Election Results 2023- INDIAವನ್ನು ಸೋಲಿಸಿದ ಕಾಂಗ್ರೆಸ್ಸಿನ ದುರಂಹಕಾರ, ಸಂಘಟನಾತ್ಮಕ ವೈಫಲ್ಯ

ಬೆಂಗಳೂರು: ಪಂಚರಾಜ್ಯ ಚುನಾವಣೆಯಲ್ಲಿ (Election Results)ಮೂರು ರಾಜ್ಯಗಳಲ್ಲಿ ದಯನೀಯವಾಗಿ ಸೋಲುವುದರೊಂದಿಗೆ ಕಾಂಗ್ರೆಸ್  INDIA ಮೈತ್ರಿ ಕೂಟವನ್ನು ಸೋಲಿಸುವುದರೊಂದಿಗೆ ಬಿಜೆಪಿ ವಿರುದ್ಧದ ಪ್ರತಿಪಕ್ಷಗಳ ಹೋರಾಟಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿದೆ.

ಬಿಜೆಪಿಯೇತರ ಪಕ್ಷಗಳನ್ನು ಸೋಲಿಸುವಲ್ಲಿ ಕಾಂಗ್ರೆಸ್ಸಿಗಿರುವ ಉತ್ಸಾಹ ಬಿಜೆಪಿಯನ್ನು ಸೋಲಿಸುವಲ್ಲಿ ಇಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ2 ರ ವೈಫಲ್ಯಗಳೇ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರ ಅಧಿಕಾರಕ್ಕೆ ಬರಲು ಕಾರಣವಾಯಿತು. ಬಿಜೆಪಿ ಸರಕಾರ ಬಂದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು. ಜನರು ಸಂಕಷ್ಟ ಅನುಭವಿಸಬೇಕಾಯಿತು, ಸಂವಿಧಾನ ಅಪಾಯದಲ್ಲಿದೆ. ಇದಕ್ಕೆಲ್ಲ ನಾರ ಕಾರಣ ಕಾಂಗ್ರಸ್ ಪಕ್ಷವೇ ಆಗಿರುತ್ತದೆ.

ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಈ ಫಲಿತಾಂಶ ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನುಡಿ ಬರೆಯಲಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರದಿಂದ ಇಳಿಸಲು ಒಂದುಗೂಡಿರುವ ವಿರೋಧ ಪಕ್ಷಗಳ ಮೈತ್ರಿಕೂಟINDIA, ಐದು ರಾಜ್ಯಗಳ ಚುನಾವಣೆ ತಮಗೆ ‘ಬೂಸ್ಟ್’ ನೀಡಲಿದೆ ಎಂದು ಭಾವಿಸಿದ್ದವು. ಆದರೆ ಈ ಮೈತ್ರಿಕೂಟದ ನಾಯಕತ್ವ ವಹಿಸಿದ್ದ ಕಾಂಗ್ರೆಸ್‌ನ ಅತ್ಯಂತ ಕಳಪೆ ಪ್ರದರ್ಶನ, ಅವರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.

ಮಿತ್ರ ಪಕ್ಷಗಳ ಮುಖಂಡರು ಈಗಾಗಲೇ ತಮ್ಮ ಅಸಮಾಧಾನ, ಕಹಿಯನ್ನು ಹೊರಹಾಕಿದ್ದಾರೆ. ಚುನಾವಣೆಯ ಫಲಿತಾಂಶವು ಲೋಕಸಭೆ ಚುನಾವಣೆ ದಿಕ್ಸೂಚಿ ಎನ್ನುವುದಕ್ಕಿಂತಲೂ, INDIA ಮೈತ್ರಿಕೂಟದ ಪ್ರಮುಖ ಪಕ್ಷ ಕಾಂಗ್ರೆಸ್ಸಿನ ಭವಿಷ್ಯದ ದಿಕ್ಸೂಚಿ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಬಿಜೆಪಿ ವಿರುದ್ಧದ ‘ಸಮಾನ ಮನಸ್ಕ’ ವಿರೋಧ ಪಕ್ಷಗಳನ್ನು ಒಂದು ವೇದಿಕೆಯಲ್ಲಿ ಸೇರಿಸುವುದು ಮತ್ತು ಈ ಮೂಲಕ ಲೋಕಸಭೆ ಚುನಾವಣೆಗೆ ಶಕ್ತಿಶಾಲಿ ಮೈತ್ರಿಕೂಟವನ್ನು ರಚಿಸುವುದು ಕೆಲವು ಪಕ್ಷಗಳ ಗುರಿಯಾಗಿತ್ತು. ಇದರಲ್ಲಿ ಕಾಂಗ್ರೆಸ್ ಜತೆಗೆ, ವಿವಿಧ ರಾಜ್ಯಗಳಲ್ಲಿನ ಪ್ರಾದೇಶಿಕ ಪಕ್ಷಗಳು ಕೈ ಜೋಡಿಸಿದ್ದವು. ಆದರೆ ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಸಂಬಂಧಿಸಿದಂತೆ ವಿವಿಧ ನಾಯಕರು ಆಗಾಗ್ಗೆ ಅಪಸ್ವರ ಎತ್ತುತ್ತಿದ್ದರು. ಅದಕ್ಕೆ ಈಗ ಚುನಾವಣೆಯಲ್ಲಿನ ಸೋಲು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಾಂಗ್ರೆಸ್ ಪಕ್ಷದ ಮುಖಂಡರ ದುರಂಹಕಾರ, ಸಂವಹನ ಕೊರತೆ, ಟಿಕೇಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ, ಬಿಜೆಪಿ ಮುಖಂಡರೊಂದಿಗೆ ಅಡ್ಜ್ಟಮೆಂಟ್ ರಾಜಕೀಯ, ಎದುರಾಳಿಯ ಸಾಮರ್ಥ್ಯವನ್ನು ತಿಳಿದುಕೊಳ್ಳಲು ವಿಫಲವಾಗಿರುವುದು ಕಾಂಗ್ರೆಸ್ ಹೀನಾಯವಾಗಿ ಸೋಲಲು (Congress Failure ) ಕಾರಣವಾಯಿತು.

ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಸೋಲು ಅನಿರೀಕ್ಷಿತವೇನು ಅಲ್ಲ. ತೆಲಂಗಾಣ ಹೊರತುಪಡಿಸಿ ಉಳಿದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ವಿವಿಧ ಕಾರಣಗಳಿಗಾಗಿ ಸೋಲುಂಟು ಮಾಡಿದೆ. ರಾಜಸ್ತಾನದಲ್ಲಿ ಮಿತ ಮೀರಿದ ಭಿನ್ನಮತ, ಗುಂಪುಗಾರಿಕೆಯನ್ನು ಸರಿಪಡಿಸಲು ವಿಫಲವಾಗಿರುವುದು, ಮಧ್ಯಪ್ರದೇಶದಲ್ಲಿ ಕೂಡ ಗುಂಪುಗಾರಿಕೆ, ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ವಿಫಲವಾಗಿರುವುದು ಕಾಂಗ್ರೆಸ್ ಸೋಲಿಗೆ ಕಾರಣವಾಯಿತು.

ಇಂದು ಮಿಜೊರಾಂ ಚುನಾವಣಾ ಫಲಿತಾಂಶ Result Today

Election Results 2023 ಮೂರು ರಾಜ್ಯಗಳಲ್ಲಿ ಸೋಲಾಗಿರುವುದು  ‘ಕಾಂಗ್ರೆಸ್‌ನ ವೈಫಲ್ಯ’ (Congress Failure ) ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಹೇಳಿದ್ದರೆ, ಈ ಫಲಿತಾಂಶ ‘ನಿರೀಕ್ಷಿತ’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಚುನಾವಣೆ ನಡೆದ ಈ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಮುಖ ಪಕ್ಷವಾಗಿತ್ತು. ಹೀಗಾಗಿ ಸಣ್ಣಪುಟ್ಟ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿರಲಿಲ್ಲ. ಒಂದರ್ಥದಲ್ಲಿ ಇದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ INDIA ಮೈತ್ರಿಕೂಟವನ್ನು ಮುನ್ನಡೆಸವ ನಾಯಕತ್ವ ವಹಿಸಿಕೊಳ್ಳುವ ಕಾಂಗ್ರೆಸ್ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಪರೀಕ್ಷೆ ಇದಾಗಿತ್ತು.

ಆದರೆ ಕಾಂಗ್ರೆಸ್ ತಾನು ಅಧಿಕಾರದಲ್ಲಿದ್ದ ಎರಡು ರಾಜ್ಯಗಳನ್ನು ಕಳೆದುಕೊಂಡಿದೆ. ಮೊದಲ ಬಾರಿಗೆ ತೆಲಂಗಾಣದಲ್ಲಿ ಅಧಿಕಾರ ಹಿಡಿದಿದೆ. ಅದೂ INDIA ಮಿತ್ರ ಪಕ್ಷ ಭಾರತ್ ರಾಷ್ಟ್ರೀಯ ಸಮಿತಿಯನ್ನು ಸೋಲಿಸಿ. ಈ ಗೆಲುವು ಪಕ್ಷಕ್ಕೆ ಸಮಾಧಾನಕರವಾದರೂ INDIA ಮೈತ್ರಿಕೂಟಕ್ಕೆ ಇದರಿಂದ ಹಿನ್ನಡೆ ಆಗಲಿದೆ. ಆದರೆ ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಅಧಿಕಾರ ನಷ್ಟ ಅನುಭವಿದ್ದು ಮತ್ತು ಮಧ್ಯಪ್ರದೇಶದಲ್ಲಿನ ಹೀನಾಯ ಸೋಲು ಪಕ್ಷದ ವರ್ಚಸ್ಸಿಗೆ ಪೆಟ್ಟು ನೀಡಿದೆ.

