Ediga-ಡಿ.10 ಈಡಿಗ ಸಮಾವೇಶ ಕಾಂಗ್ರೆಸ್ ಪಕ್ಷ ಮತ್ತು ಈಡಿಗ ಸಮುದಾಯದ ಅವಸಾನದ ಸಂಕೇತ

Ediga ಬೆಂಗಳೂರುಃ Bangalore ಅರಮನೆ ಮೈದಾನದಲ್ಲಿ Palace Ground ಡಿ. 10ರಂದು ನಡೆಯಲಿರುವ ಸಿದ್ದರಾಮಯ್ಯ ಕೃಪಾಪೋಷಿತ ಈಡಿಗ ಸಮಾವೇಶದ ನಂತರ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಮಾಡಬೇಕೆಂಬ ಹಕ್ಕೊತ್ತಾಯ ಚುರುಕುಗೊಳ್ಳುವುದರೊಂದಿಗೆ ಈ ಸಮಾವೇಶ ಈಡಿಗ ಸಮುದಾಯ ಮತ್ತು ಕಾಂಗ್ರೆಸ್ ಪಕ್ಷ ಅಧಃ ಪತನದ ಸಂಕೇತವಾಗಲಿದೆ.

ರಾಜ್ಯದಾದ್ಯಂತ ನಡೆಯುತ್ತಿರುವ ಅತಿಹಿಂದುಳಿದವರ ಸಮಾವೇಶಗಳಿಗೆ ವಿರುದ್ಧವಾಗಿ  ಹಾಗೂ ಹಿರಿಯ ಕಾಂಗ್ರೆಸ್ ನಾಯಕ  ಬಿ.ಕೆ. ಹರಿಪ್ರಸಾದ್ ಅವರನ್ನು ಗುರಿ ಆಗಿಸಿಕೊಂಡು ನೇರ ಸರಕಾರ ಬೆಂಬಲದೊಂದಿಗೆ ನಡೆಯುತ್ತಿರುವ  ಈ ಸಮಾವೇಶವು ಈಡಿಗ- ಬಿಲ್ಲವ ಸಮುದಾಯದ ಅಧಃಪತನದ ಸಂಕೇತವಾಗಿ ನಡೆಯಲಿದೆ.

ತಮ್ಮದೇ ಸಮುದಾಯದ ಮೇರು ನಾಯಕನ  ವಿರುದ್ಧ ಪ್ರಖರ ಜಾತಿ

ವಾದಿ ಸರಕಾರವೊಂದು, ಗೋಗರೆದರು ಬ್ರಹ್ಮ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಚಿಕ್ಕಾಸು ಬಿಸಾಡದ ಸಿದ್ದರಾಮಯ್ಯ ಸರಕಾರದ ಜೀತದಾಳುಗಳಾಗಿ ಹೋಗುತ್ತಿರುವುದು ಸಮುದಾಯದ ನಿರಭಿಮಾನ ಮತ್ತು ಅತ್ಯಂತ ಶೋಚನಿಯ ಬೌದ್ಧಿಕ ಪರಿಸ್ಥಿತಿಯನ್ನು ಬಹಿರಂಗಗೊಳಿಸಿದೆ.

ಮೇಲ್ಮಣೆಯ ನಾಯಕರಾಗಿದ್ದ ಬಿ.ಕೆ.ಹರಿಪ್ರಸಾದ್ ಅವರು ಡಿಫಾಲ್ಟ್ ಸಚಿವರಾಗಬೇಕಾಗಿತ್ತು. ಸಿದ್ದರಾಮಯ್ಯ ಅವರು ಹರಿಪ್ರಸಾದ್ ಅವರನನ್ ಸಚಿವರನ್ನಾಗಿ ಮಾಡಲಿಲ್ಲ. ಇದೀಗ ತನ್ನವರೇ ಬೆನ್ನಿಗೆ ಚೂರಿ ಹಾಕಿದರು ಎಂಬ ಹೇಳಿಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರತ್ತ ಸಂಶಯ ಮೂಡಿಸಿದೆ.

