Ediga samavesha: ಸಮುದಾಯದಲ್ಲಿ ಗೊಂದಲ ಮೂಡಿಸಿದ ಈಡಿಗ ಸಮಾವೇಶಗಳು

Ediga Billava Narayana Guru
  • ಮಂಗಳೂರುಃv.16- ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಪಾಪೋಷಿತ ಬೆಂಗಳೂರಿನಲ್ಲಿ ಡಿ.110ರಂದು ನಡೆಯಲಿರುವ ಈಡಿಗರ Ediga samavesha ಸಮಾವೇಶಕ್ಕಾಗಿ ದಕ್ಷಿಣ ಕನ್ನಡ ಬಿಲ್ಲವ ಮುಖಂಡರಿಂದ ಸಿದ್ಧತಾ ಸಭೆ ನಡೆಸಲಾಗಿದ್ದು, ಸಮುದಾಯದಲ್ಲಿ ಗೊಂದಲ ಮೂಡಿಸಿದೆ..

ಹಿರಿಯ ಕಾಂಗ್ರೆಸ್ ಮುಖಂಡ ಬಿಲ್ಲವ ಸಮುದಾಯದ ಬಿ.ಕೆ.ಹರಿಪ್ರಸಾದ್ ಅವರು ವಿರುದ್ಧ ಶಕ್ತಿ ಪ್ರದರ್ಶನಕ್ಕಾಗಿ ಬೆಂಗಳೂರಿನ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ ಉಸ್ತುವಾರಿಯಲ್ಲಿ ಆಯೋಜಿಸಲಾಗುತ್ತಿರುವ ಈಡಿಗ ಸಮಾವೇಶದಲ್ಲಿ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸಲು ಮಂಗಳೂರಿನಲ್ಲಿ ನಡೆದ ಸಿದ್ದತಾ ಸಭೆಯಲ್ಲಿ ನಿರ್ಧರಿಸಲಾಗಿದೆ.

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಿರುದ್ಧ ನಡೆಸುತ್ತಿರುವ ಷಡ್ಯಂತ್ರಗಳು ನಡೆಯುತ್ತಿರುವ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ.

ಮಾಜಿ ಸಂಸದ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು,ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಕೇಸರಿ ಧ್ವಜ ಹಾರಿಸಿ ಪ್ರಚಾರ ಪಡೆದಿದ್ದ, ಪ್ರಖರ ಹಿಂದೂತ್ವವಾದಿ ಸತ್ಯಜಿತ್ ಸುರತ್ಕಲ್ ಅವರು ಬಿಲ್ಲವ ಸಮುದಾಯವನ್ನು ಹೇಗೆ ತಳ ಮಟ್ಟದಿಂದ ಸಂಘಟಿಸಬೇಕೆಂದು ಸಭೆಯಲ್ಲಿ ವಿವರಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ನ.12ರಂದು ಭಾನುವಾರ ಮಂಗಳೂರು ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಬಿಲ್ಲವರ ಪೂರ್ವ ಸಿದ್ದತಾ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಆರ್ಯ ಈಡಿಗ ಮಹಾಸಂಸ್ಥಾನ ಶ್ರೀ ವಿಖ್ಯಾತನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಸಿದ್ಧತಾ ಸಭೆ ನಡೆಯಿತು. ಕೆಲವು ಮಂದಿ ಮಾಜಿ ಸಚಿವ ರಮಾನಾಥ ರೈ ಅವರ ಬಣದೊಂದಿಗೆ ಗುರುತಿಸಿಕೊಂಡಿರುವ ಬಿಲ್ಲವರನ್ನು ಹೊರತುಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಗುರುತಿಸಿಕೊಂಡವರು ಅಥವ ಹಿಂದೂತ್ವ ಪಕ್ಷದ ಒಲವುಳ್ಳವರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಇದನ್ನು ಓದಿಃ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಃ ಮಧು ನೇಮಕವೇ ಕಾಂಗ್ರೆಸ್ ಮೊದಲ ಯಡವಟ್ಟು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಟಿವ ಸಂಪುಟದಿಂದ ವಿನಯ ಕುಮಾರ್ ಸೊರಕೆ ಅವರನ್ನು ಕಿತ್ತು ಹಾಕಿದಾಗ ಒಂದು ಸಣ್ಣ ಮಟ್ಟಿನ ವಿರೋಧವನ್ನಾಗಲಿ ಖಂಡನಾ ಸಭೆಯನ್ನಾಗಲಿ ನಡೆಸಈ ಬಿಲ್ಲವ ಮುಖಂಡರು ಸಿದ್ದರಾಮಯ್ಯ ಪರವಾಗಿ ಮತ್ತು ಬಿ.ಕೆ. ಹರಿಪ್ರಸಾದ್ ವಿರುದ್ಧವಾಗಿ  ನಡೆಯುವ ಸಮಾವೇಶಕ್ಕೆ ಲಕ್ಷಾಂತರ ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ವಿಶೇಷ ಬಸ್ಸುಗಳ ಮೂಲಕ ಕೊಂಡು ಹೋಗಿ ಸಮಾವೇಶವನ್ನು ಯಶಸ್ವಿಗೊಳಿಸಲು ಮುಂದಾಗಿರುವುದು ಗಮನಾರ್ಹವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ದಕ್ಷಿಣ ಕನ್ನಡದ ಬಿಲ್ಲವ ಮುಖಂಡರು ಪಕ್ಷ ಬೇಧ ಮರೆತು ಬೆಂಬಲಕ್ಕೆ ನಿಂತಿರುವುದು ಒಂದೆಡೆ ಮುಖ್ಯಮಂತ್ರಿಯವರ ಜನಪ್ರಿಯತೆಗೆ ಸಾಕ್ಷಿಯಾಗಿದ್ದು, ಕೇವಲ ಒಂದು ತಿಂಗಳ ಹಿಂದೆ ಇದೇ ಗೋಕರ್ಮ ಕ್ಷೇತ್ರದಲ್ಲಿ ನಡೆದ ಇದೇ ರೀತಿಯ ಸಭೆಯಲ್ಲಿ ಮ ಕೂಡಲೇ ಸ್ಥಾಪಿಸುವಂತೆ ಚರ್ಚಿಸಲಾಗಿತ್ತು. ಈ ಬಾರಿಯ ಸಭೆಯಲ್ಲಿ ಈ ವಿಚಾರಕ್ಕೆ ವಿಶೇಷ ಮಹತ್ವ ನೀಡಲಾಗಿಲ್ಲ ಎನ್ನಲಾಗಿದೆ.