ನಾಲ್ಕು ರಾಜ್ಯಗಳಲ್ಲಿನ ವಿಧಾನಸಭೆ ಚುನಾವಣೆ ಫಲಿತಾಂಶ ‘ನಿರೀಕ್ಷಿತ’ ಎಂದಿರುವ ಎನ್‌ಸಿಪಿ ನಾಯಕ ಶರದ್ ಪವಾರ್, ಮುಂದಿನ ಐಎನ್‌ಡಿಐಎ ಬ್ಲಾಕ್ ಸಭೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಂತಹ ರಾಜ್ಯಗಳ ಸೋಲನ್ನು ವಿಪಕ್ಷಗಳು ಪರಾಮರ್ಶೆ ನಡೆಸಲಿವೆ ಎಂದು ತಿಳಿಸಿದ್ದಾರೆ.

25ಕ್ಕೂ ಹೆಚ್ಚು ಪಕ್ಷಗಳನ್ನು ಒಳಗೊಂಡಿರುವ INDIA ಮೈತ್ರ ಕೂಟವನ್ನು ಮುಂದಿನ ಸಭೆಯು ಹೊಸದಿಲ್ಲಿಯಲ್ಲಿ ಡಿಸೆಂಬರ್ 6ರಂದು ನಡೆಯಲಿದೆ. 2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ಸಭೆ ಮೇಲೆ ವಿಧಾನಸಭೆ ಚುನಾವಣೆಗಳ ಫಲಿತಾಂಶದ ನೆರಳು ದಟ್ಟವಾಗಿರಲಿದೆ.

 

ಕಾಂಗ್ರೆಸ್ ವಿರುದ್ಧ ಅಸಮಾಧಾನ

ಕಾಂಗ್ರೆಸ್‌ನ ಕಳಪೆ ಪ್ರದರ್ಶನದ ಕುರಿತು ಪ್ರತಿಕ್ರಿಯೆ ನೀಡಿರುವ ಬಿಹಾರದ ಜೆಡಿಯು ಪ್ರಧಾನ ಕಾರ್ಯದರ್ಶಿ ನಿಖಿಲ್ ಮಂಡಲ್, INDIA ಮೈತ್ರಿಕೂಟವನ್ನು ಸಿಎಂ ನಿತೀಶ್ ಕುಮಾರ್ ಮುನ್ನಡೆಸಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿಯೇ ಮುಳುಗಿಹೋಗಿ, ಮೈತ್ರಿಕೂಟವನ್ನು ಕಡೆಗಣಿಸಿತ್ತು. ಆದರೆ ಅಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಫಲಿತಾಂಶಗಳು ಈಗ ನಮ್ಮ ಮುಂದೆ ಇದೆ. ಈ ಹಡಗನ್ನು ಮುನ್ನಡೆಸಲು ನಿತೀಶ್ ಕುಮಾರ್ ಅವರಿಂದ ಮಾತ್ರ ಸಾಧ್ಯ ಎಂದಿದ್ದಾರೆ.

ತಡರಾತ್ರಿ ತನಕ ನಡೆಯಿತು ಸಭೆ; ರಮಾನಾಥ ರೈ, ಸೊರಕೆ ಹೆಸರು ಶಿಫಾರಸು

“INDIA ಮೈತ್ರಿಕೂಟವನ್ನು ಕಾಂಗ್ರೆಸ್ ನಿರ್ಲಕ್ಷಿಸಿತ್ತು. ಆದರೆ ಅದಕ್ಕೆ ತನ್ನ ಬಲದಿಂದ ಗೆಲ್ಲುವ ಸಾಮರ್ಥ್ಯವಿಲ್ಲ” ಎಂದು ಮತ್ತೊಬ್ಬ ಜೆಡಿಯು ನಾಯಕ ಕೆಸಿ ತ್ಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

