Ediga Flop Show: ಈಡಿಗ, ಬಿಲ್ಲವರಿಗೆ ಚಿಕ್ಕಾಸು ಇಲ್ಲ ಎಂದು ಖಡಕ್ ಸಂದೇಶ ನೀಡಿದ ಸಿಎಂ ಸಿದ್ದರಾಮಯ್ಯ

 

Ediga Flop Show ಬೆಂಗಳೂರು, ಡಿಸೆಂಬರ್ 10: ಈಡಿಗ, ಬಿಲ್ಲವ, ನಾಮಧಾರಿ ಸಮುದಾಯಗಳಿಗೆ ಚಿಕ್ಕಾಸು ದೊರೆಯುವುದಿಲ್ಲ, ಬ್ರಹ್ಮಶ್ರೀ ನಾರಾಯಣ ಗುರು (Narayana Guru) ಅಭಿವೃದ್ಧಿ ನಿಗಮ ತಾನು ಅಧಿಕಾರದಲ್ಲಿದಷ್ಟು ದಿನ ಆಗುವುದಿಲ್ಲ ಎಂಬ ಸ್ಪಷ್ಟ, ಖಡಕ್ ಸಂದೇಶವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ(CM Siddaramaiah) ನೀಡಿದ್ದಾರೆ.

ಅವರು ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಲಾದ ಸಿದ್ದರಾಮಯ್ಯ ಕೃಪಾ ಪೋಷಿತ ತಿಮ್ಮೇಗೌಡರ ಆರ್ಯ ಈಡಿಗ, ಬಿಲ್ಲವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದ ವರ್ಗಗಳ ಉದ್ಧಾರಕ ಎಂದು ಬಣ್ಣಿಸಲಾದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ ಘೋಷಿಸಿ ನಿಗಮವನ್ನು ಚಾಲನೆಗೆ ತರುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಸಿದ್ದಾರಾಮಯ್ಯನವರ ಗುಲಾಮಗಿರಿ ಮಾಡುತ್ತೀರುವ ಈಡಿಗ ಸಮುದಾಯಕ್ಕೆ ಸ್ಪಷ್ಟ ಸಂದೇಶ  ನೀಡಿದ್ದು, ಬಣ್ಣದ ಭಾಷಣದ ಹೊರತು ತನ್ನ ಸರಕಾರದಿಂದ ಏನನ್ನು  ನೀರೀಕ್ಷೆ ಬೇಡಿ ಎಂದು ಸೂಚಿಸಿದಂತಾಗಿದೆ. ಮುಖ್ಯಮಂತ್ರಿ ಸಿದ್ದಾರಮಯ್ಯನವರು ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸಹಿತ ಯಾವುದೇ ಬೇಡಿಕೆಗಳನ್ನು ಈಡೇರಿಸದಿರುವುದು ರಾಜಕೀಯ ಕುತಂತ್ರದ ಸಮಾವೇಶದಲ್ಲಿ ಪಾರುಪತ್ಯ ವಹಿಸಿದ ಬಿಲ್ಲವ, ಈಡಿಗ ಕಾಂಗ್ರೆಸ್ ಮತ್ತು ಹಿಂದೂತ್ವವಾದಿ ಮುಖಂಡರಿಗೆ ಬಟ್ಟೆಯಲ್ಲಿ ಸುತ್ತಿದ ಚಪ್ಪಲಿಯಲ್ಲಿ ಹೊಡೆದಂತಾಗಿದೆ.

