First Night ಬೆಂಗಳೂರು, ಆಗಸ್ಟ್ 8- (www.kannadadhvani.com )ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ನವವಧು ಜಗಳ ಮಾಡಿ ಪರಿಸ್ಪರ ಮಚ್ಚಿನಿಂದ ಕೊಚ್ಚಿಕೊಂಡು ದಾಂಪತ್ಯ ಜೀವನ ಆರಂಭಗೊಳ್ಳುತ್ತಿದ್ದಂತೆ ಅಂತ್ಯ ಮಾಡಿಕೊಂಡಿರುವ ಘಟನೆ ಕೋಲಾರದ ಕೆಜಿಎಪ್ ನಿಂದ ವರದಿಯಾಗಿದೆ.
bride Murder Case
ಅದ್ಧೂರಿಯಾಗಿ ಲಿಖಿತಶ್ರೀ ಹಾಗೂ ನವೀನ್ ಮದುವೆಯಾಗಿತ್ತು. ಆದರೆ ಅದೇನಾಯಿತೋ ಗೊತ್ತಿಲ್ಲ, ಮದುವೆಯಾದ ಕೆಲಗಂಟೆಗಳ ನಂತರ ರೂಮ್‌ಗೆ ಹೋಗಿದ್ದ ನವದಂಪತಿ ಅಲ್ಲೇ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರಿಬ್ಬರನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ವಧು ಅಂದೇ ಕೊನೆಯುಸಿರೆಳೆದಿದ್ದಾಳೆ.
ವರ ನವೀನ್ ಸ್ಥಿತಿ ಕೂಡ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಅರ್.ಎಲ್. ಜಾಲಪ್ಪ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ವರನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆಂದು ರಾತ್ರಿ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನವೀನ್ ಮೃತಪಟ್ಟಿದ್ದಾನೆ.
ಪ್ರೀತಿಸುತ್ತಿದ್ದ ಇಬ್ಬರಿಗೆ ಇದ್ದಕ್ಕಿದ್ದಂತೆ ಏನಾಯ್ತು ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.
ಹುಡುಗಿ ಲಿಖಿತಶ್ರೀ ಆಂಧ್ರದ ಬೈನಪಲ್ಲಿ ಗ್ರಾಮದವರು. ನವೀನ್ ಕೆಜಿಎಫ್ ತಾಲ್ಲೂಕು ಚಂಬರಸನಹಳ್ಳಿ ನಿವಾಸಿ. ನವೀನ್ ಹಾಗೂ ಲಿಖಿತ ಇಬ್ಬರು ಪ್ರೀತಿಸಿ ಎರಡೂ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ನಂತರ ಗಲಾಟೆಯಾಗಿದೆ.
ವಧು ವರರ ನಡುವೆ ಜಗಳ ವಾದ ಕೊಠಡಿಯಲ್ಲಿ ಮಚ್ಚು ಇತ್ತು. ಅದೇ ಮಚ್ಚಿನಿಂದ ಕೊಚ್ಚಿಕೊಂಡಿದ್ದಾರೆ. ಇಬ್ಬರೂ ಗಂಭೀರ ಗಾಯಗೊಂಡಿದ್ದರು.
ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಂಡರ್ ಸನ್ ಪೇಟೆ ಪೊಲೀಸರು ಕೆಜಿಎಫ್ ಎಸ್‌ಪಿ ಶಾಂತರಾಜು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಧು, ವರರ ಹೊಡೆದಾಟಕ್ಕೆ ಅಸಲಿ ಕಾರಣ ಏನು ಅನ್ನೋದನ್ನ ಪತ್ತೆ ಹಚ್ಚುವ ಪ್ರಯತ್ನ ನಜೆಸಿದ್ದಾರೆ. ಈ ಮಧ್ಯೆ, ಇಬ್ಬರೂ ಸಾವನ್ನಪ್ಪಿದ್ದಾರೆ.
