Ediga: ಈಡಿಗ ಸಮಾವೇಶಕ್ಕೆ ವಿಮಾನ ಟಿಕೇಟ್, ಐರಾವತ ಬಸ್ ನೀಡಿದರು ನೀರಸ ಪ್ರತಿಕ್ರಿಯೆ

ಮಂಗಳೂರು- Bangalore ಅರಮನೆ ಮೈದಾನದಲ್ಲಿ Palace Grounds ಡಿ. 10ರಂದು ನಡೆಯಲಿರುವ ಸಿದ್ದರಾಮಯ್ಯ ಕೃಪಾಪೋಷಿತ ಈಡಿಗ ಸಮಾವೇಶದಲ್ಲಿ ಭಾಗವಹಿಸುವವರಿಗೆ ಮಂಗಳೂರಿನಿಂದ ವಿಮಾನ ಟಿಕೇಟ್, ಹವಾ ನಿಯಂತ್ರಿತ ಸೂಪರ್ ಲಕ್ಸುರಿ ಐರಾವತ ಬಸ್ಸುಗಳ ವ್ಯವಸ್ಥೆ ಮಾಡಿದರು ಕೂಡ ಚಂದುಗಿಡಿಯಾಗಲು ಯಾರು ಸಿದ್ದರಿಲ್ಲ. ಕೇವಲ ಸ್ವಘೋಷಿತ ಮುಖಂಡರು ಮಾತ್ರ ತಮ್ಮ ಸ್ವ ಹಿತಾಸಕ್ತಿಗಾಗಿ ಹೊರಟು ನಿಂತಿದ್ದಾರೆ.

ಕರ್ನಾಟಕ ಪ್ರದೇಶ ಆರ್ಯ Arya Ediga ಈಡಿಗರ ಸಂಘದ ಅಮೃತ ಮಹೋತ್ಸವ (ಮುಂದಿನ ವರ್ಷ 2024 ಅಮೃತ ಮಹೋತ್ಸವ) ಹೆಸರಿನಲ್ಲಿ ಈಡಗ ಸಮುದಾಯವನ್ನು ಒಡೆಯಲು ಸಿದ್ದರಾಮಯ್ಯ ಕೃಪಾಪೋಷಿತ ಈಡಿಗ ಸಮಾವೇಶ ನಡೆಸಲಾಗುತ್ತಿದೆ. ವಾಸ್ತವದಲ್ಲಿ ಇದು ವೀರಶೈವ ಲಿಂಗಾಯಿತ ಸಮುದಾಯವನ್ನು ಒಡೆಯಲುನೋಡಿದಂತೆ ಈಡಿಗ ಸಮುದಾಯವನ್ನು ಒಡೆಯುವ ಕೃತ್ಯವಾಗಿದೆ. ನಿರಾಭಿಮಾನಿಗಳು, ಶಿಕ್ಷಣ ವಂಚಿತರಾದ ಸಮುದಾಯದ ಜನರಿಗೆ ವಾಸ್ತವವನ್ನು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ.

ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿಯ ಬಿಲ್ಲವರನ್ನು ಬೆಂಗಳೂರಿಗೆ ಕೊಂಡೊಯ್ಯುವ ಗುತ್ತಿಗೆಯನ್ನು ಕೆಲವು ಮಂದ ಕಾಂಗ್ರೆಸ್ ಪಕ್ಷ ತುಂಡು ಮುಖಂಡರಿಗೆ ಹಾಗೂ ತಿಮ್ಮೇ ಗೌಡರುನಡೆಸುವ ಡಿಸ್ಟಿಲರಿಯಲ್ಲಿ ಕಾರ್ಮಿಕರಾಗಿದ್ದವರಿಗೆ ವಹಿಸಿಕೊಡಲಾಗಿದೆ.

ಹೆಚ್ಚನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಲು ಕೆಲವೇ ಕೆಲವುಮಂದಿ ಆಯ್ದ ಮುಖಂಡರಿಗೆ ವಿಮಾನ ಟಿಕೇಟ್ ನೀಡಲಾಗುತ್ತಿದೆ. ಅದೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಐರಾವತ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸ್ಟಿಲರಿಯ ಮಾಜಿ ನೌಕರರು ತಿಳಿಸಿದ್ದಾರೆ.   ಡಿ.10 ಈಡಿಗ ಸಮಾವೇಶ ಕಾಂಗ್ರೆಸ್ ಪಕ್ಷ ಮತ್ತು ಈಡಿಗ ಸಮುದಾಯದ ಅವಸಾನದ ಸಂಕೇತ

ಉಚಿತವಾಗಿ ಐಷರಾಮಿ ಬಸ್ ಸೌಲಭ್ಯ ನೀಡಿದರು ದಕ್ಷಿಣ ಕನ್ನಡದ ಬಿಲ್ಲವರು ಬೆಂಗಳೂರಿಗೆ ಹೋಗದಿರಲು ನಿರ್ಧರಿಸಿದ್ದು, ಸಮಾವೇಶದ ಪಾರುಪತಯ ವಹಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ವಿಸಿಟಿಂಗ್ ಕಾರ್ಡ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಘಟನೆಗಳು ನಡೆದಿವೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಬೇಧ ಜಾತಿ ಬೇಧ ಮರೆತು ಬಿಲ್ಲವರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲಿದ್ದಾರೆ.