ನಾರಾಯಣ ಗುರುಗಳ ಅಧ್ಯಯನ ಪೀಠ, ಕೋಟಿ ಚನ್ನಯ್ಯನವರ ಥೀಮ್ ಪಾರ್ಕಿಗೆ ನಮ್ಮ ಸರ್ಕಾರ ಹಿಂದೆ  5 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಯಿತು. ಈ ಪೈಕಿ ಅಧ್ಯಯನ ಪೀಠ ಮಾಡಲಾಗಿಲ್ಲ. ಅದರ ಅನುಷ್ಠಾನದ ಬಗ್ಗೆ ಸರ್ಕಾರ ಗಮನ ಹರಿಸಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಭಾಷಣದಲ್ಲಿ ಹೇಳಿದರು. ನಾರಾಯಣ ಗುರುಗಳ ಅಧ್ಯಯನ ಪೀಠವನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ. ಬಿ.ಕೆ.ಹರಿಪ್ರಸಾದ್ ಅವರು ಧ್ಯಯನ ಪೀಠಕ್ಕೆ 50 ಲಕ್ಷ ರೂ ಅನುದಾನ ಮಂಜರು ಮಾಡಿದ್ದರು. ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ.

ಸಿದ್ದರಾಮಯ್ಯನವರು ಕೋಟಿ ಚೆನ್ನಯ ಅವಳಿ ವೀರರ ಜನ್ಮ ಸ್ಥಳ ಪಡುಮಲೆಯ ಸಮಗ್ರ ಅಭಿವೃದ್ಧಿಗೆ ಪಡುಮಲೆ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿ ಬಜೆಟಿನಲ್ಲಿ 5 ಕೋಟಿ ರೂ. ನಿಗದಿ ಮಾಡಿದ್ದರು. ಸಿದ್ದರಾಮಯ್ಯ ಪಕ್ಷದ ಆಪ್ತರು ಮತ್ತು ಮಜಿ ಸಚಿವವಿನಯ ಕುಮಾರ ಸೊರಕೆಯವರ ಆಪ್ತರು ಸ್ಥಳೀಯ ಶಾಸಕರು ಪ್ರಾಧಿಕಾರ ಅನುಷ್ಠಾನ ಆಗದಂತೆ ನೋಡಿಕೊಂಡರು. ಈ ವಿಚಾರಗಳು ಸಿದ್ದರಾಮಯ್ಯ ಅವರಿಗೆ ಮರೆತು ಹೋಗಿದೆ.

1995 ರಿಂದ ತಾನು ಹಣಕಾಸಿನ ಮಂತ್ರಿಯಾಗಿದ್ದ ಸಂದರ್ಭದಿಂದಲೇ ಈಡಿಗ ಸಮುದಾಯದ ಹಲವು ಬೇಡಿಕೆಗಳನ್ನು ಈಡೇರಿಸಲಾಗಿಲ್ಲ ಎಂದು ಸಮಾವೇಶದ ಭಾಷಣದಲ್ಲಿ ನೆನೆಪಿಸಿಕೊಂಡ ಸಿದ್ದರಾಮಯ್ಯ, ಹಿಂದುಳಿದ ಜಾತಿಗಳ ಸಂಘಟನೆ, ಶಿಕ್ಷಣ, ಹೋರಾಟದ ಬಗ್ಗೆ ಹಾಗೂ ಈಡಿಗ ಸಮಾಜಕ್ಕೆ ಏನು ಅಗತ್ಯ ಎಂದು ಪ್ರಸ್ತಾಪ ಮಾಡಿದ್ದಾರೆ. ಅನೇಕ ಒತ್ತಾಯ ಬೇಡಿಕೆ ಗಳನ್ನು ಸಲ್ಲಿಸಿದ್ದಾರೆ. ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ಯಾವುದೇ ಭರವಸೆ ನೀಡಲಾಗುವುದಿಲ್ಲ ಎನ್ನುವ ಮೂಲಕ ಈಡಿಗ ಬಿಲ್ಲವ ಸಮುದಾಯಕ್ಕೆ ಪುಡಿಗಾಸು ನೀಡುವುದಿಲ್ಲ ಎಂಬುದನ್ನುಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಜಾಲಪ್ಪನವರನ್ನು ನೆನೆಪಿಸಿಕೊಂಡ ಸಿದ್ದು