ಪ್ರೇಮಿಗಳ ಆತ್ಮಹತ್ಯೆ
ಕೋಲಾರ: ವಿವಾಹಿತೆ ಮತ್ತು ಹಳೆಯ ಪ್ರಿಯಕರ ಪರಸ್ಪರ ತಬ್ಬಿಕೊಂಡು ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಚಿಂತಾಮಣಿ ತಾಲೂಕಿನ ಕೋರ್ಲಪರ್ತಿ ಸಮೀಪದ ಎಂ.ಮುದ್ದಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯ ಕಾಚಹಳ್ಳಿ ಗ್ರಾಮದ ವಿವಾಹಿತೆ ಅನುಷಾ(19) ಹಾಗೂ ಎಂ.ಮುದ್ದಲಹಳ್ಳಿ ಗ್ರಾಮದ ವೇಣು(21) ಆತ್ಮಹತ್ಯೆಗೆ ಶರಣಾಗಿರುವ ಪ್ರೇಮಿಗಳು. ಎರಡು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದ ಇವರು ಜೀವನ ದುರಂತ ಅಂತ್ಯಕಂಡಿದೆ.
Murder Case ಪತ್ನಿಯನ್ನು ಕೊಂದು ಕಟ್ಟಡದಿಂದ ಜಿಗಿದು ಸತ್ತ!
ಕೋಲಾರ: ಪತ್ನಿಯನ್ನು ಕೊಂದು (Murder Case) ಪರಾರಿಯಾಗಿದ್ದ ಪಾತಕಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ತೀವ್ರವಾಗಿ ಗಾಯಗೊಂಡು ಸತ್ತುಹೋಗಿದ್ದಾನೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ (Bangalore Crime) ಪತ್ನಿಯನ್ನು ಕೊಂದಿದ್ದ (husband killed wife) ಆರೋಪಿ, ಕೋಲಾರದಲ್ಲಿ (Kolar News) ಸಾವಿಗೀಡಾಗಿದ್ದಾನೆ.
ಕೊಲೆ ನಡೆದ ಐದು ದಿನದ ಬಳಿಕ, ಆರೋಪಿ ತಬ್ರೇಝ್ ಪಾಷಾನ ಬೆನ್ನು ಹತ್ತಿದ ಪೊಲೀಸರಿಗೆ ಆತನ ಹೆಣ ಎದುರಾಗಿದೆ. ಫೇಸ್‌ಬುಕ್ ಲೈವ್ ಮಾಡುತ್ತಲೇ ಪತ್ನಿಯ ಹತ್ಯೆ ಮಾಡಿದ್ದ ಪಾತಕಿ, ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಜೀವ ಕಳೆದುಕೊಂಡಿದ್ದಾನೆ.
ಫಾತಿಮಾ (34) ಪತಿಯಿಂದ ಕೊಲೆಯಾದ ಮಹಿಳೆ. ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಐದು ವರ್ಷಗಳ ಹಿಂದೆಯೇ ಈ ದಂಪತಿ ದೂರವಾಗಿದ್ದರು. ಆರೋಪಿ ತಬ್ರೇಝ್ ಪಾಷಾ ಕಳ್ಳತನ ಕೇಸ್, ಗಾಂಜಾ ಕೇಸ್‌ನಲ್ಲಿ ಭಾಗಿಯಾಗಿದ್ದ. ಇತ್ತ ಅಂಗವಿಕಲ ತಾಯಿಯೊಂದಿಗೆ ಇಬ್ಬರು ಮಕ್ಕಳ ಜತೆ ಫಾತಿಮಾ ವಾಸವಿದ್ದಳು. ಆದರೂ ಆಗಾಗ ಮನೆಗೆ ಬಂದು ಜಗಳ ಮಾಡುತ್ತಿದ್ದ. ಪದೇ ಪದೆ ಮನೆಗೆ ಬರುವಂತೆ ಕಿರುಕುಳ ಕೊಡುತ್ತಿದ್ದ.