“ಮೂರು ರಾಜ್ಯಗಳಲ್ಲಿ, ಬಿಜೆಪಿಯ ಯಶಸ್ಸಿನ ಕಥೆಗಿಂತಲೂ ಕಾಂಗ್ರೆಸ್‌ನ ವೈಫಲ್ಯವೇ ಹೆಚ್ಚಾಗಿದೆ” ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಟೀಕಿಸಿದ್ದಾರೆ. ಆದರೆ ಈ ಫಲಿತಾಂಶವು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಾರದು ಎಂದಿದ್ದಾರೆ. “ದೇಶದಲ್ಲಿ ಬಿಜೆಪಿಯನ್ನು ಮಣಿಸುವ ಕದನದಲ್ಲಿ ನಾಯಕತ್ವ ಒದಗಿಸಬಲ್ಲ ಪಕ್ಷವೆಂದರೆ ಟಿಎಂಸಿ” ಎಂದು ಅವರು ಐಎನ್‌ಡಿಐಎ ಒಕ್ಕೂಟದ ನಾಯಕತ್ವ ಟಿಎಂಸಿಗೆ ಸಿಗಬೇಕು ಎಂಬ ಪ್ರತಿಪಾದನೆ ಮಾಡಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜತೆ ಸೀಟು ಹಂಚಿಕೆ ಮಾಡುವ ಒಪ್ಪಂದದ ಮಾತುಕತೆಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪ್ರಯತ್ನಿಸಿದ್ದರು. ಆದರೆ ತಮ್ಮ ಬೇಡಿಕೆಗೆ ಕಿಮ್ಮತ್ತು ನೀಡಿಲ್ಲ ಎಂದು ಹರಿಹಾಯ್ದಿದ್ದರು. ಕಾಂಗ್ರೆಸ್‌ನ ನಡೆಯು ಮೈತ್ರಿಕೂಟದ ಇತರೆ ಪಕ್ಷಗಳಲ್ಲಿಯೂ ಅಸಮಾಧಾನ ಮೂಡಿಸಿದೆ. ಕೊನೆಗೆ ಅಖಿಲೇಶ್ ಅವರು 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮೈತ್ರಿ ಇಲ್ಲದೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು.

ಉತ್ತರದ ರಾಜ್ಯಗಳಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ಕಮ್ಯೂನಿಸ್ಟ್ ಪಕ್ಷ ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ ಕೆಲವು ಸೀಟುಗಳನ್ನು ಬಿಟ್ಟುಕೊಡಲಿಲ್ಲ. ಸಮಾಜವಾಗಿ ಪಾರ್ಟಿ, ಬಹುಜನಸಮಾಜ ಪಾರ್ಟಿಗು ಸ್ಥಾನಗಳನ್ನು ಕಾಂಗ್ರೆಸ್ ನೀಡಿಲ್ಲ. ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ತಲೆನೋವಾಗಲಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲುವುದಕ್ಕಿಂತಲು ಹೆಚ್ಚಾಗಿ ಉತ್ತರ ಭಾರತದ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಘಡ್ ರಾಜ್ಯಗಳಲ್ಲಿ ಗೆಲ್ಲಲು ಕಾಂಗ್ರೆಸ್ ಹೆಚ್ಚಿನ ಪರಿಶ್ರಮ ವಹಿಸಬೇಕಾಗಿತ್ತು. ಬಿಜೆಪಿಯನ್ನು ಸೋಲಿಸಲೇ ಬೇಕೆಂಬ ಮನಸ್ಥಿಗೆ ಕಾಂಗ್ರೆಸ್ಸಿಗೆ ಎಂದೂ ಕೂಡ ಇರಲಿಲ್ಲ.

ಕೇರಳ, ತಮಿಳುನಾಡು, ತೆಲಂಗಾಣ, ಪಶ್ಚಿಮಬಂಗಾಲ,ಬಿಹಾರ, ಪಂಜಾಬ್, ದೆಹಲಿ  ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದು ಬೀಗುವುದರಲ್ಲಿ ಅರ್ಥವೇನು ಇಲ್ಲ. ಕಾಂಗ್ರೆಸ್ ಸೋಲಿಸಬೇಕಾಗಿರುವುದು ಬಿಜೆಪಿ ರಾಜ್ಯಗಳನ್ನು.

ಕಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೂಡ ಮೈತ್ರಿ ಕೂಟದ ಸೋಲಿಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಆಯ್ಕೆ ಕಾರಣವಾಗಿತ್ತು. ಯಾವುದೇ ದೃಷ್ಟಿಯಿಂದ ನೋಡಿದರು ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಉತ್ತಮ ಆಯ್ಕೆಯೇ ಅಲ್ಲ.

 

Election Results News in Kannada Kannadadhwani

 

 

Leave a Reply

Your email address will not be published. Required fields are marked *