ಬೆಂಗಳೂರಿನಲ್ಲಿ ನಡೆದ ಈಡಿಗ ಸಮಾವೇಶದ ವಿಶೇಷ ವೆಂದರೆ ಮಾಜಿ ಕಂದಾಯ ಸಚಿವ, ಅಹಿಂದ ಅಂದೋಲನದ ರೂವಾರಿ ದಿ. ಆರ್. ಎಲ್ . ಜಾಲಪ್ಪ ಮತ್ತು ಸಿದ್ದರಾಮಯ್ಯನವರ ರಾಜಕೀಯ ಚಟುವಚಿಕೆಗೆ ಸಂಪನ್ಮೂಲ ಒದಗಿಸುತ್ತಿದ್ದ ಉದ್ಯಮಿ ದಿ. ಜೆ.ಪಿ.ನಾರಾಯಣ ಸ್ವಾಮಿ ಅವರನ್ನು ಭಾಷಣದಲ್ಲಿ ನೆನಪಿಸಿಕೊಂಡರು. ಬಹುತೇಕ ತನ್ನ ರಾಜಕೀಯ ಏಳಿಗೆಗೆಗ ಬೆಂಬಲ ನೀಡಿದವರನ್ನು ಮರೆತಿರುವ ಸಿದ್ದರಾಮಯ್ಯ ಈ ಸಮಾವೇಶದಲ್ಲಿ ಜೆ.ಪಿ.ನಾರಾಯಣ ಸ್ವಾಮಿ, ಆರ್. ಎಲ್ . ಜಾಲಪ್ಪ ಅವರನ್ನು ನೆನಪಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗೆ ಜೆ.ಪಿ.ನಾರಾಯಣ ಸ್ವಾಮಿ ಅವರು ಕುಟುಂಬದವರು ಆಹ್ವಾನಿಸಿದ ಸಮಾರಂಭಕ್ಕೆ ಸಿದ್ದರಾಮಯ್ಯ ಗೈರು ಹಾಜರಿಯಾಗಿದ್ದರು. ಇದು ಸಮುದಾಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

ತಾವೇ ಸೂಚನೆ ನೀಡಿದ ಸಮಾವೇಶ ನಡೆಯುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿದ್ದು, ಅಧಿವೇಶನ ಆರಂಭಕ್ಕೆ ಮುನ್ನವೇ ಅಥವ ಅಧಿವೇಶನದಲ್ಲಿ ಕನಿಷ್ಟ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ ಘೋಷಿಸಿ ನಿಗಮವನ್ನು ಚಾಲನೆ ನೀಡಬಹುದಿತ್ತು. ಕುರುಬ ಸಮುದಾಯದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ನೀಡಿದಾಗ ಈಡಿಗ ಸಮುದಾಯಕ್ಕೆ ಒಂದು  ನೂರು ಕೋಟಿ ರೂಪಾಯಿ ನೀಡಬಹುದಿತ್ತು. ಅದನ್ನು ಮಾಡಿಲ್ಲ ಎಂದರೆ ಆ ಸಮಾವೇಶದಲ್ಲಿ ಸೇರಿದ್ದ ಈಡಿಗ ಬಿಲ್ಲವ ಮುಖಂಡರು ಅಯೋಗ್ಯರು ಎಂದು ಪರೋಕ್ಷವಾಗಿ ಹೇಳಿದಂತಿದೆ.

ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ಯಾವುದೇ ಭರವಸೆ ನೀಡಲಾಗುವುದಿಲ್ಲ ಎನ್ನುವ ಮೂಲಕ ಸಮುದಾಯದ ಅಯೋಗ್ಯ ಮುಖಂಡರ ಗುಲಾಮಗಿರಿಯನ್ನು ಸಮುದಾಯದ ಹೊಸ ತಲೆ ಮಾರಿಗೆ ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ.

