family politics ಬೆಂಗಳೂರು, ಮಾರ್ಚ್ 20: ಕುಟುಂಬ ಪಾರ್ಟಿ ಎಂದು ಬಿಜೆಪಿಯಿಂದ ಮೂದಳಿಕೆಗೆ ಒಳಗಾಗಿರುವ ಭಾರತ ರಾಷ್ಚ್ರೀಯ ಕಾಂಗ್ರೆಸ್ ಈ ಬಾರಿಯ ಲೋಕಸಭಾ ಚುನವಾಣೆಯಲ್ಲಿ 28ರಲ್ಲಿ 23 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, 23 ಅಭ್ಯರ್ಥಿಗಳು ಒಂದಲ್ಲ ಒಂದು ರೀತಿಯಲ್ಲಿ ಕಾಂಗ್ರೆಸ್ ಮುಖಂಡರ ಬಂಧುಗಳಾಗಿದ್ದಾರೆ.
ಹಾಲಿ ಮಂತ್ರಿಗಳ ಬಂಧುಗಳಾಗಿದ್ದಾರೆ
ಚಾಮರಾಜ ನಗರ ಸೇರಿದಂತೆ 5 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಇನ್ನೆರಡು ದಿವಸ ವಿಳಂಬ ಆಗಲಿದ್ದು, ಈ 5 ಕ್ಷೇತ್ರಗಳಲ್ಲಿ ಕನಿಷ್ಟ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಖಂಡರ ಬಂಧುಗಳೇ ಆಕಾಂಕ್ಷಿಗಳಾಗಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೂಡ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರ ಸಂಬಂಧಿಕ ಎಂಬ ನೆಲೆಯಲ್ಲಿ ಲಾಬಿ ಮಾಡಿದ ಪರಿಣಾಮ ಮಾಜಿ ಸಚಿವ ವಿನಯ ಕುಮಾರ ಸೊರಕೆ ಅವರಿಗೆ ಟಿಕೇಟ್ ಕೈತಪ್ಪಿದೆ.
ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ಏಪ್ರಿಲ್ 26 ಹಾಗೂ ಮೇ 7 ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಗೆಲ್ಲುವ ಕುದುರೆಗೆ ಗಾಳ ಹಾಕುತ್ತಿದ್ದು, ಮಾರ್ಚ19ರಂದು ಕಾಂಗ್ರೆಸ್ ಹೈಕಮಾಂಡ್ ಮತ್ತೊಂದು ಸುತ್ತಿನ ಮಹತ್ವದ ಸಭೆ ನಡೆಸಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ 7 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಯನ್ನ ಕಾಂಗ್ರೆಸ್ ಘೋಷಿಸಿದ್ದು, ಉಳಿದ 21 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಮಾಡುವ ಕಸರತ್ತು ಮುಂದುವರಿದಿದೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಹಲವು ನಾಯಕರು ಸಭೆ ನಡೆಸಿದ್ದು, ಅಂತಿಮ ಪಟ್ಟಿಯೊಂದಿಗೆ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಮಂಗಳವಾರ ದೆಹಲಿಯಲ್ಲಿ ಸಭೆ ಸೇರಿದ್ದರು. 28ರಲ್ಲಿ 23 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದ್ದು, 5 ಕ್ಷೇತ್ರಗಳ ಅಭ್ಯರ್ಥಿಗಳ ಪ್ರಕಟಣೆಯನ್ನು ತಡೆ ಹಿಡಿಯಲಾಗಿದೆ. 7ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಮಾರ್ಚ್ 8ರಂದು ಪ್ರಕಟ ಆಗಿತ್ತು.
ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರ ಜೊತೆಗೆ 21 ಕ್ಷೇತ್ರದ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸ ಲಾಗಿದ್ದರು ಕೂಡ ಚಾಮರಾಜ ನಗರ ಸೇರಿದಂತೆ ಒಟ್ಟು 5 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸದಿರಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಕೇಂದ್ರ ಚುನವಾಣಾ ಸ್ಕ್ರೀನಿಂಗ್ ಕಮಿಟಿ (ಸಿಇಸಿ) ಸಭೆಯ ಅನುಮೋದನೆ ಬಳಿಕ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.
ತೀವ್ರ ಗೊಂದಲವಿರುವ ಕ್ಷೇತ್ರ ಹೊರತುಪಡಿಸಿ ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯನ್ನ ಇಂದು ಅಥವಾ ನಾಳೆ ಕಾಂಗ್ರೆಸ್ ಹೈಕಮಾಂಡ್ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಃ ಮಧು ನೇಮಕವೇ ಕಾಂಗ್ರೆಸ್ ಮೊದಲ ಯಡವಟ್ಟು
ಕಾಂಗ್ರೆಸ್ ಪಕ್ಷ ಮೊದಲ ಪಟ್ಟಿಯಲ್ಲಿ 7 ಅಭ್ಯರ್ಥಿಗಳನ್ನು ಪ್ರಕಟಿಸಿತ್ತು.