ಇತ್ತೀಚೆಗೆ ರಸ್ತೆಯಲ್ಲಿ ಆಕೆಯನ್ನು ಅಡ್ಡ ಹಾಕಿ ಜಗಳ ತೆಗೆದಿದ್ದ ತಬ್ರೇಝ್, ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದ. ಹೀಗಾಗಿ ಫಾತಿಮಾ ತಾಯಿ, ತಬ್ರೇಝ್ ಏನಾದರೂ ಮಾಡುತ್ತಾನೆ ಎಂಬ ಆತಂಕದಿಂದ ಮನೆಗೆ ಸಿಸಿಟಿವಿ ಅಳವಡಿಸಿದ್ದರು. ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಮನೆಗೆ ಬಂದು ಜಗಳ ತೆಗೆದಿದ್ದ ತಬ್ರೇಜ್ ಪಾಷ, ಇಬ್ಬರು ಮಕ್ಕಳನ್ನು ಹೊರಗೆ ಕಳಿಸಿದ್ದ. ತಾಯಿಯ ಮುಂದೆಯೇ ಪತ್ನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ.
ಮನೆಗೆ ಬರುವ ಮುನ್ನ ಹಾಗೂ ಹತ್ಯೆಯ ವೇಳೆ ತನ್ನ ಕೃತ್ಯವನ್ನು ಈ ಪಾತಕಿ ಫೇಸ್‌ಬುಕ್ ಲೈವ್ ಮಾಡಿದ್ದ. ಕೊಲೆಯ ಬಳಿಕ ಕೋಲಾರಕ್ಕೆ ಕಾಲ್ಕಿತ್ತಿದ್ದ. ಮೊಬೈಲ್ ಬಳಸದೇ ಕೋಲಾರದ ಮಸೀದಿಯಲ್ಲಿ ನಾಲ್ಕು ದಿನ ಉಳಿದುಕೊಂಡಿದ್ದ. ಬಳಿಕ ನಿನ್ನೆ ಕೋಲಾರದ ಚಿಕ್ಕಮ್ಮನ ಮನೆಗೆ ತೆರಳಿದ್ದ.
ಆರೋಪಿಯನ್ನು ಬಂಧಿಸಲು ಕೋಲಾರಕ್ಕೆ ತೆರಳಿದ್ದ ಚಾಮರಾಜಪೇಟೆ ಪೊಲೀಸರ ತಂಡ ಚಿಕ್ಕಮ್ಮನ ಮನೆಗೆ ಪ್ರವೇಶಿಸಿದಾಗ, ತಪ್ಪಿಸಿಕೊಳ್ಳುವ ಭರದಲ್ಲಿ ಸುಮಾರು 12 ಅಡಿ ಎತ್ತರದ ಮನೆಯ ಟೆರೇಸ್‌ನಿಂದ ಈತ ಜಿಗಿದಿದ್ದಾನೆ. ಆಗ ಬಿದ್ದು ಅಸ್ವಸ್ಥನಾಗಿದ್ದ. ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಸಾವಿಗೀಡಾಗಿದ್ದಾನೆ.
ಯಾಕೆ ಮದುವೆಯಾಗಿಲ್ಲ ಎಂದು ಪದೇ ಪದೇ ಪ್ರಶ್ನೆ; ಸಿಟ್ಟಿಗೆದ್ದು ನೆರೆಮನೆಯವನ ಕೊಲೆ
ಯಾಕೆ ಇನ್ನೂ ಮದುವೆ ಆಗಿಲ್ಲಾ? ಯಾವಾಗ ನಿನ್ನ ಮದ್ವೆ? ಇನ್ನು ಎಷ್ಟು ದಿನ ಮದುವೆ ಆಗದೇ ಇರ್ತೀಯಾ? ಮದುವೆ ವಯಸ್ಸು ಮೀರ್ತಿದ್ರೂ ಯಾಕೆ ಮದುವೆ ಆಗಿಲ್ಲ ಅನ್ನೋ ಮಾತುಗಳು ಪ್ರಪಂಚದಾದ್ಯಂತ ಸಾಮಾನ್ಯ.