ಸಮಾಜದಲ್ಲಿ ಬದಲಾವಣೆ ತರಲು ಸರ್ಕಾರ ಶ್ರಮಿಸುತ್ತದೆ

ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಶತಮಾನಗಳ ಕಾಲ  ಹಿಂದುಳಿದ , ಶೂದ್ರ ವರ್ಗ ಶಿಕ್ಷಣ ಸಂಸ್ಕೃತಿಯಿಂದ ವಂಚಿತವಾಗಿತ್ತು. ಜಾತಿ ವ್ಯವಸ್ಥಯಲ್ಲಿ ಚಲನೆಯಿಲ್ಲ. ಆರ್ಥಿಕ  ಹಾಗೂ ಸಾಮಾಜಿಕ ಚಲನೆಯಿಲ್ಲದ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ. ಇದಕ್ಕಾಗಿ ಶಿಕ್ಷಣ ಬಹಳ ಮುಖ್ಯ. ನಾರಾಯಣ ಗುರುಗಳು ಶಿಕ್ಷಣಕ್ಕೆ ಒತ್ತು ನೀಡಿದ್ದರು. ಶಿಕ್ಷಣದಿಂದ ತುಳಿತಕ್ಕೊಳಗಾದವರು ಸ್ವಾಭಿಮಾನಿ, ಸಶಕ್ತರಾಗಿ ಜೀವನ ನಡೆಸಲು ಸಾಧ್ಯ.ಆದರೆ   ವೈಚಾರಿಕ ಚಿಂತನೆಯ ಗುಣಮಟ್ಟ ಶಿಕ್ಷಣದ ಕೊರತೆ ಇದೆ. ಬಸವಣ್ಣ, ಕನಕದಾಸರು, ನಾರಾಯಣಗುರುಗಳು ಸೇರಿದಂತೆ ಎಲ್ಲ ಮಹನೀಯರ ಆಶಯದಂತೆ ಸಮಾಜದಲ್ಲಿ ಸಮಾನತೆ ಬರಬೇಕು. ಶಿಕ್ಷಣದ ಮೂಲಕ ಆರ್ಥಿಕ, ಸಾಮಾಜಿಕ ಬದಲಾವಣೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶದಲ್ಲಿ ಭಾಷಣ ಮಾಡಿದರು.

ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರ ಮಾಡಬೇಕೆಂದು  ಒತ್ತಾಯ ಮಾಡಿದ್ದ ಹಿನ್ನೆಲೆಯಲ್ಲಿ ಅವರ ಜಯಂತಿ ಯನ್ನು ರಾಜ್ಯ ಸರ್ಕಾರವೇ ಆಚರಿಸುವಂತೆ ತೀರ್ಮಾನ ಮಾಡಲಾಯಿತು ಎಂದರು. ಜಾತ್ಯತೀತ ಜನತಾದಳದ ಯುವ ಶಾಸಕನೊಬ್ಬ ವಿಧಾನಸಭೆಯಲ್ಲಿ ರಜೆ ರಹಿತವಾಗಿ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರ ಮಾಡಬೇಕೆಂದು  ಒತ್ತಾಯಿಸಿದ್ದರೆ ಹೊರತು, ಬಿಲ್ಲವರಾಗಲಿ ಈಡಿಗ ಸಂಘವಾಗಲಿ, ಕಾಂಗ್ರೆಸ್ ಮುಖಂಡರಾಗಲಿ ಗುರು ಜಯಂತಿ ಆಚರಿಸಬೇಕಂದು ಒತ್ತಾಯ ಮಾಡಿರಲಿಲ್ಲ.