- ತುಮಕೂರು – ಮುದ್ದಹನುಮೇಗೌಡ – ಒಕ್ಕಲಿಗ
- ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್ – ಈಡಿಗ
- ಹಾಸನ – ಶ್ರೇಯಸ್ ಪಟೇಲ್ – ಒಕ್ಕಲಿಗ
- ವಿಜಯಪುರ – ರಾಜು ಆಲಗೂರು – ಎಸ್.ಸಿ
- ಮಂಡ್ಯ – ವೆಂಕಟರಮಣೇಗೌಡ (ಸ್ಟಾರ್ ಚಂದ್ರು) – ಒಕ್ಕಲಿಗ
- ಬೆಂಗಳೂರು ಗ್ರಾಮಾಂತರ – ಡಿಕೆ ಸುರೇಶ್ – ಒಕ್ಕಲಿಗ
- ಹಾವೇರಿ – ಆನಂದ್ ಸ್ವಾಮಿ ಗಡ್ಡದೇವರಮಠ
ಅನಂತರ ಇದೀಗ ಎರಡನೇ ಪಟ್ಟಿಯಲ್ಲಿ 16 ಹೆಸರುಗಳು ಪ್ರಕಟವಾಗಲಿದೆ. ಕೊನೆಕ್ಷಣದಲ್ಲಿ ಪ್ರಕಟವಾಗುವ ಮೂರನೇ ಪಟ್ಟಯಲ್ಲಿ ಇನ್ನುಳಿದ 5 ಕ್ಷೇತ್ರಗಳ ಹೆಸರು ಪ್ರಕಟವಾಗಲಿದೆ.
ಎರಡನೇ ಪಟ್ಟಿಯಲ್ಲಿ ಇರುವ ಹೆಸರುಗಳು ಇಂತಿವೆ. ಬಿ ಫಾರಂ ನೀಡಿದ ನಂತರವೇ ಎಲ್ಲ ಖಚಿತವಾಗಲಿದೆ.
- ಬೀದರ್ – ಸಾಗರ್ ಖಂಡ್ರೆ
- ಚಿತ್ರದುರ್ಗ – ಚಂದ್ರಪ್ಪ
- ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ್
- ಕೊಪ್ಪಳ – ರಾಜಶೇಖರ್ ಹಿಟ್ನಾಳ್
- ಬೆಂಗಳೂರು ದಕ್ಷಿಣ – ಸೌಮ್ಯರೆಡ್ಡಿ (ಸಚಿವರ ಪುತ್ರಿ)
- ಬೆಳಗಾವಿ – ಮೃಣಾಲ್ ಹೆಬ್ಬಾಳ್ಕರ್
- ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ
- ದಕ್ಷಿಣ ಕನ್ನಡ – ಪದ್ಮರಾಜ್ (ಈಡಿಗ)
- ಬೆಂಗಳೂರು ಸೆಂಟ್ರಲ್ – ಮನ್ಸೂರ್ ಅಲಿ ಖಾನ್
- ಮೈಸೂರು – ಎಂ.ಲಕ್ಷಣ್
- ರಾಯಚೂರು – ಕುಮಾರ್ ನಾಯ್ಕ್
- ಬಾಗಲಕೋಟೆ – ಸಂಯುಕ್ತ ಶಿವಾನಂದ ಪಾಟೀಲ್ ( ಸಚಿವರ ಪುತ್ರಿ)
- ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ(ಸಚಿವರ ಪುತ್ರಿ)
- ಧಾರವಾಡ – ವಿನೋದ್ ಅಸೂಟಿ
- ಉತ್ತರ ಕನ್ನಡ – ಅಂಜಲಿ ಲಿಂಬಾಳ್ಕರ್
- ಬೆಂಗಳೂರು ಉತ್ತರ – ರಾಜೀವ್ ಗೌಡ (ವಕ್ಕಲಿಗ)
- ಉಡುಪಿ – ಜಯಪ್ರಕಾಶ್ ಹೆಗ್ಡೆ (ಬಂಟ)
BJP ಭಿನ್ನಮತದ ಪ್ರಯೋಜನ ಪಡೆಯಲು ಕಾಂಗ್ರೆಸ್ ತಂತ್ರ ಹೂಡುವುದೇ ?