ಈ ರೀತಿ ಪದೇ ಪದೇ ಮದುವೆ ಬಗ್ಗೆ ಕೇಳುವವರಿಗೆ ನಿಮ್ಮದೇ ರೀತಿಯಲ್ಲಿ ಉತ್ತರ ಕೊಟ್ಟು ಸಾಕಾಗಿ ಹೋಗಿದೆಯಾ?
ಅಥವಾ ಅಂಥವರ ಪ್ರಶ್ನೆಗೆ ಉತ್ತರಿಸದೇ ಸುಮ್ಮನಿದ್ದುಬಿಡ್ತೀರಾ? ಆದ್ರೆ ಇಂಡೋನೇಷ್ಯಾದಲ್ಲಿ ನಡೆದ ಘಟನೆ ಕೇಳಿದ್ರೆ ಬೆಚ್ಚಿಬೀಳ್ತೀರ.
ಮದುವೆ ಬಗೆಗಿನ ಪ್ರಶ್ನೆಯು ಇಂಡೋನೇಷ್ಯಾದಲ್ಲಿ ಮನುಷ್ಯನಿಗೆ ಮಾರಣಾಂತಿಕವಾಗಿದೆ. ಇನ್ನೂ ಏಕೆ ಮದುವೆಯಾಗಿಲ್ಲ ಎಂದು ನಿರಂತರವಾಗಿ ಕೇಳುತ್ತಿದ್ದ ನೆರೆ ಮನೆಯ 60 ವರ್ಷದ ವ್ಯಕ್ತಿಯನ್ನು 45 ವರ್ಷದ ವ್ಯಕ್ತಿ ಕೊಂದು ಹಾಕಿದ್ದಾನೆ. ಈ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿಃ ಆನ್ ಲೈನ್ ಕಂಪೆನಿಗೆ ದಂಡ ವಿಧಿಸಿದ ಧಾರವಾಡ ಗ್ರಾಹಕರ ಪರಿಹಾರ ಕೋರ್ಟ್
ಜುಲೈ 29 ರಂದು ಉತ್ತರ ಸುಮಾತ್ರಾದಲ್ಲಿ ಪರ್ಲಿಂಡುಂಗನ್ ಸಿರೆಗಾರ್ ತನ್ನ ನೆರೆಯ ಅಸ್ಗಿಮ್ ಇರಿಯಾಂಟೊ ಎಂಬಾತನ ಮೇಲೆ ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾನೆ. ಇರಿಯಾಂಟೊ ನಾಗರಿಕ ಸೇವೆಯಿಂದ ನಿವೃತ್ತಿಯಾಗಿದ್ದರು ಎಂದು ಪ್ರದೇಶದ ಸಹಾಯಕ ಪೊಲೀಸ್ ಕಮಿಷನರ್ ಹೇಳಿದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ಸಿರೆಗಾರ್ ತಮ್ಮ ಮನೆಗೆ ನುಗ್ಗಿ ಯಾವುದೇ ಎಚ್ಚರಿಕೆ ನೀಡದೆ ಪತಿ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು ಎಂದು ಅಸ್ಗಿಮ್ ಅವರ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಇರಿಯಾಂಟೊ ಮನೆಯಿಂದ ಹೊರಗೆ ಓಡಿ ಬಂದಾಗ ತಲೆಗೆ ಪೆಟ್ಟು ಬಿದ್ದು ಕೆಳಗೆ ಬಿದ್ದಿದ್ದಾರೆ. ಸಿರೆಗಾರ್ ಸುಮ್ಮನಾಗದೇ ಹೊಡೆಯುವುದನ್ನು ಮುಂದುವರೆಸಿದ. ಅಕ್ಕಪಕ್ಕದ ಮನೆಯವರು ಮಧ್ಯ ಪ್ರವೇಶಿಸಿ ದಾಳಿ ನಿಲ್ಲಿಸಿದರು. ಪತಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅವರು ಮಾರ್ಗಮಧ್ಯದಲ್ಲಿ ನಿಧನರಾದರು ಎಂದು ಮೃತನ ಪತ್ನಿ ಹೇಳಿದ್ದಾಳೆ.
