ಮಾಡಲು ಪೈಪ್ ಅಳವಡಿಕೆಗೆ ಈ ಮೊದಲು ಬೆಂಗಳೂರು ವ್ಯಾಪ್ತಿಯಲ್ಲಿ ಪ್ರತಿ ಮೀಟರಿಗೆ1900 ರೂ. ಶಉಲ್ಕ ನಿಗದಿಯಾಗಿತ್ತು. ಸಿದ್ದರಾಮಯ್ಯ ಸರಕಾರ ಅದನ್ನು ಹೊಸ ಅನಿಲ ನೀತಿ ಪ್ರಕಾರ ಮೀಟರಿಗೆ ಕೇವಲ ಒಂದು ರೂಪಾಯಿಗೆ ಕಡಿಮೆ ಮಾಡಿತು. ಇದರಿಂದ ಈ ಹಿಂದ ಸರಕಾರಕ್ಕೆ ಪ್ರತಿ ಕಿಮೀ. 18.57 ಲಕ್ಷ ರೂಪಾಯಿ ಸರಕಾರಕ್ಕೆ ವರಮಾನಬರುತ್ತಿದ್ದರೆ ಇದೀಗ ಅಧು ಕೇವಲ 1000 ರೂಪಾಯಿಗೆ ಬಂದು ನಿಂತಿತು. ಇದರಿಂದ ಬೊಕ್ಕಸಕ್ಕೆ ಅಗಾಧ ನಷ್ಟವಾದರೆ  ಉದ್ಯಮಿಗಳಿಗೆ ಲಾಭವಾಗಿದೆ.

ಅನಿಲ ನೀತಿಯಲ್ಲಿ ಬದಲಾವಣೆ ಮಾಡಿರುವ ಪರಿಣಾಮ ಇತರ ಕಂಪೆನಿಗಳ ಪೈಕಿ ಮೇಘಾ ಇಂಜಿನಿಯರಿಂಗ್ ಕಂಪೆನಿಗೆ  1,787 ಕೋಟಿ ರೂ. ಲಾಭವಾಗಿದೆ. 900 ಕೋಟಿ ರೂಪಾಯಿಗೆ ಹೆಚ್ಚು ಮೊತ್ತದ ಚುನಾವಣಾ ಬಾಂಡನ್ನು ಮೇಘಾ ಇಂಜಿನಿಯರಿಂಗ್ ಕಂಪೆನಿ ಖರೀದಿ ಮಾಡಿರುವುದು ಬೆಳಕಿಗೆ ಬರುವುದರೊಂದಿಗೆ ಈ ವಿಚಾರ ಕೂಡ ಬಹಿರಂಗಗೊಂಡಿದೆ.

ಕೈಗಾರಿಕ ಸಚಿವ ಎಂ.ಬಿ. ಪಾಟೀಲ್ ಅವರು ಮೂಲಸೌಕರ್ಯ ಇಲಾಖೆ ಹೊರತಂದ ಅನಿಲ ನೀತಿಯ ತಿದ್ದುಪಡಿಯನ್ನು ಸಮರ್ಥಿಸಿಕೊಂಡಿದ್ದರು.

ಇದರಿಂದ ಪ್ರಧಾನಿ ನರೇಂದರ್ ಮೋದಿ ಅರ ಅತ್ಯಾಪ್ತ ಅದಾನಿ ಕಂಪೆನಿಗೆ 387 ಕೋಟಿ ರೂ. ಲಾಭವಾಗಿದೆ.

ಸಿದ್ದರಾಮಯ್ಯ ಹೊರತಂದ ಈ ಹೊಸ ನೀತಿಯಿಂದಾಗಿ 3,289 ಕೋಟಿ ರೂಪಾಯಿ ಸರಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ಇದೊಂದು ರಾಜ್ಯ ಸರಕಾರ ನಡೆಸಿರುವ 3,289 ಕೋಟಿ ರೂ. ಅನಿಲ ಹಗರಣ Gas Scam ನಡೆದಿದ್ದರೂ ಮಾಧ್ಯಮಗಳು ಬಹಿರಂಗ ಮಾಡಿಲ್ಲ.

 

 

 

Leave a Reply

Your email address will not be published. Required fields are marked *