Election Result 2023: ಕಾಂಗ್ರೆಸ್ 2 ರಾಜ್ಯದಲ್ಲಿ ಗೆದ್ದರೆ ಸರಕಾರ ಬದಲಾವಣೆ

Election Result

Election Result 2023 – ರಾಜಸ್ತಾನ (Rajasthan,) ಮಧ್ಯಪ್ರದೇಶ (Madhyapradesh)ಛತ್ತಿಸ್ ಗಢ ( chhattisgarh) ಸೇರಿದಂತೆ ಪಂಚ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ Election Result 2023 ಹೊರಬಿದ್ದ ಕೂಡಲೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್  ಮೇಲುಗೈ ಸಾಧಿಸಲಿದ್ದು, ರಾಜ್ಯದಲ್ಲಿ ಸರಕಾರ ಬದಲಾವಣೆ ಆಗಬೇಕೆಂಬ ಒತ್ತಾಯ ಹೆಚ್ಚಾಗಲಿದೆ.ದೊಡ್ಡ ಸಂಖ್ಯೆಯಲ್ಲಿ ಸಚಿವರ ಬದಲಾವಣೆ ಆಗುವುದು ನಿಶ್ಚಿತ.

ಲೋಕಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದ ಮೇಲೆ ರಾಜ್ಯದಲ್ಲಿ ರಾಜಕೀಯ ಬದಲಾಣೆಗಳು ಆಗಬಹುದು ಎಂದು ಹಿಂದೆ ನಿರೀಕ್ಷಿಸಲಾಗಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗ ಬಿ.ಆರ್ .ಪಾಟೀಲ್ ಅವರಂತಹ ಕಾಂಗ್ರೆಸ್ ಶಾಸಕರೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿರುವುದು ಇದಕ್ಕೆ ಸ್ಪಷ್ಟ ಸೂಚನೆಯಾಗಿದೆ.

ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಚಿಕ್ಕಾಸು ಅನುದಾನ ದೊರೆಯುತ್ತಿಲ್ಲ. ಗ್ರಾಮ ಪಂಚಾಯತಿ ಮೀಸಲು ಸದಸ್ಯನ ಕಿಮ್ಮತ್ತು ಕೂಡ ಹಾಲಿ ಶಾಸಕರಿಗೆ ಇಲ್ಲ. ಆದರೆ, ಕೆಲವು ಆಯ್ದ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಸಚಿವರ ಉಸ್ತುವಾರಿ ಸಚಿವರ ಮೂಲಕ ಅದಾನ ಹರಿದುಹೋಗುತ್ತಿದೆ ಎಂಬ ಮಾಹಿತಿ ಕಲಬುರ್ಗಿ ಜಿಲ್ಲೆ ಅಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರಿಗೆ ಗೊತ್ತಿದೆ.

ರಾಜ್ಯ ಸರಕಾರ ನಾಲ್ಕೈದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿರುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ Capital Investment  ಅನುದಾನದ ಕೊರತೆಯಾಗಿದೆ. ವಿಧಾನಸಬಾ ಚುನಾವಣೆಯಲ್ಲಿ ಗೆಲ್ಲಲು ಖಾಸಗಿ ಮಾರ್ಕೆಟಿಂಗ್ ಕಂಪೆನಿಯನ್ನು ನಿಯೋಜಿಸಿದ್ದ ಕಾಂಗ್ರೆಸ್ ಫಕ್ಷ ಅದು ಸಲಹೆ ನೀಡಿದ ಗ್ಯಾರಂಟಿ  ಯೋಜನೆಗಳನ್ನು ಸರಿಯಾಗಿ ಹೋಂ ವರ್ಕ್ ಮಾಡದೆ ಘೋಷಣೆ ಮಾಡಿ ಇದೀಗ ಕಂಗಾಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಸಚಿವರ ಕಾರ್ಯವೈಖರಿಗೆ ಕಾಂಗ್ರೆಸ್ ಪಕ್ಷದ ಶಾಸಕರು, ಹಿರಿಯ ಮುಖಂಡರು, ಕಾರ್ಯಕರ್ತರು ಕಂಗಾಲಾಗಿದ್ದು, ಸರಕಾರದ ಕಾರ್ಯವೈಖರಿಯಿಂದ ಹಿಂದುಳಿದ ವರ್ಗದ ಸಮುದಾಯಗಳು (ಅಹಿಂದ), ಲಿಂಗಾಯಿತ ಮತ್ತು ವಕ್ಕಲಿಗೆ ಸಮುದಾಯಗಳು ಸರಕಾರದ ವಿರುದ್ಧ ಮುನಿಸಿಕೊಂಡಿವೆ. ಅದು ನೇರವಾಗಿ ಕಾಂಗ್ರೆಸ್ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ.