Murder Case ಮನೆಯೂಟ ನೀಡಲು ಜೈಲಾಧಿಕಾರಿಗಳು ನಿರಾಕರಣೆ
(Actor Darshan) ಮನೆಯೂಟ ನೀಡಲು ಜೈಲಾಧಿಕಾರಿಗಳು ನಿರಾಕರಿಸಿದ್ದಾರೆ. ಮನೆಯೂಟ ನೀಡುವ ಬಗ್ಗೆ 10 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಹೈಕೋರ್ಟ್ ಸೂಚಿಸಿತ್ತು. ಆದರೆ, ಕೊಲೆ ಆರೋಪಿಗೆ ಕಾನೂನಿನಲ್ಲಿ ಮನೆಯೂಟಕ್ಕೆ ಅವಕಾಶ ಇಲ್ಲವೆಂದು ಅಧಿಕಾರಿಗಳು ನಿರಾಕರಣೆ ಮಾಡಿದ್ದಾರೆ.
ಆಗಸ್ಟ್ 20ಕ್ಕೆ ದರ್ಶನ್ ಮನೆಯೂಟ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಲಿದ್ದು, ಈ ನಡುವೆ ಅರ್ಜಿ ಬಗ್ಗೆ ಜೈಲಾಧಿಕಾರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕೋರ್ಟ್‌ಗೆ ನೀಡಲು ಜೈಲಾಧಿಕಾರಿಗಳು ವರದಿ ಸಿದ್ಧಪಡಿಸಿದ್ದಾರೆ.
ಅನೇಕ ವಿಐಪಿ ವಿಚಾರಣಾಧೀನ ಬಂಧಿಗಳಿಗೆ ಮನೆಯೂಟ ನಿರಾಕರಣೆ ಮಾಡಲಾಗಿದೆ ಎಂದು ಕೋರ್ಟ್ ಆದೇಶ ನೀಡಿದರೂ ಜೈಲು ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದರು. ಜೈಲಿನಲ್ಲಿ 4 ಸಾವಿರಕ್ಕೂ ಅಧಿಕ ಮಂದಿ ಬಂಧಿಗಳಿದ್ದಾರೆ. ಒಬ್ಬೊಬ್ಬರಿಗೂ ಮನೆಯೂಟಕ್ಕೆ ಅವಕಾಶ ನೀಡಿದರೆ, ಜೈಲಿನ ಊಟ ಮಾಡುವವರು ಇರುವುದಿಲ್ಲ. ಎಲ್ಲರೂ ಮನೆ ಊಟ ಕೇಳುವ ಸ್ಥಿತಿ ಉದ್ಭವ ಆಗಲಿದೆ. ಹೀಗಾಗಿ ಮನೆ ಊಟ ನೀಡುವ ವಿಚಾರದಲ್ಲಿ ಮರು ಪರಿಶೀಲಿಸಲು ಕೋರ್ಟ್‌ಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇತರರಂತೆ ನಟ ದರ್ಶನ್ ವಿಚಾರದಲ್ಲಿ ಯಥಾಸ್ಥಿತಿ ಮುಂದುವರಿಯುತ್ತದೆ. ನಟ ದರ್ಶನ್‌ಗೆ ಮನೆ ಊಟ ಅಗತ್ಯವಿಲ್ಲ, ಜೈಲಿನಲ್ಲಿ ಗುಣಮಟ್ಟದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಂದ ಕೋರ್ಟ್‌ಗೆ ವರದಿ ಸಲ್ಲಿಸಲು ಮುಂದಾಗಿದ್ದಾರೆ