ಈ ಹಿಂದಿನ ಭಾರತೀಯ ಜನತಾ ಪಾರ್ಟಿ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುತುವರ್ಜಿಯಲ್ಲಿ ನಾರಾಯಣ ಗುರು ಈಡಿಗ ಅಭಿವೃದ್ಧಿ ನಿಗಮ ಘೋಷಣೆ ಮಾಡಲಾಗಿತ್ತು. ಸಿದ್ದರಾಮಯ್ಯ ಅವರ ಸರಕಾರ ಅಧಿಕಾರ ಬಂದ ಮೇಲೆ ಕುರುಬ, ಕ್ರೈಸ್ತ, ಅಲ್ಪಸಂಖ್ಯಾತ ಸೇರಿದಂತೆ ಕೆಲವು ನಿಗಮಗಳಿಗೆ ಅನುದಾನ ಘೋಷಣೆ ಮಾಡಿ ಆಡಳಿತ ಮಂಡಳಿಯನ್ನು ನೇಮಕ ಮಾಡಲಾಗಿದೆ. ಆದರೆ, ಈಡಿಗ, ಬಿಲ್ಲವ ಸಮುದಾದ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಲಾಗಿಲ್ಲ. ಅನುದಾನವನ್ನು ಕೂಡ ನೀಡದೆ ಕಡೆಗಣಿಸಲಾಗಿದೆ. ಈ ಬಗ್ಗೆ ಬಿಜೆಪಿ ಪರ ಒಲವುಳ್ಳ ಬಿಲ್ಲವ ಮುಖಂಡರು ಕೂಡ ಮಾತನಾಡದಿರುವುದು ಅಚ್ಚರಿ ಮೂಡಿಸಿದೆ.

ತಿಮ್ಮೇಗೌಡ ಅವರಿಂದ ಮುಖ್ಯಮಂತ್ರಿ ಭೇಟಿ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಸಾಯಿರಾಂ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ರಾಜೇಶ್ ಬಿ, ಶ್ರೀ ನಾರಾಯಣ ಗುರು ಯುವ ವೇದಿಕೆಯ ಎಂ ಎಸ್ ಕೋಟ್ಯಾನ್, ಮೂರ್ತೆದಾರ ಸಂಘದ ಅಧ್ಯಕ್ಷರಾದ ಬಿರ್ವ ಸಂಜೀವ ಪೂಜಾರಿ, ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್, ತೀಯ ಸಮಾಜದ ದಿನೇಶ್ ಕುಂಪಲ,ಗೋಕರ್ಣನಾಥ ಕ್ಷೇತ್ರದ ಟ್ರಸ್ಟಿ ಎಂ ಶೇಖರ್ ಪೂಜಾರಿ, ಬೆಳ್ತಂಗಡಿ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಚಿದಾನಂದ ಪೂಜಾರಿ, ಮಾಜಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಪದ್ಮನಾಭ ಕೋಟ್ಯಾನ್,ಬಿಲ್ಲವ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಗಂಗಾಧರ ಚೆಳೈರ್,ಶ್ರೀ ಕ್ಷೇತ್ರ ಗೆಜ್ಜೆಗಿರಿ ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ, ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ ಅಧ್ಯಕ್ಷ ಸದಾನಂದ ಪೂಜಾರಿ, ಕಂಕನಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ದಿನೇಶ್ ಅಂಚನ್, ಉರ್ವ ಬಿಲ್ಲವ ಸಂಘದ ಅಧ್ಯಕ್ಷರಾದ ಹರಿಪ್ರಸಾದ್, ಯಶವಂತ್ ದೇರಾಜೆ ಗುತ್ತು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ರವೀಂದ್ರ ಬಂಗೇರ ಕೊಣಾಜೆ, ಮಾಜಿ ಕಾರ್ಪೊರೇಟರ್ ಗಳಾದ ದೀಪಕ್ ಪೂಜಾರಿ, ರಾಧಾಕೃಷ್ಣ , ವಿವಿಧ ಬಿಲ್ಲವ ಸಂಘಗಳು, ಯುವಸಂಘಟನೆ ಮತ್ತು ಅದರ ಘಟಕಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

 

 

 

Leave a Reply

Your email address will not be published. Required fields are marked *