ಒಂದು ತುಂಡು ಬಿಸ್ಕಟ್, ಒಂದು ಬೈಟು ಟೀ ದೊರೆಯುವ ಯಾವುದೊ ಸಮಿತಿಗೆ ಮೆಂಬರ್ ಮಾಡುವ ಉದಾರ ಮನೋಭಾವ ಕೂಡ ಈ ಕಾಂಗ್ರೆಸ್ ಪಕ್ಷಕ್ಕಿಲ್ಲ . ಯಾವನೇ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಚುನಾವಣೆಗೆ ನಿಲ್ಲಿಸಿದ ಉದಾಹರಣೆ ಇಲ್ಲ. ಹಣ ಥೈಲಿ ಇರುವ ಎಜ್ಯಕೇಶನ್ ಮಾಫಿಯನೊ, ಹಣ ಮೂಟೆ ಹಾಕುವ ಗುತ್ತಿಗೆದಾರನೊ, ಗಣಿ ದನಿಯೊ, ರಿಯಲ್ ಎಸ್ಟೇಟ್ ಮಾಲೀಕನೇ ಬೇಕು. ಕಾರ್ಯಕರ್ತ ಏನಿದ್ದರು ಅವರ ಗುಲಾಮರಾಗಿ ಇರಬೇಕು. ಇದು ಕಾಂಗ್ರೆಸ್ ತತ್ವ.

ಇದರಿಂದಾಗಿ ಕೇವಲ ಕಾರ್ಯಕರ್ತ ಮಾತ್ರವಲ್ಲ ಶಾಸಕರು ಕೂಡ ರೋಸಿ ಹೋಗಿದ್ದಾರೆ. ಯಾವ ಕಚೇರಿಯಲ್ಲು ಕೆಲಸ ಆಗುವುದಿಲ್ಲ. ಲಂಚ ನೀಡಿದರು ಕೆಲಸ ಆಗುವುದಿಲ್ಲ. ಮುಖ್ಯಮಂತ್ರಿ ಸುತ್ತೆಲ್ಲ ಭ್ರಷ್ಟರೇ ತುಂಬಿ ಹೋಗಿದ್ದಾರೆ.

Bharat Jodo Yatra: ಡಿಸಂಬರಿನಲ್ಲಿ 2 ನೇ ಹಂತದ ಭಾರತ್​ ಜೋಡೋ ಯಾತ್ರೆ

ಇದು ಸಾಲದು ಎಂಬಂತೆ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ತಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲು ಮುಂದಾಗಿದ್ದು, ನಿಗಮ , ಮಂಡಳಿಗಳ್ನು ಕೇವಲ ಕೋಟ್ಯಾಧಿಪತಿ ಶಾಸಕರ ಕೈಗೆ ಧಾರೆ ಎರೆದು ನೀಡಲು ಮುಂದಾಗಿದ್ದು, ಕಾರ್ಯಕರ್ತರು ನಿರಾಶರಾಗಿದ್ದಾರೆ. ಭಾರತೀಯ ಜನತ ಪಾರ್ಟಿಯ ಹಿರಿಯ ಮುಖಂಡ ಬಿ.ಎಸ್. ಯಡ್ಯೂರಪ್ಪ ಅವರು ಮೀನ ಮೇಷ, ರಾಹು ಕಾಲ ಗುಳಿಗ ಕಾಲ ನೋಡದೆ ಮುಖ್ಯಮಂತಿರಯಾದ ಮರುದಿನವೇ ಕಾರ್ಯಕರ್ತರನ್ನೇ ನಿಗಮ, ಮಂಡಳಿ, ಪ್ರಾಧಿಕಾರ, ಸಮಿತಿಗಳು, ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೇಮಕ ಮಾಡಿ ಕಾರ್ಯಕರ್ತರ ವಿಶ್ವಾಸ ಗೆದ್ದುಕೊಂಡ ಪರಿಣಾಮ ಇಂದು ಕೂಡ ಅವರು ರಾಜ್ಯದಲ್ಲಿ ಪರಿಣಾಮಕಾರಿ ನಾಯಕರಾಗಿದ್ದಾರೆ.

ಸರಕಾರಿ ಯಂತ್ರ ಮಿತಿ ಮೀರಿದ ಭ್ರಷ್ಟಾಚಾರದಿಂದ ತುಕ್ಕು ಹಿಡಿದುಹೋಗಿದ್ದು, ಸಂವಿಧಾನ ಪುಸ್ತಕ    ಹಿಡಿದು ಮಾಡುವ ನಾಟಕ ಪಕ್ಷದ ಕಾರ್ಯಕರ್ತರಿಗೆ ವಾಕರಿಕೆ ಹುಟ್ಟಿಸುತ್ತಿದೆ.