ಸಂಘ ಪರಿವಾರದ ತಮ್ಮನ್ನು ಮಂತ್ರಿ ಮಂಡಲದಿಂದ ಹೊರಗಿಡಲಾಯಿತು ಎಂಬ ಹರಿಪ್ರಸಾದ್ ಅವರ ಹೇಳಿಕೆ ಸತ್ಯ ಎನ್ನುವಂತೆ ಸಿದ್ದರಾಮಯ್ಯ ಆಯೋಜಿಸುತ್ತಿರುವ ಈಡಿಗ ಸಮಾವೇಶದ ಪಾರಪತ್ಯದಲ್ಲಿ ಹಿಂದೂತ್ವವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿರುವುದು ಪರೋಕ್ಷವಾಗಿ ಈ ಈಡಿಗ ಸಮಾವೇಶದಲ್ಲಿ ಸಂಘಪರಿವಾರದ ಕೆಲಸ ಇದೆಯೇ ಎಬ ಗುಮಾನಿ ಉಂಟಾಗಿದೆ. ಸಿದ್ದರಾಮಯ್ಯ ನೀಡುವ ಬಹಿರಂಗ ಹೇಳಿಕೆಗು ಅವರು ಮಾಡುವ ಕೆಲಸಗಳಿಗೆ ತಾಳೆ ಆಗದಿರುವುದು ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.

ತಿಮ್ಮೇ ಗೌಡರ ಕೆಲವೇ ಕೆಲವು ಸಾವಿರ ಸದಸ್ಯರು ಹೊಂದಿರುವ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹೆಸರಿನಲ್ಲಿ ಸಿದ್ದರಾಮಯ್ಯ ಕೃಪಾಪೋಷಿತ ಈಡಿಗ ಸಮಾವೇಶ ನಡೆಸಲಾಗುತ್ತಿದೆ. ವಾಸ್ತವದಲ್ಲಿ ಇದು ನಡಯುತ್ತಿರುವ ಈಡಿಗರು ಬಿಲ್ಲವರು ಸೇರಿದಂತೆ ಇತರ ಹಿಂದುಳಿದ ವರ್ಗಗಳ ವಿರುದ್ಧ ಮತ್ತು ಮುಖ್ಯವಾಗಿ ಬಿ.ಕೆ.ಹರಿಪ್ರಸಾದ್ ನಡೆಸಿದ ಹಿಂದುಳಿದ ವರ್ಗಗಳ ಸಮಾವೇಶದ ವಿರುದ್ಧವಾಗಿದೆ. ಈ ವಾಸ್ತವ ಸಮುದಾಯದ ಜನರಿಗೆ ಗೊತ್ತಿಲ್ಲ.

ಈ ಸಮಾವೇಶ ನಡೆಸಲು ನಾಯಕತ್ವ ವಹಿಸಿಕೊಂಡವರು ಸಿದ್ದರಾಮಯ್ಯ ಸಂಪುಟದ ಸಚಿವರಾದ ಮಧು ಬಂಗಾರಪ್ಪ ಮತ್ತು ಸಚಿವ ಸಂಪುಟದಿಂದ ವಜಾಗೊಂಡಿರುವ ವಿನಯ ಕುಮಾರ್ ಸೊರಕೆ. ಇದರೊಂದಿಗೆ ಕೆಲವುಮಂದಿ ಹಿಂದೂತ್ವವಾದಿಗಳು ಕೂಡ ಸೇರಿಕೊಂಡಿರುವುದು ಗಮನಾರ್ಹ.  2013 ರ ಸಿದ್ದರಾಮಯ್ಯ ಸರಕಾರ ವಿದ್ದಾಗ ನಗರಾಭಿವೃದ್ಧಿ ಇಲಾಖೆಯ ಸಚಿವರಾಗಿದ್ದ ವಿನಯ್ ಕುಮಾರ್ ಸೊರಕೆ ಅವರನ್ನು ಯೊವುದೇ ಕಾರಣಗಳಿಲ್ಲದೆ ಹಣ ಥೈಲಿ ಹಿಡಿದುಕೊಂಡು ಕಾಯುತ್ತಿದ್ದ ಪ್ರಮೋದ್ ಮಧ್ವರಾಜ್ ಗೆ ಅತೀ ಶ್ರೀಮಂತ ಬೆಂಜ್ ಕಾರ್ ಮಾಲೀಕ ಎಂಬ ಕಾರಣಕ್ಕಾಗಿ ಸೊರಕೆ ಅವರನ್ನು ಸಂಪುಟದಿಂದ ಕೈಬಿಟ್ಟು ಮಧ್ವರಾಜ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಯಿತು.

ಪ್ರಮೋದ ಮಧ್ವರಾಜ್ ಇತರ ಎಲ್ಲ ಸಿದ್ದರಾಮಯ್ಯ ಶಿಷ್ಯರಂತೆ ಬಿಜೆಪಿ ಸೇರಿದರು. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 5ರಲ್ಲಿ 5ಸ್ಥಾನಗಳನ್ನು ಕಾಂಗ್ರೆಸ್ ಕಳಕೊಂಡಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟರಲ್ಲಿ ಏಳುಸ್ಥಾನಗಳನ್ನು ಕಾಂಗ್ರೆಸ್ ಕಳಕೊಂಡಿತು. ಇದು ವಾಸ್ತವ.