ನಾರಾಯಣ ಗುರುಗಳ ಸಂದೇಶ ಎಂದೆಂದಿಗೂ ಪ್ರಸ್ತುತ

ನಾರಾಯಣ ಗುರುಗಳ ಮಾರ್ಗದರ್ಶನ ಅವಶ್ಯ , ಅವರ ವಿಚಾರಗಳು, ಇಂದಿಗೂ, ಎಂದೆಂದಿಗೂ ಪ್ರಸ್ತುತ.  ಕೇರಳದಲ್ಲಿ ಅವಮಾನಗಳನ್ನು ಸಹಿಸಿ ಅದರ ವಿರುದ್ಧ ಸಾತ್ವಿಕ ಕೋಪವಿದ್ದರೂ ಸಹಿಸಿ ಜನರ ಸಂಘಟನೆ ಮಾಡಿ, ಜಾಗೃತಿ ಮೂಡಿಸಲು, ಬದಲಾವಣೆ ತರಲು ಇಡೀ ಬದುಕನ್ನು ಮುಡಿ ಪಾಗಿಟ್ಟರು.  ಆರ್ಥಿಕವಾಗಿ, ಸಾಮಾಜಿಕವಾಗಿ ವಂಚಿತರಾಗಿರುವ ಸಮಾಜದ ಉದ್ದಾರಕ್ಕಾಗಿ ಶ್ರಮಿಸಿದರು.  ಮನುಷ್ಯರೆಲ್ಲರೂ ಒಂದೇ, ಜಾತಿ, ಒಂದೇ ಮತ, ಒಂದೇ ದೇವರು ಎಂದು ಹೇಳಿದ್ದರು. ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆ ಮಾಡಿಕೊಂಡಿರುವವರು ನಾವು. ಜಾತಿ ಹೇಳಬೇಡ, ಜಾತಿ ಕೇಳಬೇಡಿ ಹಾಗೂ ಜಾತಿ ನೋಡಬೇಡ ಎಂದು ನಾರಾಯಣ ಗುರುಗಳು ಹೇಳಿದ್ದರು ಎಂದು ಭಾಷಣ ಮಾಡಿದರು.

ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು

ದೇವಸ್ಥಾನದೊಳಗೆ ದೇವರ ದರ್ಶನ ಮಾಡಲು ಶೂದ್ರರಿಗೆ ಅವಕಾಶವಿರಲಿಲ್ಲ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ದೇವರು ಯಾರ ಸ್ವತ್ತಲ್ಲ. ಹಾಗಾಗಿ ನೀವೇ ದೇವಸ್ಥಾನಗಳನ್ನು ಕಟ್ಟಿ  ಎಂದು ಕರೆ ನೀಡಿದ್ದರು. ಕೇರಳ, ಕರ್ನಾಟಕ ಕರಾವಳಿಯಲ್ಲಿ ಅನೇಕ ದೇವಸ್ಥಾನ ಕಟ್ಟಿದ್ದರು. ಈಡಿಗರು, ಬಿಲ್ಲವರೇ ಈ ದೇವಾಲಯದ ಪೂಜಾರಿಗಳಾದರು.

ಕುವೆಂಪು ಹೇಳಿದಂತೆ  ಹುಟ್ಟುವಾಗ ವಿಶ್ವಮಾನವರಾಗಿರುವ ಮನುಷ್ಯರು ನಂತರ ಅಲ್ಪಮಾನವರಾಗುತ್ತಾರೆ. ವಿಶ್ವಮಾನವನಾಗುವ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕು ಎಂದರು. ನಾರಾಯಣ ಗುರುಗಳು ವಿಶ್ವ ಮಾನವರಾಗಿದ್ದರು.  ಜಾತಿ, ಧರ್ಮಗಳನ್ನು ಮೀರಿ ಬೆಳೆದವರ ಪರಂಪರೆಯಲ್ಲಿ ಕನಕದಾಸರು, ಬುದ್ಧ, ಬಸವ, ಅಂಬೇಡ್ಕರ್, ನಾರಾಯಣ ಗುರುಗಳು ಸೇರುತ್ತಾರೆ. ಮಾನವ ಸಮಾಜ ನಿರ್ಮಾಣವಾಗಬೇಕೆಂಬ ಕನಸು ಕಂಡಿದ್ದರು. ಮಾನವರು ಒಂದೇ ಜಾತಿ ಎಂದು ಸಾರಿದ್ದರು. ದಯೆಯೇ ಧರ್ಮದ ಮೂಲ ಎಂದರು. ಈ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಅಂಬೇಡ್ಕರ್ ಅವರು ಹೇಳುವಂತೆ ಶಿಕ್ಷಣ, ಸಂಘಟನೆ, ಹೋರಾಟವನ್ನು ಅವಕಾಶ ವಂಚಿತರು ಮಾಡಬೇಕು ಎಂದರು.