ಎಚ್.ಡಿ. ದೇವೇಗೌಡರ ಜಾತ್ಯತೀತ ಜನತಾದಳದಿಂದ ವಜಾ ಗೊಂಡು ಮೈಸೂರು ಸೇರಿದ್ದ ಸಿದ್ದರಾಮಯ್ಯ ಅಖಿಲ ಭಾರತ ಪ್ರಗತಿಪರ ಜನತಾ ಪಾರ್ಟಿಯನ್ನು ಅರ್ಧ ದಾರಿಯಲ್ಲೇ ಬಿಟ್ಟು ಕಾಂಗ್ರೆಸ್ ಸೇರಿದ ಮೇಲೆ ಕಾಂಗ್ರೆಸ್ ಪಾರ್ಟಿ ಹೈಕಮಾಂಡ್ ಸಿದ್ದರಾಮಯ್ಯರೇ ಆಗಿದ್ದಾರೆ.

ಇಂದಿರಾ ಗಾಂಧಿ ಕಾಲದ ಗುಂಗಿನಲ್ಲೆ ಮೈ ಮರೆತಿದ್ದ ಕಾಂಗ್ರೆಸ್ ಪಕ್ಷ ಲೋಕಸಭೆ ಹೋಗಲಿ ವಿಧಾನಸಭಾ ಚುನಾವಣೆಗಳಲ್ಲಿ ಕೂಡ ಕಾಂಗ್ರೆಸ್ ಗೆಲ್ಲದೆಸೋತು ಸುಣ್ಣವಾಯಿತು. ತಮ್ಮ ಪಕ್ಷವೇ ಬೆಳೆಸಿದ ಮಮತಾ ಬ್ಯಾನರ್ಜಿ, ಶರದ್ ಪವಾರ್, ಚಂದ್ರಶೇಖರ್, ಜಗನ್ ರೆಡ್ಡಿ ಮುಂತಾದವರು ಸಾಮ್ರಾಜ್ಯ ಕಟ್ಟಿಕೊಂಡಾಗ ಕಾಂಗ್ರೆಸ್ ಹೈಕಮಾಂಡ್ ಕಂಗಾಲಾಗಿ ಹೋಗಿತ್ತು. ಇಂತಹ ಸಂದರ್ಭದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಎಂಟ್ರಿ ಕೊಟ್ಟ ಸಿದ್ದರಾಮಯ್ಯ ಎಂದೂ ಗೂಟದ ಕಾರಿಂದ ಇಳಿಯಲಿಲ್ಲ.

ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಸಿಗ ಸೇರಿಸಲು ಹಗಲಿರುಳು ಶ್ರಮ ವಹಿಸಿದ ನಿವೃತ್ತ ಐಪಿಎಸ್ ಅಧಿಕಾರಿ ಚಿತ್ರದುರ್ಗದ ಕೋದಂಡ ರಾಮಯ್ಯ, ಹಾಲು ಮತಸ್ಥರೇ ಆಗಿರುವ ಎಚ್. ವಿಶ್ವನಾಥ್ ಅವರಂತಹ ನೂರಾರು ಮುಖಂಡರು ನಾಪತ್ತೆಯಾಗಿದ್ದಾರೆ. ಡಾ.ಜಿ.ಪರಮೇಶ್ವರ್, ಎಚ್.ಕೆ. ಪಾಾಟೀಲ್ ಅವರ ಹಿರಿಯರು ಮಾಡಿದ ಪುಣ್ಯದಿಂದ ಸಚಿವರಾಗಿದ್ದಾರೆ. ಅಹಿಂದ ಸಂಘಟಿಸಲು  ಕೋಟ್ಯಾಂತರ ಸುರಿದ ದಿ. ಆರ್. ಎಲ್ .ಜಾಲಪ್ಪ, ದಿ. ನಾರಾಯಣ ಸ್ವಾಮಿ ಮುಂತಾದವರ ನೆನಪೇ ಇಲ್ಲ. ಸಿದ್ದರಾಮಯ್ಯ ರನ್ನು ಸಿದ್ದರಾಮಯ್ಯ ಮಾಡಲು ಶ್ರಮಿಸಿದ ಸತೀಶ್ ಷುಗರ್ಸ್ ಮಾಲೀಕ ಒಂದು ಹಂತದಲ್ಲಿ ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡಿ ಸನ್ಯಾಸಿ ಆಗಲು ಮುಂದಾಗಿದ್ದರು. ಚಾಮುಂಡೇಶ್ವರಿ ಉಪಚುನಾವಣೆ ಗೆಲ್ಲಿಸಿಕೊಡಲು ಹಲವು ದಿನ ಟೆಂಟ್ ಹಾಕಿ ತನ್ನ ಕಜಾನೆಯಿಂದ ಹಣ ಸುರಿದು ಶ್ರಮಿಸಿದ ಡಿ.ಕೆ.ಶಿವಕುಮಾರ್ ಸದ್ಯದಲ್ಲಿ ಮುಖ್ಯಮಂತ್ರಿ ಆಗುವ ಸಾಧ್ಯತೆಗಳೇ ಇಲ್ಲ.