ಸಿದ್ದರಾಮಯ್ಯ ಅವರು ವಿನಯ ಕುಮಾರ್ ಸೊರಕೆ ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟಾಗ ಇಂದು ಸಮಾವೇಶದ ಪಾರುಪತ್ಯವಹಿಸಿಕೊಂಡಿರುವ  ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇ ಗೌಡರಾಗಲಿ, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣರಾಗಲಿ, ಇಂದಿನ ಬಿಲ್ಲವ ಮಹಾಮಂಡಲದ ಅದ್ಯಕ್ಷ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಪದಾಧಿಕಾರಿ ರಾಜಶೇಖರ ಕೋಟ್ಯಾನ್  ಮುಂತಾದವರಲ್ಲಿ ಒಬ್ಬರೇ ಒಬ್ಬರು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆಯೇ. ಕರಾವಳಿಯಲ್ಲಿ ಕಾಂಗ್ರೆಸ್ಸಿನ ಸೋಲಿನ ಹಿಂದೆ ಜನಾರ್ದನ ಪೂಜಾರಿ ಮತ್ತು ವಿನಯ ಕುಮಾರ ಸೊರಕೆ ಅವರನ್ನು ಮೂಲಗುಂಪು ಮಾಡಿರುವುದು ಕಾರಣ ಎಂದು ಮನವರಿಕೆ ಮಾಡಿದ್ದಾರೆಯೇ. ಇಲ್ಲ.

AIDS HIV: ಏಡ್ಸ್ ರೋಗ​ ಸೋಂಕಿತರಲ್ಲಿ ಕರ್ನಾಟಕ 9ನೇ ಸ್ಥಾನ ! ಏಡ್ಸ್ ಹರಡುವಿಕೆ ಇಳಿಕೆ

Election Resultಇವರ ಹೊರತಾಗಿ ಹಲವು ಮಂದಿ ಸಮುದಾಯದ ಸ್ವಘೋಷಿತ ಸ್ವಾಮೀಜಿಗಳು ತಮ್ಮ ಸ್ವಂತಕ್ಕೆ ಅನುದಾನ ಜಮೀನು ಪಡೆದುಕೊಂಡಿದ್ದಾರೆಯೇ ಹೊರತು ಸಮುದಾಯದ ಪರವಾಗಿ, ಸಮುದಾಯದ ಮುಖಂಡರ ಪರವಾಗಿ ನಿಂತಿದ್ದಾರೆಯೇ. ಇಂದು ತಿಮ್ಮೇ ಗೌಡರ ಪರವಾಗಿ ಕೆಲಸ ಮಾಡುತ್ತಿರುವ ಸೋಲೂರು ಮಠದ ಸ್ವಾಮೀಗಳು ತಮ್ಮ ಕೆಲಸಕ್ಕಾಗಿ ಇದೇ ಹರಿಪ್ರಸಾದ್ ಮನೆ ಮುಂದೆ ನಿಂತಿರುತ್ತಾರೆ. ಅವರಿಗೆ ಯಾಕೆ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಹೋಗಿ ಕೆಲಸ ಮಾಡಿಕೊಂಡು ಬರಲು ಆಗುವುದಿಲ್ಲ. ಮುಖ್ಯಮಂತ್ರಿ ನಿವಾಸಕ್ಕೆ ಹೊಗಬೇಕಾದರೆ ಕಪ್ಪ ಕಾಣಿಕೆ ಸಲ್ಲಿಸುವ  ಹೊಸ  ಸಂಪ್ರದಾಯ ಇದೀಗ ಆರಂಭವಾಗಿದೆ.

ಇಂತಹ ಸಂದರ್ಭದಲ್ಲಿ ಸೋಲೂರು ಮಠದ ಸ್ವಾಮೀಜಿಯವರು ವಿನಯಕುಮಾರ್ ಸೊರಕೆ, ಸತ್ಯಜಿತ್ ಸುರತ್ಕಲ್ ಅಥವ ತಿಮ್ಮೇ ಗೌಡರನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಬಹುದಿತ್ತಲ್ಲ. ಯಾಕೆ ಮಾಡಿಲ್ಲ ಎಂಬುದನ್ನು ಸೂಕ್ತ ಸಂದರ್ಭದಲ್ಲಿ ಸ್ವಾಮೀಜಿಯವರು ಬಹಿರಂಗ ಮಾಡಬಹುದು. ಆ ಸ್ವಾತಂತ್ರ್ಯ ಮತ್ತು ಹಕ್ಕುಭಾದ್ಯತೆ ಅವರಿಗಿದೆ.