ಸಮಾಜ ಸುಧಾರಕ ನಾರಾಯಣ ಗುರು Narayana Guru

1856 ರಲ್ಲಿ ಹುಟ್ಟಿದ ನಾರಾಯಣ ಗುರುಗಳು ಸಣ್ಣ ವಯಸ್ಸಿನಲ್ಲಿ ಅನೇಕ ಅವಮಾನಗಳನ್ನು ಅನುಭವಿಸಿ, ಸಮಾಜದ ಸುಧಾರಣೆಗಾಗಿ ಸಮಾಜದ ಪರಿವರ್ತಕರಾದರು. ಸಮಾಜದಲ್ಲಿನ ಅಸಮಾನತೆಯಿಂದ ನೊಂದ ಜನ ಪ್ರಜಾಪ್ರಭುತ್ವದ ಸೌಧವನ್ನು ನಾಶ ಮಾಡುವ ಸಾಧ್ಯತೆಯಿದೆಯೆಂದು ಡಾ.ಅಂಬೇಡ್ಕರ್ ಅವರು ಎಚ್ಚರಿಕೆ ನೀಡಿದ್ದರು. ಸಮಾಜದಲ್ಲಿ ಬದಲಾವಣೆ ತರಲು ಸರ್ಕಾರ ಪ್ರಯತ್ನಿಸುವ ಹಾದಿಯಲ್ಲಿವೆ ಎಂದರು.

ಸಮಾಜದ ಋಣವನ್ನು ತೀರಿಸುವುದು ಎಲ್ಲರ ಕರ್ತವ್ಯ:

ದೊಡ್ಡ ಇತಿಹಾಸವಿರುವ ಈಡಿಗ ಸಮುದಾಯ ಹೆಮ್ಮೆ ಪಡಬೇಕು. ಸಮುದಾಯದವರು ಸಮಾಜ ಸುಧಾರಕರು ನುಡಿದ ದಾರಿಯಲ್ಲಿ ನಡೆಯಬೇಕು. ಈ ನಿಟ್ಟಿನಲ್ಲಿ ಸಂಘಟನೆ ಬಹಳ ಮುಖ್ಯ. ಸಂವಿಧಾನ ನೀಡಿದ ಹಕ್ಕುಗಳನ್ನು ಪಡೆದುಕೊಳ್ಳಲು ಜಾಗೃತರಾಗಬೇಕು. ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಚಿಂತನೆ ನಡೆಸಲು ಇಂತಹ ಸಮಾವೇಶಗಳು ಅತ್ಯವಶ್ಯ. ಸಮಾಜದಿಂದಾಗಿ ಏಳಿಗೆ ಹೊಂದಿದವರು ಸಮಾಜದ ಋಣವನ್ನು ತೀರಿಸಬೇಕು ಎಂದರು.

ಆರ್ಯ ಈಡಿಗ ಸಂಘದ ಅಧ್ಯಕ್ಷ  ಡಾ.ಎಂ.ತಿಮ್ಮೆಗೌಡ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ಖ್ಯಾತ ನಟ ಶಿವರಾಜ್ ಕುಮಾರ್, ಶಾಸಕರು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕರು ಉಪಸ್ಥಿತರಿದ್ದರು.

ರಾಜಕೀಯ ಕುತಂತ್ರದ ಸಮಾವೇಶ ಆಗಿದ್ದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮಿಗಳು, ಸಮಯಸಾಧಕ ಮುಖಡರು ಮಾತ್ರ ವಿಮಾನ ಮೂಲಕ ಬೆಂಗಳೂರು ಸಮಾವೇಶಕ್ಕೆ ಹೋಗಿದ್ದರು. ಬಿಲ್ಲವರು ಬಹುತೇಕ ಬಹಿಷ್ಕಾರ ಹಾಕಿದ್ದರು.

ಸರಕಾರದ ಪೂರ್ಣ ಬೆಂಬಲದೊಂದಿಗೆ ಆಯೋಜಿಸಲಾದ ಸಮಾವೇಶ ಆಗಿದ್ದರು ಕೂಡ ಖಾಲಿ ಕುರ್ಚಿಗಳಿಗೆ ಮುಖ್ಯಮಂತ್ರಿ ಭಾಷಣ ಮಾಡಬೇಕಾಯಿತು.

Leave a Reply

Your email address will not be published. Required fields are marked *