2006 ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಅಲ್ಪಸಂಕ್ಯಾಕರ ಪ್ರದೇಶದಲ್ಲಿ ಅತ್ಯಂತ ಕಡಿಮೆ ಮತದಾನ ಆಗಿ ಗೆಲುವಿನ ಅಂತರ ಕಡಿಮೆ ಆಗಿದ್ದರು ಕೂಡ ತನ್ವೀರ್ ಗೆ ಆದ್ಯತೆ ಮೇರೆಗೆ ಮಂತ್ರಿ ಪದವಿ ನೀಡಲಾಗಿತ್ತು. ಡಿ.ಕೆ.ಶಿ ಮೊದಲ ಅವಧಿಯಲ್ಲಿ ಮಂತ್ರಿ ಮಂಡಲದಲ್ಲಿ ಸೇರಲು ಆಗಲಿಲ್ಲ. ಸರಕಾರ ಇದ್ದರೂ ಕೂಡ ಬಿಜೆಪಿ ಸುಳ್ಳನ್ನು ಎದುರಿಸಲು ಸಶಕ್ತವಾದ ರಾಜಕೀಯ ಪರಿಚಯ ಇರುವ ಒಂದು ಸೋಶಿಯಲ್ ಮಿಡಿಯ ಗುಂಪನ್ನು ಕಟ್ಟಲು ಸಾಧ್ಯವಾಗಲಿಲ್ಲ. ನಿಷ್ಠಾವಂತರಾಗಿ ತಮ್ಮ ಸ್ವ ಆಸಕ್ತಿಯಿಂದ ಪಕ್ಷಕ್ಕಾಗಿ ದುಡಿದ ಸಾವಿರಾರು ಸೋಶಿಯಲ್ ಮಿಡಿಯಾ ಯೋಧರನ್ನು ಕಡೆಗಣಿಸಿ ದೂರ ಎಸೆದಿದೆ. ಇಂತಹ ನೂರಾರು ಕಾರಣಗಳಿಗಾಗಿ ಸಿದ್ದರಾಮಯ್ಯ ವಿರುದ್ಧ ಇರುವ ಅಸಮಾಧಾನ ಪಂಚರಾಜ್ಯ ಚುನಾವಣೆಯ ಫಲಿತಾಂಶದ ನಂತರ ಬಹಿರಂಗವಾಗಲಿದೆ.

AIDS HIV: ಏಡ್ಸ್ ರೋಗ​ ಸೋಂಕಿತರಲ್ಲಿ ಕರ್ನಾಟಕ 9ನೇ ಸ್ಥಾನ ! ಏಡ್ಸ್ ಹರಡುವಿಕೆ ಇಳಿಕೆ

ನಾಲ್ಕರಲ್ಲಿ ಎರಡು ರಾಜ್ಯಗಳನ್ನು ಗೆದ್ದರು ಕೂಡ ಕಾಂಗ್ರೆಸ್  ಹೈಕಮಾಂಡ್ ಗೆ ಬಹುದೊಡ್ಡ  ಟಾನಿಕ್ ದೊರೆಯಲಿದೆ. ಹೈಕಮಾಂಡ್ ಬಲಿಷ್ಠ ವಾಗದಿದ್ದರೆ ಕಾಂಗ್ರೆಸ್ಸಿಗೆ ರಾಜ್ಯದಲ್ಲಿ ಉಳಿಗಾಲವಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಬಿಜೆಪಿ ವಿರುದ್ಧ ಮತದಾನ ಆಗುವಾಗ ಕರ್ನಾಟಕ ಜನತೆ ಬಿಜೆಪಿ ಪರವಾಗಿ ಎನ್ನುವುದಕ್ಕಿಂತಲೂ ಕಾಂಗ್ರೆಸ್ ವಿರುದ್ಧ ಮತ ನೀಡಲಿದ್ದಾರೆ ಎಂಬುದು ವಾಸ್ತವ. 25 ಎಕರೆ ಜಮೀನು ಪಡಕೊಂಡವರು ನೆನಪಿಟ್ಟುಕೊಂಡಿಲ್ಲ. ಇನ್ನು ನಿಮ್ಮ 2000ರೂ. ನೆನಪು ಇರುತ್ತದೆಯೇ?

 

Leave a Reply

Your email address will not be published. Required fields are marked *