ಈ ಸಮುದಾಯದ ಸ್ವಾಮೀಜಿಗಳು ಮತ್ತು ಲಿಕ್ಕರ್ ಲಾಬಿ ಉದ್ಯಮಿಗಳು ಸರಕಾರದಿಂದ ಅಕ್ರಮವಾಗಿ ಅಥವ ಸಕ್ರಮವಾಗಿ ಪಡೆದುಕೊಂಡಿರುವ ಆಸ್ತಿ ಪಾಸ್ತಿಗಳ ಬಹಿರಂಗ ಆಗಬೇಕಾಗಿದೆ. ಸ್ವಾಮೀಜಿಗಳು ತಾವಾಗಿಯೇ ಸರಕಾರದಿಂದ ಸಮುದಾಯದದ ಹೆಸರಿನಲ್ಲಿ ಪಡೆದುಕೊಂಡಿರುವ ಜಮೀನುಗಳನ್ನು ಬಹಿರಂಗವಾಗಿ ಘೋಷಿಸಿದರೆ ಉತ್ತಮ ಇಲ್ಲವಾದರೆ ಸೂಕ್ತ ಸಂದರ್ಭದಲ್ಲಿ ಸಮುದಾಯದ ಯುವನಾಯಕರೇ ಬಹಿರಂಗ ಮಾಡಲಿದ್ದಾರೆ.

EDIGA sangha ಮುಂದಿನ ವರ್ಷ ಅಮೃತ ವರ್ಷ 2024

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಸ್ಥಾಪನೆಯಾದ ದಿನಾಂಕ 10-05-1944. ಕರ್ನಾಟಕ ರಾಜ್ಯ ಸರಕಾರದ ಅಧಿಕೃತ ದಾಖಲೆಗಳ ಪ್ರಕಾರ ಇದು ಸ್ಥಾಪನೆಯಾದ ದಿನಾಂಕ. ನೋಂದಾವಣೆ ಸಂಖ್ಯೆ 426/1944 ಆಗಿದ್ದು, ಸಮುದಾಯದ ಮಕ್ಕಳು, ಶಿಕ್ಷಣ , ಸಾಕ್ಷರತೆಗಾಗಿ ಸ್ಥಾಪನೆಯಾಗಿರುವ ಸಂಸ್ಥೆ ಹೊರತು ಯಾವುದೇ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸ್ಥಾಪಿತವಾಗಿರುವುದಿಲ್ಲ.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ವರ್ಷ 2024 ಆಗಿದ್ದರು ಕೂಡ ಈ ವರ್ಷವೇ ಅಮೃತ ವರ್ಷ ಆಚರಿಸಬಾರದೆಂದಿಲ್ಲ. ಒಂದು ವರ್ಷ ಕಾಲ ಆಚರಣೆ ಮಾಡಬಹುದು. ಕೊನೆಯಲ್ಲಿ ಸಮಾವೇಶ ನಡೆಸಬಹುದು. ಈ ಬಗ್ಗೆ ಯಾವುದೇ ಪ್ರಕಟಣೆಯನ್ನು ಸಂಘಟನೆನೀಡಿಲ್ಲ. ರಾಜಕೀಯ ಕಾರಣಕ್ಕಾಗಿ ಇದೀಗ ರಾಜಕೀಯ ಸಮಾವೇಶಕ್ಕೆ ಮುಂದಾಗಿದೆ.

ಬೆಂಗಳೂರಿನಲ್ಲಿ ಡಿ.10ರಂದು ಆಯೋಜಿಸಲಾಗುತ್ತಿರುವ ಈಡಗರ ರಾಜಕೀಯ ಸಮಾವೇಶ ಸಮುದಾಯದ ಅವನತಿಯ ಸಂಕ್ತವಾಗಿ ಇತಿಹಾಸದಲ್ಲಿ ದಾಖಲಾಗಲಿದೆ. ಸಮಾವೇಶದಲ್ಲಿ ಭಾಗವಹಿಸುವ ಮುಖಂಡರ ರಾಜಕೀಯ ಅವನತಿ ಆರಂಭವಾಗಲಿದೆ. ಎಲ್ಲದಕ್ಕು ಕಾಲವೇ ಉತ್ತರ ನೀಡಲಿದೆ.

Bharat Jodo Yatra: ಡಿಸಂಬರಿನಲ್ಲಿ 2 ನೇ ಹಂತದ ಭಾರತ್​ ಜೋಡೋ ಯಾತ್ರೆ

 

 

 

Leave a Reply

Your email address will not be published. Required fields are marked *