Open a Fi Savings Account online in under 3 mins with just 225 Rs.

ಈ ಮಧ್ಯೆ, ಡಿ,10ರಂದು ಈಡಿಗ ಸಮುದಾಯದ ಜನತೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ರಚಿಸಿ ಅಉದಾನ ನೀಡುವಂತೆ ಒತ್ತಾಯಿಸಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

ಸುದ್ದಿಗಾರರೊಂದಿಗೆ ಗಂಗಾವತಿಯಲ್ಲಿ ಮಾತನಾಡಿ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಸಂಪೂರ್ಣ ನಿರ್ಲಕ್ಷಿಸುತ್ತಿದ್ದು, ಸಮುದಾಯ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದರು.

ಈ ಹಿಂದೆ ವೀರಶೈವ ಸಮುದಾಯ ಒಡೆದಂತೆ ಈಡಿಗ ಸಮುದಾಯಕ್ಕೂ ಕೈ ಹಾಕಿದ್ದಾರೆ. ಶೋಷಿತ ಸಮುದಾಯದ 24 ಮಂಡಳಿಗಳ ಪೈಕಿ 7ಕ್ಕೆ ಮಾತ್ರ ಅನುದಾನ ನೀಡಿರುವ ಕಾಂಗ್ರೆಸ್ ಸರ್ಕಾರ, ಬ್ರಹ್ಮಶ್ರೀ ನಾರಾಯಣಗುರು ಮಂಡಳಿ ಸಂಪೂರ್ಣ ನಿರ್ಲಕ್ಷಿಸಿದೆ. ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯೆಸುವ ಅಗತ್ಯವಿಲ್ಲ. ಬಡ ಮತ್ತ ಶೋಷಿತ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಹೊರತು, ವೈಯಕ್ತಿಕ ಹಿತಾಸಕ್ತಿಗಲ್ಲ. ಈಡಿಗ ಸಮುದಾಯಕ್ಕೆ ಲೋಕಸಭೆ ಬಿ.ಫಾರಂ ಮೀಸಲಿಡುವಂತೆ ಒತ್ತಾಯಿಸಿರುವ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ನ್ಯಾಯಯುತವಾಗಿದ್ದು, ಎಲ್ಲ ರೀತಿಯಿಂದ ಬೆಂಬಲ ನೀಡಲಾಗುವುದು. ಬೇಡಿಕೆ ಈಡೇರಿಕೆಗೆ ಏಪ್ರಿಲ್ ವರೆಗೆ ಗಡವು ನೀಡಲಾಗುತ್ತಿದ್ದು, ನಿರ್ಲಕ್ಷಿಸಿದರೆ ಬಸವಕಲ್ಯಾಣದಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈಡಿಗ ಮತ್ತು ಉಪ ಪಂಗಡಗಳಿಗೆ ಆಸರೆಯಾಗಿದ್ದ ಸೇಂದಿ ಮಾರಾಟವನ್ನು 2004ರಲ್ಲಿ ಸರ್ಕಾರ ನಿಷೇಧಿಸಿದ್ದು, ಇದುವರೆಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ಸಂಕಷ್ಟಕ್ಕೊಳಗಾದ ಕುಟುಂಬಕ್ಕೆ 2 ಎಕರೆ ಭೂಮಿ ವಿತರಿಸುವ ಯೋಜನೆ ಇನ್ನೂ ಜಾರಿಯಾಗಿಲ್ಲ. ಈಡಿಗ ಮತ್ತು ಉಪಪಂಗಡಗಳನ್ನು ಎಸ್ಟಿಗೆ ಸೇರಿಸುವಂತೆ ರಾಜ್ಯ ಮತ್ತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪಾದಯಾತ್ರೆ, ಸಮಾವೇಶ ಕೈಗೊಂಡರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.

ಭ್ರಷ್ಟ ಸಿದ್ದರಾಮಯ್ಯ ಸರ್ಕಾರಃ ಆಯೋಗಕ್ಕೆ ದಾಖಲೆ ಸಲ್ಲಿಸಿದ ಕೆಂಪಣ್ಣ

Leave a Reply

Your email address will not be published. Required fields are marked *